ಪಾಲ್ದನೆ ಚರ್ಚ್ ನಲ್ಲಿ 3 ದಿನಗಳ ಧ್ಯಾನ ಕೂಟ ಆರಂಭ

108.8K Views 31 Mar 2025

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ 3 ದಿನಗಳ ಧ್ಯಾನ ಕೂಟ ಸೋಮವಾರ ಆರಂಭವಾಗಿದೆ.
ಶಿವಮೊಗ್ಗ ಧರ್ಮ ಪ್ರಾಂತ್ಯದ ಕ್ಯಾರಿಸ್ಮಾಟಿಕ್ ಧ್ಯಾನ ಕೂಟ ತಂಡದ ಪ್ರಮುಖರಾದ ಹಾಗೂ ಉತ್ತಮ ಪ್ರವಚನಕಾರರೂ ಆಗಿರುವ ವಂದನೀಯ ಫಾದರ್ ಫ್ರಾಂಕ್ಲಿನ್ ಡಿ ಸೋಜಾ ಅವರು ಧ್ಯಾನ ಕೂಟವನ್ನು ಉದ್ಘಾಟಿಸಿ ಈ ಕಾರ್ಯಕ್ರಮದಿಂದ ಭಕ್ತರಿಗೆ ಆಧ್ಯಾತ್ಮಿಕವಾಗಿ ಪ್ರಯೋಜನ ದೊರೆಯಲಿದೆ ಎಂದರು. ಈ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮ ಗುರು ವಂದನೀಯ ಫಾ. ಆಲ್ಬನ್ ಡಿ ಸೋಜಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಸರ್ವ ಆಯೋಗಗಳ ಸಂಚಾಲಕ ಜೊಸ್ಲಿನ್ ಲೋಬೊ ಉಪಸ್ಥಿತರಿದ್ದರು.ಧ್ಯಾನ ಕೂಟವು ಮಾರ್ಚ್ 31 ರಿಂದ ಏಪ್ರಿಲ್ 2 ರ ತನಕ ಪ್ರತಿ ದಿನ ಸಂಜೆ 5.30 ರಿಂದ ರಾತ್ರಿ 8.15 ರ ವರೆಗೆ ನಡೆಯಲಿದೆ.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top