ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಬಜೆಟ್ ಹೀಗೂ ಉಂಟೇ!!

ವರದಿ: ಡಾ.ಅಶೋಕ್ ಶೆಟ್ಟಿ ಬಿ.ಎನ್.ನವದೆಹಲಿ: ಕೇಂದ್ರ ಸರಕಾರ 53 ಲಕ್ಷ ಕೋಟಿ ಬಜೆಟ್ ಮಂಡಿಸಿದೆ. ಇದನ್ನು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದು ಜನಪರ ಬಜೆಟ್ ಅಲ್ಲ ಎಂದು ಟೀಕಿಸಿದೆ. ಇನ್ನು ಸ್ವಲ್ಪ ಸಮಯದಲ್ಲಿ ರಾಜ್ಯ ಸರಕಾರ ಬಜೆಟ್ ಮಂಡಿಸಲಿದೆ. ಆವಾಗ ಬಿಜೆಪಿ ನಾಯಕರು ಟೀಕಿಸಲಿದ್ದಾರೆ.ಪ್ರತೀ ಸಾರಿ ಬಜೆಟ್ ಮಂಡಿಸಿದಾಗ ವಿಪಕ್ಷಗಳು ಟೀಕಿಸುತ್ತವೆ. ಇದು ಎಷ್ಟು ಸರಿ? ಅಭಿವೃದ್ಧಿ ಆಡಳಿತ ನಮ್ಮ ದೇಶದ ಧ್ಯೇಯವಾಗಿದೆ. ಆದರೆ ವಿರೋಧಪಕ್ಷದ ಸ್ಥಾನದಲ್ಲಿರುವ ರಾಜಕೀಯ ನಾಯಕರು ಆಡಳಿತ ಪಕ್ಷದ ಬಜೆಟ್ ಬಗ್ಗೆ ಸರಿಯಾಗಿ ವಿಮರ್ಶಿಸದೆ ಏಕಾಏಕಿ ಟೀಕಿಸುತ್ತಾರೆ. ಇದೇ ಸಂದರ್ಭ ಕೆಲವು ಚಾಲ್ತಿಯಲ್ಲಿ ಇಲ್ಲದ ಮಾಜಿ ರಾಜಕಾರಣಿಗಳು ಬಜೆಟನ್ನು ಬೇಕಾಬಿಟ್ಟಿ ಹೊಗಳಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ.ಇವರಿಗೆಲ್ಲಾ ಈ ಅರ್ಥವ್ಯವಸ್ಥೆಯ ಜ್ಞಾನವೇ ಇರುವುದಿಲ್ಲ. ಒಂದು ಬಜೆಟ್‍ನ್ನು ಮಂಡಿಸಬೇಕಾದರೆ ಎಷ್ಟು ಯೋಜನಾ ವರದಿಗಳನ್ನು ಸಿದ್ಧಪಡಿಸಿ ಮಂಡಿಸಬೇಕಾಗುತ್ತದೆ. ಅಭಿವೃದ್ದಿಯನ್ನು ಮೂಲ ಧ್ಯೇಯವಾಗಿರಿಸಿಕೊಂಡು ಬಜೆಟ್‍ನ್ನು ಮಂಡಿಸುತ್ತಾರೆ. ಆದರೆ ಬಜೆಟ್ ಮಂಡನೆಯಾದ ಕ್ಷಣವೇ ಅದು ಹೇಗಿದೆ ಎಂಬುದನ್ನು ಕೂಡಾ ನೋಡದೇ ಏಕಾಏಕಿ ಟೀಕಿಸುತ್ತಾರೆ.ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಇದು ರಾಷ್ಟ್ರೀಯ ರಾಜಕೀಯ ಪಕ್ಷಗಳು. ಇವುಗಳಿಗೆ ತಮ್ಮದೇ ಆದ ರಾಜಕೀಯ ಜವಾಬ್ದಾರಿಗಳಿರುತ್ತವೆ. ಇಷ್ಟು ಇದ್ದರೂ ಇದರ ಕೆಲವು ಪ್ರಚಾರ ಪ್ರಿಯ ನಾಯಕರು ಬಜೆಟ್‍ನ್ನು ಟೀಕಿಸುವುದು ಎಷ್ಟು ಸರಿ? ಬಜೆಟ್ ಎಂದರೆ ಹೀಗೂ ಉಂಟೇ ಎಂಬ ವಿಷಯ ಜನಚರ್ಚೆಗೆ ಗ್ರಾಸವಾಗಿದೆ.

ಪ್ರಾದೇಶಿಕ ವಾರ್ತೆಗಳು

ನೋಬೆಲ್ ಕನ್ನಡಿಗ ರಾಜ್ಯ ಪ್ರಶಸ್ತಿಗೆ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆ            

ಬೆಂಗಳೂರಿನ ಒರಿಯಂಟಲ್ ಫೌಂಡೇಶನ್ ರಿಜಿಸ್ಟರ್ ವತಿಯಿಂದ ನಡೆಯುವ 2026 ಸಾಲಿನ ಪ್ರತಿಷ್ಠಿತ *ನೋಬೆಲ್ ಕನ್ನಡಿಗ* ರಾಜ್ಯ ಪ್ರಶಸ್ತಿಗೆ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ರವರು ಆಯ್ಕೆಯಾಗಿದ್ದು. ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆ, ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಫೆಬ್ರವರಿ ಒಂದರಂದು ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ .ಜನಪ್ರಿಯ ನಾಯಕ ನಟ  ಹಾಗೂ ನೃತ್ಯ ನಿರ್ದೇಶಕರಾದ ವಿನೋದ್ ರಾಜ್, ಹೆಸರಾಂತ ನಟಿ ಅಭಿನಯ,ಗಾಯಕಿ ಡಾ.ಗೀತಾ ಕೈವಾರ, ಹಾಸ್ಯ ನಟ ಮೈಸೂರು ರಮಾನಂದ, ಮುಖ್ಯ ಅತಿಥಿಗಳಾಗಿರುವರು ಎಂದು ಸಂಸ್ಥೆಯ ಸಂಸ್ಥಾಪಕರಾದ ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಡಾ. ಮಾಲತಿ ಶೆಟ್ಟಿ ಮಾಣೂರುರವರು ಕಳೆದ 21 ವರ್ಷಗಳಿಂದ ಸಾಹಿತ್ಯ, ಪತ್ರಿಕೋದ್ಯಮ, ಸಮಾಜಸೇವೆ ,ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಳೆದ 13 ವರ್ಷಗಳಿಂದ ಸಾಹಿತ್ಯ ಪದ ಅಮೃತ ಪ್ರಕಾಶ ಪತ್ರಿಕೆಯನ್ನು ನಡೆಸುತ್ತಿದ್ದಾರೆ .9 ಕೃತಿಗಳನ್ನು ಪ್ರಕಟಿಸಿದ್ದಾರೆ .ಇತರ ಹಿರಿಯ ಕಿರಿಯ ಲೇಖಕರ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಈಗಾಗಲೇ 49 ಕೃತಿಗಳನ್ನು ಪತ್ರಿಕೆಯ ವತಿಯಿಂದ ಬಿಡುಗಡೆಗೊಳಿಸಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯದ ಅಭಿರುಚಿ ಮೂಡುವ ಸಲುವಾಗಿ ಈಗಾಗಲೇ 117 ಶಾಲಾ-ಕಾಲೇಜುಗಳಲ್ಲಿ ಉಚಿತ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಮಂಗಳೂರಿನ   ಅತ್ತಾವರ ಪತಿ ಸತ್ಯ ಪ್ರಕಾಶ್ ಶೆಟ್ಟಿ ಜೊತೆ ಸಾಹಿತ್ಯ ನಂದನದಲ್ಲಿ ವಾಸವಾಗಿದ್ದಾರೆ. ಇವರ ತಂದೆ ಹಿರಿಯ ಯಕ್ಷಗಾನ ಕಲಾವಿದರಾದ ದಿವಂಗತ ಕಿಟ್ಟಣ್ಣ ಶೆಟ್ಟಿ ಮಾಣೂರು ಹಾಗೂ ರೇವತಿ ಶೆಟ್ಟಿ ಮಾಣೂರು ಅವರ ದಂಪತಿಗಳ   ಸುಪುತ್ರಿ. .

ಪ್ರಾದೇಶಿಕ ವಾರ್ತೆಗಳು

ಬಜೆಟ್ ನಲ್ಲಿ ಮಂಗಳೂರು ದಸರಾಗೆ 5 ಕೋಟಿ:- ಮುಖ್ಯಮಂತ್ರಿಗಳಿಗೆ ಶಾಸಕ ಕಾಮತ್ ಮನವಿ

ಮಂಗಳೂರು ದಸರಾ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸಂಕೇತವಾಗಿದ್ದು ಪ್ರತೀ ವರ್ಷ ದೇಶ-ವಿದೇಶಗಳ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದ್ದು ಇಂತಹ ವೈಭವದ ಹಬ್ಬಕ್ಕೆ ರಾಜ್ಯ ಸರ್ಕಾರವು ಈ ಬಾರಿಯ 2026-27 ನೇ ಸಾಲಿನ ಬಜೆಟ್ ನಲ್ಲಿ ರೂ.5 ಕೋಟಿ ಅನುದಾನ ಘೋಷಣೆ ಮಾಡುವಂತೆ ಶಾಸಕ ಡಿ.ವೇದವ್ಯಾಸ ಕಾಮತ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಭೇಟಿ ಮಾಡಿ ಮನವಿ ಮಾಡಿದರು. ಮೈಸೂರು ನಂತರ ರಾಜ್ಯದಲ್ಲೇ ಅತೀ ಹೆಚ್ಚು ಜನ ಸೇರುವ ಹಬ್ಬ ಮಂಗಳೂರು ದಸರಾ. ನವರಾತ್ರಿಯ ಸಂದರ್ಭದಲ್ಲಿ ಇಲ್ಲಿನ ಪ್ರಸಿದ್ಧ ತೀರ್ಥಕ್ಷೇತ್ರಗಳು ನಾಡಿನ ಭಕ್ತರಿಂದ ತುಂಬಿರುತ್ತವೆ. ರಾಜ್ಯ ಸರ್ಕಾರ ಬಜೆಟ್ ನಲ್ಲಿ 5 ಕೋಟಿ ಘೋಷಣೆ ಮಾಡಿದರೆ ಇನ್ನಷ್ಟು ವಿಜೃಂಭಣೆಯಿಂದ ದಸರಾ ಆಯೋಜನೆ ಮಾಡಬಹುದಾಗಿದ್ದು ಹಬ್ಬದ ಸಂಭ್ರಮವೂ ಹೆಚ್ಚಲಿದೆ. ದಯವಿಟ್ಟು ಈ ಬಗ್ಗೆ ಆದ್ಯತೆಯ ಮೇರೆಗೆ ಕ್ರಮಗೊಳ್ಳಿ ಎಂದು ಶಾಸಕರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.ಈ ಹಿಂದೆ ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ, ದಸರಾ ವೇಳೆ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಿಂದ ಆರಂಭವಾಗಿ ಮಂಗಳಾದೇವಿ, ಉರ್ವ ಮಾರಿಗುಡಿ, ಕಾರ್ ಸ್ಟ್ರೀಟ್, ಡೊಂಗರಕೇರಿ, ಹೀಗೆ ಇಡೀ ನಗರಕ್ಕೆ ಪಾಲಿಕೆ ವತಿಯಿಂದಲೇ ದೀಪಾಲಂಕಾರಗೊಳ್ಳಬೇಕು ಎಂದು ಚಿಂತನೆ ನಡೆಸಿದ ಶಾಸಕ ಕಾಮತ್ ರವರು, ಅಂದಿನ ಮೇಯರ್, ಕಾರ್ಪೊರೇಟರ್, ಸ್ಥಾಯಿ ಸಮಿತಿ ಸದಸ್ಯರು, ಜಿಲ್ಲಾಧ್ಯಕ್ಷರ ಸಹಿತ ಎಲ್ಲರ ಸಹಕಾರದೊಂದಿಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದರು. ಇದರಿಂದಾಗಿ ದೇವಸ್ಥಾನಗಳಿಗೆ ದೀಪಾಲಂಕಾರಕ್ಕಾಗಿಯೇ ವರ್ಷಕ್ಕೆ ಸುಮಾರು 50 ರಿಂದ 60 ಲಕ್ಷದವರೆಗಿನ ಬಹುದೊಡ್ಡ ಆರ್ಥಿಕ ಹೊರೆಯಾಗುವುದು ತಪ್ಪಿರುವುದನ್ನು ಇಲ್ಲಿ ಸ್ಮರಿಸಬಹುದು.

ಪ್ರಾದೇಶಿಕ ವಾರ್ತೆಗಳು

ಜಾರಿಗೊಂಡ ಸಂಹಿತೆಗಳು ಕಾರ್ಮಿಕರ ಪಾಲಿಗೆ ಮರಣ ಶಾಸನವಾಗಲಿದೆ – ಮೀನಾಕ್ಷಿ ಸುಂದರಂ

ಕೇಂದ್ರ ಸರಕಾರ ಜಾರಿಗೆ ತಂದಿರುವ 4 ಕಾರ್ಮಿಕ ವಿರೋಧಿ ಸಂಹಿತೆಗಳು ಅತ್ಯಂತ ಅಪಾಯಕಾರಿಯಾಗಿದ್ದು, ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮಗಿರಿಯತ್ತ ತಳ್ಳಲು ಸಂಚು ರೂಪಿಸಿದೆ. ಕಾರ್ಪೊರೇಟ್ ಗಳ ಹಿತಾಸಕ್ತಿಗಳನ್ನು ಕಾಪಾಡಲು ಶ್ರಮಜೀವಿಗಳ ರಕ್ತ ಹೀರಲು ಸನ್ನದ್ದವಾಗಿದೆ.ಈ ಹಿನ್ನೆಲೆಯಲ್ಲಿ ಜಾರಿಗೊಂಡ 4  ಸಂಹಿತೆಗಳು ಕಾರ್ಮಿಕರ ಪಾಲಿಗಂತೂ ಮರಣ ಶಾಸನವಾಗಲಿದೆ* ಎಂದು CITU ಕರ್ನಾಟಕ ರಾಜ್ಯಾಧ್ಯಕ್ಷರಾದ ಮೀನಾಕ್ಷಿ ಸುಂದರಂರವರು ತೀವ್ರ ಆತಂಕ ವ್ಯಕ್ತಪಡಿಸಿದರು._ಕಾರ್ಮಿಕ ಸಂಹಿತೆಗಳ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಕಳೆದ 4 ದಿನಗಳಿಂದ ದ.ಕ.ಜಿಲ್ಲೆಯಾದ್ಯಂತ ಸಂಚರಿಸಿದ ಪಾದಯಾತ್ರೆಗಳು ಇಂದು ಮಂಗಳೂರಿನ ಹೃದಯಭಾಗದಲ್ಲಿ ಸಮಾಪನಗೊಂಡಿದ್ದು,ಅದರ ಭಾಗವಾಗಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅವರು,ಈ ಮಾತುಗಳನ್ನು ಹೇಳಿದರು._ಮುಂದುವರಿಸುತ್ತಾ ಅವರು, *ಕೇಂದ್ರ ಸರಕಾರವು  ಜನದ್ರೋಹಿ ಸಂಹಿತೆಗಳನ್ನು ಜಾರಿಗೊಳಿಸಿದರೆ, ರಾಜ್ಯದ ಕಾಂಗ್ರೆಸ್ ಸರಕಾರವೂ ಕೂಡ ಅದಕ್ಕೆ ಪೂರಕವಾಗಿ ಕರಡು ನಿಯಮಾವಳಿಗಳನ್ನು ರೂಪಿಸಲು ಹೊರಟಿರುವ ಮೂಲಕ ಕಾರ್ಮಿಕ ವರ್ಗದ ವಿರುದ್ದ ದ್ವೇಷ ಸಾಧಿಸುವುದರಲ್ಲಿ ಬಿಜೆಪಿ ಕಾಂಗ್ರೆಸ್ ಒಂದೇ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ.ಬೀಜ ಮಸೂದೆ,ವಿದ್ಯುತ್ ಮಸೂದೆಗಳಂತಹ ಕರಾಳ ಶಾಸನಗಳನ್ನು ಜಾರಿಗೆ ತರುವ ಮೂಲಕ ರೈತಾಪಿ ಜನತೆಯ ಬದುಕನ್ನು ಕೂಡ ದುಸ್ತರಗೊಳಿಸಿದೆ.ಉದ್ಯೋಗ ಖಾತ್ರಿ ಯೋಜನೆಯ ಹಣಕಾಸಿನ ಹೊರೆಯನ್ನು ರಾಜ್ಯ ಸರಕಾರಗಳ ಮೇಲೆ ವರ್ಗಾಯಿಸುವ ಮೂಲಕ ಗ್ರಾಮೀಣ ಜನತೆಯ ಉಸಿರಾಗಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನೇ ಕತ್ತು ಹಿಸುಕಿ ಸಾಯಿಸಲು ಹೊರಟಿದೆ* ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.ಪ್ರಾಸ್ತಾವಿಕವಾಗಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, *ಸಂಹಿತೆಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೇಶದ ಕಾರ್ಮಿಕ ವರ್ಗಕ್ಕೆ ಭಾರೀ ದ್ರೋಹವೆಸಗಿದೆ.ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನದ ಮೂಲಕ ಸಮರಶೀಲ ಹೋರಾಟ ನಡೆಸಿದ ದೇಶದ ಕಾರ್ಮಿಕ ವರ್ಗ ಇಂದು ಮತ್ತೆ ದೇಶದ ಉಳಿವಿಗಾಗಿ, ಜನತೆಯ ಬದುಕಿನ ರಕ್ಷಣೆಗಾಗಿ ಆಳುವ ವರ್ಗದ ಆಕ್ರಮಣಕಾರಿ ನೀತಿಗಳನ್ನು ರೈತಾಪಿ ಜನತೆಯ ಜೊತೆಗೂಡಿ ಹಿಮ್ಮೆಟ್ಟಿಸಬೇಕಾಗಿದೆ* ಎಂದು ಹೇಳಿದರು.ಸಭೆಯ ಅಧ್ಯಕ್ಷತೆಯನ್ನು ವಹಿಸಿದ CITU ದ.ಕ.ಜಿಲ್ಲಾಧ್ಯಕ್ಷರಾದ ಬಿ‌ ಎಂ ಭಟ್ ರವರು ಮಾತನಾಡಿ *ಕಳೆದ 12 ವರ್ಷಗಳಲ್ಲಿ ದೇಶದ ಸಂಪತ್ತನ್ನು ಸಂಪೂರ್ಣವಾಗಿ  ಲೂಟಿ ಮಾಡಿ ಎಲ್ಲಾ ಕ್ಷೇತ್ರವನ್ನು ಕಾರ್ಪೊರೇಟ್ ಕಂಪೆನಿಗಳಿಗೊಪ್ಪಿಸಿದ ನರೇಂದ್ರ ಮೋದಿ ಸರಕಾರವು ಈಗ ಮತ್ತೆ ಜಾತಿ ಧರ್ಮದ ರಾಜಕಾರಣ ನಡೆಸಿ ದೇಶದ ಜನತೆಯನ್ನು ವಿಭಜಿಸುವ ಹುನ್ನಾರ ನಡೆಸುತ್ತಿದೆ. ಜನತೆ ತಮ್ಮ‌ ಬದುಕಿನ ಬಗ್ಗೆ ಚಿಂತಿಸುವ ಬದಲು ಅನಾವಶ್ಯಕ ವಿಚಾರಗಳನ್ನು ಚರ್ಚಿಸುವ ಮೂಲಕ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದೆ.ಸಂಹಿತೆಗಳ  ಜಾರಿಯ ಮೂಲಕ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ* ಎಂದು ಹೇಳಿದರು. _ವೇದಿಕೆಯಲ್ಲಿ ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರರಾದ ಜೆ ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೋಟು,ವಸಂತ ಆಚಾರಿ, ಯಾದವ ಶೆಟ್ಟಿ, ಪದ್ಮಾವತಿ ಶೆಟ್ಟಿ, ರಮಣಿ ಮೂಡಬಿದ್ರೆ, CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ನೋಣಯ್ಯ ಗೌಡರವರು ಉಪಸ್ಥಿತರಿದ್ದರು._ _ಪ್ರಾರಂಭದಲ್ಲಿ ಅಗಲಿದ ಕಾರ್ಮಿಕ ಚಳುವಳಿಯ ಹಿರಿಯ ಚೇತನ, AITUC ರಾಜ್ಯ ನಾಯಕರಾದ ಅನಂತ ಸುಬ್ಬರಾವ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.ಜಿಲ್ಲೆಯಾದ್ಯಂತ 175 ಕಿ ಮೀ.ನಷ್ಟು ಕ್ರಮಿಸಿದ 4 ಪಾದಯಾತ್ರೆಗಳ ಪ್ರಮುಖ ನಾಯಕರಾದ ರಾಧಾ ಮೂಡಬಿದ್ರೆ, ನೋಣಯ್ಯ ಗೌಡ,ಬಿ ಕೆ ಇಮ್ತಿಯಾಜ್,ಈಶ್ವರಿ ಪದ್ಮುಂಜ, ರೋಹಿದಾಸ್,ರಮೇಶ್ ಉಳ್ಳಾಲ, ರವಿಚಂದ್ರ ಕೊಂಚಾಡಿ, ಜಯಶ್ರೀ, ಲೋಲಾಕ್ಷಿ ಬಂಟ್ವಾಳ, ಶ್ಯಾಮರಾಜ ಪಟ್ರಮೆ,ಪ್ರಮೋದಿನಿ ಕಲ್ಲಾಪು, ರಜಾಕ್ ಮುಡಿಪು,ಜಯಲಕ್ಷ್ಮಿ, ತಯ್ಯುಬ್ ಬೆಂಗರೆ,ಸಾಧಿಕ್ ಮುಲ್ಕಿ, ಶ್ರೀನಾಥ್ ಕಾಟಿಪಳ್ಳ, ಪ್ರಮೀಳಾ ಶಕ್ತಿನಗರರವರನ್ನು ಕೆಂಪು ಗುಲಾಬಿ ನೀಡುವ ಮೂಲಕ ಗೌರವಿಸಲಾಯಿತು. 4 ಪಾದಯಾತ್ರೆಗಳು ನಗರದ ಅಂಬೇಡ್ಕರ್ ವೃತ್ತದ ಬಳಿಯಲ್ಲಿ ಸಮಾಪನಗೊಂಡು,ಬಳಿಕ  ಮೆರವಣಿಗೆಯ ಮೂಲಕ ಕ್ಲಾಕ್ ಟವರ್ ಬಳಿಯತ್ತ ಸಾಗಲಾಯಿತು._

ಪ್ರಾದೇಶಿಕ ವಾರ್ತೆಗಳು

ಎಐಕೆಎಂಸಿಸಿ ಪುತ್ತೂರು ತಾಲೂಕು ಇದರ ಅಧ್ಯಕ್ಷರಾಗಿ ಅಬೂಬಕ್ಕರ್ ಮುಲಾರ್ ಆಯ್ಕೆ

ಅಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಟ್ ರಲ್ ಸೆಂಟರ್ AIKMCC ಪುತ್ತೂರು ತಾಲೂಕು ಇದರ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಅಬೂಬಕ್ಕರ್ ಮುಲಾರ್ ಆಯ್ಕೆಯಾಗಿದ್ದಾರೆ

ಪ್ರಾದೇಶಿಕ ವಾರ್ತೆಗಳು

ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ರಾಜಕೀಯ ಮುಂದಾಳು, ಉದ್ಯಮಿ ಅಬೂಬಕ್ಕರ್ ಮೂಲಾರ್

2025ನೇ ರಾಜ್ಯೋತ್ಸವಪ್ರಶಸ್ತಿ ಪುರಸ್ಕೃತಅಬುಬಕ್ಕರ್ ಮುಲಾರ್1967ನೇ ಜುಲೈ 17ರಂದು ಪುತ್ತೂರು ತಾಲೂಕು ಮುಂಡೂರು ಗ್ರಾಮದ ಮುಲಾರ್ಮನೆತನದಇದಿನಬ್ಬ.ಜೈನಬ. ದಂಪತಿಗಳಎರಡನೆಯ ಪುತ್ರನಾಗಿವೃತ್ತಿಯಲ್ಲಿಕೃಷಿಕ‌.ಹಾಗುಬೋರ್ವೆಲ್ಉದ್ಯಮ1995 ರಲ್ಲಿಸ್ಥಾಪಿಸಿಸತತ 30ವರ್ಷಗಳ ಸಮಾಜ.ಸೇವೆಯ.ಮುಖಾಂತರ ಸಾರ್ವಜನಿಕ. ಪರಿಚಯಸ್ಥಗಿದ್ದು1990ರಲ್ಲಿನವೋದಯ ಯುವಕ ಮಂಡಲ ಮುಂಡೂರುಇದರ ಉಪಾಧ್ಯಕ್ಷರಾಗಿ👉 ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳಕಂಬಳಸಮಿತಿಯ ಸದಸ್ಯರಾಗಿಹಿರಿಯರ ಕಾಲದಿಂದಲೇ ಕಂಬಳ.ಪ್ರಸಸ್ಥಿ. ವಿಜೇತ ಕೋಣಗಳಮಾಲೀಕರ. ಕುಟುಂಬಸ್ಥರಾಗಿ.*👉 ಪುತ್ತೂರು ಮಾಲಿಂಗೇಶ್ವರದೇವಸ್ಥಾನದಉಚಿತ.ಬೋರ್ವೆಲ್ ಕೊರೆಸಿ.ಎದುರಿನ.ಗದ್ದೆಹಾಗೂ.ರಥ ಬೀದಿಗೆ ಮಣ್ಣು ಹಾಕಿ.ಸಮತಟ್ಟುಮಾಡಿಕೊಟ್ಟವವರಾಗಿದ್ದು👉2017.ರಲ್ಲಿ ಟ್ರಸ್ಟ್ ಮುಖಾಂತರಖಾಸಗಿ.ಉಚಿತ. ಅಂಬುಲೆನ್ಸ್. ಬಿಡುಗಡೆ.👉ಕಳೆದ ಹತ್ತು ವರ್ಷಗಳಲ್ಲಿ. ಕುಡಿಯುವನೀರಿಗೆ ಅಭಾವವಾದಾಗಗ್ರಾಮಾಂತರ ಪ್ರದೇಶದ.ಸರ್ವಧರ್ಮೀಯರಮನೆಬಾಗಿಲಿಗೆಟೇಂಕರ್ ಮೂಲಕಉಚಿತ.ನೀರು.ವಿತರಣೆ*👉ಕಾರುಣ್ಯ ಸೇವಾ ಟ್ರಸ್ಟ್ ಮಂಗಳೂರು ಇದರ ಸದಸ್ಯರಾಗಿ. ಉಚಿತ ವೈದ್ಯಕೀಯ ಸೇವೆ 👉 ವೈದ್ಯರುಗಳ ಪ್ರತಿಭಟನೆಯ ಸಮಯದಲ್ಲಿ ಹಲವಾರು ಜನರನ್ನು ತುರ್ತು ಚಿಕಿತ್ಸಾ ಸಂದರ್ಭದಲ್ಲಿಆಂಬುಲೆನ್ಸ್. ಮುಖಾಂತರ ಉಚಿತವಾಗಿಜಿಲ್ಲಾ ಆಸ್ಪತ್ರೆಗಳಿಗೆ. ದಾಖಲಿಸಿದವರಾಗಿ 👉AIKMCC.ಪುತ್ತೂರು ತಾಲೂಕುಅಧ್ಯಕ್ಷನಾಗಿರೋಗಿಗಳಿಗೆ ಉಚಿತ ಆಂಬುಲೆನ್ಸ್ಮುಖಾಂತರ ವೈದ್ಯಕೀಯ ನೆರವು.👉 ಮಡಿಕೇರಿ ಜೋಡುಪಲ್ಲ.ದುರಂತ. ಭೂಮಿಯಲ್ಲಿಹಾಗೂ ಹಲವಾರು ನೆರೆ ದುರಂತ ಸಮಯದಲ್ಲಿಅಧಿಕಾರಿಗಳೊಂದಿಗೆ. ಸಂಘಟನೆಗಳ ಉಸ್ತುವಾರಿ ವಹಿಸಿಸಹಕರಿಸಿದ ಸಂದರ್ಭಸರಕಾರ. ಜಿಲ್ಲಾಡಳಿತ. ರಂಗ ಸಂಸ್ಥೆಗಳಿಂದ ನಿಸ್ವಾರ್ಥ ಸೇವಾ ಪ್ರಶಸ್ತಿ ಪಡೆದವರಾಗಿ 👉ಲಾಕ್.ಡೌನ್.ಸಮಯದಲ್ಲಿ ಸಂಕಷ್ಟದಲ್ಲಿರುವವರಿಗೆ.ಆಹಾರ ಕಿಟ್ಟುಮತ್ತು. ವಾಹನದ ಬಾಡಿಗೆ.ರಹಿತಮೆಡಿಸಿನ್ ಸಪ್ಲೈ.*👉 ಲಾಕ್ ಡೌನ್ ಸಮಯದಲ್ಲಿಎಲ್ಲಾ ಬಟ್ಟೆ ಅಂಗಡಿಗಳು ಮುಟ್ಟಿದ ಸಮಯದಲ್ಲಿಎಲ್ಲಾ. ಧರ್ಮದವರಿಗೂ ಶವ ಸಂಸ್ಕಾರದಭಟ್ಟೆ. ಶುಚಿತ್ವ ಸಾಮಗ್ರಿ.ಸೇಕರಿಸಿಉಚಿತವಾಗಿ ಮರಣದ ಮನೆಗೆರವಾನಿಸಿದವರಾಗಿದ್ದು👉ಕೊರೋನಾ ಸಮಯದಲ್ಲಿಮರಣ.ಹೊಂದಿದ.ಶವ ಸಂಸ್ಕಾರಕ್ಕೆಮನೆಯವರು ಕುಟುಂಬಸ್ಥರು ಹಿಂಜರಿಯುತ್ತಿದ್ದಸಮಯದಲ್ಲಿಸಂಘ ಸಂಸ್ಥೆಗಳ ನೆರವಿನೊಂದಿಗೆಆಯ ಧರ್ಮಗಳಧಾರ್ಮಿಕ ವಿಧಿಯಂತೆಶವ.ಸಂಸ್ಕಾರಮಾಡಿದ. ಜವಾಬ್ದಾರಿ ವಹಿಸಿದವರಾಗಿದ್ದು 👉ಜಿಲ್ಲೆಯಾದ್ಯಂತರಕ್ತದಾನಿಗಳನ್ನುಮನವೊಲಿಸಿಹಲವಾರು.ರಕ್ತದಾನ ಶಿಬಿರಗಳನ್ನುಏರ್ಪಡಿಸಿ. ಬ್ಲಡ್ ಬ್ಯಾಂಕುಗಳಿಗೆ ರಕ್ತ ಸಂಗ್ರಹಿಸಿ.ಹಲವಾರು ರೋಗಿಗಳಿಗೆ.ರಕ್ತ.ನೀಡಿ.ಸಹಕರಿಸುತ್ತಿದ್ದು.👉ಜಿಲ್ಲಾ ಕಾಂಗ್ರೆಸ್ ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿಯಾಗಿ.ಹಲವಾರು ಕಾರ್ಮಿಕರಿಗೆಕಾರ್ಮಿಕ ಕಾರ್ಡ್ ನೀಡಲು.ತನ್ನ ಸಂಸ್ಥೆಯ ಮುಖಾಂತರ. ಕಾರ್ಮಿಕ. ಗುರುತು ದೃಡೀಕರಣಪತ್ರ.ನೀಡಿ. ಸಹಕರಿಸುವವರಾಗಿದ್ದು👉ಲಯನ್ಸ್ ಕ್ಲಬ್ ಪುತ್ತೂರ್ದದ ಮುತ್ತು. ಇದರ ಸದಸ್ಯರಾಗಿ.👉ತುಳು ಕೂಟಪುತ್ತೂರುತಾಲೋಕುಇದರ.ಗುರಿಕಾರಾಗಿ.ಜಿಲ್ಲೆಹಾಗುತಾಲೂಕು ಜಿಲ್ಲಾಮಟ್ಟದ ಹಲವಾರು ತುಳು ಪಂಥ ಕಾರ್ಯಕ್ರಮಗಳಲ್ಲಿಬಹುಮಾನ ಪಡೆದಿದ್ದು. 👉ಕಲಾವಿದನಾಗಿಯುವಜನ ಒಕ್ಕೂಟದ ಸಮಿತಿ ಸದಸ್ಯರಾಗಿ. ಹಲವಾರು ಯುವಜನ. ಕೂಟಗಳಲ್ಲಿ ಭಾಗವಹಿಸುತ್ತಿದ್ದು 👉ಸರಕಾರಿ‌.ಹಾಗೂ ಖಾಸಗಿ. ಶಾಲೆಗಳು ಸಂಘ-ಸಂಸ್ಥೆಗಳು ನಡೆಸುವ. ರಾಜ್ಯ ಜಿಲ್ಲೆ ಹಾಗೂ ವಳಮಟ್ಟದಕ್ರೀಡಾಕೂಟಗಳಆಯೋಜಕರ ಸಮಿತಿಯಲ್ಲಿ ಕೈಜೋಡಿಸಿ ಹಲವಾರುಕ್ರೀಡಾಕೂಟಗಳಿಗೆ ಸಹಕಾರ ನೀಡಿರುತ್ತಿದ್ದು.👉 ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ.ನೀಡಿಹಲವಾರು ಬಡಪ್ರತಿಭಾವಂತವಿದ್ಯಾರ್ಥಿಗಳನ್ನು.ಮನ.ವೊಲಿಸಿ.ನರ್ಸಿಂಗ್.ಮೆಡಿಕಲ್ಇತರ.ವೈದ್ಯಕೀಯ.ಸೇವೆಗೆ ಸಹಾಯದನ ನೀಡುತ್ತಿದ್ದು.👉.2019 ರಲ್ಲಿಕೈಗಾರಿಕಾ ಸಂಸ್ಥೆಯನ್ನು ಸ್ಥಾಪಿಸಿ. ಹಲವಾರು ಬಡ ಯುವಕರಿಗೆ.ಉಚಿತವಾಗಿ ವೆಲ್ಡಿಂಗ್. ಮೆಕಾನಿಕಲ್. ಸ್ವಯಂಉದ್ಯೋಗ.ತರಬೇತಿನೀಡಿ ಕೈಗಾರಿಕೆಗೆ ಬೇಕಾದಸಲಕರಣೆಗಳನ್ನುಉಚಿತವಾಗಿ ಕೊಟ್ಟು.ಸ್ವಯಂ ಉದ್ಯೋಗಿಗಕ್ಕೆಪ್ರೋತ್ಸಾಹಿಸುತ್ತಿದ್ದು👉 ಪುತ್ತೂರು ತಾಲೂಕು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯನಾಗಿ👉 ಪ್ರಸ್ತುತ ಮುಂಡೂರು ಅಜ್ಜಿ ಕಟ್ಟೆ ಮಸೀದಿಯ ಅಧ್ಯಕ್ಷನಾಗಿಮುಕ್ವೆ ಮಸೀದಿಯ ಕೋಶಾಧಿಕಾರಿಯಾಗಿ.ಪುತ್ತೂರು ರೇಂಜಿ ವ್ಯಾಪ್ತಿಯ ಮಸೀದಿ ಮದ್ರಸಗಳ ಅಸೋಸಿಯೇಷನ್ ಅಧ್ಯಕ್ಷರಾಗಿಕಾರ್ಯನಿರ್ವಹಿಸುತ್ತಿದ್ದೇನೆ👉 ಜಮಿಹ್ಯಿತ್ತುಲ್ ಪಲಾವ್. ಪಲಾಹ್ ಪುತ್ತೂರು ಘಟಕದ ಸದಸ್ಯನಾಗಿ👉ರಾಜ್ಯ ರೈತ ಸಂಘ.ಜಿಲ್ಲಾ.ಹಾಗೂತಾಲೂಕು ಮಟ್ಟದ ಸದಸ್ಯನಾಗಿ.👉 ಹಲವಾರುಸೌಹಾರ್ದ ಕೂಟ ಕಾರ್ಯಕ್ರಮಗಳನ್ನು. ಏರ್ಪಡಿಸಿಸುಮಾರು 32 ವರ್ಷಗಳಿಂದ ತುತ್ತೂರಿನಲ್ಲಿ ಈದ್ ಮಿಲಾದ್. ಹಾಗೂ ಹಲವಾರು.ದಾರ್ಮಿಕ. ಸೌಹಾರ್ದ ಕಾರ್ಯಕ್ರಮಗಳನ್ಪು. ಏರ್ಪಡಿಸುತ್ತಿದ್ದು👉 ಜಿಲ್ಲಾ.ಮದ್ರಸ.ಮಸೀದಿ. ಆಡಳಿತ ಸಮಿತಿಗಳ ಅಸೋಸಿಯೇಷನ್.ಇದರ.ಕಾರ್ಯದರ್ಶಿಯಾಗಿ👉 ಪುತ್ತೂರು ತಾಲೂಕು ಶಿರತ್ ಕಮಿಟಿ ಸದಸ್ಯನಾಗಿ👉ಕನ್ನಡ ಸೇನೆ ಕರ್ನಾಟಕಇದರ ಸದಸ್ಯರಾಗಿ👉ಜಾತ್ಯಾತೀತವಾಗಿ ಸಾಮಾಜಿಕ ಶೈಕ್ಷಣಿಕಕ್ಷೇತ್ರದಲ್ಲಿ ಗುರುತಿಸಿಕೊಂಡುಹಲವಾರು. ಬಡ ಹೆಣ್ಣು ಮಕ್ಕಳ ವಿವಾಹ. ಸೇವೆಗಳನ್ನುಮಾಡಿದವರಾಗಿದ್ದು2025ನೇ.ಕನ್ನಡ ರಾಜ್ಯೋತ್ಸವ.ತಾಲೋಕು ಪ್ರಶಸ್ತಿ.ಪುರಸ್ಕೃತರಾಗಿಜಿಲ್ಲೆ.ಹಾಗು.ರಾಜ್ಯಾದ್ಯಂತ ಸುಮಾರು 30.ಕ್ಕಿಂತಲೂಅಧಿಕ ಸಮಾಜ ಸೇವಾಸಂಘಟನೆಗಳಲ್ಲಿ ತೊಡಗಿಸಿನಿರ್ವಹಿಸುವ. ಸೇವಾ ವ್ಯಕ್ತಿತ್ವಕ್ಕೆ. ಸಾಕ್ಷಿಯಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

BREAKING NEWS: ಮಂಗಳೂರಲ್ಲಿ ಮಸಾಜ್ ಪಾರ್ಲರ್ ಸಂಪೂರ್ಣ ಮುಚ್ಚಿಲ್ಲವೇ?

ಮಂಗಳೂರು-ಮಂಗಳೂರಲ್ಲಿ ಮೆಸೇಜ್ ಪಾರ್ಲರ್ ಗಳು ಯುನಿಸೆಕ್ಸ್ ಸೆಲೂನ್ ಹೆಸರಲ್ಲಿ ಈಗಲೂ ಕೆಲವು ಕಡೆ ತಲೆ ಎತ್ತಿರುವ ಬಗ್ಗೆ ಸುದ್ದಿ ಬಂದಿದೆ. ಕೆಲವು ಕಡೆ ತೋರಿಕೆಗೆ ಯುನಿಸೆಕ್ಸ್ ಸೆಲೂನ್ ಒಳಗಡೆ ಮಸಾಜ್ ಪಾರ್ಲರ್. ಈ ಬಗ್ಗೆ ಮಂಗಳೂರಿನ ಹೋಟೆಲ್ ವೊಂದಕ್ಕೆ ಬಂದ ಗಿರಾಕಿಯೊಬ್ಬರು ಎಲ್ಲರ ಎದುರಲ್ಲೇ ಮಸಾಜ್ ಪಾರ್ಲರ್ ಮಾಲಕರಿಗೆ ಫೋನ್ ಮಾಡಿ ಲೌಡ್ ಸ್ಪೀಕರ್ ನಲ್ಲಿ ಮಾತಾಡಿದ ಬಗ್ಗೆ ಮಾಹಿತಿ ಬಂದಿದೆ.

ಪ್ರಾದೇಶಿಕ ವಾರ್ತೆಗಳು

ಬಂಟ್ಸ್ ಅಸೋಸಿಯೇಷನ್ ಪುಣೆ (ರಿ.) ಇದರ ವತಿಯಿಂದ 14ನೇ ವಾರ್ಷಿಕ ಸಮಾವೇಶ

ಬಂಟ್ಸ್ ಅಸೋಸಿಯೇಷನ್ ಪುಣೆ (ರಿ.) 14ನೇ ವಾರ್ಷಿಕ ಸಮಾವೇಶವನ್ನು ಫೆಬ್ರವರಿ 6, 2026 (ಶುಕ್ರವಾರ)ರಂದು ಮಧ್ಯಾಹ್ನ 2.30 ಗಂಟೆಯಿಂದ ಪುಣೆಯ ಬಾನೇರ್‍ನಲ್ಲಿರುವ ‘ಬಂಟರ ಭವನ’ದಲ್ಲಿ ಆಯೋಜಿಸಲಾಗಿದೆ.ಮರ್ಸಿಡಿಸ್ ಶೋರೂಮ್ ಸಮೀಪ, ಪುಣೆ-ಬೆಂಗಳೂರು ಹೆದ್ದಾರಿಯ ಬಾನೇರ್ ಪ್ರದೇಶದಲ್ಲಿರುವ ಬಂಟರ ಭವನದಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ ಬಂಟ ಸಮುದಾಯದ ಸದಸ್ಯರು ಹಾಗೂ ಸಾರ್ವಜನಿಕರು ಕುಟುಂಬ ಸಮೇತ ಭಾಗವಹಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 6 ಗಂಟೆಗೆ ಅಧಿಕೃತ ವಾರ್ಷಿಕ ಸಮಾರಂಭಕ್ಕೆ ಚಾಲನೆ ದೊರೆಯಲಿದೆ. ರಾತ್ರಿ 9 ಗಂಟೆಗೆ ಭೋಜನ ವ್ಯವಸ್ಥೆ ಮಾಡಲಾಗಿದೆ.ಸಮಾವೇಶದ ವಿಶೇಷ ಆಕರ್ಷಣೆಯಾಗಿ ಶ್ರೀ ಶಕ್ತಿ ಸಾಂಸ್ಕೃತಿಕ ತಂಡದ ಆಶ್ರಯದಲ್ಲಿ ‘ಸಾಮರ್ಥ ಕಲಾವೈಭವ’ ಎ0ಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಭಕ್ತಿ, ಶಕ್ತಿ ಹಾಗೂ ಸಂಸ್ಕೃತಿಯ ಸೊಗಡನ್ನು ಒಳಗೊಂಡ ಈ ಕಾರ್ಯಕ್ರಮವು ಪ್ರೇಕ್ಷಕರಿಗೆ ಮನಮುಗ್ಧಗೊಳಿಸುವ ಅನುಭವ ನೀಡಲಿದೆ ಎಂದು ಸಂಘದವರು ತಿಳಿಸಿದ್ದಾರೆ.ಕಾರ್ಯಕ್ರಮಕ್ಕೆ ಬಂಟ್ಸ್ ಅಸೋಸಿಯೇಷನ್ ಪುಣೆ ಅಧ್ಯಕ್ಷರಾದ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು ಅವರು ಅಧ್ಯಕ್ಷತೆ ವಹಿಸಲಿದ್ದು, ಬಂಟ್ಸ್ ಸಂಘ ಬೆಂಗಳೂರು ಅಧ್ಯಕ್ಷರಾದ ಸಿ.ಎ. ಅಶೋಕ್ ಶೆಟ್ಟಿ ಎ0. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಇದೇ ವೇಳೆ ಟೆಕ್ಕೋಥರ್ಮಾ ಗ್ರೂಪ್ ಆಫ್ ಇಂಡಸ್ಟ್ರೀಸ್, ಮುಂಬೈ ನಿರ್ದೇಶಕರಾದ ನಗ್ರಿಗುತ್ತು ವಿವೇಕ್ ಶೆಟ್ಟಿ ಹಾಗೂ ಬಂಟ್ಸ್ ಸಂಘ ಪುಣೆ ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರುಗುತ್ತು ಅವರು ಗೌರವಾನ್ವಿತ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.ಸಂಘದ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಡಾ. ಸುಧಾಕರ್ ಶೆಟ್ಟಿ ಹಾಗೂ ಸತೀಶ್ ರೈ ಕಲ್ಲಂಗಲಗುತ್ತು, ಗೌರವ ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ, ಗೌರವ ಖಜಾಂಚಿಯಾಗಿ ಮನೋಹರ್ ಶೆಟ್ಟಿ (ಸಿ.ಎ.), ಪಿಆರ್‍ಒ ಆಗಿ ಪ್ರದೀಪ್ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ.ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶ್ರೀಮತಿ ರೇಷ್ಮಾ ಆರ್. ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಶ್ರೀಮತಿ ಶರ್ಮಿಳಾ ಟಿ. ರೈ ಇದ್ದಾರೆ. ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಹಾಗೂ ಯುವ ಘಟಕ ಅಧ್ಯಕ್ಷರಾಗಿ ಅದೀಪ್ ಶೆಟ್ಟಿ ನೇತೃತ್ವ ವಹಿಸಿದ್ದಾರೆ.ಈ 14ನೇ ವಾರ್ಷಿಕ ಸಮಾವೇಶವು ಸಂಘಟನೆಯ ಚಟುವಟಿಕೆಗಳಿಗೆ ಹೊಸ ದಿಕ್ಕು ನೀಡುವುದರೊಂದಿಗೆ, ಸಾಂಸ್ಕೃತಿಕ ಏಕತೆಯ ವೇದಿಕೆಯಾಗಲಿದೆ ಎಂದು ಬಂಟ್ಸ್ ಅಸೋಸಿಯೇಷನ್ ಪುಣೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

BREAKING NEWS : ಅಜಿತ್ ಪವರ್ ಸೇರಿ 5 ಮಂದಿ ದುರಂತ ಸಾವು

ಮಹಾರಾಷ್ಟ: ಮಹಾರಾಷ್ಟ್ರ ಇಲ್ಲಿನ ಬಾರಾಮತಿ ಬಳಿ ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತ ಸಂಭವಿಸಿ ವಿಮಾನದಲ್ಲಿದ್ದ ಮಹಾರಾಷ್ಟ್ರದ ಪ್ರಭಾವಿ ನಾಯಕ, ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ (66 ವರ್ಷ) ಸಹಿತ 5 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ವಿಮಾನದಲ್ಲಿದ್ದ ಅಜಿತ್ ಪವರ್, ಇಬ್ಬರು ಪಿ.ಎ.ಗಳು, ಮತ್ತು ವಿಮಾನ ಪೈಲಟ್ ಸೇರಿದ್ದಾರೆ. ಮೃತದೇಹವನ್ನು ಬಾರಾಮತಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ನಾಳೆ ಅಂತ್ಯಸಂಸ್ಕಾರ ನಡೆಯಲಿದೆ. ಇಂದು ಬೆಳಿಗ್ಗೆ 8.30ಕ್ಕೆ ಮುಂಬಯಿಯಿಂದ ಹೊರಟ ವಿಮಾನ 9.12ಕ್ಕೆ ಬಾರಾಮತಿ ಬಳಿ ತಲುಪುತ್ತಿದ್ದಂತೆಯೇ ದಟ್ಟ ಮಂಜು ಮುಸುಕಿದ ವಾತಾವರಣವಿದ್ದ ಕಾರಣದಿಂದಾಗಿ ರನ್ ವೇ ಯಿಂದ ಸ್ವಲ್ಪವೇ ದೂರದಲ್ಲಿದ್ದ ವಿಮಾನ ಭೂ ಸ್ಪರ್ಶ ಮಾಡಲಾಗದೆ ಲ್ಯಾಡಿಂಗ್ ವೇಳೆ ಅಪಘಾತ ಘಟಿಸಿ ಈ ದುರಂತ ಸಂಭವಿಸಿದೆ. ಬಾರಾಮತಿಯಲ್ಲಿ ಚುನಾವಣಾ ಪ್ರಚಾರದ 2-3 ಕಡೆಗಳಲ್ಲಿ ಭಾಗವಹಿಸಬೇಕಾಗಿತ್ತು. ಅದಕ್ಕಾಗಿ ಅಜಿತ್ ಪವರ್ ಅವರು ಈ ನತದೃಷ್ಟ ವಿಮಾನದಲ್ಲಿ ತೆರಳಿದ್ದರು. ಆದರೆ, ಅಪಘಾತ ಸಂಭವಿಸಿ ಅಜಿತ್ ಪವಾರ್ ಸಾವನ್ನಪ್ಪಿದ್ದಾರೆ.ಈ ವಿಮಾನ ಅಪಘಾತಕ್ಕೆ ನಿರ್ದಿಷ್ಟ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಈ ಅಪಘಾತ ಹೇಗೆ ಸಂಭವಿಸಿದೆ ಇದಕ್ಕೆ ಕಾರಣಗಳು ಏನು? ಎಂಬುದರ ಬಗ್ಗೆ ತನಿಖೆಯಿಂದ ಇನ್ನಷ್ಟೇ ಗೊತ್ತಾಗಬೇಕಾಗಿದೆ. ಬ್ಲ್ಯಾಕ್ ಬಾಕ್ಸ್ ನ ಮೂಲಕ ನಿರ್ದಿಷ್ಟ ಕಾರಣವನ್ನು ತಿಳಿಯಲು ಪ್ರಯತ್ನ ಪಡಲಾಗುತ್ತಿದೆ. ಅಜಿತ್ ಪವರ್ ಅವರ ಈ ದುರಂತ ಸಾವಿಗೆ ಪ್ರಧಾನಿ ಮೋದಿ ಸಹಿತ ಗಣ್ಯಾರನೇಕರು ಸಂತಾಪ ಸೂಚಿಸಿದ್ದಾರೆ. ಮೋದಿ ಅವರು ಅಜಿತ್ ಪವಾರ್ ಅವರ ತಂದೆ, ಹಿರಿಯ ರಾಜಕಾರಣಿ ಶರದ್ ಪವಾರ್ ಅವರಿಗೆ ಫೋನ್ ಮಾಡಿ ಸಾಂತ್ವನ ಹೇಳಿದ್ದಾರೆ.ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ನಿಧನದ ಈ ದಿನ ಕರಾಳ ದಿನ. ಅವರ ಅಗಲುವಿಕೆಯ ಶೋಕವನ್ನು ನನ್ನಿಂದ ತಡೆಯಲಾಗುತ್ತಿಲ್ಲ.ಮಹಾರಾಷ್ಟ್ರದಲ್ಲಿ ಮಹಾನ್ ನಾಯಕರೊಬ್ಬರ ಯುಗಾಂತ್ಯವಾಗಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂತಾಪ ಸೂಚಿಸಿದ್ದಾರೆ.ವಿಮಾನ ದುರಂತದಿಂದ ಅಜಿತ್ ಪವಾರ್,ಅವರ ಇಬ್ಬರು ಪಿಎಗಳು.ಇಬ್ಬರು ವಿಮಾನ ಪೈಲೆಟ್ ಗಳು ಹೀಗೇ ಐದು ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕೃತ ವರದಿ ತಿಳಿಸಿದೆ ಅಜಿತ್ ಪವಾರ್ ಅವರ ನಿಧನಕ್ಕೆ ಇಂದು ವಿಧಾನಸಭೆಯಲ್ಲಿ ಸ್ಪೀಕರ್ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ ಸಂತಾಪ ಸೂಚಿಸಲಾಯಿತು

ಪ್ರಾದೇಶಿಕ ವಾರ್ತೆಗಳು

ಗಣರಾಜ್ಯೋತ್ಸವ ಭಾರತೀಯರಿಗೆ ಸ್ವಾಭಿಮಾನ, ಘನತೆ ತಂದು ಕೊಟ್ಟ ದಿನ— ದಿನಕರ ಡಿ. ಬಂಗೇರ

ಯೂತ್ ಕ್ಲಬ್ ಕೋಡಿಕಲ್ ಆಶ್ರಯದಲ್ಲಿ 77 ನೇ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವವನ್ನು ಮಂಗಳೂರಿನ ಕೋಡಿಕಲ್ ಯೂತ್ ಕ್ಲಬ್ ಆವರಣದಲ್ಲಿ 26/01/2026 ರಂದು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ NSCDF ಪ್ರಧಾನ ಕಾರ್ಯದರ್ಶಿ ದಿನಕರ್ ಡಿ.ಬಂಗೇರ ಮಾತನಾಡಿ, ಇಂದು ನಮ್ಮ ದೇಶಕ್ಕೆ ಸಂವಿಧಾನ ಸಮರ್ಪಣೆಯಾದ ದಿನ, ಇಂದು ಪ್ರಜಾಪ್ರಭುತ್ವ ಸಾರಿದ ದಿನ, ಭಾರತದ ಎಲ್ಲಾ ರಾಜ್ಯಗಳನ್ನು ಒಂದೇ ಚೌಕಟ್ಟಿನಲ್ಲಿ ಸೇರಿಸಿದ ಮಹತ್ವದ ದಿನ, ಗಣರಾಜ್ಯೋತ್ಸವ ಭಾರತೀಯರಿಗೆ ಸ್ವಾಭಿಮಾನ, ಘನತೆ, ಸಮಾನತೆ ಅಧಿಕೃತವಾಗಿ ತಂದುಕೊಟ್ಟ ದಿನ ಎಂದು ಹೇಳಿದ ಅವರು ಈ ದಿನವನ್ನು ಭಾರತೀಯಾರೆಲ್ಲರೂ ಶ್ರದ್ದೆ ಭಕ್ತಿಯಿಂದ ಆರಾಧಿಸಬೇಕಾದ ದಿನ, ಇಂತಹ ಮಹತ್ವ ಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸುವ ನಾವೆಲ್ಲರೂ ಧನ್ಯರು ಎಂದು ಹೇಳಿದರು.ಈ ಸಂದರ್ಭದಲ್ಲಿ ಯೂತ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಪುತ್ರನ್ ಕೋಡಿಕಲ್ ಮತ್ತು ಪ್ರಧಾನ ಕಾರ್ಯದರ್ಶಿ ಶಶಿಧರ್ ಅಮೀನ್ ಕೋಡಿಕಲ್ ಉಪಸ್ಥಿತರಿದ್ದರು.

Scroll to Top