BREAKING NEWS : ಅಜಿತ್ ಪವರ್ ಸೇರಿ 5 ಮಂದಿ ದುರಂತ ಸಾವು

118K Views 28 Jan 2026

ಮಹಾರಾಷ್ಟ: ಮಹಾರಾಷ್ಟ್ರ ಇಲ್ಲಿನ ಬಾರಾಮತಿ ಬಳಿ ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತ ಸಂಭವಿಸಿ ವಿಮಾನದಲ್ಲಿದ್ದ ಮಹಾರಾಷ್ಟ್ರದ ಪ್ರಭಾವಿ ನಾಯಕ, ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ (66 ವರ್ಷ) ಸಹಿತ 5 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ವಿಮಾನದಲ್ಲಿದ್ದ ಅಜಿತ್ ಪವರ್, ಇಬ್ಬರು ಪಿ.ಎ.ಗಳು, ಮತ್ತು ವಿಮಾನ ಪೈಲಟ್ ಸೇರಿದ್ದಾರೆ. ಮೃತದೇಹವನ್ನು ಬಾರಾಮತಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ನಾಳೆ ಅಂತ್ಯಸಂಸ್ಕಾರ ನಡೆಯಲಿದೆ.


ಇಂದು ಬೆಳಿಗ್ಗೆ 8.30ಕ್ಕೆ ಮುಂಬಯಿಯಿಂದ ಹೊರಟ ವಿಮಾನ 9.12ಕ್ಕೆ ಬಾರಾಮತಿ ಬಳಿ ತಲುಪುತ್ತಿದ್ದಂತೆಯೇ ದಟ್ಟ ಮಂಜು ಮುಸುಕಿದ ವಾತಾವರಣವಿದ್ದ ಕಾರಣದಿಂದಾಗಿ ರನ್ ವೇ ಯಿಂದ ಸ್ವಲ್ಪವೇ ದೂರದಲ್ಲಿದ್ದ ವಿಮಾನ ಭೂ ಸ್ಪರ್ಶ ಮಾಡಲಾಗದೆ ಲ್ಯಾಡಿಂಗ್ ವೇಳೆ ಅಪಘಾತ ಘಟಿಸಿ ಈ ದುರಂತ ಸಂಭವಿಸಿದೆ. ಬಾರಾಮತಿಯಲ್ಲಿ ಚುನಾವಣಾ ಪ್ರಚಾರದ 2-3 ಕಡೆಗಳಲ್ಲಿ ಭಾಗವಹಿಸಬೇಕಾಗಿತ್ತು. ಅದಕ್ಕಾಗಿ ಅಜಿತ್ ಪವರ್ ಅವರು ಈ ನತದೃಷ್ಟ ವಿಮಾನದಲ್ಲಿ ತೆರಳಿದ್ದರು. ಆದರೆ, ಅಪಘಾತ ಸಂಭವಿಸಿ ಅಜಿತ್ ಪವಾರ್ ಸಾವನ್ನಪ್ಪಿದ್ದಾರೆ.ಈ ವಿಮಾನ ಅಪಘಾತಕ್ಕೆ ನಿರ್ದಿಷ್ಟ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಈ ಅಪಘಾತ ಹೇಗೆ ಸಂಭವಿಸಿದೆ ಇದಕ್ಕೆ ಕಾರಣಗಳು ಏನು? ಎಂಬುದರ ಬಗ್ಗೆ ತನಿಖೆಯಿಂದ ಇನ್ನಷ್ಟೇ ಗೊತ್ತಾಗಬೇಕಾಗಿದೆ. ಬ್ಲ್ಯಾಕ್ ಬಾಕ್ಸ್ ನ ಮೂಲಕ ನಿರ್ದಿಷ್ಟ ಕಾರಣವನ್ನು ತಿಳಿಯಲು ಪ್ರಯತ್ನ ಪಡಲಾಗುತ್ತಿದೆ. ಅಜಿತ್ ಪವರ್ ಅವರ ಈ ದುರಂತ ಸಾವಿಗೆ ಪ್ರಧಾನಿ ಮೋದಿ ಸಹಿತ ಗಣ್ಯಾರನೇಕರು ಸಂತಾಪ ಸೂಚಿಸಿದ್ದಾರೆ. ಮೋದಿ ಅವರು ಅಜಿತ್ ಪವಾರ್ ಅವರ ತಂದೆ, ಹಿರಿಯ ರಾಜಕಾರಣಿ ಶರದ್ ಪವಾರ್ ಅವರಿಗೆ ಫೋನ್ ಮಾಡಿ ಸಾಂತ್ವನ ಹೇಳಿದ್ದಾರೆ.ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ನಿಧನದ ಈ ದಿನ ಕರಾಳ ದಿನ. ಅವರ ಅಗಲುವಿಕೆಯ ಶೋಕವನ್ನು ನನ್ನಿಂದ ತಡೆಯಲಾಗುತ್ತಿಲ್ಲ.ಮಹಾರಾಷ್ಟ್ರದಲ್ಲಿ ಮಹಾನ್ ನಾಯಕರೊಬ್ಬರ ಯುಗಾಂತ್ಯವಾಗಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂತಾಪ ಸೂಚಿಸಿದ್ದಾರೆ.
ವಿಮಾನ ದುರಂತದಿಂದ ಅಜಿತ್ ಪವಾರ್,ಅವರ ಇಬ್ಬರು ಪಿಎಗಳು.ಇಬ್ಬರು ವಿಮಾನ ಪೈಲೆಟ್ ಗಳು ಹೀಗೇ ಐದು ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕೃತ ವರದಿ ತಿಳಿಸಿದೆ

ಅಜಿತ್ ಪವಾರ್ ಅವರ ನಿಧನಕ್ಕೆ ಇಂದು ವಿಧಾನಸಭೆಯಲ್ಲಿ ಸ್ಪೀಕರ್ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ ಸಂತಾಪ ಸೂಚಿಸಲಾಯಿತು

Read More News

ಇಂದು ಸಂಜೆ (ಸೆ.13 )ಬಿ.ಸಿ. ರೋಡ್ ನಲ್ಲಿ ನಡೆದ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹುಟ್ಟುಹಬ್ಬದ 75ರ ಸಂಭ್ರಮ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮ.ಜೊತೆಗೆ, ಪ್ರಜ್ಞಾಶ್ರಮದ ವಿದ್ಯಾರ್ಥಿಗಳಿಗೆ ರೋಶನ್ ರೈ ನೇತೃತ್ವದಲ್ಲಿ ಭೋಜನ ವ್ಯವಸ್ಥೆ. ಮಾನವೀಯ ಮೌಲ್ಯಗಳಿಗೆ ಜೀವ ತುಂಬಿದ ಬೇಬಿಯಣ್ಣನ ಬರ್ತ್ ಡೇ.

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top