ಬಂಧುಗಳೇ ನಿಮ್ಮ ಒಂದು ರೂಪಾಯಿ ಒಬ್ಬ ರಂಗ ಜೀವಿಯ ಬದುಕಿಗೆ ಬೆಳಕಾಗಬಹುದು. ನೂರು ರೂಪಾಯಿ ಹೊಸ ಬದುಕು ಕಟ್ಟಿಕೊಡಬಹುದು

105.5K Views 3d ago

ಪರಮಾನಂದ ವಿ. ಸಾಲ್ಯಾನ್ ಶಿಷ್ಯ ವೃಂದ
ಫೇಸ್ ಟ್ರಸ್ಟ್ (ರಿ.) ಮಂಗಳೂರು
ಜಂಟಿಯಾಗಿ ಆಯೋಜಿಸಿದೆ
ಕರುಣಾಳು ಬಾ ಬೆಳಕೇ
ನಿಮ್ಮ ಮುಂದೆ ಅಂಗೈ ಹಿಡಿದಿದ್ದೇವೆ ನೆರವಿನ ಹಸ್ತ ಚಾಚಿ
ಸಹೃದಯಿ ಬಾಂಧವರೇ,
ಸಾಹಿತ್ಯ ಲೋಕದ ಅರ್ನಘ್ಯ ರತ್ನವಾಗಿ, ಪತ್ರಿಕೋದ್ಯಮದ ಭೀಷ್ಮನಾಗಿ, ರಂಗಭೂಮಿಯ ಅದ್ಭುತ ನಿರ್ದೇಶಕನಾಗಿ, ಸಂಗೀತ ಮಾಂತ್ರಿಕನಾಗಿ, ಅಪೂರ್ವ ಸಂಘಟಕನಾಗಿ, ವಾಗ್ಮಿಯಾಗಿ, ನಿರೂಪಕನಾಗಿ ನಾಲ್ಕು ದಶಕಗಳ ಕಾಲ ಕ್ರಿಯಾಶೀಲ ಚಿಂತನೆ ಪಾದರಸದಂತಹ ಓಡಾಟದಿಂದ ತುಳುನಾಡ ಮೇರು ಪ್ರತಿಭೆಯಾಗಿ ಮೆರೆದವರು ಸಸಿಹಿತ್ಲು ಪರಮಾನಂದ ವಿ ಸಾಲ್ಯಾನ್. ತನ್ನ ಬಹುಮುಖ ಪ್ರತಿಭಾ ಲೋಕದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಸಾವಿರ ಸಾವಿರ ಪ್ರತಿಭೆಗಳನ್ನು ಬೆಳೆಸಿದವರು. ರಂಗಭೂಮಿಯಿAದ ಸಂಪಾದನೆ ಸಾಧ್ಯ ಇಲ್ಲ ಎನ್ನುವುದರ ಅರಿವಿದ್ದರೂ, ತನ್ನ ಬದುಕನ್ನು ಪ್ರಾಮಾಣಿಕವಾಗಿ ಕಲಾಮಾತೆ ಶಾರದೆಗೆ ಅರ್ಪಿಸಿ, ರಂಗಭೂಮಿಯಲ್ಲೇ ಜೀವನ ಕಳೆದವರು. ತನ್ನ ಅಲ್ಪ ಸ್ವಲ್ಪ ದುಡಿಮೆಯನ್ನೂ ರಂಗಭೂಮಿಗೆ ಸಮರ್ಪಿಸಿ ರಂಗಚೇತನವಾಗಿ ಬದುಕುತ್ತಿರುವವರು.


ರಂಗಭೂಮಿ, ಸಾಹಿತ್ಯ, ಸಂಘಟನೆ ಎಂದು ತನ್ನ ಆರೋಗ್ಯವನ್ನೇ ಮರೆತು, ರಾತ್ರಿ ಹಗಲಿನ ಪರಿವೇ ಇಲ್ಲದಂತೆ ಓಡಾಟ ಮಾಡಿದ ಪರಮಾನಂದ ವಿ. ಸಾಲ್ಯಾನ್, ಇಂದು ಅನಾರೋಗ್ಯದ ಜೊತೆ ಹೋರಾಡುವ ಅನಿವಾರ್ಯತೆಯಲ್ಲಿದ್ದಾರೆ. ಸಾವಿರ ಸಾವಿರ ಅಭಿಮಾನಿ, ಶಿಷ್ಯವೃಂದ ಸಂಪಾದಿಸಿದ್ದ ಸಾಲ್ಯಾನ್ ಅವರು ಇದಕ್ಕಿಂತ ಹೊರತಾಗಿ ಗಳಿಸಿದ್ದು ಕೂಡಿಟ್ಟಿದ್ದು ಏನೂ ಇಲ್ಲ. ಹಾಗಾಗಿ ಇಂದು ತೀರಾ ತೀರಾ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಒಂದೊಮ್ಮೆ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡು ಆರು ತಿಂಗಳು, ಕತ್ತಲಬದುಕು ಕಳೆದ ಸಾಲ್ಯಾನ್ ಇಂದಿಗೂ ಪರಿಪೂರ್ಣ ದೃಷ್ಟಿ ಇಲ್ಲದೆ ಜೀವನ ಕಳೆಯುತ್ತಿದ್ದಾರೆ. ಬೆಂಬಿಡದ ಮಧುಮೇಹದಿಂದಾಗಿ ಕಿಡ್ನಿ ವೈಫಲ್ಯಕ್ಕೆ ಒಳಗಾಗಿ ಒಂದಷ್ಟು ರೋಗಸಮೂಹ ಆವರಿಸಿಕೊಂಡ ಪರಿಣಾಮ ವಾರದ ಮೂರು ದಿನ ಡಯಾಲಿಸಿಸ್ ಮಾಡಲೇಬೇಕಾದ ಅನಿವಾರ್ಯತೆ. ಡಯಾಲಿಸಿಸ್, ವೈದ್ಯರ ವೆಚ್ಚ, ಔಷಧಿ ವೆಚ್ಚ, ಸ್ಕಾö್ಯನಿಂಗ್, ಓಡಾಟದ ವೆಚ್ಚ, ದಿನನಿತ್ಯದ ಖರ್ಚು ಎಂದು ತಿಂಗಳಿಗೆ ಲಕ್ಷದ ಮೇಲಿನ ವೆಚ್ಚ. ಒಂದಷ್ಟು ದಿನ ಹಿತೈಷಿಗಳು, ಬಂಧುಗಳು, ಸ್ನೇಹಿತರು ನೆರವಾದರು. ಆದರೆ ಜೀವನ ಭದ್ರತೆಗೆ ಕಷ್ಟವಾಗಿದೆ. ಪ್ರತಿದಿನದ ನಿರಂತರ ಚಿಕಿತ್ಸೆಯಿಂದ ಸಾಲ್ಯಾನ್ ಮತ್ತೆ ಮೊದಲಿನಂತ್ತಾಗುತ್ತಾರೆ ಎನ್ನುವುದು ವೈದ್ಯರ ಭರವಸೆ. ಸಾಲ್ಯಾನ್ ಅವರ ಆತ್ಮಸ್ಥೆöÊರ್ಯ, ಆದರೆ ಅದಕ್ಕೆ ಬೇಕಾಗಿರುವುದು ಈಗ ನಮ್ಮ ನಿಮ್ಮ ಆರ್ಥಿಕ ನೆರವು.
ಅದಕ್ಕೆ ಅವರ ಶಿಷ್ಯ ವೃಂದ ಮತ್ತು ಫೇಸ್ ಟ್ರಸ್ಟ್ ಮಂಗಳೂರು ಒಂದಾಗಿ, ‘ಕರುಣಾಳು ಬಾ ಬೆಳಕೆ’ ಎನ್ನುವ ಪರಿಕಲ್ಪನೆಯಡಿ ಸಾಲ್ಯಾನ್ ಅವರ ಚಿಕಿತ್ಸೆಗಾಗಿ ಒಂದು ದೊಡ್ಡ ಮೊತ್ತದ ಆರ್ಥಿಕ ನೆರವನ್ನು ನೀಡುವ ಕಾರ್ಯಕ್ಕೆ ಮುಂದಾಗಿದೆ. ಇದು ಸಾದ್ಯವಾಗುವುದು ಎಲ್ಲರೂ ಕೈ ಜೋಡಿಸಿದಾಗ ಮಾತ್ರ. ನಾವು ನೀವು ನೀಡುವ ಒಂದು ಪುಟ್ಟ ದೇಣಿಗೆ, ಪರಮಾನಂದ ಸಾಲ್ಯಾನ್ ಅವರಿಗೆ ಹೊಸ ಬದುಕು ನೀಡಬಲ್ಲುದು ಎನ್ನುವುದು ಸತ್ಯ.
ಹಾಗಾಗಿ ನಾವು ಜೋಳಿಗೆ ಹಿಡಿದು ಸಾಗಿದ್ದೇವೆ, ಪರಮಾನಂದ ಸಾಲ್ಯಾನ್ ಅವರಿಗೆ ಆರ್ಥಿಕ ನೆರವಿನ ಕ್ರೂಡೀಕರಣಕ್ಕೆ. ಅದಕ್ಕಾಗಿ ಇದೇ ಮೇ 27 ರಂದು ಸಂಜೆ 6.00 ಗಂಟೆಗೆ ಮಂಗಳೂರು ಪುರಭವನದಲ್ಲಿ ‘ತ್ರಿನೇತ್ರ’ ಕಲಾವಿದರ ‘ಬ್ರಹ್ಮ ರಕ್ಕಸ’ ಎನ್ನುವ ನಾಟಕವನ್ನು ಆಯೋಜಿಸಿದ್ದೇವೆ. ಈ ನಾಟಕದಿಂದ ಸಂಗ್ರಹವಾಗುವ ಮೊತ್ತವನ್ನು ಸಾಲ್ಯಾನ್ ಅವರಿಗೆ ನೀಡಿ ಅವರ ಬದುಕಿಗೆ ಬೆಳಕಾಗುವ ಯೋಚನೆ ನಮ್ಮದು. ಅದಕ್ಕಾಗಿ ಒಂದು ಟಿಕೆಟ್ ಖರೀದಿಸಿ ಸಹಕರಿಸಿ ಎನ್ನುವ ಕೋರಿಕೆ ನಮ್ಮದು.
ನಾವು ದೇವರಾಗಲು ಸಾಧ್ಯವಿಲ್ಲ, ದೇವಸ್ಥಾನ ಕಟ್ಟಲೂ ಸಾಧ್ಯವಿಲ್ಲ. ಆದರೆ ದೇವರ ಅನುಗ್ರಹ ಪಡೆಯಲು ಸಾಧ್ಯವಿದೆ. ನಮ್ಮ ಸಣ್ಣ ಕಾಣಿಕೆ ಒಬ್ಬ ಸಾಹಿತಿಯ ಬಾಳಿಗೆ ಬೆಳಕಾಗಬಹುದು.
ಅದೇ ‘ಕರುಣಾಳು ಬಾ ಬೆಳಕೇ’.

ನಿಮ್ಮ ಸಹಾಯಧನವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ನೀಡಬಹುದು.
FACE MANGALORE
Bank of India
Kulai branch
A/c. No. 844820110000165
IFSC : BKID0008448

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top