ಸ್ಪಿನ್ ದಾಳಿಯನ್ನು ನಿಭಾಯಿಸಲಾಗದೆ ಶ್ರೀಲಂಕಾ ವಿರುದ್ದ 27 ವರ್ಷಗಳ ನಂತರ ಏಕದಿನ ಕ್ರಿಕೆಟ್ ನಲ್ಲಿ ಸರಣೆ ಕಳೆದುಕೊಂಡ ಭಾರತ.

113.4K Views 7 Aug 2024

ಸ್ಪೋರ್ಟ್ಸ್ ರಿಪೋರ್ಟ್: ಡಾ.ಅಶೋಕ್ ಶೆಟ್ಟಿ ಬಿ. ಎನ್.
ಮಂಗಳೂರು: ಭಾರತ ಕ್ರಿಕೆಟ್ ತಂಡ 3 ಪಂದ್ಯ ಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು ಟೈಗೆ ಸಮಾಧಾನ ಪಟ್ಟು ನಂತರದ ಎರಡು ಪಂದ್ಯಗಳನ್ನು ಸೋತಿದೆ. ಮೂರನೇ ಪಂದ್ಯದಲ್ಲಿ 110 ರನ್ ಗಳ ಭಾರೀ ಅಂತರದಲ್ಲಿ ಪರಾಜಯ ಅನುಭವಿಸಿ ತೀವ್ರ ಮುಖಭಂಗಗೊಳಗಾಗಿದೆ. ಈ ಸರಣೆಯಲ್ಲಿ ಬುಮ್ರಾರನ್ನು ಕೈ ಬಿಟ್ಟದ್ದು, ಅಗ್ರ ಸರಣೆಯ ಬ್ಯಾಟರ್ ಗಳ ಬ್ಯಾಟಿಂಗ್ ವೈಫಲ್ಯ ಸೋಲಿಗೆ ಕಾರಣವಾಗಿದೆ. ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ. ಎಲ್. ರಾಹುಲ್, ದುಬೆ, ಪಂತ್ ಲೆಕ್ಕ ಭರ್ತಿಗಷ್ಟೇ ಆಡಿದರು. ಇವರ ಬ್ಯಾಟ್ ನಿಂದ ರನ್ ಬರಲೇ ಇಲ್ಲ. ಬಲಿಷ್ಠ ಭಾರತ ದುರ್ಬಲ ಶ್ರೀಲಂಕಾದ ವಿರುದ್ದ ಸೋತದ್ದು ನೂತನ ಕೋಚ್ ಗೌತಮ್ ಗಂಭೀರ್ ಗೆ ಸವಲಾಗಿ ಪರಿಣಮಿಸಿದೆ. ಇನ್ನು ಮುಂದಾದರೂ ಈ ಸೋಲಿನಿಂದ ಭಾರತ ಕ್ರಿಕೆಟ್ ತಂಡ ಪಾಠ ಕಲಿತು ಬಲಿಷ್ಠ ತಂಡವನ್ನು ರೂಪಿಸಲೆಂದು ಅಭಿಮಾನಿಗಳು ಆಶಯ ವ್ಯಕ್ತ ಪಡಿಸಿದ್ದಾರೆ

Read More News

Scroll to Top