ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮುಕ್ಕಾದಲ್ಲಿ ಮುಕ್ಕಾ ಪ್ರೋಟೀನ್ಸ್ ಲಿಮಿಟೆಡ್ ನೇತೃತ್ವದಲ್ಲಿ ಬೀಚ್ ಸ್ವಚ್ಛತಾ ಅಭಿಯಾನ

ಮಂಗಳೂರು: ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮುಕ್ಕಾ ಪ್ರೋಟೀನ್ಸ್ ಲಿಮಿಟೆಡ್, ಕರಾವಳಿ ಕಲ್ಯಾಣ ಪರಿಷತ್, ಕರ್ನಾಟಕ ಹಾಗೂ ಮಿತ್ರ ಪಟ್ಟಣ ಮೊಗವೀರ (ರಿ.) ಸಂಘ, ಸುರತ್ಕಲ್ ಮುನಿಸಿಪಾಲಿಟಿ ಹಾಗೂ ಮಂಗಳೂರು ಮುನಿಸಿಪಾಲಿಟಿಯ ಸಹಯೋಗದೊಂದಿಗೆ ಮುಕ್ಕಾದಲ್ಲಿ ಬೀಚ್ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಯಿತು.ಅಭಿಯಾನದಲ್ಲಿ ಸಂಸ್ಥೆಗಳ ಪ್ರತಿನಿಧಿಗಳು, ಸಿಬ್ಬಂದಿ, ಸ್ವಯಂಸೇವಕರು ಹಾಗೂ ಸ್ಥಳೀಯ ಸಮುದಾಯದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು. ಕರಾವಳಿ ಪ್ರದೇಶದ ಸ್ವಚ್ಛತೆಯನ್ನು ಕಾಪಾಡುವುದು, ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.ಅಭಿಯಾನದ ಸಂದರ್ಭದಲ್ಲಿ ಭಾಗವಹಿಸಿದವರು ಬೀಚ್ ಪ್ರದೇಶದಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಕಸ ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಸ್ವಚ್ಛತಾ ಕಾರ್ಯ ಕೈಗೊಂಡರು. ಈ ಕಾರ್ಯಕ್ರಮವು ಕರಾವಳಿ ಪರಿಸರವನ್ನು ಸಂರಕ್ಷಿಸುವಲ್ಲಿ ಸಮುದಾಯದ ಸಾಮೂಹಿಕ ಸಹಭಾಗಿತ್ವದ ಮಹತ್ವವನ್ನು ಎತ್ತಿ ತೋರಿಸಿತು. ಈ ಸ್ವಚ್ಛತಾ ಅಭಿಯಾನವು ಮುಕ್ಕಾ ಪ್ರೋಟೀನ್ಸ್ ಲಿಮಿಟೆಡ್‌ನ ಸಿಬ್ಬಂದಿ ಹಾಗೂ ರಾಜೇಶ್ ಮತ್ತು ಕಿಶೋರ್ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆಯಿತು. ಅವರ ಸಕ್ರಿಯ ಭಾಗವಹಿಸುವಿಕೆ ಹಾಗೂ ಮಾರ್ಗದರ್ಶನವು ಅಭಿಯಾನದಲ್ಲಿ ಪಾಲ್ಗೊಂಡ ಸ್ವಯಂಸೇವಕರಿಗೆ ಉತ್ತೇಜನ ನೀಡಿತು.ಈ ಸಂದರ್ಭದಲ್ಲಿ ಮುಕ್ಕಾ ಪ್ರೋಟೀನ್ಸ್ ಲಿಮಿಟೆಡ್‌ನ ಜಗನ್ನಾಥ್ ಮಾತನಾಡಿ, “ನಮ್ಮ ಕರಾವಳಿ ನಮ್ಮ ಪರಿಸರ ಮತ್ತು ಸಮುದಾಯದ ಪ್ರಮುಖ ಭಾಗವಾಗಿದೆ. ಅದರ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಇಂತಹ ಸಹಯೋಗದ ಕಾರ್ಯಕ್ರಮಗಳ ಮೂಲಕ ಪರಿಸರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದರ ಜೊತೆಗೆ, ನಮ್ಮ ಕರಾವಳಿ ಪ್ರದೇಶಗಳನ್ನು ಸ್ವಚ್ಛವಾಗಿ ಮತ್ತು ಸುಸ್ಥಿರವಾಗಿ ಕಾಪಾಡುವಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸುವುದು ನಮ್ಮ ಉದ್ದೇಶವಾಗಿದೆ,” ಎಂದು ಹೇಳಿದರು.ಮುಕ್ಕಾ ಪ್ರೋಟೀನ್ಸ್ ಲಿಮಿಟೆಡ್, ಕರಾವಳಿ ಕಲ್ಯಾಣ ಪರಿಷತ್, ಕರ್ನಾಟಕ ಹಾಗೂ ಮಿತ್ರ ಪಟ್ಟಣ ಮೊಗವೀರ (ರಿ.) ಸಂಘಗಳ ಸಹಯೋಗವು ಪರಿಸರ ಸಂರಕ್ಷಣೆಯಲ್ಲಿ ಸಮುದಾಯ ಸಂಸ್ಥೆಗಳು ಮತ್ತು ಉದ್ಯಮಗಳ ನಡುವಿನ ಸಹಕಾರದ ಮಹತ್ವವನ್ನು ಪ್ರತಿಬಿಂಬಿಸಿತು.ಸಮುದ್ರ ಪರಿಸರ ವ್ಯವಸ್ಥೆಯೊಂದಿಗೆ ನಿಕಟವಾಗಿ ಸಂಪರ್ಕ ಹೊಂದಿರುವ ಮುಕ್ಕಾ ಪ್ರೋಟೀನ್ಸ್ ಲಿಮಿಟೆಡ್, ಪರಿಸರ ಸಂರಕ್ಷಣೆ, ಸಮುದಾಯ ಕಲ್ಯಾಣ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಿಗೆ ನಿರಂತರವಾಗಿ ಬೆಂಬಲ ನೀಡುತ್ತಿದೆ.ಬೀಚ್ ಸ್ವಚ್ಛತಾ ಅಭಿಯಾನವು ಸ್ವಚ್ಛತೆ, ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ ಹಾಗೂ ಕರ್ನಾಟಕದ ಕರಾವಳಿ ಪರಿಸರದ ಸಂರಕ್ಷಣೆಯ ಕುರಿತು ನಿರಂತರವಾಗಿ ಜಾಗೃತಿ ಮೂಡಿಸುವ ಸಾಮೂಹಿಕ ಸಂಕಲ್ಪದೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿತು.

ಪ್ರಾದೇಶಿಕ ವಾರ್ತೆಗಳು

ಬಂಟರ ಸಂಘ ಬೆಂಗಳೂರು: ಇತಿಹಾಸದ ಪುಟದಲ್ಲಿ ಹೊಸ ಅಧ್ಯಾಯ – ಅಧ್ಯಕ್ಷರಾಗಿ ಡಾ. ದೀಪಕ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಅಮರನಾಥ ಶೆಟ್ಟಿ ಆಯ್ಕೆ

ಬೆಂಗಳೂರು, ಸೆಪ್ಟೆಂಬರ್ 21, 2026: ಕರ್ನಾಟಕದ ರಾಜಧಾನಿಯ ಹೃದಯಭಾಗದಲ್ಲಿರುವ ವಿಜಯನಗರದ ಪ್ರತಿಷ್ಠಿತ ಬಂಟರ ಭವನದಲ್ಲಿ ನಡೆದ ಬಂಟರ ಸಂಘ ಬೆಂಗಳೂರು 2026-29ನೇ ಸಾಲಿನ ಚುನಾವಣೆಯಲ್ಲಿ ಸಮುದಾಯದ ಹೊಸ ನಾಯಕತ್ವ ಹೊರಹೊಮ್ಮಿದೆ.ಬಾರ್ಕೂರು ಮೂಲದ, ಅಂತರಾಷ್ಟ್ರೀಯ ಕಾರ್ಪೊರೇಟ್ ಅನುಭವ ಮತ್ತು ಸಾಂಸ್ಕೃತಿಕ ಹೋರಾಟದ ಹಿನ್ನೆಲೆ ಹೊಂದಿರುವ ಡಾ. ದೀಪಕ್ ಶೆಟ್ಟಿ ಅವರು ಸಂಘದ ನೂತನ ಅಧ್ಯಕ್ಷರಾಗಿ ಭರ್ಜರಿ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ಅವರೊಂದಿಗೆ ಅನುಭವಿ ಸಂಘಟಕ ಅಮರನಾಥ ಶೆಟ್ಟಿ ಹೆಗ್ಗುಂಜೆ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ಬಂಟ ಸಮುದಾಯದಲ್ಲಿ ಹೊಸ ಭರವಸೆ ಮೂಡಿಸಿದೆ. ನೂತನ ಪದಾಧಿಕಾರಿಗಳ ಸಂಪೂರ್ಣ ಪಟ್ಟಿ: ಯಾರು ಈ ಡಾ. ದೀಪಕ್ ಶೆಟ್ಟಿ? – ಕೇವಲ ಹೆಸರಲ್ಲ, ಒಂದು ಸಾಧನೆಯ ಹಾದಿಮೂಲತಃ ಉಡುಪಿ ಜಿಲ್ಲೆಯ ಬಾರ್ಕೂರಿನವರು. ನಿವೃತ್ತ ಶಿಕ್ಷಕರಾದ ಹಿಮಕರ ಶೆಟ್ಟಿ ಮತ್ತು ವನಜಾ ಶೆಟ್ಟಿ ದಂಪತಿಯ ಸುಪುತ್ರ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ, ಎಂಬಿಎ ಪದವಿ ಪಡೆದು, ಯಕ್ಷಗಾನ ಕ್ಷೇತ್ರದಲ್ಲಿ ಡಾಕ್ಟರೇಟ್ ಪಡೆದಿರುವ ಅಪರೂಪದ ವಿದ್ಯಾವಂತರು.ವೃತ್ತಿ ಜೀವನದಲ್ಲಿ ಟೊಯೋಟಾ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ಜಪಾನ್, ಥೈಲ್ಯಾಂಡ್ ಸೇರಿದಂತೆ ವಿದೇಶಗಳಲ್ಲಿ 11 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪತ್ನಿ ಸುಮಾ ಶೆಟ್ಟಿ, ಇಬ್ಬರು ಪುತ್ರರು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.ಸಂಘದಲ್ಲಿ ಕಳೆದ 22 ವರ್ಷಗಳಿಂದ ನಿರಂತರ ಸೇವೆ. ಯುವ ವಿಭಾಗದಿಂದ ಆರಂಭಿಸಿ, ಯುವ ವಿಭಾಗದ ಚೇರ್ಪರ್ಸನ್, ಎರಡು ಬಾರಿ ಕಾರ್ಯಕಾರಿ ಸಮಿತಿ ಸದಸ್ಯ, ಖಜಾಂಚಿಯಾಗಿ ಪಾರದರ್ಶಕ ಆಡಳಿತ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.ಸಂಸ್ಕೃತಿಯ ಕಾವಲುಗಾರ:ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಕಾರ್ಯಾಧ್ಯಕ್ಷ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ, ಯಕ್ಷಗಾನದ 100 ರಾಗಗಳನ್ನು ದಾಖಲಿಸಿದ “ಶತಸಾನುರಾಗ” ಕೃತಿಯ ರೂವಾರಿ, ಕಂಬಳ ನಿಷೇಧದ ವಿರುದ್ಧ ಫ್ರೀಡಂ ಪಾರ್ಕ್ ನಲ್ಲಿ ನಡೆದ ಐತಿಹಾಸಿಕ ಹೋರಾಟದ ನೇತೃತ್ವ ವಹಿಸಿದ್ದವರು. ಜಪಾನ್ ನಲ್ಲಿ 11 ವರ್ಷಗಳ ಕಾಲ ಕನ್ನಡ ರಾಜ್ಯೋತ್ಸವ ಆಚರಿಸಿದ ಹೆಗ್ಗಳಿಕೆ ಇವರದು.ಗೆಲುವಿನ ನಂತರ ಡಾ. ಶೆಟ್ಟಿ ಹೇಳಿದ್ದೇನು?“ನನ್ನ ಗೆಲುವು ವ್ಯಕ್ತಿಯ ಗೆಲುವಲ್ಲ, ಇದು ಸಮುದಾಯದ ಸಾಮೂಹಿಕ ಗೆಲುವು. ನಮ್ಮ ಆಶಯ – ಸಮುದಾಯದ ಸಮಗ್ರ ಅಭಿವೃದ್ಧಿ. ಸಂಘದ ಎರಡು ಶಿಕ್ಷಣ ಸಂಸ್ಥೆಗಳ ಉನ್ನತೀಕರಣ, ಉದ್ಯೋಗ ಮೇಳ, ಆರೋಗ್ಯ ನಿಧಿ, ವಿದ್ಯಾನಿಧಿ ಮೂಲಕ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವುದು ನಮ್ಮ 5 ಪ್ರಮುಖ ಯೋಜನೆಗಳು. ತುಳು ಭಾಷೆಗೆ ದ್ವಿತೀಯ ಅಧಿಕೃತ ಭಾಷೆಯ ಸ್ಥಾನಮಾನ ನೀಡಿದ ಸರ್ಕಾರಕ್ಕೆ ನಮ್ಮ ಸಮುದಾಯದ ಪರವಾಗಿ ಧನ್ಯವಾದಗಳು” ಎಂದು ಅವರು ನುಡಿದರು.ಪ್ರಧಾನ ಕಾರ್ಯದರ್ಶಿ ಅಮರನಾಥ ಶೆಟ್ಟಿ ಬಗ್ಗೆ: ಬೆಂಗಳೂರಿನಲ್ಲಿ ಉದ್ಯಮಿಯಾಗಿ, ಸಂಘದ ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುವ ಇವರು ಸಂಘಟನಾ ಚತುರರಾಗಿ ಗುರುತಿಸಿಕೊಂಡಿದ್ದಾರೆ.ಈ ಚುನಾವಣೆಯು ಬಂಟ ಸಮುದಾಯದ ಒಗ್ಗಟ್ಟಿಗೆ ಸಾಕ್ಷಿಯಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ಸಾವಿರಾರು ಬಂಟ ಬಾಂಧವರಲ್ಲಿ ಹೊಸ ಉತ್ಸಾಹ ತಂದಿದೆ.

ಪ್ರಾದೇಶಿಕ ವಾರ್ತೆಗಳು

ಯೆನೇಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಗುಣಮುಖರಾಗಿದ್ದು, ನಾಳೆ ಸಂಜೆಯೊಳಗೆ ಡಿಸ್ಚಾರ್ಜ್ ಸಾಧ್ಯತೆ. MPMLAS NEWS BREAKING EXECLUSSIVE SPOT REPORT BY DR ASHOK SHETTY BN

ಕಾರ್ಕಳದ ಸಾಣೂರು ಬಳಿ ರಸ್ತೆ ಅಪಘಾತದಿಂದ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿ ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಯೆನೇಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರ್ನಾಟಕ ಸರಕಾರದ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಅವರನ್ನು ಸಂಸದ ಕ್ಯಾಪ್ಶನ್ ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್,ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಎಂಎಲ್ ಸಿ ಕ್ಯಾಪ್ಶನ್ ಗಣೇಶ್ ಕಾರ್ಣಿಕ್ ಸಹಿತ ಬಿಜೆಪಿ ಪಕ್ಷದ ಪ್ರಮುಖರು,ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು,ಅಪಾರ ಸಂಖ್ಯೆಯ ಅಭಿಮಾನಿಗಳು,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು,ನಾಯಕರು ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ್ದು, ಎಲ್ಲರೊಂದಿಗೆ ರೈಯವರು ಆತ್ಮೀಯತೆಯಿಂದ ಮಾತಾಡಿದ್ದಾರೆ. ರೈ ಅವರು ಸಂಪೂರ್ಣ ಚೇತರಿಸಿಕೊಂಡಿದ್ದು, ಕಾರ್ಯಕರ್ತರು ಆತಂಕಕ್ಕೆ ಒಳಗಾಗುವುದು ಬೇಡ.ಅವರು ಗುಣಮುಖರಾಗಿ ಅತೀ ಶೀಘ್ರದಲ್ಲಿಯೇ ಸಾರ್ವಜನಿಕ ಜೀವನಕ್ಕೆ ಮರಳಲಿದ್ದಾರೆ ಎಂದು ರೈ ಅವರ ಆಪ್ತರಾಗಿರುವ ಪಿಯೂಸ್ ರೋಡ್ರಿಗಸ್ ಅವರು MPMLA’S NEWs ಗೆ ತಿಳಿಸಿದ್ದಾರೆ..ರೈ ಅವರು ಗುಣಮುಖರಾಗಿದ್ದು ಅವರು ಆಸ್ಪತ್ರೆಯಿಂದ ನಾಳೆ ಸಂಜೆಯೊಳಗೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಪಿಯೂನ್ ರೋಡ್ರಿಗಸ್ ಅವರು ಹೇಳಿದ್ದಾರೆ.ಕರ್ನಾಟಕ ಮಾತ್ರವಲ್ಲ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿ. ರಮಾನಾಥ ರೈ ಅವರಿಗೆ ಮಿಲಿಯನ್ ಗಟ್ಟಲೆ ಅಭಿಮಾನಿಗಳಿದ್ದಾರೆ. 6 ಬಾರಿ ಬಂಟ್ವಾಳದ ಶಾಸಕರಾಗಿ, ಮೂರು ಬಾರಿ ಕ್ಯಾಬಿನೆಟ್ ಮಂತ್ರಿಯಾಗಿ, ಎರಡು ಸಲ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿಷ್ಕಳಂಕ ವ್ಯಕ್ತಿತ್ವದಿಂದ ಪ್ರಾಮಾಣಿಕ ಮತ್ತುಹಗರಣ ರಹಿತ ಪೂರ್ಣಕಾಲಿಕ ರಾಜಕಾರಣಿಯಾಗಿ ಜಾತಿ ಮತ ಪಕ್ಷ ಭೇದವಿಲ್ಲದೆ ಜನಸೇವೆಯಲ್ಲಿ ದಣಿವರಿಯದ ನಿರಾಡಂಬರ ನಿಸ್ವಾರ್ಥ ನಾಯಕರಾಗಿ ಅಜಾತಶತ್ರುವಾಗಿ ಜನ ಮೆಚ್ಚಿದ ಪ್ರಜಾಚಕ್ರವರ್ತಿಯಾಗಿ ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾಗಾಂಧಿ, ರಾಜೀವಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾಗಾಂಧಿ, ಬಿ. ಜನಾರ್ಧನ ಪೂಜಾರಿ, ಎಂ. ವೀರಪ್ಪ ಮೊಯ್ಲಿ ಮೊದಲಾದ ರಾಷ್ಟ್ರ ನಾಯಕರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿರುವ ಬಿ.ರಮಾನಾಥ ರೈ ಅವರು ಜನರ ಪ್ರೀತಿಯ ಬೇಬಿಯಣ್ಣರೆಂದೇ ಜನಪ್ರಿಯರು.Mp MLA’s News ಮತ್ತು mpmlasnewstv 24×7 ನ್ಯೂಸ್ ಪೋರ್ಟಲ್ ನ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು (ಸೆ. 21) ಇಂದು ರಾತ್ರಿ ರೈ ಅವರನ್ನು ಭೇಟಿಯಾದಾಗ ರೈ ಅವರು ಸಂಪಾದಕರಲ್ಲಿ ಆತ್ಮೀಯವಾಗಿ ಮಾತಾಡಿದರಲ್ಲದೆ, ನಾನು ಹುಷಾರಾಗಿದ್ದೇನೆ. ನನ್ನ ಮೇಲೆ ಪ್ರೀತಿ ಇಟ್ಟ ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ದೈವ ದೇವರುಗಳ ಆಶೀರ್ವಾದವೇ ನನ್ನನ್ನು ಕಾಪಾಡಿದೆ.ಈ ಸಂದರ್ಭದಲ್ಲಿ ರೈ ಅವರ ಆತ್ಮೀಯ ಮಿತ್ರರಾದ, ಉಡುಪಿ ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಅವರು ಆಸ್ಪತ್ರೆಗೆ ಬಂದು ರೈ ಅವರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದರು. ಈ ವೇಳೆ ಆಸ್ಪತ್ರೆಯಲ್ಲಿ ಕಾಂಗ್ರೆಸ್ ಮುಖಂಡರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಪದ್ಮ ಶೇಖರ್ ಜೈನ್,ಪಿಯೂಸ್ ರೋಡ್ರಿಗಸ್,ಬೇಬಿ ಕುಂದರ್,ಪದ್ಮನಾಭ ರೈ, ಶೆಬೀರ್ ಮೊದಲಾದವರು ಉಪಸ್ಥಿತರಿದ್ದರು. ತದನಂತರ, MPMLAS NEWS ರಸ್ತೆ ಅಪಘಾತದಿಂದ ಕಾಲಿಗೆ ಗಂಭೀರಗೊಂಡಿದ್ದ ರೈಯವರ ಪಿ. ಎ. ಡೆಂಝಿಲ್ ಅವರನ್ನು ಭೇಟಿಯಾಯಿತು. ಡೆಂಝಿಲ್ ಅವರು ಚೇತರಿಸಿಕೊಂಡಿದ್ದು ಅವರ ಕಾಲಿನ ಶಸ್ತ್ರಚಿಕಿತ್ಸೆ ಒಂದೆರಡು ದಿನಗಳಲ್ಲಿ ನಡೆಯಲಿದೆ. ಬಂಟ್ವಾಳ ಅಲ್ಲಿಪಾದೆಯವರಾದ ಡೆಂಝಿಲ್ ಅವರು ಕಳೆದ 18ವರ್ಷಗಳಿಂದ ರೈ ಯವರ ಆಪ್ತ ಸಹಾಯಕರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರು ಕೂಡಾ ಅತೀ ಬೇಗ ಗುಣಮುಖರಾಗಲೆಂದು ಜನ ಹಾರೈಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬೆಂಗಳೂರು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಐತಿಹಾಸಿಕ ಗೆಲುವು ಸಾಧಿಸಿದ ಡಾ. ದೀಪಕ್ ಶೆಟ್ಟಿ ಅವರಿಂದ ಏಳು ಮಹತ್ವದ ಯೋಜನೆಗಳ ಘೋಷಣೆ. MPMLA’S NEWS EXECLUSSIVE REPORT BY DR ASHOK SHETTY BN

ಬೆಂಗಳೂರು: ಬೆಂಗಳೂರು ಬಂಟರ ಸಂಘದ 2026-28ನೇ ಸಾಲಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಉದ್ಯಮಿ ಡಾ.ದೀಪಕ್ ಶೆಟ್ಟಿ ಅವರು ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.ಡಾ.ದೀಪಕ್ ಶೆಟ್ಟಿ* ಅವರು ಆಯ್ಕೆಯಾಗಿದ್ದು, ಕರಾವಳಿ ಮತ್ತು ಬೆಂಗಳೂರಿನ ಬಂಟ ಸಮುದಾಯದಲ್ಲಿ ಸಂಭ್ರಮ ಮನೆ ಮಾಡಿದೆ.ವೈಯಕ್ತಿಕ ಪರಿಚಯ:ಮೂಲತಃ ಉಡುಪಿ ಜಿಲ್ಲೆಯ ಬಾರ್ಕೂರು*ನವರಾದ ಡಾ. ದೀಪಕ್ ಶೆಟ್ಟಿ ಅವರು ನಿವೃತ್ತ ಶಿಕ್ಷಕರಾದ ಹಿಮಕರ ಶೆಟ್ಟಿ ಮತ್ತು ಶ್ರೀಮತಿ ವನಜಾ ಶೆಟ್ಟಿ ದಂಪತಿಯ ಸುಪುತ್ರ. ಪತ್ನಿ ಶ್ರೀಮತಿ ಸುಮಾ ಡಿ. ಶೆಟ್ಟಿ, ಇಬ್ಬರು ಪುತ್ರರು ಇಂಜಿನಿಯರಿಂಗ್ ಶಿಕ್ಷಣ ಕಲಿಯುತ್ತಿದ್ದಾರೆ.ಡಾ. ದೀಪಕ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ವಿದ್ಯಾರ್ಹತೆ ಮತ್ತು ವೃತ್ತಿ ಮಾದರಿ ವ್ಯಕ್ತಿತ್ವ:ಡಾ. ದೀಪಕ್ ಶೆಟ್ಟಿ ಅವರು ಕೇವಲ ಸಮಾಜ ಸೇವಕರಲ್ಲ, ಉನ್ನತ ವಿದ್ಯಾವಂತರು. 1.ಬಂಟ ವಿದ್ಯಾನಿಧಿ ಯೋಜನೆ:ಬಡ ಬಂಟ ವಿದ್ಯಾರ್ಥಿಗಳಿಗೆ ವಾರ್ಷಿಕ 50 ಲಕ್ಷ ರೂ. ವಿದ್ಯಾರ್ಥಿ ವೇತನ. IAS, KAS, ಇಂಜಿನಿಯರಿಂಗ್, ಮೆಡಿಕಲ್ ವಿದ್ಯಾರ್ಥಿಗಳಿಗೆ ವಿಶೇಷ ನೆರವು.2.ಬಂಟ ಉದ್ಯೋಗ ಮೇಳ:ಬೆಂಗಳೂರಿನಲ್ಲಿ ವರ್ಷಕ್ಕೆ 2 ಬಾರಿ ಬೃಹತ್ ಉದ್ಯೋಗ ಮೇಳ. ಟೊಯೋಟಾ ಸೇರಿದಂತೆ 100+ ಕಂಪನಿಗಳನ್ನು ಕರೆತಂದು ನಮ್ಮ ಯುವಕರಿಗೆ ಉದ್ಯೋಗ ಕೊಡಿಸುವ ಗುರಿ.3.ಬಂಟರ ಭವನ ಮೇಲ್ದರ್ಜೆಗೆ:ವಿಜಯನಗರದ ಬಂಟರ ಭವನವನ್ನು 5 ಸ್ಟಾರ್ ಸಭಾಂಗಣ, ಅತ್ಯಾಧುನಿಕ ಲೈಬ್ರರಿ, ಡಿಜಿಟಲ್ ಆಫೀಸ್ ಆಗಿ ಮೇಲ್ದರ್ಜೆಗೇರಿಸುವುದು.4.ಯಕ್ಷಗಾನ ಮತ್ತು ತುಳು-ಕನ್ನಡ ಉಳಿವು:ಪ್ರತಿ ತಿಂಗಳು ಬಂಟರ ಭವನದಲ್ಲಿ ಯಕ್ಷಗಾನ, ತಾಳಮದ್ದಳೆ, ತುಳು ಲಿಪಿ ಕಾರ್ಯಾಗಾರ, ಕುಂದಾಪ್ರ ಕನ್ನಡ ಪುಸ್ತಕ ಮೇಳ.5.ಬಂಟ ವೈದ್ಯಕೀಯ ನೆರವು ನಿಧಿ:ಅನಾರೋಗ್ಯ ಪೀಡಿತ ಬಂಟ ಕುಟುಂಬಗಳಿಗೆ 5 ಲಕ್ಷದವರೆಗೆ ಉಚಿತ ವೈದ್ಯಕೀಯ ನೆರವು.6.ವಧು-ವರರ ಸಮ್ಮೇಳನ ಮತ್ತು ಮಹಿಳಾ ಸಬಲೀಕರಣ:ವರ್ಷಕ್ಕೊಮ್ಮೆ ಬೃಹತ್ ಬಂಟ ವಧು-ವರರ ಸಮ್ಮೇಳನ, ಮಹಿಳೆಯರಿಗೆ ಸ್ವ-ಉದ್ಯೋಗ ತರಬೇತಿ.7.ಜಾಗತಿಕ ಬಂಟರ ಒಕ್ಕೂಟ:ದುಬೈ, ಜಪಾನ್, ಅಮೆರಿಕದ ಬಂಟರನ್ನು ಬೆಂಗಳೂರು ಬಂಟರ ಸಂಘದೊಂದಿಗೆ ಜೋಡಿಸುವ “Global Bunts Connect” ಯೋಜನೆ. “ನಾನು ಅಧ್ಯಕ್ಷನಲ್ಲ, ನಿಮ್ಮ ಸೇವಕ. ನಿಮ್ಮೆಲ್ಲರ ಸಹಕಾರದಿಂದ ಬೆಂಗಳೂರುಬಂಟರ ಸಂಘವನ್ನು ಕರ್ನಾಟಕದ ನಂ.1 ಸಮುದಾಯ ಸಂಘವನ್ನಾಗಿ ಮಾಡುತ್ತೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಬಂಟರ ಸಂಘದ ಕೀರ್ತಿಯನ್ನು ತಲುಪುವಂತೆ ಮಾಡುತ್ತೇನೆ “. ಎಂದು ಡಾ. ದೀಪಕ್ ಶೆಟ್ಟಿ ಹೇಳಿದ್ದಾರೆ.MP MLA’S NEWS ಮಹಾಪೋಷಕರಾಗಿರುವ ಡಾ. ದೀಪಕ್ ಶೆಟ್ಟಿ ಅವರಿಗೆ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಶುಭಾಶಯ ಸಲ್ಲಿಸಿದ್ದಾರೆ

ಪ್ರಾದೇಶಿಕ ವಾರ್ತೆಗಳು

ಇಂದು ಅಜಿತ್ ಕುಮಾರ್ ರೈ ಮಾಲಾಡಿ ಅವರ ಹುಟ್ಟುಹಬ್ಬ

ಮಂಗಳೂರು-ಇಂದು ಸೆ.21, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾಗಿರುವ ಅಜಿತ್ ಕುಮಾರ್ ರೈ ಮಾಲಾಡಿ ಅವರ ಹುಟ್ಟುಹಬ್ಬ. ಬಂಟ ಸಮಾಜದ ಸಮರ್ಥ ನೇತಾರ,ಬಂಟರ ಗಣೇಶೋತ್ಸವದ ರೂವಾರಿ, ನೇರ, ನಿರ್ಭೀತ ನಡೆ ನುಡಿಯ ಆಜಾತ ಶತ್ರು, ಸೌಹಾರ್ದ ನಾಯಕ ಮಾಲಾಡಿ ಅಜಿತ್ ಕುಮಾರ್ ರೈ ಅವರ ಹುಟ್ಟುಹಬ್ಬಕ್ಕೆ Mpmla*s news ಶುಭ ಹಾರೈಸುತ್ತದೆ.

ಪ್ರಾದೇಶಿಕ ವಾರ್ತೆಗಳು

India Social & Cultural Centre Abu Dhabi Ex-President Mitrampady Jayaram Rai Congratulates Karnataka CM DK Shivakumar & Leaders for Tulu as Second Official Language

Abu Dhabi, UAE: Former President of India Social & Cultural Centre (ISC), Abu Dhabi and Prominent NRI Leader, Mr. Mitrampady Jayaram Rai has congratulated the Karnataka Government for granting second official language status to Tulu.Speaking from Abu Dhabi, Mr. Rai said, “This is a historic and golden chapter for Tulu Nadu. On behalf of lakhs of NRIs in the Gulf, I congratulate all Tulu brothers and sisters.”“I sincerely thank Chief Minister Shri D.K. Shivakumar and the entire Cabinet for this bold and historic decision. Tulu is not just a language, it is our culture, our emotion and our identity. Tulu has more than 2000 years of rich heritage with Naga worship, Bhoota Aradhane, Kambala, Yakshagana and Paddana,” he said.Mr. Rai further said, “This victory belongs to all Tulu associations, writers, artists and youths who struggled for many years. My special thanks to District Incharge Minister Shri U.T. Khader, Puttur Dynamic MLA Shri Ashok Kumar Rai and all parties MLAs, MPs, Political, Social, Literary leaders, Tulu language fighters, especially MLA Shri Sunil Kumar, Dr. Mijaruguthu Mohan Alva, Ex-Minister Shri B. Ramanath Rai and all associations and leaders of Tulunadu for their valuable contribution and continuous support for the cause of Tulu.”“This is a big responsibility to save Tulu for the next generation. Let our children learn Tulu in schools. We hope Tulu will soon be included in the 8th Schedule of the Indian Constitution,” he added.Tulu is our breath, Tulu is our pride.

ಪ್ರಾದೇಶಿಕ ವಾರ್ತೆಗಳು

ತುಳುವಿಗೆ ದ್ವಿತೀಯ ಅಧಿಕೃತ ಭಾಷಾ ಸ್ಥಾನಮಾನ: ಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರಿಗೆ ಅನಿವಾಸಿ ತುಳುವರ ಪರವಾಗಿ ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರ, ಅಬುಧಾಬಿಯ ನಿಕಟಪೂರ್ವ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅಭಿನಂದನೆ

ಅಬುಧಾಬಿ/ಮಂಗಳೂರು: ಕರ್ನಾಟಕ ಸರ್ಕಾರವು ತುಳುವಿಗೆ ದ್ವಿತೀಯ ಅಧಿಕೃತ ಭಾಷಾ ಸ್ಥಾನಮಾನ ನೀಡಿರುವ ಐತಿಹಾಸಿಕ ನಿರ್ಧಾರಕ್ಕೆ ಅಬುಧಾಬಿಯಿಂದ ಭಾರಿ ಸ್ವಾಗತ ವ್ಯಕ್ತವಾಗಿದೆ.ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರ (ISC), ಅಬುಧಾಬಿಯ ಮಾಜಿ ಅಧ್ಯಕ್ಷ ಹಾಗೂ ಪ್ರಮುಖ ಅನಿವಾಸಿ ನಾಯಕ ಮಿತ್ರಂಪಾಡಿ ಜಯರಾಮ್ ರೈ ಅವರು ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.ಅಬುಧಾಬಿಯಿಂದ ಮಾತನಾಡಿದ ಅವರು, “ಇದು ತುಳುನಾಡಿನ ಪಾಲಿಗೆ ಐತಿಹಾಸಿಕ ಮತ್ತು ಸುವರ್ಣ ಅಧ್ಯಾಯ. ಕೊಲ್ಲಿ ರಾಷ್ಟ್ರದ ಲಕ್ಷಾಂತರ ಅನಿವಾಸಿ ತುಳುವರ ಪರವಾಗಿ ಎಲ್ಲಾ ತುಳು ಬಾಂಧವರಿಗೆ ಅಭಿನಂದನೆಗಳು” ಎಂದು ಹೇಳಿದರು.ಈ ದಿಟ್ಟ ಮತ್ತು ಐತಿಹಾಸಿಕ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್* ಮತ್ತು ಇಡೀ ಸಂಪುಟಕ್ಕೆ ಹೃತ್ಪೂರ್ವಕ ಧನ್ಯವಾದಗಳು. ತುಳು ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ, ನಮ್ಮ ಭಾವನೆ ಮತ್ತು ನಮ್ಮ ಅಸ್ಮಿತೆ. ನಾಗಾರಾಧನೆ, ಭೂತಾರಾಧನೆ, ಕಂಬಳ, ಯಕ್ಷಗಾನ ಮತ್ತು ಪಾಡ್ದನಗಳೊಂದಿಗೆ ತುಳುವಿಗೆ 2000 ವರ್ಷಗಳಿಗೂ ಮಿಕ್ಕಿದ ಶ್ರೀಮಂತ ಪರಂಪರೆ ಇದೆ” ಎಂದರು.“ಈ ಗೆಲುವು ಹಲವು ವರ್ಷಗಳಿಂದ ಹೋರಾಡಿದ ಎಲ್ಲಾ ತುಳು ಸಂಘಟನೆಗಳು, ಬರಹಗಾರರು, ಕಲಾವಿದರು ಮತ್ತು ಯುವಕರಿಗೆ ಸಲ್ಲುತ್ತದೆ. ಈ ಹೋರಾಟಕ್ಕೆ ನಿರಂತರ ಬೆಂಬಲ ಮತ್ತು ಅಮೂಲ್ಯ ಕೊಡುಗೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಪುತ್ತೂರಿನ ಕ್ರಿಯಾಶೀಲ ಶಾಸಕ ಅಶೋಕ್ ಕುಮಾರ್ ರೈnಮತ್ತು ಎಲ್ಲಾ ಪಕ್ಷಗಳ ಶಾಸಕರು, ಸಂಸದರು, ರಾಜಕೀಯ, ಸಾಮಾಜಿಕ, ಸಾಹಿತ್ಯ ಮುಖಂಡರು, ತುಳು ಭಾಷಾ ಹೋರಾಟಗಾರರು, ವಿಶೇಷವಾಗಿ ಶಾಸಕ ಸುನೀಲ್ ಕುಮಾರ್, ಡಾ. ಮಿಜಾರುಗುತ್ತು ಮೋಹನ್ ಆಳ್ವ, ಮಾಜಿ ಸಚಿವ ಬಿ. ರಮಾನಾಥ ರೈ ಹಾಗೂ ತುಳುನಾಡಿನ ಎಲ್ಲಾ ಸಂಘಟನೆಗಳು ಮತ್ತು ನಾಯಕರಿಗೆ ನನ್ನ ವಿಶೇಷ ಧನ್ಯವಾದಗಳು” ಎಂದು ರೈ ಹೇಳಿದರು.“ಮುಂದಿನ ಪೀಳಿಗೆಗೆ ತುಳುವನ್ನು ಉಳಿಸುವುದು ನಮ್ಮ ದೊಡ್ಡ ಜವಾಬ್ದಾರಿ ಮತ್ತು ಆದ್ಯ ಕರ್ತವ್ಯವಾಗಿದೆ.ನಮ್ಮ ಮಕ್ಕಳು ಶಾಲೆಯಲ್ಲಿ ತುಳು ಕಲಿಯಬೇಕು. ತುಳು ಶೀಘ್ರದಲ್ಲೇ ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಲಿ ಎಂಬುದು ನಮ್ಮ ಆಶಯ” ಎಂದು ಅವರು ಹೇಳಿದರು.ತುಳು ನಮ್ಮ ಉಸಿರು, ತುಳು ನಮ್ಮ ಹೆಮ್ಮೆ.

ಪ್ರಾದೇಶಿಕ ವಾರ್ತೆಗಳು

ಸಂಭ್ರಮದ ಹಿಂದು ಮಹಾ ಶಕ್ತಿ ಗಣಪತಿ ಉತ್ಸವ. ಶಕ್ತಿನಗರ ಗಣೇಶೋತ್ಸವ–2026 ಸಂಪನ್ನ

ಮಂಗಳೂರು : ಶ್ರೀ ಗುರು ದತ್ತಾತ್ರೇಯ ಸೇವಾ ಟ್ರಸ್ಟ್ ವತಿಯಿಂದ ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ–ದುರ್ಗಾವಾಹಿನಿ ಶ್ರೀ ವೈದ್ಯನಾಥ ಶಾಖೆ ಶಕ್ತಿನಗರ ಸಹಕಾರದೊಂದಿಗೆ ಪ್ರಥಮ ವರ್ಷದ ‘ಹಿಂದು ಮಹಾ ಶಕ್ತಿ ಗಣಪತಿ’ ಉತ್ಸವವು ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದ ಬಳಿಯಿರುವ ಛತ್ರಪತಿ ಶಿವಾಜಿ ವೃತ್ತದ ಬಳಿ ನಡೆಯಿತು.ಸೋಮವಾರ ಬೆಳಗ್ಗೆ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಪೌರೋಹಿತ್ಯದಲ್ಲಿ ಗಣಪತಿ ಬಿಂಬ ಪ್ರತಿಷ್ಠೆ ಹಾಗೂ ಗಣಹೋಮ ನೆರವೇರಿತು. ನಂತರ ಅತಿಥಿಗಳು ಗಾಗೂ ಸಮಿತಿ ಪಧಾದಿಕಾರಿಗಳು ಗಣೇಶೊತ್ಸವಕ್ಕೆ ಚಾಲನೆ ನೀಡಿದರು. ಬಳಿಕ ವಿಶ್ವ ಹಿಂದೂ ಪರಿಷತ್ ಶ್ರೀಕೃಷ್ಣ ಬಾಲ ಸಂಸ್ಕಾರ ಕೇಂದ್ರದ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ಹಾಗೂ ಮೂರು ಸ್ಥಳೀಯ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರುಗಿತು. ಸಂಜೆ ಬಾಲ ಸಂಸ್ಕಾರ ಕೇಂದ್ರದ ಮಕ್ಕಳು ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಉದ್ಯಮಿ ಸೀತಾರಾಮ ಶೆಟ್ಟಿ ವಹಿಸಿದ್ದರು. ಉದ್ಯಮಿ ಅವಿನಾಶ್ ಅಂಚನ್ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವ ಹಿಂದೂ ಪರಿಷತ್ ನಾಗುರಿ ಪ್ರಖಂಡ ಕಾರ್ಯದರ್ಶಿ ಶರತ್ ಕೆಂಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಪುನೀತ್ ಅತ್ತಾವರ ದಿಕ್ಸೂಚಿ ಭಾಷಣ ಮಾಡಿದರು. ಗಣೇಶ ಚತುರ್ಥಿ ಪ್ರಯುಕ್ತ ಪ್ರತಿವರ್ಷ ಆಯೋಜಿಸಲಾಗುವ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವಿಶ್ವ ಹಿಂದೂ ಪರಿಷತ್ ಶ್ರೀಕೃಷ್ಣ ಬಾಲ ಸಂಸ್ಕಾರ ಕೇಂದ್ರ ಶಕ್ತಿನಗರದ ಮಾತಾಜಿ ರಮಾದೇವಿ, ವಿಶ್ವ ಹಿಂದೂ ಪರಿಷತ್ ಶ್ರೀ ವೈದ್ಯನಾಥ ಶಾಖೆ ಶಕ್ತಿನಗರದ ಅಧ್ಯಕ್ಷ ಪ್ರಸಾದ್ ಕುಂಟಲ್ಪಾಡಿ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಮಾತೃಶಕ್ತಿ–ದುರ್ಗಾವಾಹಿನಿ ಶ್ರೀ ವೈದ್ಯನಾಥ ಶಾಖೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ ನಾಗುರಿ ಪ್ರಖಂಡ ಸಹ ಕಾರ್ಯದರ್ಶಿ ಮಾಲತಿ ಸ್ವಾಗತಿಸಿದರು. ಮಾತೃಶಕ್ತಿ–ದುರ್ಗಾವಾಹಿನಿ ಕಾರ್ಯಕರ್ತೆ ಸುಮಲತಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸನ್ನಿಧಿ ಅಮೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಧನುಷ್ ಕುಲಾಲ್ ಹಾಗೂ ಶಕೀಲಾ ಕಾವ ಕಾರ್ಯಕ್ರಮ ಸಂಯೋಜಿಸಿದರು.ಉತ್ಸವದ ಅಂಗವಾಗಿ ನಡೆದ ಭವ್ಯ ಶೋಭಾಯಾತ್ರೆಯಲ್ಲಿ ಬಾಲ ಸಂಸ್ಕಾರ ಕೇಂದ್ರದ ಮಕ್ಕಳ ಕುಣಿತ ಭಜನೆ, ಚೆಂಡೆ–ಸಿಂಗಾರಿ ಮೇಳ ತಂಡದೊಂದಿಗೆ ಗಣಪತಿ ಮೂರ್ತಿಯನ್ನು ಇರಿಸಲಾಗಿದ್ದ ಟ್ಯಾಬ್ಲೋ ಸಾಗಿತು. ಶಕ್ತಿನಗರದ ಛತ್ರಪತಿ ಶಿವಾಜಿ ವೃತ್ತದಿಂದ ಆರಂಭಗೊಂಡ ಶೋಭಾಯಾತ್ರೆಯು ಮುತ್ತಪ್ಪ ಗುಡಿ ದೇವಸ್ಥಾನದವರೆಗೆ ಸಾಗಿ, ಅಲ್ಲಿಂದ ಹಿಂತಿರುಗಿ ಬಿಕರ್ನಕಟ್ಟೆ, ಕೈಕಂಬ, ಮರೋಳಿ ಮಾರ್ಗವಾಗಿ ಪಡೀಲ್ ಬೈರಾಡಿ ಕೆರೆಗೆ ತಲುಪಿ, ಶ್ರೀ ಮಹಾಗಣಪತಿ ದೇವರ ವಿಗ್ರಹಕ್ಕೆ ವಿಸರ್ಜನಾ ಪೂಜೆ ನೆರವೇರಿಸಿ ಜಲಸ್ತಂಭನಗೊಳಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ರಕ್ತ ಒದಗಿಸುವ ಯೋಜನೆ. ದ.ಕ.ಜಿಲ್ಲಾ ರೆಡ್‌ಕ್ರಾಸ್ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾಹಿತಿ

ಮಂಗಳೂರು: ಲೇಡಿಗೋಶನ್ ಆಸ್ಪತ್ರೆಯಲ್ಲಿ ದಾಖಲಾಗುವ ಗರ್ಭಿಣಿಯರು ಸಹಿತ ಅವಶ್ಯ ಇರುವ ರೋಗಿಗಳಿಗೆ ರೆಡ್‌ಕ್ರಾಸ್ ಬ್ಲಡ್‌ಬ್ಯಾಂಕ್‌ನಿಂದ ಉಚಿತವಾಗಿ ರಕ್ತ ಪೂರೈಸಲಾಗುತ್ತಿದೆ. ಜಿಲ್ಲೆಯ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಿಪಿಎಲ್ ಕಾರ್ಡ್ ದಾರರಿಗೆ ರೆಡ್‌ಕ್ರಾಸ್ ನಿಂದ ಉಚಿತವಾಗಿ ರಕ್ತ ಒದಗಿಸುವ ಯೋಜನೆ ರೂಪಿಸಲಾಗಿದ್ದು, ಮುಂದಿನ ವರ್ಷ ಕಾರ್ಯಗತವಾಗಲಿದೆ ಎಂದು ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ವತಿಯಿಂದ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಮಣ್ಣಗುಡ್ಡೆ ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಉಚಿತ ವೈದ್ಯಕೀಯ ಶಿಬಿರ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ವಕೀಲ ರಾಮ್‌ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ರೆಡ್‌ಕ್ರಾಸ್ ಸೊಸೈಟಿಯ ನಿರ್ದೇಶಕ ರಾಘವೇಂದ್ರ ರಾವ್ ಸ್ವತಃ ರಕ್ತ ನೀಡುವ ಮೂಲಕ ರಕ್ತದಾನಕ್ಕೆ ಚಾಲನೆ ನೀಡಿದರು. ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಣ್ಣಗುಡ್ಡೆ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ , ಕೆಎಂಸಿ ಆಸ್ಪತ್ರೆಯ ಡಾ. ಕಿಶನ್ ಪ್ರೇಮ್, ಡಾ.ಸಾಹಿಸ್ತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಯೆಯ್ಯಾಡಿ, ಕೋಶಾಧಿಕಾರಿ ಸತೀಶ್ ಪೂಜಾರಿ ಉರ್ವ, ಸ್ಥಾಪಕ ಅಧ್ಯಕ್ಷ ಮೋಹನ್ ಅತ್ತಾವರ, ಲೋಕೇಶ್ ಸುರತ್ಕಲ್, ದಿನೇಶ್ ಕುಂಜತ್ತಬೈಲ್, ಕಿರಣ್ ಲೇಡಿಹಿಲ್, ರಾಜೇಶ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಅಶೋಕನಗರ ಸ್ವಾಗತಿಸಿದರು. ಆಂತರಿಕ ಲೆಕ್ಕಪರಿಶೋಧಕ ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು. ಕೆಎಂಸಿ ಆಸ್ಪತ್ರೆ, ಪ್ರಸಾದ್ ನೇತ್ರಾಲಯ,ಶ್ರೀನಿವಾಸ್ ಹಾಸ್ಪಿಟಲ್ ಮುಕ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಮತ್ತು ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಸಹಭಾಗಿತ್ವದಲ್ಲಿ ಶಿಬಿರ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಇಂದು ಡಾ. ಎ.ಸದಾನಂದ ಶೆಟ್ಟಿಯವರ ಹುಟ್ಟುಹಬ್ಬ

ಮಂಗಳೂರು – ಇಂದು (ಸೆ.20) ಶ್ರೀದೇವಿ ಏಜುಕೇಶನ್ ಟ್ರಸ್ಟ್ ನ ಅಧ್ಯಕ್ಷ,ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ )ನ ಸ್ಥಾಪಕ ಅಧ್ಯಕ್ಷರಾದ ಡಾ. ಎ. ಸದಾನಂದ ಶೆಟ್ಟಿಯವರ ಹುಟ್ಟುಹಬ್ಬ. ನೇರ ನಡೆ ನುಡಿಯ ಕೊಡುಗೈ ದಾನಿ,ವಿಶ್ವ ಬಂಟರ ಸಮ್ಮೇಳನದ ಯಶಸ್ವಿ ಸಂಘಟಕ, ಕ್ರೀಡಾ ಕ್ಷೇತ್ರದ ಜನಪ್ರಿಯ ನಾಯಕರು,ಸಂಘಟಕರು, ಪೋಷಕರು, ಸೌಹಾರ್ದ ವ್ಯಕ್ತಿತ್ವದ ನಿಸ್ವಾರ್ಥ ನೇತಾರ, ಟಾಕ್ ಆಪ್ ದಿ ಟೌನ್,ಬಡವರ ಬಂಧು,ಬಂಟರ ಯಾನೆ ಮಾತೃ ಸಂಘದ ಮಾಜಿ ಅಧ್ಯಕ್ಷರು, ವರ್ಲ್ಡ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷರು ,ಬಂಟ ಸಮಾಜದ ರಾಜಾ ಹುಲಿ ಡಾ. ಎ.ಸದಾನಂದ ಶೆಟ್ಟಿಯವರ ಹುಟ್ಟು ಹಬ್ಬಕ್ಕೆ Mp mla*s ನ್ಯೂಸ್ ಶುಭ ಹಾರೈಸುತ್ತದೆ.

Scroll to Top