ಕಾಳಜಿ ವಿಚಾರ ಬಂದಾಗ ತಾಯಿ ಪ್ರಧಾನ ಪಾತ್ರ ನಿರ್ವಹಿಸುತ್ತಾಳೆ. ಮಹಿಳಾ ಸಂಭ್ರಮ ಉದ್ಘಾಟಿಸಿ DMO – ಡಾ. ಶಿವಪ್ರಕಾಶ್

107.6K Views 3d ago

ಹೆಣ್ಣು ತಾಯಿಯಾಗಿ ತಂಗಿಯಾಗಿ ಗೆಳತಿಯಾಗಿ ಸಹೋದರಿಯಾಗಿ ಪತ್ನಿಯಾಗಿ ಅತ್ತೆಯಾಗಿ ನಾದಿನಿಯಾಗಿ ಅತ್ತಿಗೆಯಾಗಿ ಬದುಕಿನಲ್ಲಿ ವಿವಿಧ ಸಂಬಂಧಗಳನ್ನು ನಿರ್ವಹಿಸುತ್ತಾಳೆ ಆದರೆ ಕಾಳಜಿ ವಿಚಾರ ಬಂದಾಗ ತಾಯಿ ಮಾತ್ರನೇ ಪ್ರಧಾನ ಪಾತ್ರ ವಹಿಸುತ್ತಾಳೆ ಒಂದು ಕೈ ಹೆಚ್ಛೇ ತೋರಿಸುತ್ತಾಳೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಡಾಕ್ಟರ್ ಶಿವಪ್ರಸಾದ್ ಡಿ.ಎಸ್ ಹೇಳಿದರು
ಅವರು ಸೌಮ್ಯ ಶೆಟ್ಟಿ ಸಾರಥ್ಯದ” ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನ. ಬೆಂಗಳೂರು” ಇವರು ಮಂಗಳೂರನಲ್ಲಿ ದಿನಾಂಕ 20.05.2026 ರಂದು ಆಯೋಜಿಸಿದ “ಮಹಿಳಾ ಸಂಭ್ರಮ” ಕವಿಗೋಷ್ಠಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವೆಲ್ಲ ಸಣ್ಣವರಿದ್ದಾಗಿನಿಂದಲೂ ಪುರುಷ ಪ್ರಧಾನ ಸಮಾಜವನ್ನು ನೋಡಿಕೊಂಡು ಬೆಳೆದವರು. ಮನೆ ಯಜಮಾನ ಪತ್ರಿಕೆ ಹಿಡಿದುಕೊಂಡು ಕೂತರೆ ಮನೆ ಕೆಲಸವನ್ನೆಲ್ಲ ಹೆಂಡತಿಯೇ ಮಾಡಬೇಕಾಗಿತ್ತು . ಆದರೆ ಈಗ ಕೊಂಚ ಬದಲಾಗಿದೆ.60:40 ಅನುಪಾತಕ್ಕೆ ಬಂದು ನಿಂತಿದೆ. ಅದು 50: 50 ಅನುಪಾತಕ್ಕೆ ಬರಬೇಕಾದರೆ ಇನ್ನೂ ಸ್ವಲ್ಪ ಸಮಯ ಹಿಡಿಯಬಹುದು ಎಂದು ಎಂದು ಅಭಿಪ್ರಾಯ ಪಟ್ಟರು.


ಅತ್ತೆ ಸೊಸೆ ಶಾಂತಿಯಿಂದ ಇರಬೇಕಾದರೆ ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದಾಗಿ ಮಾಡಿ ಸಂಸಾರವನ್ನು ಹಾಳು ಮಾಡಬಾರದು. ಅತ್ತೆ ಸೊಸೆ ಚೆನ್ನಾಗಿ ಬಾಳಿದರೆ ಪುರುಷರಿಗೆ ಅದೇ ದೊಡ್ಡ ಸಂಭ್ರಮ ಎಂದು ಹೇಳಿದ ಇವರು ತುತ್ತ ಮುತ್ತದಂತಹ ಅನೇಕ ಸಿನಿಮ ಬಂದಿದೆ. ಆದರೆ ಅತ್ತೆ ಮತ್ತು ಸೊಸೆ ಸಂಬಂಧದ ಬಗ್ಗೆ Phd ಬಹುಷ್ಯ ಯಾರು ಮಾಡಿಲ್ಲ ಎಂದ ಡಾ. ಶಿವ ಪ್ರಕಾಶ್ ವೇದಿಕೆಯಲ್ಲಿದ್ದ ಮುಖ್ಯ ಅತಿಥಿ ರಾಮಾಂಜಿ ಅವರನ್ನ ಅತ್ತೆ ಸೊಸೆ ಸಂಬಂಧ ಯಾಕೆ ಹೀಗೆ ಎಂಬುದರ ವಿಚಾರದಲ್ಲಿ PhD ಮಾಡುವಂತೆ ಕೇಳಿಕೊಂಡರು. ಐಶ್ವರ್ಯ ಎಷ್ಟೇ ಇದ್ದರೂ ಸಂಸಾರ ಸರಿ ಇಲ್ಲದಿದ್ದರೆ ಯಾವ ಸಂಭ್ರಮವು ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಇದಕ್ಕೂ ಮುನ್ನ ಅನುರಾಧ ರಾಜೀವ್ ಸುರತ್ಕಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ತಂನ್ಸಿರಾ ಆತುರು, ರೇಖಾ ಸುರೇಶ್ ರಾವ್, ಆಯಿಷಾ ಪೆರ್ನೆ, ರಶ್ಮಿ ಸನಿಲ್,ಸಿಹಾನ ಬಿ.ಎಮ್. ಮತ್ತು ಕಸ್ತೂರಿ ಜಯರಾಮ್ ಮಹಿಳೆ ಮಹಿಳಾ ಸ್ವಾಭಿಮಾನ, ಮಹಿಳಾ ಸ್ವಾಭಿಮಾನ,ಮಹಿಳಾ ಹೋರಾಟದ ಬಗೆಗಿನ ಕವನಗಳನ್ನು ವಾಚಿಸಿದರು.
ಇದಕ್ಕೂ ಮುನ್ನ ಸಂಜೆ ಗಂಟೆ 4:00 ರಿಂದ 5:30 ತನಕ ಕನ್ನಡ ಗೀತಗಾಯನ ನಡೆಯಿತು. ರಾಣಿ ಪುಷ್ಪಲತಾದೇವಿ, ,ಪವಿತ್ರ ಮತ್ತು ಗಂಗಾಧರ್ ಗಾಂಧಿ ಬೆಳ್ಳಿ ತೆರೆಯ ಬಂಗಾರದ ಗೀತೆಗಳಿಗೆ ದ್ವನಿಯಾಗಿದ್ದು ನೆರೆದ ಪ್ರೇಕ್ಷಕರನ್ನು ರಂಜಿಸಿತು.
ಬೆಂಗಳೂರಿನ ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ಸೌಮ್ಯ ಶೆಟ್ಟಿ, ಉಪಾನ್ಯಸಕ ರಾಮಾಂಜಿ ನಮ್ಮ ಭೂಮಿ, ಸಾಮಾಜಿಕ ಕಾರ್ಯಕರ್ತ ರಂಜನ್ ಕುಮಾರ್ ಉಪಸ್ಥಿತರಿದ್ದರು.
ಗಂಗಾಧರ್ ಗಾಂಧೀ ಸ್ವಾಗತಿಸಿ, ರೇಖಾ ಸುದೇಶ ರಾವ್ ವಂದೇ ಮಾತರಂ ಗೀತೆ ಹಾಡುವ ಮೂಲಕ ಪ್ರಾರ್ತಿಸಿದರು.
ಮಹಿಳಾ ಸಂಭ್ರಮ ಕವಿಗೋಷ್ಠಿ ಕಾರ್ಯಕ್ರಮದ ನಿರೂಪಣೆಯನ್ನ ಗಂಗಾಧರ್ ಗಾಂಧೀ ನಿರ್ವಹಿಸಿದರೆ, ಸಭಾ ಕಾರ್ಯಕ್ರಮದ ನಿರೂಪಣೆ ರಶ್ಮಿ ಸನಿಲ್ ನಿರೂಪಿಸಿದರು. ರಾಣಿ ಪುಷ್ಪಲತಾ ದೇವಿ ವಂದಿಸಿದರು.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top