ಮಂಗಳೂರು: ಅಡ್ಡೂರು ಸೆಂಟ್ರಲ್ ಕಮಿಟಿಯ ೨೦೨೫-೨೬ನೇ ಸಾಲಿನ ಮಹಾಸಭೆಯು ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ನಂದ್ಯ ಆಯ್ಕೆಯಾದರು.
ಎಂ.ಎಸ್.ರಫೀಕ್ ಅಧ್ಯಕ್ಷತೆಯಲ್ಲಿ ಎ.ಎಸ್.ಅಶ್ರಫ್ ಉಸ್ತುವಾರಿಯಲ್ಲಿ ಸಫ್ವಾ ದಮ್ಮಾಮ್ ಮವಾದಿ ರೆಸಾರ್ಟ್‌ನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಶರೀಫ್ ಜಿ.ಎ., ಶಮೀರ್ ಅಳಕೆ ಗೌರವಾಧ್ಯಕ್ಷರಾಗಿ ಎಂ.ಎಸ್.ರಫೀಕ್, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ತೋಕೂರ್, ಜೊತೆ ಕಾರ್ಯದರ್ಶಿಯಾಗಿ ಶರೀಫ್ ಗೋಳಿಪಡ್ಪು ಹಾಗೂ ನವಾಝ್ ತೋಕೂರ್, ಕೋಶಾಧಿಕಾರಿಯಾಗಿ ನೂರ್ ತೋಕೂರ್, ಲೆಕ್ಕ ಪರಿಶೋಧಕರಾಗಿ ಕಲಂದರ್ ಗುತ್ತು, ಎಲ್ಲಾ ವಲಯ ಸಮಿತಿಗಳಿಂದ ತಲಾ ಐವರು ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.
ಸಲಹೆಗಾರರಾದ ಎ.ಪಿ.ಮುಹಮ್ಮದ್ ಕಿರಾಅತ್ ಪಠಿಸಿದರು. ಜುಬೈಲ್ ಸಮಿತಿಯ ಕಾರ್ಯದರ್ಶಿ ರಶೀದ್ ಎ.ಕೆ ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ಮನ್ಸೂರ್ ವಾರ್ಷಿಕ ವರದಿ ಮಂಡಿಸಿದರು. ಜೊತೆ ಕಾರ್ಯದರ್ಶಿ ಖಲಂದರ್ ಗುತ್ತು ಹಣಕಾಸು ವರದಿ ಮಂಡಿಸಿದರು.





















































































































































































