MRPLದುರಂತಕ್ಕೆ ಮತ್ತೊಂದು ಬಲಿ. ಸಾರ್ವಜನಿಕ ಸುರಕ್ಷತೆ ಚರ್ಚೆ ಮತ್ತೆ ಮುನ್ನಲೆಗೆ. MPMLA’S NEWS EXECLUSIVE REPORT

8.9K Views 2h ago

ಮಂಗಳೂರು:ಸೆಪ್ಟೆಂಬರ್ 30, 2026ರಂದು MRPLನ ಫೇಸ್-3ರ Coker Hydrotreater (CHT) ಘಟಕದಲ್ಲಿ ಸಂಭವಿಸಿದ ಸ್ಫೋಟ-ಬೆಂಕಿ ಅವಘಡ ಘಟನೆಯಲ್ಲಿ ಮನೀಶ್ ಕರ್ಕಡ ಎಂಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟು, 12 ಜನರಿಗೆ ಗಾಯಗಳಾಗಿದ್ದವು. ಅವರಲ್ಲಿ ಗಂಭೀರ ಸುಟ್ಟಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುತ್ತಿಗೆ ಕಾರ್ಮಿಕ ರಾಜೇಶ್ ಎ. ಡಿಸಿಲ್ವ (ಸುಮಾರು 42 ವರ್ಷ, ಸುರತ್ಕಲ್ ಇಡ್ಯಾ ಗ್ರಾಮದ ಕಾನ ನಿವಾಸಿ, ಅವಿವಾಹಿತ) ಅಕ್ಟೋಬರ್ 17, 2026ರಂದು ನಿಧನರಾದರು. ಇದರಿಂದ ಮೃತರ ಸಂಖ್ಯೆ 2ಕ್ಕೆ ಏರಿತು.
MRPL ಮ್ಯಾನೇಜ್ಮೆಂಟ್ ಮೃತರ ಕುಟುಂಬಕ್ಕೇನೋ ಪರಿಹಾರ ಘೋಷಿಸಿದೆ.​ ಆದರೆ ಸದ್ರಿ ದುರಂತ ಘಟನೆ MRPLನ ಕಾರ್ಯಾಚರಣೆ, ಸುರಕ್ಷತೆ ಮತ್ತು ಸುತ್ತಮುತ್ತಲಿನ ಜನರ ಮೇಲಿನ ಪರಿಣಾಮಗಳ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.

ಮನೀಶ್ ಕರ್ಕಡ


MRPL ಕಾರ್ಯನಿರ್ವಹಣೆ ಹೇಗೆ?
MRPL (ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ ಲಿಮಿಟೆಡ್) ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಳಿ (ಕಾಟಿಪಳ್ಳ, ಕುತೆತ್ತೂರು) ಇರುವ ಕೇಂದ್ರ ಸಾರ್ವಜನಿಕ ವಲಯದ ಒಂದು ಉದ್ಯಮ (Schedule ‘A’ Miniratna Category-I CPSE). ಇದು ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC)ನ ಮುಖ್ಯ ಅಂಗಸಂಸ್ಥೆ (ಸುಮಾರು 71.6% ಷೇರು). ಕೇಂದ್ರ ಸರಕಾರದ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.​
ಉದ್ದೇಶಗಳು:
ದಕ್ಷಿಣ ಭಾರತದ ಇಂಧನ ಅಗತ್ಯಗಳನ್ನು ಪೂರೈಸುವುದು,
ಕಚ್ಚಾ ತೈಲವನ್ನು ಸಂಸ್ಕರಿಸಿ ಪೆಟ್ರೋಲ್, ಡೀಸೆಲ್, LPG, ATF ಮುಂತಾದ ಉತ್ಪನ್ನಗಳನ್ನು ತಯಾರಿಸುವುದು,
ಪೆಟ್ರೋಕೆಮಿಕಲ್ಸ್ (ಪಾಲಿಪ್ರೊಪಿಲೀನ್, ಪ್ಯಾರಾಕ್ಸಿಲೀನ್, ಬೆಂಜೀನ್) ಉತ್ಪಾದನೆ ಮೂಲಕ ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.
ರಫ್ತು ಮೂಲಕ ವಿದೇಶಿ ವಿನಿಮಯ ಗಳಿಕೆಗೆ ಆಧ್ಯತೆ ನೀಡುವುದು, ಸ್ಥಳೀಯ ಉದ್ಯೋಗ ಮತ್ತು ಪ್ರಾದೇಶಿಕ ಆರ್ಥಿಕತೆ ಅಭಿವೃದ್ಧಿ ಪಡಿಸುವುದು
1988ರಲ್ಲಿ ಸ್ಥಾಪಿತವಾದ ಈ ಉದ್ಯಮದ ಪ್ರಮುಖ ಕಾರ್ಯವಾಗಿದೆ.
ಆರಂಭಿಕ ಸಾಮರ್ಥ್ಯವಾಗಿ 3.69 ಮಿಲಿಯನ್ ಮೆಟ್ರಿಕ್ ಟನ್ ಪ್ರತಿ ವರ್ಷ (MMTPA) ಉತ್ಪಾದನೆ ಗುರಿ ಹೊಂದಿದ್ದ MRPL ನ್ನು 2003ರಲ್ಲಿ ONGC ತನ್ನ ಅಧೀನಕ್ಕೆ ತೆಗೆದುಕೊಂಡು ವಿಸ್ತರಣೆ ಮಾಡಿತು. ಆನಂತರ ಫೇಸ್-II ಮತ್ತು ಫೇಸ್-III ಮೂಲಕ ಪ್ರಸ್ತುತ 15 MMTPA ಸಾಮರ್ಥ್ಯಕ್ಕೆ ಈ ಉದ್ಯಮ ತಲುಪಿದೆ.​
ಇದರ ವಿನ್ಯಾಸ ಸಾಮರ್ಥ್ಯವು ಸುಮಾರು 3 ಲಕ್ಷ ಬ್ಯಾರೆಲ್ ಪ್ರತಿ ದಿನ ಎನ್ನಲಾಗಿದೆ. ಕೆಲವು ವರ್ಷಗಳಲ್ಲಿ 17+ MMTPA ತನಕ ಈ ಪ್ರಕ್ರಿಯೆ ಕಾರ್ಯನಿರ್ವಹಿಸಿದೆ. (ಉದಾ: FY 2022-23ರಲ್ಲಿ 17.14 MMT – ಏಕ-ಸ್ಥಳ PSU ರಿಫೈನರಿಗಳಲ್ಲಿ ಅತಿ ಹೆಚ್ಚು).​
ಕಚ್ಚಾ ತೈಲ ಸಂಸ್ಕರಣೆ: 24°–46° API ಗುರುತ್ವದ ವ್ಯಾಪಕ ಶ್ರೇಣಿಯ ಕಚ್ಚಾ ತೈಲಗಳನ್ನು ಸಂಸ್ಕರಿಸುವ ಸಾಮರ್ಥ್ಯವಿರುವ ಈ ಸ್ಥಾವರವು 250ಕ್ಕೂ ಹೆಚ್ಚು ವಿಧಗಳ ಕಚ್ಚಾ ತೈಲಗಳನ್ನು ಉತ್ಪಾದನೆ ಮಾಡಿದೆ.
ಇಂಡೆಕ್ಸ್ ಪ್ರಕಾರ ಸುಮಾರು 11.3 – PSU ರಿಫೈನರಿಗಳಲ್ಲಿ ಇದು ಉನ್ನತ ಮಟ್ಟವಾಗಿದೆ.
3 ಮುಖ್ಯ ಘಟಕಗಳನ್ನು ಇದು ಹೊಂದಿದ್ದು, Crude/Vacuum Distillation Units, 2 Hydrocrackers (ಪ್ರೀಮಿಯಂ ಡೀಸೆಲ್), 2 CCR Platforming Units (ಹೈ-ಆಕ್ಟೇನ್ ಪೆಟ್ರೋಲ್), PFCCU, Visbreakers, Hydrogen Generation Units, Polypropylene Plant (440 KTA), Aromatic Complex (0.905 MMTPA Para-Xylene + 0.273 MMTPA Benzene) ಇದರಲ್ಲಿ ಅಡಕವಾಗಿದೆ.
ಮುಖ್ಯ ಉತ್ಪನ್ನಗಳಾಗಿ
LPG, Motor Spirit (Petrol – BS-VI), High Speed Diesel (HSD – BS-VI), Aviation Turbine Fuel (ATF), Naphtha, Kerosene, Bitumen, Sulphur, Pet coke ಅಲ್ಲದೆ, ಪೆಟ್ರೋಕೆಮಿಕಲ್ಸ್ ನಲ್ಲಿ Polypropylene (ಹೋಮೋಪಾಲಿಮರ್ ಗ್ರೇಡ್‌ಗಳು), Para-Xylene, ಬೆಂಜ್ನೆ ಗಳನ್ನು ಹೊಂದಿದೆ.
ATF, HSD ಮುಂತಾದವುಗಳನ್ನು ಏಷ್ಯಾ, ಯುರೋಪ್, ಮಧ್ಯಪ್ರಾಚ್ಯಕ್ಕೆ ರಫ್ತು ವ್ಯವಹಾರ ಮಾಡಲಾಗುತ್ತದೆ. ಇದಕ್ಕಾಗಿ ನ್ಯೂ ಮಂಗಳೂರು ಪೋರ್ಟ್‌ನಲ್ಲಿ ಸ್ವಂತ ಜೆಟ್ಟಿಗಳು ಮತ್ತು SPM ಸೌಲಭ್ಯಗಳಿವೆ.


ಸಾರ್ವಜನಿಕ ಸಮಸ್ಯೆ ಸವಾಲುಗಳು
MRPL ದಕ್ಷಿಣ ಭಾರತದ ಇಂಧನ ಭದ್ರತೆಗೆ ಮಹತ್ವದ ಕೊಡುಗೆ ನೀಡುತ್ತಿದ್ದರೂ, ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಗಳಾದ ಜೋಕಟ್ಟೆ, ಸುರತ್ಕಲ್, ಹಳೆಯಂಗಡಿ, ಪೆರ್ಮುದೆ, ಕುತ್ತೆತ್ತೂರು ಮುಂತಾದೆಡೆ ದೀರ್ಘಕಾಲದಿಂದ ಕೆಲವು ಸಮಸ್ಯೆಗಳು ಎದುರಾಗುತ್ತಿವೆ.
ಇವುಗಳಲ್ಲಿ ಮುಖ್ಯವಾಗಿ ಪರಿಸರ, ಗಾಳಿ, ಧ್ವನಿ, ನೀರು ಮಾಲಿನ್ಯದ ಬಗ್ಗೆ ಸ್ಥಳೀಯರು (ವಿಶೇಷವಾಗಿ ಫೇಸ್-3 ವಿಸ್ತರಣೆಯ ನಂತರ 2014ರಿಂದ) ಪದೇ ಪದೇ ದೂರು ನೀಡಿದ್ದಾರೆ. ಕೋಕ್ ಮತ್ತು ಸಲ್ಫರ್ ಘಟಕಗಳಿಂದ ಧೂಳು, ವಾಸನೆ, ಧ್ವನಿ ಸಮಸ್ಯೆ, ಬಾವಿ-ಕೆರೆಗಳು ಕಲುಷಿತವಾಗುವುದು, ಮೀನುಗಳು ಕಣ್ಮರೆಯಾಗುವುದು ಮುಂತಾದ ದೂರುಗಳು ವ್ಯಾಪಕವಾಗಿವೆ. MRPL ತನ್ನ ಎಫ್ಲುಯೆಂಟ್‌ಗಳನ್ನು ‘ಸಮುದ್ರಕ್ಕೆ ಬಿಡುತ್ತೇವೆ, ನದಿಗೆ ಬಿಡುವುದಿಲ್ಲ’ ಎಂದು ಹೇಳುತ್ತದೆ ಮತ್ತು ZLD, desalination (40 MLD), STP ನೀರು ಬಳಕೆ, green belt ಮುಂತಾದ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳುತ್ತದೆ.​ ಆದರೂ ಸಾರ್ವಜನಿಕರಿಗೆ ಇದರಿಂದಾಗುವ ತೊಂದರೆಗಳು ನಿಂತಿಲ್ಲ.
ಬಫರ್ ಝೋನ್ ಕೊರತೆ:
ಅಪಾಯಕಾರಿ (Red category) ಉದ್ಯಮವಾಗಿದ್ದರೂ ಸಾಕಷ್ಟು ಬಫರ್ ಝೋನ್ ಇಲ್ಲ ಎಂಬ ಆರೋಪ ಇದರ ಮೇಲಿದೆ. ಇತ್ತೀಚಿನ ಸ್ಫೋಟದ ಆಘಾತ 15 ಕಿಮೀ ವ್ಯಾಪ್ತಿಯ ಆಸುಪಾಸಿನಲ್ಲಿ ಅನುಭವವಾಯಿತು. ಮನೆಗಳು, ದೇವಸ್ಥಾನಗಳು ಹಾನಿಗೊಳಗಾದವು. 33% ಗ್ರೀನ್ ಬೆಲ್ಟ್ ಷರತ್ತು ಪೂರ್ಣವಾಗಿ ಜಾರಿಯಾಗಿಲ್ಲ ಎಂಬ ಟೀಕೆ ಇದೀಗ ಮತ್ತೆ ಮುನ್ನಲೆಗೆ ಬಂದಿದೆ.​
2025 ಜುಲೈನಲ್ಲಿ ಹೈಡ್ರೋಜನ್ ಸಲ್ಫೈಡ್ ಅನಿಲದಿಂದ 2 ಆಪರೇಟರ್‌ಗಳು ಮೃತಪಟ್ಟಿದ್ದರು. 2026 ಸೆಪ್ಟೆಂಬರ್‌ನಲ್ಲಿ ನಡೆದ ಮತ್ತೊಂದು ಪ್ರಮುಖ ಅಪಘಾತದಿಂದಾಗಿ ಕಾರ್ಮಿಕರ ಸುರಕ್ಷತೆ ಮತ್ತು ನಿಯಮಾನುಸಾರ ಪರಿಶೀಲನೆ ಕುರಿತು ಪ್ರಶ್ನೆಗಳು ಎದ್ದಿವೆ. ಮಾರ್ಕಿಸ್ಟ್ ಮತ್ತು ಸ್ಥಳೀಯ ಸಂಘಟನೆಗಳು ಸಾರ್ವಜನಿಕ ತನಿಖೆ, ಪರಿಹಾರ ಹೆಚ್ಚಳ, ಉದ್ಯೋಗ ಖಾತರಿ ಬಗ್ಗೆ ಕೇಳುತ್ತಿವೆ.
ಫೇಸ್-IV ವಿಸ್ತರಣೆಗೆ (ಹಿಂದೆ ಯೋಜಿಸಲಾಗಿತ್ತು) ಭೂ ಸ್ವಾಧೀನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರೈತರು, ಮೀನುಗಾರರು, ಸ್ಥಳೀಯರು ಭೂಮಿ ಕಳೆದುಕೊಳ್ಳುವುದು, ಮಾಲಿನ್ಯ ಹೆಚ್ಚಳ ಭಯ ಎದುರಾಗಿದೆ. ಭೂಮಿ ಸಮಸ್ಯೆಗಳಿಂದಾಗಿ ಫೇಸ್-IV ಅನ್ನು ತಡೆಹಿಡಿಯಲಾಗಿದೆ ಅಥವಾ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.​
ಇತರ ಪರಿಣಾಮಗಳು:
ಆರೋಗ್ಯ ಸಮಸ್ಯೆಗಳು, ನಿದ್ರೆ ತೊಂದರೆ (ಧ್ವನಿ ಮಾಲಿನ್ಯ), ಆಸ್ತಿ ಹಾನಿ (ಇತ್ತೀಚಿನ ಸ್ಫೋಟದಲ್ಲಿ 50ಕ್ಕೂ ಮಿಕ್ಕಿ ಮನೆಗಳು) ತೊಂದರೆಗೊಳಗಾಗಿವೆ. ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಾಕಷ್ಟು ಸಿಗುವುದಿಲ್ಲ ಎಂಬ ದೂರು ಕೂಡ ಇದೆ.
MRPL ತನ್ನ ಕಡೆಯಿಂದ ಪರಿಸರ ಸಂರಕ್ಷಣೆ, ನವೀಕರಣೀಯ ಇಂಧನ, ಹಸಿರು ಪಟ್ಟಿ ಅಭಿವೃದ್ಧಿ ಮುಂತಾದವುಗಳನ್ನು ಎತ್ತಿ ತೋರಿಸುತ್ತದೆ. ಆದರೆ ಸ್ಥಳೀಯ ಸಮುದಾಯಗಳೊಂದಿಗಿನ ನಂಬಿಕೆಯ ಕೊರತೆ ಮತ್ತು ಪದೇಪದೇ ಅಪಘಾತಗಳು ಗಂಭೀರ ಸವಾಲಾಗಿ ಉಳಿದಿವೆ.
MRPL ಭಾರತದ ಪ್ರಮುಖ ರಿಫೈನರಿಗಳಲ್ಲಿ ಒಂದು ಎಂಬುದು ನಿಜ. ಇಂಧನ ಭದ್ರತೆ ಮತ್ತು ಆರ್ಥಿಕ ಕೊಡುಗೆ ನೀಡುತ್ತಿರುವುದೂ ಹೌದು. ಆದರೆ ಸುರಕ್ಷತೆ, ಪರಿಸರ ಕಾಳಜಿ ಮತ್ತು ಸ್ಥಳೀಯ ಜನರ ಹಿತಾಸಕ್ತಿಗಳ ನಡುವೆ ಸಮತೋಲನ ಕಾಪಾಡುವುದು ಅಗತ್ಯ. ರಾಜೇಶ್ ಡಿಸಿಲ್ವ ಅವರಂತಹ ಬಲಿಗಳು ಇಂತಹ ಸಂಸ್ಥೆಗಳಲ್ಲಿ ಕಾರ್ಮಿಕ ಸುರಕ್ಷತೆ ಮತ್ತು ನಿಯಂತ್ರಣವನ್ನು ಬಲಪಡಿಸಬೇಕಾದ ಅಗತ್ಯವನ್ನು ಮತ್ತೆ ನೆನಪಿಸುತ್ತವೆ.

Read More News

Scroll to Top