ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯದಲ್ಲಿ ‘ನೋವೇಶನ್ 2025’ ಅಂತರರಾಷ್ಟ್ರೀಯ ಸಮ್ಮೇಳನದ ಯಶಸ್ವಿ ಆಯೋಜನೆ

120K Views 26 Apr 2025

ಸೇಂಟ್ ಅಲೋಶಿಯಸ್ (ಸ್ವಾಯತ್ತ ವಿಶ್ವವಿದ್ಯಾಲಯ), ಏಮಿಟ್(AIMIT) ಬೀರಿ ಕ್ಯಾಂಪಸಿನ ಎಂಬಿಎ ವಿಭಾಗ, ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಮ್ಯಾನೇಜ್’ಮೆಂಟ್ ನಡೆಸಿದ 8ನೇ ಅಂತರರಾಷ್ಟ್ರೀಯ ಸಮ್ಮೇಳನ ‘ನೋವೇಶನ್ 2025’: ಇಂಡಸ್ಟ್ರಿ 5.0, 6.0 ಮತ್ತು ಅದರ ಮುಂಬರುವ ತಂತ್ರಜ್ಞಾನಗಳಲ್ಲಿ ನಾವೀನ್ಯತೆಗಳು – ಭವಿಷ್ಯದ ವ್ಯವಸ್ಥಾ ಮಾದರಿಗಳ ಅಭಿವೃದ್ಧಿ ಎಂಬ ವಿಷಯದ ಮೇಲೆ ಎಪ್ರಿಲ್ 25, 2025ರಂದು ಏರ್ಪಡಿಸಲಾಯಿತು.


ಉದ್ಘಾಟನೆಯ ಮುಖ್ಯ ಅತಿಥಿ ಎಂ.ಆರ್.ಪಿ.ಎಲ್.ನ ಮುಖ್ಯ ಜನರಲ್ ಮ್ಯಾನೇಜರ್(ಎಚ್.ಆರ್), ಶ್ರೀ ಸಂದೇಶ್ ಜೆ. ಕುಟೀನ್ಹೋ ಪ್ರಭು, ಮುಂದಿನ ದಶಕದಲ್ಲಿ (5.0) ಮತ್ತು ಅದರ ನಂತರದ ದಶಕದಲ್ಲಿ (6.0) ಸಂಭವಿಸಬಹುದಾದ ಬದಲಾವಣೆಗಳು ಮತ್ತು ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮಾನವ ಶಕ್ತಿಯನ್ನು ಸಜ್ಜುಗೊಳಿಸುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಉದ್ಯಮದ ಬದಲಾವಣೆಗಳ ಅಗತ್ಯತೆಗಳನ್ನು ಪೂರೈಸಲು ಅವರು ಚುರುಕುತನ (Agility), ಹೊಂದಾಣಿಕೆ (Adaptability), ಮತ್ತು ಸಾಮರಸ್ಯ (Alignment) ಎಂಬ ಮೂರು ಎ (AAA) ಸೂತ್ರಗಳನ್ನು ನೀಡಿದರು.


ನ್ಯೂಯಾರ್ಕಿನ ಸ್ಟೇಟ್ ಯೂನಿವರ್ಸಿಟಿ ಆಫ್ ಆಲ್ಬನಿಯ ಪ್ರೊಫೆಸರ್ (ಡಾ.) ಡೇವಿಡ್ ಎಂ. ಸ್ಮಿತ್; ಮಾರಿಷಸ್ ಸರ್ಕಾರದ ಹಣಕಾಸು ಸಚಿವಾಲಯದ ಡಾ. ಯತಿನ್ ಮತ್ತು ಲೊಯೊಲಾ ಕಾಲೇಜ್ ಆಫ್ ಸೋಷಿಯಲ್ ಸೈನ್ಸಸ್ (ಸ್ವಾಯತ್ತ), ತಿರುವನಂತಪುರಂನ ಪ್ರಾಧ್ಯಾಪಕ ಡಾ. ಫಾ. ರಂಜಿತ್ ಜಾರ್ಜ್ ಎಸ್.ಜೆ. ಸಮ್ಮೇಳನದ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದರು. ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ರೋನಾಲ್ಡ್ ನಜರೆತ್, ಉದ್ಘಾಟನೆಯ ಅಧ್ಯಕ್ಷತೆ ವಹಿಸಿದ್ದರು, ಏಮಿಟ್(AIMIT)ಯ ನಿರ್ದೇಶಕ ಡಾ. (ಫಾದರ್) ಕಿರಣ್ ಕೋತ್ ಎಸ್.ಜೆ., ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಮ್ಯಾನೇಜ್’ಮೆಂಟ್’ನ ಡೀನ್ ಡಾ. ರಜನಿ ಸುರೇಶ್, ಸಭೆಯನ್ನು ಸ್ವಾಗತಿಸಿದರು ಮತ್ತು ಸಮ್ಮೇಳನದ ಅವಲೋಕನವನ್ನು ನೀಡಿದರು.
60ಕ್ಕೂ ಹೆಚ್ಚು ಸಂಶೋಧನಾ ಪತ್ರಗಳನ್ನು ಶಿಕ್ಷಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಸ್ತುತಪಡಿಸಿದರು.

Read More News

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ನಮ್ಮ ಟಿವಿ ಚಾನೆಲ್ ನ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ ಮತ್ತು ಅವರ ಸಹೋದರರಾದ ದೇವಿಚರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ ಯವರ ಮಾತೃಶ್ರೀ,ಶಿಕ್ಷಣ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕಿ ಹಾಗೂ ಡಾ. ಎ. ಸದಾನಂದ ಶೆಟ್ಟಿಯವರ ಸಹೋದರಿ ಎಂ. ರತ್ನಕಾಂತಿ ಶೆಟ್ಟಿ ಅವರಿಗೆ ಗಣ್ಯರಿಂದ ಶ್ರದ್ದಾಂಜಲಿ

ಕಸ್ತೂರಿ ರಂಗನ್ ವರದಿ ಆಧಾರಿತ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳ 7 ನೇ ಕರಡು ಅಧಿಸೂಚನೆ ಬಗ್ಗೆ ಸದನದ ಗಮನ ಸೆಳೆದ ಶಾಸಕ ಗಂಟಿಹೊಳೆ. ಗ್ರಾಮೀಣ ಜನರ ಆತಂಕ ನಿವಾರಣೆ ಹಾಗೂ ಜೀವನೋಪಾಯಗಳಿಗೆ ಆಗಬಹುದಾದ ಸಂಭವನಿಯ ಅಪಾಯಗಳ ಬಗ್ಗೆ ಪ್ರಸ್ತಾಪಿಸಿದ ಬೈಂದೂರು ಶಾಸಕರು. ಜನರಿಗೆ ಸ್ಪಷ್ಟ ಮಾಹಿತಿ ಹಾಗೂ ಅಧಿಸೂಚನೆ ವಿರುದ್ಧ ಸ್ಪಷ್ಟ ವಾದ ಮಂಡನೆ ಸಲುವಾಗಿ ಒಂದು ಬಾರಿ ಅಧಿಸೂಚಿತ ಗ್ರಾಮಗಳನ್ನು ಭೌತಿಕ ಸರ್ವೇಗೆ ಒಳಪಡಿಸಲು ಆಗ್ರಹ. 7 ನೇ ಕರಡು ಅಧಿಸೂಚನೆ ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರು.

Scroll to Top