‘ಸಚ್ಚಾರಿತ್ರೃ ಬೆಳೆಸುವುದು ಸಾಹಿತ್ಯದ ಉದ್ದೇಶವಾಗಲಿ’ ಸ್ವಾತಂತ್ರೃ ಹೋರಾಟಗಾರ ಮಟ್ಟಾರ ವಿಟ್ಠಲ ಕಿಣಿ ಆಶಯ

110.8K Views 17 Apr 2025

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದ.ಕ.ಜಿಲ್ಲಾ ಸಮಿತಿ ವತಿಯಿಂದ ಸ್ವಾತಂತ್ರೃ ಹೋರಾಟಗಾರ, ಹಿರಿಯ ಸಾಹಿತಿ ಮಟ್ಟಾರ ವಿಟ್ಠಲ ಕಿಣಿ ಅವರ 96ನೇ ಹುಟ್ಟುಹಬ್ಬದ ಅಂಗವಾಗಿ ಗುರುವಾರ ನಗರದ ಅಳಕೆಯಲ್ಲಿರುವ ಸ್ವಗೃಹದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಮಟ್ಟಾರ ವಿಟ್ಠಲ ಕಿಣಿ ಮಾತನಾಡಿ ‘ಯುವ ಸಮುದಾಯದಲ್ಲಿ ಸಚ್ಚಾರಿತ್ರೃ ಮತ್ತು ದೇಶಾಭಿಮಾನ ರೂಪಿಸಿ ಬೆಳೆಸುವುದು ಕೂಡಾ ಭಾರತೀಯ ಸಾಹಿತ್ಯದ ಉದ್ದೇಶವಾಗಿದೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದರೆ ಮಾತ್ರ ದೇಶದ ಉನ್ನತಿ
ಸಾಧ್ಯ. ಸಾವಿರಾರು ದೇಶ ಭಕ್ತರ ಬಲಿದಾನದಿಂದ ದೇಶ ಸ್ವಾತಂತ್ರೃ ಪಡೆದಿದೆ ಎನ್ನುವುದು ಸದಾ ನಮ್ಮ ಸ್ಮರಣೆಯಲ್ಲಿರಬೇಕು ಎಂದರು.
ಸನ್ಮಾನ ನೆರವೇರಿಸಿದ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ‘ ವಿದ್ಯಾರ್ಥಿ ದೆಸೆಯಲ್ಲಿಯೇ ಕ್ವಿಟ್ ಇಂಡಿಯಾ ಚಳವಳಿ ಬಳಿಕ ಗೋವಾ ವಿಮೋಚನೆ ಹೋರಾಟದಲ್ಲಿ ಭಾಗವಹಿಸಿದ ಮಟ್ಟಾರ ವಿಟ್ಠಲ ಕಿಣಿ ಅವರ ಅಪ್ರತಿಮ ರಾಷ್ಟ್ರಭಕ್ತಿ , ಸಾಹಿತ್ಯ ಸೇವೆ ಸಮಾಜಕ್ಕೆ ಸದಾ ಪ್ರೇರಣೆಯಾಗಿದೆ ಎಂದರು.
ಹಿರಿಯ ಪರ್ತಕರ್ತ ಕೆ.ಆನಂದ ಶೆಟ್ಟಿ, ಅಭಾಸಾಪ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಜತೆ ಕಾರ್ಯದರ್ಶಿ
ಲತೇಶ್ ಬಾಕ್ರಬೈಲ್, ಸಮಿತಿ ಸದಸ್ಯ ಡಾ.ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿಯ ಖಜಾಂಜಿ ಭಾಸ್ಕರ ರೈ ಕಟ್ಟ
ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ ವಂದಿಸಿದರು.

ಫೋಟೋ : ಮಟ್ಟಾರ ವಿಠಲ ಕಿಣಿ
……………………..

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top