ಪೆರುವಾಯಿ ಚರ್ಚ್ ನಲ್ಲಿ ಫಾತಿಮಾ ಮಾತೆಯ ವಾರ್ಷಿಕ ಹಬ್ಬ ಆಚರಣೆ

111.1K Views 14 May 2026

ಬಂಟ್ವಾಳ: ಫಾತಿಮಾ ಮಾತೆ ಜಗತ್ತಿನಲ್ಲಿ ಕಾಣಿಸಿಕೊಂಡ ದಿನದ ಪ್ರಯುಕ್ತ ವಿಟ್ಲದ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಬುಧವಾರ
ಫಾತಿಮಾ ಮಾತೆಯ ವಾರ್ಷಿಕ ಹಬ್ಬ ಆಚರಿಸಲಾಯಿತು.
ಹಬ್ಬದ ದಿವ್ಯಬಲಿಪೂಜೆಯನ್ನು ಮಂಗಳೂರಿನ ಬಿಜೈ ಚರ್ಚ್‌ನ ಸಹಾಯಕ ಧರ್ಮಗುರುಗಳಾದ  ವಂ. ಜೀವನ್‌ ಡಿಸೋಜಾ ನೆರವೇರಿಸಿದರು. 


ಬಳಿಕ ಪ್ರವಚನದಲ್ಲಿ, ಮೇರಿ ಮಾತೆಯು 1917 ರ ಮೇ 13ರಂದು ಪೋರ್ಚುಗಲ್‌ನ ಫಾತಿಮಾ ಎಂಬಲ್ಲಿ ಲೂಸಿಯಾ, ಫ್ರಾನ್ಸಿಸ್ಕೋ ಮತ್ತು ಜೆಸಿಂತಾ ಎಂಬ ಮೂವರು ಮಕ್ಕಳಿಗೆ ಕುರಿಗಳನ್ನು ಮೇಯಿಸುತ್ತಿದ್ದಾಗ ಕಾಣಿಸಿಕೊಂಡರು. ಆ ವೇಳೆ ಅವರು ಪ್ರಾರ್ಥನೆ, ಜಪಮಾಲೆ ಪಠಣ ಮಾಡುವಂತೆ ಕರೆ ನೀಡಿದರು. ಫಾತಿಮಾ ಮಾತೆಯ ಮೂಲಕ ನಮಗೆ ಅನೇಕ ಒಳಿತುಗಳಾಗುತ್ತಿವೆ. ಹಿಂದಿನ ವರ್ಷ ಅವರ ಮೂಲಕ ದೊರೆತ ಕೃಪಾಶೀರ್ವಾದಗಳಿಗೆ ಕೃತಜ್ಞತೆ ಸಲ್ಲಿಸಲು ಸೂಕ್ತ ಸಮಯವಾಗಿದ್ದು, ನಮ್ಮ ಜೀವನದಲ್ಲಿ ದೊರೆತ ಆಶೀರ್ವಾದಗಳ ಸಿಂಹಾವಲೋಕನಕ್ಕೆ ಸೂಕ್ತ ಅವಕಾಶವೆಂದರು.

ಬಲಿಪೂಜೆಯ ನಂತರ ಚರ್ಚ್‌ ಆವರಣದಲ್ಲಿರುವ ಫಾತಿಮಾ ಮಾತೆಯ ಪ್ರತಿಮೆಯ ಮುಂದೆ ಪ್ರಾರ್ಥನೆ ನಡೆಯಿತು.
ಬಲಿಪೂಜೆಯಲ್ಲಿ ಶಿವಮೊಗ್ಗ ಧರ್ಮಪ್ರಾಂತ್ಯದ ವಂ. ಲಾರೆನ್ಸ್‌ ಡಿಸೋಜ, ಗೋವಾದ ಧರ್ಮಗುರು ವಂ. ಜೊಸ್ಸಿ ಮಸ್ಕರೇನಸ್‌ ಹಾಗೂ ಪೆರುವಾಯಿ ಚರ್ಚ್‌ನ ಧರ್ಮಗುರು ವಂ. ಸೈಮನ್‌ ಡಿಸೋಜಾ ಅವರು ಭಾಗವಹಿಸಿದ್ದರು.

Read More News

Scroll to Top