ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ವಿಶ್ವನಾಥ ಸುವರ್ಣರಿಗೆ ಅಭಿನಂದನಾ ಕಾರ್ಯಕ್ರಮ

103.1K Views 1w ago

ಮಂಗಳೂರು, ನ.12;ಕರ್ನಾಟಕ ರಾಜ್ಯ ಸರಕಾರದಿಂದ ಈ ಬಾರಿಯ ದಕ್ಷಿಣ ಕನ್ನಡ ಮೂಲದ ಕನ್ನಡ ರಾಜ್ಯೋತ್ಸವ ಪುರಸ್ಕೃತ ಪತ್ರಿಕಾ ಛಾಯಾಗ್ರಾಹಕ ವಿಶ್ವ ನಾಥ ಸುವರ್ಣ ರನ್ನು ಗೌರವಿಸಲಾಯಿತು.
ಅವರು ಗುರುವಾರ ಮಂಗಳೂರು ಪತ್ರಿಕಾ ಭವನಕ್ಕೆ ಭೇಟಿ ನೀಡದ ಸಂದರ್ಭ ದಲ್ಲಿದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ,ಮಂಗಳೂರು ಪ್ರೆಸ್ ಕ್ಕಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಮಂಗಳೂರು ಪತ್ರಿಕಾ ಭವನದಲ್ಲಿ ಅವರನ್ನುಅಭಿನಂದಿಸಿಗೌರವಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಶ್ವನಾಥ್ ಪತ್ರಿಕಾವಛಾಯಾ ಗ್ರಾಹಕ ನಾಗಿ ಕಳೆದ 45ವರ್ಷಗಳ ಛಾಯಾಚಿತ್ರ ಪತ್ರಿ ಕೋದ್ಯ ಮದ ಸಿಹಿ,ಕಹಿ ಅನುಭವ ಹಂಚಿ ಕೊಂಡರು. ಈ ಸಂದರ್ಭದಲ್ಲಿ ತನಗೆ ಬೆಂಬಲ ನೀಡಿದ ವರನ್ನು ಸ್ಮರಿಸಿಕೊಂಡು ಅಭಿನಂದನೆ ಸಲ್ಲಿಸುತ್ತಾ ದ.ಕ ಜಿಲ್ಲಾ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.
ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದಅಧ್ಯಕ್ಷ ಪುಷ್ಪ ರಾಜ್ ಬಿ.ಎನ್ , ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಕೆಯು ಡಬ್ಲ್ಯುಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ,ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ ಅವರನ್ನು ಅಭಿನಂದಿಸಿ ಸನ್ಮಾನಿಸಿದರು‌
ಜಿಲ್ಲಾ ಸಂಘದ ಪೂರ್ವಾಧ್ಯಕ್ಷ ಹರ್ಷ, ಸಂಘದ ಕಾರ್ಯ ದರ್ಶಿ ಸತೀಶ್ ಇರಾ,ಕಾರ್ಯಕಾರಿ ಸಮಿತಿ ಸದಸ್ಯ ಸಂದೇಶ್ ಜಾರ, ಹರೀಶ್ ಮೋಟುಕಾನ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .ಜಿಲ್ಲಾ ಸಂಘದ ಉಪಾಧ್ಯಕ್ಷ ಆರಿಫ್ ಪಡುಬಿದ್ರೆ ಸ್ವಾಗತಿಸಿದರು.

Read More News

ಇಂದು (ನವೆಂಬರ್ 22)ರಂದು ಕನ್ನಡ ಸಾಹಿತ್ಯ ಪರಿಷತ್ತು ದರ್ಬೆ ಪುತ್ತೂರು ಕಚೇರಿಯಲ್ಲಿ ಮಿತ್ರoಪಾಡಿ ಜಯರಾಮ ರೈ ಅಬುದಾಭಿ ನಿರ್ಮಾಣದ ನಾರಾಯಣ ಕುಂಬ್ರ ಸಾಹಿತ್ಯದ ಮಣ್ಣ ಘಮದ ಗ್ರಾಮ ಸಾಹಿತ್ಯ ಸಂಭ್ರಮ ಎಂಬ ಯಕ್ಷಗಾನ ಶೈಲಿಯ ಧ್ವನಿ ಸುರುಳಿ ಬಿಡುಗಡೆ

ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾಲಕತ್ವದ ಸ್ಟೇಟ್ ಬ್ಯಾಂಕ್ ನಲ್ಲಿರುವ ಹೋಟೆಲ್ ಸ್ವಾಗತ್ ನ ಸಪ್ಲೈಯರ್, ಎಂಪಿ ಎಂಎಲ್ ಎ ನ್ಯೂಸ್ 11ನೇ ಸೌಹಾರ್ದ ಸಂಗಮದಲ್ಲಿ ಯುವರತ್ನ ಪ್ರಶಸ್ತಿ -2020 ಪುರಸ್ಕೃತ ಯುವ ಸಮಾಜ ಸೇವಕ ಅರುಣ್ ಶೆಟ್ಟಿ ಕೋಡಿಬೆಟ್ಟು, ಪೊಳಲಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ನೇತೃತ್ವ ದಲ್ಲಿ ದ.ಕ. ಜಿಲ್ಲಾ ಪ್ರಶಸ್ತಿ-2026 ಪ್ರಧಾನ.

Scroll to Top