ಗೂಡುದೀಪ, ಸಾಮರಸ್ಯದ ಸಂಕೇತ: ಕಸ್ತೂರಿ ಪಂಜ

103.8K Views 1w ago

ಮೂಲ್ಕಿ: ಭಾವೈಕ್ಯದ ಸಂಕೇತವಾಗಿ ದೀಪಾವಳಿಯ ನ್ನು ಆಚರಿಸುತ್ತಾ, ಗೂಡು ದೀಪ ನಮ್ಮ ಸಾಮರಸ್ಯವನ್ನು ಪಸರಿಸುವ ಸಂಭ್ರಮವಾಗಿದೆ. ಸಾರ್ವತ್ರಿಕವಾಗಿ ಆಚರಿಸುತ್ತಾ ಸ್ಪರ್ಧೆಯ ಮೂಲಕ ಸೃಜನಶೀಲತೆಯಾಗಿ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಶ್ಲಾಘನೀಯ ಎಂದು ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಅವರು ಕಿನ್ನಿಗೋಳಿಯ ಯುಗಪುರುಷದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆದ ಗೂಡುದೀಪ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ರಾಜರತ್ನಪುರ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಈಶ್ವರ ಕಟೀಲು ಬಹುಮಾನ ವಿತರಿಸಿದರು.
ತೀರ್ಪುಗಾರರಾಗಿ ಪ್ರಕಾಶ್ ಸುವರ್ಣ ಹಾಗೂ ರಾಜೇಂದ್ರ ಕುಮಾರ್ ಸಹಕರಿಸಿದರು.
ಕಿನ್ನಿಗೋಳಿಯ ಯುಗಪುರುಷದ ನೇತೃತ್ವದಲ್ಲಿ ಕಿನ್ನಿಗೋಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್, ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು, ಕರ್ನಾಟಕ ಸ್ಟೇಟ್ ಟೈಲರ್‍ಸ್ ಅಸೋಸಿಯೇಶನ್ ಕಿನ್ನಿಗೋಳಿ ವಲಯ, ಅಲಯನ್ಸ್ ಕ್ಲಬ್, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ, ವಿಜಯಾ ಕಲಾವಿದರು, ಇನ್ನರ್‌ವೀಲ್ ಕ್ಲಬ್, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಯಕ್ಷಲಹರಿ, ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪಾಯರ್ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ಮೂಲ್ಕಿ ವಲಯ ಸಂಸ್ಥೆಗಳ ಸಹಕಾರದಲ್ಲಿ ಸ್ಪರ್ಧೆ ಸಾಂಪ್ರದಾಯಿಕ ಹಾಗೂ ಆಧುನಿಕ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.
ವೆಂಕಟೇಶ್ ಹೆಬ್ಬಾರ್, ಪ್ರತಿಭಾ ಹೆಬ್ಬಾರ್, ದಾಮೋದರ ಶೆಟ್ಟಿ, ಪ್ರಕಾಶ್ ಆಚಾರ್ಯ, ಶ್ರೀನಿವಾಸ ಬಪ್ಪನಾಡು, ಶಂಕರ ಕೋಟ್ಯಾನ್, ಪ್ರವೀಣ್ ಸಾಲ್ಯಾನ್ ಮತ್ತಿತರರು ಇದ್ದರು.

ಸಂಘಟಕ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು. ಅನುಷಾ ಕರ್ಕೇರ ವಂದಿಸಿದರು, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ : ಸಾಂಪ್ರದಾಯಿಕ ವಿಭಾಗ : ಯಶಸ್ವಿನಿ ನಿಡ್ಡೋಡಿ (ಪ್ರ), ಮನೋಹರ ದೇವಾಡಿಗ ಕವತ್ತಾರು(ದ್ವಿ), ಭೋಜ ಮಾರ್ನಾಡು (ತೃ).
ಆದುನಿಕ ವಿಭಾಗ : ರಾಜೇಶ್ ಚಿಲಿಂಬಿ(ಪ್ರ), ಅಮಿತ್ ಕುಮಾರ್ ಸುರತ್ಕಲ್ (ದ್ವಿ), ಚೇತನ್ ಕೊಂಪದವು(ತೃ), ಸಮಾಧಾನಕರ : ವಿಠಲ ಭಂಡಾರಿ.

Read More News

ಇಂದು (ನವೆಂಬರ್ 22)ರಂದು ಕನ್ನಡ ಸಾಹಿತ್ಯ ಪರಿಷತ್ತು ದರ್ಬೆ ಪುತ್ತೂರು ಕಚೇರಿಯಲ್ಲಿ ಮಿತ್ರoಪಾಡಿ ಜಯರಾಮ ರೈ ಅಬುದಾಭಿ ನಿರ್ಮಾಣದ ನಾರಾಯಣ ಕುಂಬ್ರ ಸಾಹಿತ್ಯದ ಮಣ್ಣ ಘಮದ ಗ್ರಾಮ ಸಾಹಿತ್ಯ ಸಂಭ್ರಮ ಎಂಬ ಯಕ್ಷಗಾನ ಶೈಲಿಯ ಧ್ವನಿ ಸುರುಳಿ ಬಿಡುಗಡೆ

ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾಲಕತ್ವದ ಸ್ಟೇಟ್ ಬ್ಯಾಂಕ್ ನಲ್ಲಿರುವ ಹೋಟೆಲ್ ಸ್ವಾಗತ್ ನ ಸಪ್ಲೈಯರ್, ಎಂಪಿ ಎಂಎಲ್ ಎ ನ್ಯೂಸ್ 11ನೇ ಸೌಹಾರ್ದ ಸಂಗಮದಲ್ಲಿ ಯುವರತ್ನ ಪ್ರಶಸ್ತಿ -2020 ಪುರಸ್ಕೃತ ಯುವ ಸಮಾಜ ಸೇವಕ ಅರುಣ್ ಶೆಟ್ಟಿ ಕೋಡಿಬೆಟ್ಟು, ಪೊಳಲಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ನೇತೃತ್ವ ದಲ್ಲಿ ದ.ಕ. ಜಿಲ್ಲಾ ಪ್ರಶಸ್ತಿ-2026 ಪ್ರಧಾನ.

Scroll to Top