ರಾಶಿ ಆರ್ ಹೆಗ್ಡೆ ಮೇ 17 ರಂದು ಭರತನಾಟ್ಯ ರಂಗ ಪ್ರವೇಶ

111K Views 3w ago

ಮೊಗರು ಗುತ್ತು ರಾಜೇಶ್ ಕುಮಾರ್ ಹೆಗ್ಡೆ ಮತ್ತು ಮೂಡಂಬೈಲು ಶುಭಾ ರಾಜೇಶ್ ಹೆಗ್ಡೆ ದಂಪತಿಗಳ ಸುಪುತ್ರಿ ರಾಶಿ ಹೆಗ್ಡೆ ಭರತನಾಟ್ಯ ಕಲೆಯನ್ನು ಕದ್ರಿಯ ನಾಟ್ಯಾಲಯದಲ್ಲಿ ಗುರು ಮುಖೇನ ಅಭ್ಯಸಿಸಿ ಈಗ ರಂಗ ಪ್ರವೇಶಕ್ಕೆ ಅಣಿಯಾಗುತ್ತಿದ್ದಾಳೆ. ಮೇ 17 ರಂದು ಪುರಭವನದಲ್ಲಿ ಸಂಜೆ 4.30 ಕ್ಕೆ ಕಾರ್ಯಕ್ರಮವನ್ನು ಶರವು ಶ್ರೀ ಮಹಾಗಣಪತಿ ದೇವಾಲಯದ ಧರ್ಮದರ್ಶಿ ರಾಘವೇಂದ್ರ ಶಾಸ್ತ್ರಿಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಲಿರುವರು. ಆಳ್ವಾಸ್ ಎಜುಕೇಶನ್ ಟ್ರಸ್ಟ್ ನ ಛೇರ್ಮನ್ ಡಾ. ಮೋಹನ್ ಆಳ್ವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರೆ, ಅತಿಥಿಗಳಾಗಿ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಡಾ. ಮಿತ್ರಾ ಎನ್ ಹೆಗ್ಡೆ, ಜೀವವಿಮಾ ವಿಭಾಗ ಉಡುಪಿ ವಲಯದ ಡಿವಿಜನಲ್ ಮ್ಯಾನೇಜರ್ ಗಣಪತಿ ಎನ್ ಭಟ್ ಮೊದಲಾದವರು ಭಾಗವಹಿಸಲಿದ್ದಾರೆ.


ವಿದ್ವಾನ್ ಯು.ಕೆ ಪ್ರವೀಣ್ ಅವರು ಕದ್ರಿ ನೃತ್ಯ ವಿದ್ಯಾಲಯ ಚಾರಿಟೇಬಲ್ ಟ್ರಸ್ಟ್ ಇದರ ನಿರ್ದೇಶಕರಾಗಿದ್ದು, ನೃತ್ಯ ಕಲಾತಿಲಕ ಬಿರುದಾಂಕಿತ ಯು.ಕೆ ಕೃಷ್ಣ ಮತ್ತು ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಜಯಲಕ್ಷ್ಮಿಯವರ ಸುಪುತ್ರರಾಗಿದ್ದು, ದೇಶ ವಿದೇಶಗಳಲ್ಲಿ ತನ್ನ ಅಸಂಖ್ಯ ಶಿಷ್ಯ ಸಂಪತ್ತನ್ನು ಹೊಂದಿದ್ದು ಖ್ಯಾತರಾಗಿದ್ದಾರೆ. ಇಂಥಹ ಗುರು ಪರಂಪರೆಯ ಶಿಷ್ಯೆಯಾಗಿ ಭಾರತದ ಅತೀ ಜನಪ್ರಿಯ ಕಲೆ ಎನಿಸಿದ ಭರತನಾಟ್ಯವನ್ನು ಅಭ್ಯಸಿಸಿ ರಾಶಿ ಹೆಗ್ಡೆಯವರು ರಂಗ ಪ್ರವೇಶ ಮಾಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹ.

Read More News

Scroll to Top