ಪಾಲ್ದನೆ ಚರ್ಚ್: ಐಸಿವೈಎಂ ಸಿಟಿ ವಲಯದ ಅಧ್ಯಕ್ಷರಾಗಿ ರಾಯನ್ ಮಾರ್ಸೆಲ್‌ ನೊರೊನ್ಹಾ ಆಯ್ಕೆ

108.9K Views 7 Jul 2025

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನ ಐಸಿವೈಎಂ ಘಟಕದ ಸದಸ್ಯ ರಾಯನ್ ಮಾರ್ಸೆಲ್‌ ನೊರೊನ್ಹಾ ಅವರು 12 ಚರ್ಚ್ ಗಳನ್ನು ಒಳಗೊಂಡ ಸಿಟಿ ವಲಯದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಆ ಪ್ರಯುಕ್ತ ಅವರನ್ನು ಪಾಲ್ದನೆ ಚರ್ಚ್ ವತಿಯಿಂದ ಬಲಿಪೂಜೆಯ ಬಳಿಕ ಸನ್ಮಾನಿಸಲಾಯಿತು.
ಚರ್ಚಿನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಸನ್ಮಾನವನ್ನು ನೆರವೇರಿಸಿ ಈ ಸನ್ಮಾನವನ್ನು ಚರ್ಚಿನ ಸಮಸ್ತ ಭಕ್ತ ವೃಂದದ ಪರವಾಗಿ ಮಾಡಲಾಗುತ್ತಿದೆ. ಈ ಹುದ್ದೆಯು ಚರ್ಚಿಗೆ ಗೌರವ ತಂದಿದೆ ಎಂದರು.
ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಐಸಿವೈಎಂ ಸಚೇತಕ ರೋಶನ್‌ ಮೊತೇರೊ, ಘಟಕದ ಅಧ್ಯಕ್ಷೆ ವಿಲೀಶಾ ಬ್ರ್ಯಾಗ್ಸ್, ಕಾರ್ಯದರ್ಶಿ ಆ್ಯಶೆಲ್ ಲೋಬೊ ಉಪಸ್ಥಿತರಿದ್ದರು. ಮಂಗಳೂರು ಧರ್ಮ ಪ್ರಾಂತ್ಯದ ಸಿಟಿ ವಲಯವು ಆಂಜೆಲೋರ್‌, ಬಜಾಲ್‌, ಬಜ್ಜೋಡಿ, ಬೋಂದೆಲ್, ಕುಲಶೇಖರ(ಕೋರ್ಡೆಲ್), ದೇರೆಬೈಲ್, ಫೆರ್ಮಾಯ್, ಕೆಲರಾಯ್‌, ನೀರುಮಾರ್ಗ, ಪಾಲ್ದನೆ, ಶಕ್ತಿನಗರ, ಮತ್ತು ವಾಮಂಜೂರು ಚರ್ಚ್ ಗಳನ್ನು ಒಳಗೊಂಡಿರುತ್ತದೆ.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top