ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಬ್ಯಾಂಕ್ ಉದ್ಯೋಗಿಯಿಂದ ಬಿಲ್ಡರ್ ಆಗಿ, ಕನಸುಗಾರನಿಂದ ಮಂಗಳೂರಿನ ಆಕಾಶದೆತ್ತರಕ್ಕೆ ಕಟ್ಟಡ ಕಟ್ಟಿಸಿದ ರಿಯಲ್ ಎಸ್ಟೇಟ್ ಜಗತ್ತಿನ ದಿಗ್ಗಜದೊರೆಯಾಗಿ, ಸರ್ವಧರ್ಮಗಳನ್ನು ಗೌರವಿಸುವ ಸೌಹಾರ್ದನಾಯಕನಾಗಿ, ರಾಷ್ಟ್ರ,ಅಂತಾರಾಷ್ಟ್ರೀಯ ಜಗತ್ತಿನಲ್ಲಿ ಮಿಂಚುತ್ತಿರುವ ಮಂಗಳೂರಿನ ರಿಯಲ್ ಸ್ಟಾರ್, ಇನ್ ಲ್ಯಾಂಡ್ ಬಿಲ್ಡರ್ ನ ಸ್ಥಾಪಕ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸಿರಾಜ್ ಅಹಮದ್ ಮತ್ತು ಅವರ ಇನ್-ಲ್ಯಾಂಡ್ ಸಂಸ್ಥೆಯ 40 ವರ್ಷದ ಯಶೋಗಾಥೆ. ಇದು ಕರಾವಳಿಯ ಅಪಾರ್ಟ್‌ಮೆಂಟ್ ಕ್ರಾಂತಿಯ ಹರಿಕಾರ ಇನ್ ಲ್ಯಾಂಡ್ ಬಿಲ್ಡರ್ ಸಿರಾಜ್ ಅಹ್ಮದ್ ಅವರ ಸಾಹಸಗಾಥೆ..  Mpmlasnewstv Special Report by DR ASHOK SHETTY BN

ಮಂಗಳೂರು- ನಗರ ಇಂದು ಎತ್ತರದ ಕಟ್ಟಡಗಳು, ಐಷಾರಾಮಿ ಅಪಾರ್ಟ್‌ಮೆಂಟ್‌ಗಳಿಂದ ಕಂಗೊಳಿಸುತ್ತಿದೆ ಎಂದರೆ ಅದರ ಹಿಂದೆ ಒಬ್ಬ ವ್ಯಕ್ತಿಯ ದೂರದೃಷ್ಟಿ ಇದೆ – ಅವರೇ *ಇನ್-ಲ್ಯಾಂಡ್ ಬಿಲ್ಡರ್ಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹಮದ್.*ಒಂದು ಕಾಲದಲ್ಲಿ ಗ್ರಿಂಡ್ಲೇಸ್ ಬ್ಯಾಂಕ್‌ನ ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಇಂದು ಕರಾವಳಿ ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರದ ದೊರೆ ಎಂದೇ ಖ್ಯಾತಿ ಪಡೆದಿದ್ದಾರೆ.1986ರಲ್ಲಿ ಸಣ್ಣ ಕನಸು, ಇಂದು ದೊಡ್ಡ ಸಾಮ್ರಾಜ್ಯ*1986ರಲ್ಲಿ ಒಂದು ಸಣ್ಣ ಕಚೇರಿಯಲ್ಲಿ, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಮನೆ ನೀಡಬೇಕೆಂಬ ಉದಾತ್ತ ಉದ್ದೇಶದಿಂದ ಇನ್-ಲ್ಯಾಂಡ್ ಸಂಸ್ಥೆ ಹುಟ್ಟಿಕೊಂಡಿತು. ಇಂದು ಮಂಗಳೂರು, ಬೆಂಗಳೂರು, ಪುತ್ತೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತನ್ನ ಛಾಪು ಮೂಡಿಸಿರುವ ಅತ್ಯಂತ ವಿಶ್ವಾಸಾರ್ಹ ಬಿಲ್ಡರ್ಸ್ ಸಂಸ್ಥೆಯಾಗಿ ಬೆಳೆದು ನಿಂತಿದೆ.ಗುಣಮಟ್ಟ, ನಂಬಿಕೆ, ಪಾರದರ್ಶಕತೆ* – ಇವುಗಳೇ ಇನ್-ಲ್ಯಾಂಡ್ ಸಂಸ್ಥೆಯ ಯಶಸ್ಸಿನ ಮೂಲಮಂತ್ರ.ದೂರದೃಷ್ಟಿಯ ನಾಯಕ*ಸಿರಾಜ್ ಅಹಮದ್ ಅವರು ಕೇವಲ ಬಿಲ್ಡರ್ ಅಲ್ಲ, ಒಂದು ಸಂಸ್ಥೆ. ಗ್ರಾಹಕರೊಂದಿಗೆ ಪ್ರಾಮಾಣಿಕತೆ, ಎಂದಿಗೂ ಬತ್ತದ ಛಲ, ಮತ್ತು ಸಮಯಕ್ಕೆ ಸರಿಯಾಗಿ ಮನೆ ಹಸ್ತಾಂತರ ಮಾಡುವ ಬದ್ಧತೆ ಅವರನ್ನು ಇತರರಿಂದ ಭಿನ್ನವಾಗಿಸುತ್ತದೆ. ಈ ಕಾರಣಕ್ಕಾಗಿಯೇ ಅವರು *ಕ್ರೆಡೈ ಕರ್ನಾಟಕದ ಜಂಟಿ ಕಾರ್ಯದರ್ಶಿ (ದಕ್ಷಿಣ ವಲಯ)* ಆಗಿ ಆಯ್ಕೆಯಾಗಿದ್ದಾರೆ.40 ವರ್ಷಗಳ ಸಂಭ್ರಮಾಚರಣೆ*ಇತ್ತೀಚೆಗೆ ಜುಲೈ 11 ರಂದು ಮಂಗಳೂರಿನ ಗ್ರ್ಯಾಂಡ್ ಬೇ ಹೋಟೆಲ್‌ನಲ್ಲಿ ಇನ್-ಲ್ಯಾಂಡ್ ಸಂಸ್ಥೆಯ 40ನೇ ವರ್ಷದ ಸಂಭ್ರಮಾಚರಣೆ ಅದ್ಧೂರಿಯಾಗಿ ನಡೆಯಿತು. ಐಜಿಪಿ ಅಮಿತ್ ಸಿಂಗ್, ದಾಯ್ಜಿವರ್ಲ್ಡ್ ಅಧ್ಯಕ್ಷ ವಾಲ್ಟರ್ ನಂದಳಿಕೆ, ಸುಪ್ರೀಂ ಕೋರ್ಟ್ ಹಿರಿಯ ವಕೀಲ ಸಂತೋಷ್ ಪೌಲ್ ಸೇರಿದಂತೆ ನೂರಾರು ಗಣ್ಯರು ಭಾಗವಹಿಸಿದ್ದರು. ಹೊಸ ಅಧ್ಯಾಯ: ಇನ್‌ಲ್ಯಾಂಡ್ ಯುಫೋರಿಯಾ*40 ವರ್ಷಗಳ ಪರಂಪರೆಯನ್ನು ಮುಂದುವರಿಸುತ್ತಾ, ಇನ್-ಲ್ಯಾಂಡ್ ಸಂಸ್ಥೆ ತನ್ನ ನೂತನ ಐಷಾರಾಮಿ ಪ್ರಾಜೆಕ್ಟ್ *“ಇನ್‌ಲ್ಯಾಂಡ್ ಯುಫೋರಿಯಾ”* ವನ್ನು ಕದ್ರಿಯ ಪ್ರತಿಷ್ಠಿತ ಆರ್ಯ ಸಮಾಜ ರಸ್ತೆಯಲ್ಲಿ ಆರಂಭಿಸಿದೆ. 12 ಮಹಡಿಯ ಈ ಟವರ್‌ನಲ್ಲಿ 2475 ಮತ್ತು 2740 ಚದರ ಅಡಿಯ ವಿಶಾಲವಾದ 3BHK ಮನೆಗಳು, ರೂಫ್‌ಟಾಪ್ ಇನ್ಫಿನಿಟಿ ಈಜುಕೊಳ, ಜಿಮ್ ಸೇರಿದಂತೆ ವಿಶ್ವದರ್ಜೆಯ ಸೌಲಭ್ಯಗಳಿವೆ. ಪ್ರತಿ ಮಹಡಿಗೆ ಕೇವಲ 2 ಫ್ಲ್ಯಾಟ್‌ಗಳು – ಸಂಪೂರ್ಣ ಪ್ರೈವೆಸಿಗೆ ಆದ್ಯತೆ.ಈ ನೂತನ ಯೋಜನೆಗೆ ಸಿರಾಜ್ ಅಹಮದ್ ಅವರೊಂದಿಗೆ ಅವರ ಪುತ್ರರಾದ ನಿರ್ದೇಶಕರಾದ *ಮೇರಾಜ್ ಯೂಸುಫ್ ಮತ್ತು ವಹಾಜ್ ಯೂಸುಫ್* ಅವರ ನೇತೃತ್ವವಿದೆ.ಸರ್ವಧರ್ಮ ಸಮನ್ವಯದ ನಾಯಕ*ಸಿರಾಜ್ ಅಹಮದ್ ಅವರ ಮತ್ತೊಂದು ವಿಶೇಷತೆ ಎಂದರೆ ಅವರ ಜಾತ್ಯತೀತ ಮನೋಭಾವ. ಯುಫೋರಿಯಾ ಭೂಮಿ ಪೂಜೆಗೆ ಅವರು ಮೌಲಾನಾ, ಫಾದರ್ ವಾಲ್ಟರ್ ಡಿಸೋಜಾ ಮತ್ತು ಅರ್ಚಕ ಗಿರಿಧರ ಭಟ್ ಅವರನ್ನು ಒಟ್ಟಿಗೆ ಆಹ್ವಾನಿಸಿ, ಮಂಗಳೂರಿನ ಸೌಹಾರ್ದತೆಯನ್ನು ಎತ್ತಿ ಹಿಡಿದಿದ್ದಾರೆ. ಬ್ಯಾಂಕ್ ಉದ್ಯೋಗಿಯಿಂದ ಬಿಲ್ಡರ್ ಆಗಿ, ಕನಸುಗಾರನಿಂದ ದಿಗ್ಗಜನಾಗಿ ಬೆಳೆದ ಸಿರಾಜ್ ಅಹಮದ್ ಅವರು ಕೇವಲ ಕಟ್ಟಡಗಳನ್ನು ಕಟ್ಟುತ್ತಿಲ್ಲ, *ಮಂಗಳೂರಿನ ಭವಿಷ್ಯವನ್ನೇ ಕಟ್ಟುತ್ತಿದ್ದಾರೆ.*

ಪ್ರಾದೇಶಿಕ ವಾರ್ತೆಗಳು

ಸಾರ್ವಜನಿಕ ವಾಮಂಜೂರು ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ವಾಮಂಜೂರು ಶ್ರೀರಾಮನಗರ ಶ್ರೀರಕ್ತೇಶ್ವರಿ ಹಾಗೂ ಪಂಚದೇವತಾ ಸಾನಿಧ್ಯದ ಆಶ್ರಯದಲ್ಲಿ ನಡೆಯುವ 5 ನೇ ವರ್ಷದ ಸಾರ್ವಜನಿಕ ವಾಮಂಜೂರು ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆ ವಾಮಂಜೂರು ತೆಕ್ಕಿಬೆಟ್ಟು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.ವಾಮಂಜೂರು ಅಮೃತೇಶ್ವರ ದೇವಸ್ಥಾನದ ಅರ್ಚಕರಾದ ಸತ್ಯನಾರಾಯಣ ಹೊಳ್ಳ,ಉದ್ಯಮಿ ತಿರುವೈಲುಗುತ್ತು ನವೀನ್ ಚಂದ್ರ ಆಳ್ವ,ಪಬ್ಲಿಕ್ ಟಿವಿಯ ಬ್ಯೂರೋಚೀಫ್ ಸುಖ್ ಪಾಲ್ ಪೊಳಲಿ,ವಿಶ್ವಹಿಂದೂ ಪರಿಷತ್ ನ ಮುಖಂಡ ವಸಂತ್ ಸುವರ್ಣ ಗುರುಪುರ,ಉದ್ಯಮಿ ರವಿ,ಜಾರಪ್ಪ ಪೂಜಾರಿ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು. ಅಕ್ಟೋಬರ್ 16 ರಿಂದ 22 ರವರೆಗೆ ನಡೆಯಲಿರುವ ಶಾರದಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು,ಅನ್ನಸಂತರ್ಪಣೆ ನಡೆಯಲಿದೆ.ಅ.22‌ ರಂದು ಬೃಹತ್ ಶೋಭಾಯಾತ್ರೆಯೊಂದಿಗೆ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ನಡೆಯಲಿದೆ.

ಪ್ರಾದೇಶಿಕ ವಾರ್ತೆಗಳು

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಸುವರ್ಣ ಆಯ್ಕೆ

ಮೂಲ್ಕಿ 93 ವರ್ಷದ ಇತಿಹಾಸ ಇರುವ ಮೂಲ್ಕಿಯ ಪ್ರತಿಷ್ಠಿತ ಬಿಲ್ಲವ ಸಮಾಜ ಸೇವಾ ಸಂಘದ 2026- 28 ನೇ ಸಾಲಿನ ನೂತನ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಸುವರ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಮಾಜಿ ಅಧ್ಯಕ್ಷ ರಾಘವ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.ಮೂಲ್ಕಿ ಚಂದ್ರಶೇಖರ ಸುವರ್ಣ ರವರು ಬಪ್ಪನಾಡು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾಗಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಮೂಲ್ಕಿ ಯುವವಾಹಿನಿ ಘಟಕದ ಸ್ಥಾಪಕ ಅಧ್ಯಕ್ಷರಾಗಿ, ಯುವವಾಹಿನಿ ಕೇಂದ್ರೀಯ ಸಮಿತಿಯ ಮಾಜೀ ಅಧ್ಯಕ್ಷರಾಗಿ, ಮೂರ್ತೇದಾರ ಸೇವಾ ಸೊಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ಕುದ್ರೋಳಿಯ ನವರಾತ್ರಿಯ ನವದುರ್ಗೆಯರ ವೈಭವದ ರುವಾರಿ ಅಗಿದ್ದಾರೆ.ಪದಾಧಿಕಾರಿಗಳಾಗಿ ಬಿಲ್ಲವ ಸಮಾಜ ಸೇವಾ ಸಂಘದ ನೂತನ ಉಪಾಧ್ಯಕ್ಷರಾಗಿ ಸತೀಶ್ ಅಂಚನ್ ಬಾಳೆಹಿತ್ಲು, ಇಂದಿರಾ ಸಿ. ಅಮೀನ್ ಕೊಲ್ಲೂರು, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್ ವಿ. ಅಂಚನ್, ಜೊತೆ ಕಾರ್ಯದರ್ಶಿಯಾಗಿ ಜಯಸಿ ಸಿ. ಪೂಜಾರಿ ಮಾನಂಪಾಡಿ ಹಾಗೂ ನರೇಂದ್ರ ಕೆರೆಕಾಡು, ಕೋಶಾಧಿಕಾರಿಯಾಗಿ ಹರೀಂದ್ರ ಸುವರ್ಣ, ಜೊತೆ ಕೋಶಾಧಿಕಾರಿಯಾಗಿ ಸತೀಶ್ ಕೋಟ್ಯಾನ್ ಮಾನಂಪಾಡಿ, ಆಯ್ಕೆಯಾಗಿದ್ದಾರೆ. ೦-೦

ಪ್ರಾದೇಶಿಕ ವಾರ್ತೆಗಳು

*🔥 MPMLAs NEWS TV – SUPER EXCLUSIVE BREAKING*🔥 *25 ಸೆಂಟ್ಸ್ ವರೆಗಿನ ಸೈಟ್ ವಿನ್ಯಾಸ, 9/11 ಮತ್ತು ಕಟ್ಟಡ ಲೈಸೆನ್ಸ್ ಅಧಿಕಾರ ಇನ್ನು ಗ್ರಾಮ ಪಂಚಾಯತ್‌ಗೆ! – ರಾಜ್ಯ ಸರ್ಕಾರದಿಂದ ಐತಿಹಾಸಿಕ ಆದೇಶ*

*ಬಂಟ್ವಾಳ:* ಗ್ರಾಮೀಣ ಜನತೆಗೆ ಭಾರೀ ಸಿಹಿ ಸುದ್ದಿ ನೀಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು *1000 ಚದರ ಮೀಟರ್ ಅಂದರೆ 25 ಸೆಂಟ್ಸ್ ವರೆಗಿನ Single Plot ವಿನ್ಯಾಸ ಅನುಮೋದನೆ, 9/11 ಮತ್ತು ಕಟ್ಟಡ ಲೈಸೆನ್ಸ್ ಅನುಮೋದನೆ ಅಧಿಕಾರವನ್ನು* ನೇರವಾಗಿ ಗ್ರಾಮ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ನೀಡಿ *ಸೆಪ್ಟೆಂಬರ್ 24, 2026 ರಂದು ಅಧಿಕೃತ ಆದೇಶ (No. UDD 186 GEL 2026) ಹೊರಡಿಸಿದೆ.* *ಆದೇಶದಲ್ಲಿ ಏನಿದೆ? – 1 of 2 ಪುಟದ ವಿವರ*ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಸೆಕ್ಷನ್ 81 ರಡಿ ಸರ್ಕಾರ ಈ ಅಧಿಕಾರವನ್ನು ವರ್ಗಾಯಿಸಿದೆ. – ಇನ್ನು ಮುಂದೆ 1000 ಚ.ಮೀ ವರೆಗಿನ ನಿವೇಶನ ವಿನ್ಯಾಸಕ್ಕೆ MUDA/BDA/ ನಗರ ಯೋಜನಾ ಪ್ರಾಧಿಕಾರಕ್ಕೆ ಅಲೆಯಬೇಕಿಲ್ಲ. – *ಯಾರಿಗೆ ಅಧಿಕಾರ?*    a) ಮಹಾನಗರ ಪಾಲಿಕೆ – ವಲಯ ಆಯುಕ್ತರು   b) ನಗರಸಭೆ – ಆಯುಕ್ತರು   c) ಪುರಸಭೆ/ಪಟ್ಟಣ ಪಂಚಾಯತ್ – ಮುಖ್ಯಾಧಿಕಾರಿಗಳು   d) *ಗ್ರಾಮ ಪಂಚಾಯತ್ – Senior PDO / PDO* ಇದು ಸಾರ್ವಜನಿಕ ಅನುಕೂಲ ಮತ್ತು ಆಡಳಿತಾತ್ಮಕ ದಕ್ಷತೆಗಾಗಿ ತೆಗೆದುಕೊಂಡ ನಿರ್ಧಾರ ಎಂದು ಸರ್ಕಾರ ತಿಳಿಸಿದೆ. *ಬೇಬಿ ಕುಂದರ್ ಸ್ವಾಗತ – ಸರ್ಕಾರಕ್ಕೆ ಅಭಿನಂದನೆ*ಈ ಐತಿಹಾಸಿಕ ನಿರ್ಧಾರವನ್ನು *ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್* ಆತ್ಮೀಯವಾಗಿ ಸ್ವಾಗತಿಸಿದ್ದಾರೆ. > “25 ಸೆಂಟ್ಸ್ ವರೆಗಿನ ವಿನ್ಯಾಸ ಅನುಮೋದನೆ, 9/11 ಮತ್ತು ಕಟ್ಟಡ ಲೈಸೆನ್ಸ್ ಅಧಿಕಾರವನ್ನು ಪಂಚಾಯತ್‌ಗೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಗ್ರಾಮೀಣ ಜನತೆಗೆ ದೊಡ್ಡ ಅನುಕೂಲ ಮಾಡಿಕೊಟ್ಟಿದೆ. ತಿಂಗಳುಗಟ್ಟಲೆ ಕಾಯುತ್ತಿದ್ದ ಜನರಿಗೆ ಈಗ ಸ್ಥಳೀಯವಾಗಿಯೇ ಅನುಮೋದನೆ ಸಿಗಲಿದೆ. > ಈ ಜನಪರ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ *ಡಿ.ಕೆ ಶಿವಕುಮಾರ್*, ನಗರಾಭಿವೃದ್ಧಿ ಖಾತೆ ಸಚಿವರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ *ಯು.ಟಿ ಖಾದರ್* ರವರಿಗೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ಬೇಬಿ ಕುಂದರ್ ತಿಳಿಸಿದ್ದಾರೆ. *ಇದರಿಂದ ಲಾಭವೇನು?*✅ ಸಣ್ಣ ನಿವೇಶನದವರಿಗೆ ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬರುವ ಗೋಜು ಇಲ್ಲ✅ 9/11, ಕಟ್ಟಡ ಪರವಾನಗಿ ಇನ್ನು ನಿಮ್ಮ ಪಂಚಾಯತ್‌ನಲ್ಲೇ✅ ಭ್ರಷ್ಟಾಚಾರ, ವಿಳಂಬಕ್ಕೆ ಬ್ರೇಕ್✅ ಗ್ರಾಮೀಣ ಜನರಿಗೆ ಸಮಯ ಮತ್ತು ಹಣ ಉಳಿತಾಯ.

ಪ್ರಾದೇಶಿಕ ವಾರ್ತೆಗಳು

MPMLA’S NEWS – FOREIN REPORT. ಇಸ್ಲಾಂ ಧರ್ಮ ಮತ್ತು ಪ್ರವಾದಿ ಮೊಹಮ್ಮದ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ – ಶ್ರೀಲಂಕಾ ತಮಿಳು ಯುವಕನಿಗೆ ಸೌದಿ ಕೋರ್ಟ್‌ನಿಂದ ಗಲ್ಲು ಶಿಕ್ಷೆ ಘೋಷಣೆ!

*ಕೊಲಂಬೊ/ಜೆದ್ದಾ (ವಿದೇಶಿ ವರದಿ):* ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ ಧರ್ಮ ಮತ್ತು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಶ್ರೀಲಂಕಾ ಮೂಲದ ತಮಿಳು ಯುವಕನಿಗೆ ಸೌದಿ ಅರೇಬಿಯಾ ನ್ಯಾಯಾಲಯವು ಗಲ್ಲು ಶಿಕ್ಷೆ (ಮರಣದಂಡನೆ) ಘೋಷಿಸಿದೆ. *ಆರೋಪಿ ವಿವರ:*ಶಿಕ್ಷೆಗೆ ಒಳಗಾದ ಯುವಕನನ್ನು *ಸಿವರಾಸ ಅನೋಜನ್ (ಶಿವರಾಜನ್)* ಎಂದು ಗುರುತಿಸಲಾಗಿದೆ. ಶ್ರೀಲಂಕಾದ ಪೂರ್ವ ಪ್ರಾಂತ್ಯದ ಅಂಪಾರ ಜಿಲ್ಲೆಯ ಕಲ್ಮುನೈನ ನಾಟ್ಪಿಟ್ಟಿಮುನೈ ಗ್ರಾಮದವನು. ಕಳೆದ 9 ತಿಂಗಳ ಹಿಂದೆ ಉದ್ಯೋಗ ನಿಮಿತ್ತ ಸೌದಿಗೆ ತೆರಳಿದ್ದನು. *ಏನಾಗಿತ್ತು?*ಶ್ರೀಲಂಕಾದ ಕತಾರಗಾಮ ಪಾದಯಾತ್ರೆಯಲ್ಲಿ ಭಕ್ತರ ಜೊತೆ ನೂರಾರು ಕಿ.ಮೀ ನಡೆದು ಬಂದ ‘ಸುಬ್ರಮಣ್ಯಂ’ ಎಂಬ ನಾಯಿಯ ವಿಚಾರದಲ್ಲಿ ಫೇಸ್‌ಬುಕ್‌ನಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಅನೋಜನ್ ಪವಿತ್ರ ಕಾಬಾವನ್ನು ದೇವಾಲಯದಂತೆ ಬಿಂಬಿಸುವ AI ಚಿತ್ರ ಹಾಕಿ hಪ್ರವಾದಿ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪ. ಕಾಮೆಂಟ್ ಮಾಡಿದ 10 ನಿಮಿಷದಲ್ಲೇ ಡಿಲೀಟ್ ಮಾಡಿದ್ದರೂ, ಅದನ್ನು ಅರೇಬಿಕ್‌ಗೆ ಅನುವಾದಿಸಿ ಸೌದಿ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. *ಕೋರ್ಟ್ ತೀರ್ಪು:* – ಜುಲೈ 15: ಅಲ್-ಅಹ್ಸಾ ಕ್ರಿಮಿನಲ್ ಕೋರ್ಟ್ – *5 ವರ್ಷ ಜೈಲು + 30 ಲಕ್ಷ ರಿಯಾಲ್ ದಂಡ* – ಸೆ. 17: ಸೌದಿ ಪ್ರಾಸಿಕ್ಯೂಷನ್ ಮೇಲ್ಮನವಿ ಮೇರೆಗೆ *ಮೇಲ್ಮನವಿ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಏರಿಕೆ* *ಮುಂದೇನು?*ಶ್ರೀಲಂಕಾ ವಿದೇಶಾಂಗ ಸಚಿವಾಲಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಯಭಾರ ಕಚೇರಿ ಮೂಲಕ ಕಾನೂನು ನೆರವು ನೀಡುತ್ತಿದೆ. ಶ್ರೀಲಂಕಾ ಅಧ್ಯಕ್ಷರ ಕ್ಷಮಾದಾನ ಮನವಿಯೊಂದಿಗೆ ನಿಯೋಗ ಸೌದಿಗೆ ತೆರಳಲಿದೆ. ಭಾರತದಲ್ಲಿ *ಹಿಂದೂ ಮುನ್ನಾನಿ* ಸಂಘಟನೆಯು ಚೆನ್ನೈನಲ್ಲಿರುವ ಶ್ರೀಲಂಕಾ ಉಪ ಹೈಕಮಿಷನ್‌ಗೆ ಮನವಿ ಸಲ್ಲಿಸಿ, ಗಲ್ಲು ಶಿಕ್ಷೆ ರದ್ದುಗೊಳಿಸಿ ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದೆ

ಪ್ರಾದೇಶಿಕ ವಾರ್ತೆಗಳು

ಸಮಾನತೆ ಸಂವಿಧಾನದ ಮೂಲ ಆಶಯ-ಶಾಸಕ ಅಶೋಕ್ ಕುಮಾರ್ ರೈ

ಮಂಗಳೂರು : ಸಮಾನತೆ ಭಾರತೀಯ ಸಂವಿಧಾನದ ಮೂಲ ಆಶಯವಾಗಿದೆ. ಪ್ರಜೆಗಳಿಗೆ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯ ಕಲ್ಪಿಸಿರುವ ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿ ಎಂದು ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ನಗರದ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಅಳವಡಿಸಿದ ಭಾರತ ಸಂವಿಧಾನದ ಪೀಠಿಕೆ ಫಲಕವನ್ನು ಶುಕ್ರವಾರ ಅನಾವರಣಗೊಳಿಸಿ ಮಾತನಾಡಿದ ಅವರು “ಪತ್ರಿಕಾ ರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ಪರಿಗಣಿಸಲಾಗಿದ್ದು, ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸಂವಿಧಾನದ ಪೀಠಿಕೆ ಫಲಕ ಅಳವಡಿಸಿದ್ದು ಮಾದರಿ ಕಾರ್ಯವಾಗಿದೆ ‘ಎಂದು ಶ್ಲಾಘಿಸಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್.ಬಿ.ಎನ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷವಿಲ್ಫ್ರೆ ಡ್ ಡಿಸೋಜಾ, ಕೋಶಾಧಿಕಾರಿ ವಿಜಯ ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯ ಸಂದೀಪ್ ಕುಮಾರ್.ಎಂ., ಹಿರಿಯ ಪತ್ರಕರ್ತ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗತವೈಭವ ಮರಳಿಸಲು ಸಂಘಟನೆ. ನೂತನ ಡಿಸಿಸಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಸಂಕಲ್ಪ‌. ಹಿರಿಯ ಮುಖಂಡ ಜನಾರ್ದನ ಪೂಜಾರಿ ಸಮ್ಮುಖದಲ್ಲಿ ನೂತನ ಸಾರಥಿಯಾಗಿ ಅಧಿಕಾರ ಸ್ವೀಕಾರ

ಮಂಗಳೂರು: ಕಾಂಗ್ರೆಸ್ ಪಕ್ಷವೆಂದರೆ ಕೇವಲ ರಾಜಕೀಯ ಶಕ್ತಿಯಲ್ಲ, ಅದು ಕೋಟ್ಯಂತರ ಸಾಮಾನ್ಯ ಜನರ ಆಶಯಗಳಿಗೆ ಧ್ವನಿಯಾಗಿರುವ ಮಹಾನ್ ಚಳವಳಿ. ಜನರ ಮುಂದಿನ ಆಶಾಭಾವನೆಯೇ ಕಾಂಗ್ರೆಸ್ ಆಗಿದ್ದು, ಪಕ್ಷಕ್ಕಾಗಿ ತಳಮಟ್ಟದಲ್ಲಿ ದುಡಿಯುವ ಕಟ್ಟಕಡೆಯ ಕಾರ್ಯಕರ್ತನಿಗೂ ಸೂಕ್ತ ಗೌರವ ಮತ್ತು ಶಕ್ತಿ ತುಂಬುವ ಮೂಲಕ ಬೂತ್ ಮಟ್ಟದಿಂದ ಪಕ್ಷವನ್ನು ಮರುಸಂಘಟಿಸಲಾಗುವುದು. ಹಿರಿಯ ನಾಯಕರ ಮಾರ್ಗದರ್ಶನ ಹಾಗೂ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಗತವೈಭವವನ್ನು ಮರುಕಳಿಸುವಂತೆ ಶ್ರಮಿಸುತ್ತೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಘೋಷಿಸಿದರು.ಗುರುವಾರ ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ (ಕಾಂಗ್ರೆಸ್ ಭವನ) ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಹರೀಶ್ ಕುಮಾರ್ ಅವರಿಂದ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿದರು.ನವೆಂಬರ್‌ನಲ್ಲಿ ಬೃಹತ್ ಸಮಾವೇಶ:ತಮ್ಮ ಮುಂದಿನ ಕಾರ್ಯಯೋಜನೆಗಳನ್ನು ಹಂಚಿಕೊಂಡ ಪದ್ಮರಾಜ್, ನನ್ನ ಮೇಲೆ ನಂಬಿಕೆಯಿಟ್ಟು ಪಕ್ಷದ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಕಾರ್ಯಕರ್ತರ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಮುಂದಿನ 8 ದಿನಗಳಲ್ಲಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ ಬೂತ್‌ಗಳಿಗೆ ಖುದ್ದಾಗಿ ಭೇಟಿ ನೀಡಿ, ಬೂತ್ ಅಧ್ಯಕ್ಷರು ಹಾಗೂ ಸ್ಥಳೀಯ ಕಾರ್ಯಕರ್ತರನ್ನು ನೇರವಾಗಿ ಭೇಟಿಯಾಗಿ ಅವರ ಶ್ರಮವನ್ನು ಗುರುತಿಸಿ ಬೆನ್ನಿಗೆ ನಿಲ್ಲಲಿದ್ದೇನೆ. ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಿ ಸೂಕ್ತ ವೇದಿಕೆ ಕಲ್ಪಿಸಲು ನವೆಂಬರ್ ಮೊದಲ ವಾರದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗುವುದು, ಎಂದು ತಿಳಿಸಿದರು. * ತುಳು ಭಾಷೆಗೆ ಮಾನ್ಯತೆ ಕಾಂಗ್ರೆಸ್ ಹೆಗ್ಗಳಿಕೆ: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳಿಗೆ 32,000 ಕೋಟಿ ಅನುದಾನ ಮೀಸಲಿಟ್ಟಿರುವುದು ಪ್ರಮುಖ ಮೈಲಿಗಲ್ಲು. ಇದಕ್ಕಿಂತ ಹೆಚ್ಚಾಗಿ ಕರಾವಳಿಯ ಬಹುಕಾಲದ ಕನಸಾದ ತುಳು ಭಾಷೆಗೆ ಎರಡನೇ ಅಧಿಕೃತ ಆಡಳಿತ ಭಾಷೆಯ ಮಾನ್ಯತೆ ನೀಡಿದ ಐತಿಹಾಸಿಕ ಹೆಗ್ಗಳಿಕೆ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಈ ಸಾಧನೆಗಳನ್ನು ಪ್ರತಿಯೊಂದು ಮನೆ-ಮನಗಳಿಗೆ ತಲುಪಿಸಲಾಗುವುದು. ಕಾಂಗ್ರೆಸ್ ಸರ್ಕಾರವು ಕಾರ್ಯಕರ್ತರು ತಲೆ ಎತ್ತಿ ನಿಲ್ಲುವಂತಹ ಆಡಳಿತ ನೀಡುತ್ತಿದ್ದು, ವಿಪಕ್ಷಗಳ ಟೀಕೆಗೆ ಹಿಂಜರಿಯದೆ, ಹೊಗಳಿಕೆಗೆ ಹಿಗ್ಗದೆ ಮುನ್ನಡೆಯಬೇಕು. ಬಿಜೆಪಿ ಆಡಳಿತದಿಂದ ಬೇಸತ್ತು ಮರಳಿ ಕಾಂಗ್ರೆಸ್‌ಗೆ ಬರುತ್ತಿರುವ ಮುಖಂಡರು ಮತ್ತು ಸಾರ್ವಜನಿಕರನ್ನು ವಿಶ್ವಾಸಕ್ಕೆ ಪಡೆದು ಪಕ್ಷವನ್ನು ಬಲಪಡಿಸುತ್ತೇವೆ, ಎಂದರು. * ಎಲ್ಲ ಕ್ಷೇತ್ರಗಳಲ್ಲೂ ಗೆಲುವಿನ ಗುರಿ ಎಲ್ಲರ ಹೊಣೆ: ಹರೀಶ್ ಕುಮಾರ್ ನಿರ್ಗಮಿತ ಅಧ್ಯಕ್ಷ ಹರೀಶ್ ಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಮ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಪದ್ಮರಾಜ್ ವಿದ್ಯಾರ್ಥಿ ದೆಸೆಯಿಂದಲೇ ಪಕ್ಷಕ್ಕಾಗಿ ದುಡಿದವರು. ಕಳೆದ ಎರಡೂವರೆ ವರ್ಷಗಳಲ್ಲಿ ಪ್ರತಿ ಬ್ಲಾಕ್‌ಗೆ ಭೇಟಿ ನೀಡಿ ಪಕ್ಷ ಕಟ್ಟಿದ ಪರಿಣಾಮ ಇಂದು ಕಾರ್ಯಕರ್ತರಿಂದಲೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದೊಡ್ಡ ಜವಾಬ್ದಾರಿ ನಿರ್ವಹಿಸುವಾಗ ಮಾತೃ ಹೃದಯದ ಮಮತೆಯೂ ಬೇಕು, ಸಂಘಟನೆಯ ಹಿತದೃಷ್ಟಿಯಿಂದ ವಜ್ರದಂತಹ ಕಠೋರ ನಿರ್ಧಾರಗಳೂ ಅನಿವಾರ್ಯ. ನಮ್ಮೊಳಗಿನ ಒಡಕಿನಿಂದಲೇ ನಮಗೆ ಹಿನ್ನಡೆಯಾಗಿದ್ದು, ಇನ್ನು ಮುಂದೆ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಮುಂಬರುವ ಚುನಾವಣೆಗಳಲ್ಲಿ ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಪ್ರತಿಯೊಬ್ಬರೂ ಸೈನಿಕನಂತೆ ಶ್ರಮಿಸಬೇಕು. ಚುನಾವಣೆಯಲ್ಲಿ ಪಕ್ಷ ಗೆಲ್ಲಿಸುವುದು ಕೇವಲ ಅಧ್ಯಕ್ಷರೊಬ್ಬರ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ಕಾಂಗ್ರೆಸಿಗನ ಕರ್ತವ್ಯ, ಎಂದು ಕರೆ ನೀಡಿದರು. * ಪಕ್ಷದ ಹುದ್ದೆಗಳು ’ವಿಸಿಟಿಂಗ್ ಕಾರ್ಡ್’ಗೆ ಸೀಮಿತವಾಗದಿರಲಿ: ಮಂಜುನಾಥ ಭಂಡಾರಿ ನೂತನ ಅಧ್ಯಕ್ಷರಿಗೆ ಪಕ್ಷದ ಧ್ವಜ ಹಸ್ತಾಂತರಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಸಂಘಟನ್ ಸೃಜನ್ ಅಭಿಯಾನದಡಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಚುನಾವಣೆ ಮೂಲಕ ಪದ್ಮರಾಜ್ ಅವರ ಆಯ್ಕೆ ನಡೆದಿದೆ. ಪಕ್ಷದಲ್ಲಿ ನೀಡಲಾಗುವ ಹುದ್ದೆಗಳು ಕೇವಲ ‘ವಿಸಿಟಿಂಗ್ ಕಾರ್ಡ್’ಗೆ ಸೀಮಿತವಾಗಬಾರದು; ಸಕ್ರಿಯವಾಗಿ ದುಡಿಯುವವರಿಗೆ ಮಾತ್ರ ಜವಾಬ್ದಾರಿ ಹಂಚಿಕೆ ಮಾಡಲಾಗುವುದು. ಕೆಪಿಸಿಸಿಯಲ್ಲಿ ಕಾರ್ಯದರ್ಶಿಗಳು ಹಾಗೂ ಸಂಯೋಜಕರ ನೇಮಕಕ್ಕೆ ಮುಕ್ತ ಅರ್ಜಿ ಆಹ್ವಾನಿಸಲಾಗಿದ್ದು, ಡಾ.ಜಿ. ಪರಮೇಶ್ವರ್ ನೇತೃತ್ವದ ಸಮಿತಿಯು ಸಂದರ್ಶನ ನಡೆಸಿ ಕ್ರಿಯಾಶೀಲರಿಗೆ ಮಾತ್ರ ಹೊಣೆಗಾರಿಕೆ ವಹಿಸಲಿದೆ. ಜಿಲ್ಲೆಯಲ್ಲಿ ಗ್ರಾ.ಪಂ., ತಾ.ಪಂ., ಜಿ.ಪಂ. ಹಾಗೂ ಪಾಲಿಕೆ ಚುನಾವಣೆಗಳು ಬಾಕಿ ಇದ್ದು, ಸುಮಾರು 4,000 ಜನಪ್ರತಿನಿಧಿ ಸ್ಥಾನಗಳು ಖಾಲಿಯಿವೆ. ವಷಾರ್ಂತ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆಯಿರುವುದರಿಂದ ಮುಂದಿನ ಆರು ತಿಂಗಳು ಸಂಘಟನೆಗೆ ಅತ್ಯಂತ ನಿರ್ಣಾಯಕ. ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಕಂಕಣಬದ್ಧರಾಗಬೇಕು, ಎಂದರು.ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಸೇರಿದಂತೆ ಹಲವು ಗಣ್ಯರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಈ ಮಹತ್ವದ ಕ್ಷಣಕ್ಕೆ ಸಾಕ್ಷಿಯಾದರು.ಕಾರ್ಯಕ್ರಮದಲ್ಲಿ ಫಾ.ಗೋಮ್ಸ್ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹಿಂ, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪ್ರಮುಖ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಟಿ.ಎಂ. ಶಾಹೀದ್ ತೆಕ್ಕಿಲ್, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಅಪ್ಪಿ, ಶಶಿಧರ ಹೆಗ್ಡೆ, ಅಶ್ರಫ್ ಕೆ., ಸುರೇಶ್ ಬಲ್ಲಾಳ್, ಕೃಷ್ಣಪ್ಪ, ಎಂ.ಎಸ್. ಮೊಹಮ್ಮದ್, ಸದಾಶಿವ ಉಳ್ಳಾಲ್, ಉಷಾ ಅಂಚನ್, ಶಾಹುಲ್ ಹಮೀದ್, ಈಶ್ವರ್ ಉಳ್ಳಾಲ್, ಮಹಮ್ಮದ್ ಆಲಿ, ಜೋಕಿಂ, ನವಾಝ್, ಎ.ಸಿ. ಭಂಡಾರಿ, ಲಾವಣ್ಯ ಬಲ್ಲಾಳ್, ಯು.ಕೆ. ಮೋನು ಮೊದಲಾದ ನಾಯಕರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷ ಪದ್ಮರಾಜ್ ಅವರ ತಂದೆ ಎಚ್.ಎಂ. ರಾಮಯ್ಯ ಹಾಗೂ ಸಹೋದರ ಡಾ. ಪುರುಷೋತ್ತಮ್ ಉಪಸ್ಥಿತರಿದ್ದು ಶುಭ ಕೋರಿದರು.

ಪ್ರಾದೇಶಿಕ ವಾರ್ತೆಗಳು

ವಿಶ್ವ ಪ್ರಥಮ ಚಿಕಿತ್ಸೆ ದಿನಾಚರಣೆ *ಪ್ರಥಮ ಚಿಕಿತ್ಸೆಯಿಂದ ಜೀವ ರಕ್ಷಣೆ ಸಾಧ್ಯ-ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು : ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಇದರ ಯೂತ್ ರೆಡ್‌ಕ್ರಾಸ್ ಮತ್ತು ಐಕ್ಯುಎಸಿ ವತಿಯಿಂದ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಸಹಯೋಗದಲ್ಲಿ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಪ್ರಥಮ ಚಿಕಿತ್ಸೆ ದಿನಾಚರಣೆ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ” ಅಪಘಾತ, ಹಾವು ಕಡಿತ ಮುಂತಾದ ದುರ್ಘಟನೆ ಸಂದರ್ಭ ಸೂಕ್ತ ಪ್ರಥಮ ಚಿಕಿತ್ಸೆ ನೀಡುವುದರಿಂದ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಾಗುತ್ತದೆ. ಸಕಾಲದಲ್ಲಿ ಪ್ರಥಮ ಚಿಕಿತ್ಸೆ ನೀಡುವವರ ಸಮಯ ಪ್ರಜ್ಞೆ ಮತ್ತು ಜ್ಞಾನ ಗಾಯಾಳುವಿನ ಚಿಕಿತ್ಸೆಗೆ ನೆರವಾಗುತ್ತದೆ. ವಿದ್ಯಾರ್ಥಿಗಳು ಸಹಿತ ಪ್ರತಿಯೊಬ್ಬರು ಪ್ರಥಮ ಚಿಕಿತ್ಸೆ ಬಗ್ಗೆ ಪ್ರಾಥಮಿಕ ಜ್ಞಾನ ಹೊಂದುವುದು ಅಗತ್ಯ ‘ಎಂದರು.ರೆಡ್‌ಕ್ರಾಸ್ ಆಡಳಿತ ಮಂಡಳಿ ನಿರ್ದೇಶಕರಾದ ರಾಘವೇಂದ್ರ ರಾವ್ ಮತ್ತು ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಗೋಪಾಲಕೃಷ್ಣ ಕೆ ಅಧ್ಯಕ್ಷತೆ ವಹಿಸಿದ್ದರು.ಸಂಪನ್ಮೂಲ ವ್ಯಕ್ತಿಯಾಗಿದ್ದ ನಿಟ್ಟೆ ವಿ.ವಿ.ಯ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್‌ನ ಉಪನ್ಯಾಸಕಿ ಕೀರ್ತಿಮಾಲಾ ಕೆ ಅವರು ಪ್ರಥಮ ಚಿಕಿತ್ಸೆ ಬಗ್ಗೆ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿದರು. ಯೂತ್ ರೆಡ್‌ಕ್ರಾಸ್ ನಿರ್ದೇಶಕಿ ಡಾ.ಸುಮನ .ಬಿ., ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಜಯಶ್ರೀ .ಕೆ.ಯೂತ್ ರೆಡ್‌ಕ್ರಾಸ್ ಕಾರ್ಯದರ್ಶಿ ಶಿಲ್ಪಾ ,ಐಕ್ಯುಎಸಿ ಸಂಯೋಜಕಿ ಡಾ.ಮಂಜುಳಾ ಮಲ್ಯ.ಎಂ., ಯೂತ್ ರೆಡ್‌ಕ್ರಾಸ್ ಯೋಜನಾಧಿಕಾರಿ ಡಾ.ಮೀನಾಕ್ಷಿ ಆಚಾರ್ಯ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಜುಲ್ಫಾ ಸ್ವಾಗತಿಸಿ, ರೆಡ್‌ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಸತೀಶ್ ಕುಮಾರ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಹಾಜಿರಾ ಅಬಿದ್ ಮನ್ನ ಕಾರ್ಯಕ್ರಮ ನಿರೂಪಿಸಿದರು. ಫೋಟೋ : ರೆಡ್‌ಕ್ರಾಸ್………….

ಪ್ರಾದೇಶಿಕ ವಾರ್ತೆಗಳು

ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ರೂ. 2 ಕೋಟಿ ದೇಣಿಗೆ ನೀಡಿದ ಶ್ರೀ ತೋನ್ಸೆ ಆನಂದ್ ಎಂ. ಶೆಟ್ಟಿ

ಮಂಗಳೂರು: ಖ್ಯಾತ ಉದ್ಯಮಿ ಸಾಮಾಜಿಕ ಕಳಕಳಿಯ ದಾನಿ ಆರ್ಗಾನಿಕ್ ಗ್ರೂಪ್ ಆಫ್ ಸಂಸ್ಥೆಯ ಸಿಎಂಡಿ ತೋನ್ಸೆ ಆನಂದ ಶೆಟ್ಟಿ ಮುಂಬೈ ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ 2018ರಲ್ಲಿಯೇ ಪ್ರಥಮ ದೇಣಿಗೆಯಾಗಿ ರೂ. 25 ಲಕ್ಷ ವನ್ನು ನೀಡುವ ಮೂಲಕ ಉತ್ತಮ ಚಾಲನೆ ನೀಡಿದ್ದು ಕ್ರಮೇಣ 8 ವರ್ಷಗಳ ಕಾಲ ಒಕ್ಕೂಟದ ಎಲ್ಲಾ ಜನಪರ ಕಾಳಜಿಯ ಸಾಮಾಜಿಕ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತಿದ್ದು ಸುಮಾರು 1.65 ಕೋಟಿಯಷ್ಟು ದೇಣಿಗೆಯನ್ನು ಈಗಾಗಲೇ ನೀಡಿದ್ದಾರೆ ಇದೀಗ ಸಭಾಭವನದ ಮುಖ್ಯ ವೇದಿಕೆಗೆ ಅವರ ಧರ್ಮಪತ್ನಿ ತೋನ್ಸೆ ಶಶಿರೇಖಾ ಆನಂದ್ ಶೆಟ್ಟಿ ಯವರ ಹೆಸರನ್ನಿರಿಸುವ ಸಲುವಾಗಿ ಇನ್ನುಳಿದ ರೂ. 35 ಲಕ್ಷ ದೇಣಿಗೆಯ ಚೆಕ್ಕನ್ನು ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರಿಗೆ ಹಸ್ತಾಂತರಿಸಿ ಒಟ್ಟು ರೂ. 2 ಕೋಟಿಯಷ್ಟು ದೇಣಿಗೆ ನೀಡಿ ಸಹಕಾರ ನೀಡಿದ್ದಾರೆ. ಆನಂದ ಶೆಟ್ಟಿ ಅವರ ಧರ್ಮಪತ್ನಿ ಶಶಿರೇಖಾ ಆನಂದ್ ಶೆಟ್ಟಿಯವರು ಸಹ ಒಕ್ಕೂಟದ ಎಲ್ಲಾ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ್ದಾರೆ. ಇವರಿಗೆ ಒಕ್ಕೂಟದ ಸರ್ವ ಸದಸ್ಯರ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ತೋನ್ಸೆ ಆನಂದ್ ಶೆಟ್ಟಿಯವರನ್ನು ಹೂಗುಚ್ಚ ನೀಡಿ ಆತ್ಮೀಯವಾಗಿ ಕೃತಜ್ಞತೆ ಸಲ್ಲಿಸಿದರು. ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ ಮತ್ತು ಯುವ ವಿಭಾಗದ ಕಾರ್ಯಧ್ಯಕ್ಷರಾದ ಗಿರೀಶ್ ಶೆಟ್ಟಿ ತೆಳ್ಳಾರ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ರಾಷ್ಟ್ರೀಯ ಪೋಷಣ್ ಮಾಸಾಚರಣೆ. ಪೌಷ್ಟಿಕ ಆಹಾರದಿಂದ ಆರೋಗ್ಯಕರ ಸಮಾಜ – ದ.ಕ.ಜಿಲ್ಲಾ ರೆಡ್‌ಕ್ರಾಸ್ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ನಗರ), ಭಾರತೀಯ ರೆಡ್ ಕ್ರಾಸ್ ಸೊಸೈಟಿ ದ.ಕ. ಘಟಕ, ಆಯುಷ್ ಇಲಾಖೆ , ಭಗಿನಿ ಸಮಾಜ ಮಂಗಳೂರು, ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ವತಿಯಿಂದ ಮಂಗಳೂರು ತಾಲೂಕು ಮಟ್ಟದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಂಗಳವಾರ ನಗರದ ರೆಡ್‌ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ” ಪೌಷ್ಟಿಕ ಆಹಾರ ಆರೋಗ್ಯಕರ ಸಮಾಜದಅಡಿಪಾಯವಾಗಿದ್ದು, ಮಕ್ಕಳ ಪೋಷಣೆ ಹಾಗೂ ಪೌಷ್ಟಿಕಾಂಶದ ಕುರಿತು ಅರಿವು ಮೂಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಅಂಗನವಾಡಿ ಶಿಕ್ಷಕಿಯರು ಮತ್ತು ಆಶಾ ಕಾರ್ಯಕರ್ತೆಯರು ಮಹತ್ವದ ಕೆಲಸ ಮಾಡುತ್ತಿದ್ದಾರೆ’ ಎಂದರು.ಮಕ್ಕಳ ರಕ್ಷಣಾ ನಿರ್ದೇಶನಾಲಯದ ಯೋಜನಾ ನಿರ್ದೇಶಕ ಪರಶುರಾಮ್ ವೈ ಶೆಟ್ಟೆಪ್ಪನವರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ್.ಎಂ.ಎಸ್. , ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ.ಕೆ.ಎಂ. , ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ.ಹೇಮವಾಣಿ ಪಿ. ಮತ್ತು ಡಾ. ಶೋಭಾರಾಣಿ ಪೋಷಣ್ ಮಾಸಾಚರಣೆಯ ಮಹತ್ವ, ಪೌಷ್ಟಿಕ ಅಹಾರ ಕ್ರಮ ಮತ್ತು ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷೆ ಹೇಮಾ ರಾವ್, ಭಗಿನಿ ಸಮಾಜದ ಅಧ್ಯಕ್ಷೆ ಪ್ರಮೋದ ಸತೀಶ್ , ರಶ್ಮಿ ಶಾಂತಾರಾಮ ಶೆಟ್ಟಿ , ಜಿಲ್ಲಾ ರೆಡ್‌ಕ್ರಾಸ್ ಕಾರ್ಯದರ್ಶಿ ಡಾ.ಸತೀಶ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ. ಎನ್. ಸ್ವಾಗತಿಸಿ, ಮೇಲ್ವಿಚಾರಕಿ ಅನುಪಮ ವಂದಿಸಿದರು. ಮೇಲ್ವಿಚಾರಕಿ ಭವ್ಯ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.ಪೋಷಣ್ ಮಾಸಾಚರಣೆ ಅಂಗವಾಗಿ ಅಂಗನವಾಡಿ ಶಿಕ್ಷಕಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಳೆಯ ಮಕ್ಕಳಿಗೆ ಅನ್ನ ಪ್ರಾಶನ, ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿತು.

Scroll to Top