ಆಂಜೆಲೋರ್‌ ಚರ್ಚಿನಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ

117.2K Views 11 Jun 2025

ಮಂಗಳೂರು: ಮಂಗಳೂರು ನಗರದ ನಾಗುರಿಯ ಗಾರ್ಡಿಯನ್ ಏಂಜೆಲ್ ಚರ್ಚ್ ನ ಕ್ಯಾಥೋಲಿಕ್ ಸಭಾ ಘಟಕ ಮತ್ತು ಆರೋಗ್ಯ ಆಯೋಗದ ಆಶ್ರಯದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಮನೆಯಲ್ಲಿ ಸಂಭವಿಸುವ ವಿದ್ಯುತ್ ಅಪಘಾತ, ನೀರಿಗೆ ಬಿದ್ದು ದುರಂತ, ವಿಷದ ಹಾವು ಕಡಿತ, ಆಹಾರ ಸೇವಿಸುವಾಗ ಗಂಟಲಿನಲ್ಲಿ ಸಿಲುಕಿ ಕೊಳ್ಳುವುದು, ಕುಸಿದು ಬೀಳುವ ಸಂದರ್ಭ ಮುಂತಾದ ಸಮಯದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ತರಬೇತಿ ನೀಡಲಾಯಿತು.
ಆಂಜೆಲೋರ್‌ ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಫಾ. ಫ್ರೆಡ್ರಿಕ್ ಮೊಂತೆರೊ, ವಾಸ್ತವ್ಯ ಧರ್ಮಗುರು ವಂದನೀಯ ಫಾ. ಸ್ಟೇನಿ ಫೆರ್ನಾಂಡಿಸ್, ಚರ್ಚ್ ಉಪಾಧ್ಯಕ್ಷ ಪಾವ್ಲ್ ರೊಡ್ರಿಗಸ್, ಕಾರ್ಯದರ್ಶಿ ಲೊನಿನಾ ಡಿ’ ಸೋಜಾ, ಸರ್ವ ಆಯೋಗಗಳ ಸಂಚಾಲಕಿ ರೆನಿಟಾ ಮಿನೇಜಸ್, ಫಾದರ್ ಮುಲ್ಲರ್ ಆಸ್ಪತ್ರೆಯ ಡಾ. ರಿತೇಶ್ ಡಿ’ ಕುನ್ಹಾ, ಚರ್ಚಿನ ಮಾಜಿ ಉಪಾಧ್ಯಕ್ಷ ಆಲ್ಬರ್ಟ್ ಲಸ್ರಾದೊ, ಫಿಲೋಮಿನಾ ತಾವ್ರೋ ಮುಂತಾದವರು ಉಪಸ್ಥಿತರಿದ್ದರು

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top