ಗಣರಾಜ್ಯೋತ್ಸವ ಭಾರತೀಯರಿಗೆ ಸ್ವಾಭಿಮಾನ, ಘನತೆ ತಂದು ಕೊಟ್ಟ ದಿನ— ದಿನಕರ ಡಿ. ಬಂಗೇರ

96.5K Views 26 Jan 2026

ಯೂತ್ ಕ್ಲಬ್ ಕೋಡಿಕಲ್ ಆಶ್ರಯದಲ್ಲಿ 77 ನೇ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವವನ್ನು ಮಂಗಳೂರಿನ ಕೋಡಿಕಲ್ ಯೂತ್ ಕ್ಲಬ್ ಆವರಣದಲ್ಲಿ 26/01/2026 ರಂದು ಸಂಭ್ರಮ ಸಡಗರದಿಂದ ಆಚರಿಸಲಾಯಿತು.


ಕಾರ್ಯಕ್ರಮವನ್ನು ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ NSCDF ಪ್ರಧಾನ ಕಾರ್ಯದರ್ಶಿ ದಿನಕರ್ ಡಿ.ಬಂಗೇರ ಮಾತನಾಡಿ, ಇಂದು ನಮ್ಮ ದೇಶಕ್ಕೆ ಸಂವಿಧಾನ ಸಮರ್ಪಣೆಯಾದ ದಿನ, ಇಂದು ಪ್ರಜಾಪ್ರಭುತ್ವ ಸಾರಿದ ದಿನ, ಭಾರತದ ಎಲ್ಲಾ ರಾಜ್ಯಗಳನ್ನು ಒಂದೇ ಚೌಕಟ್ಟಿನಲ್ಲಿ ಸೇರಿಸಿದ ಮಹತ್ವದ ದಿನ, ಗಣರಾಜ್ಯೋತ್ಸವ ಭಾರತೀಯರಿಗೆ ಸ್ವಾಭಿಮಾನ, ಘನತೆ, ಸಮಾನತೆ ಅಧಿಕೃತವಾಗಿ ತಂದುಕೊಟ್ಟ ದಿನ ಎಂದು ಹೇಳಿದ ಅವರು ಈ ದಿನವನ್ನು ಭಾರತೀಯಾರೆಲ್ಲರೂ ಶ್ರದ್ದೆ ಭಕ್ತಿಯಿಂದ ಆರಾಧಿಸಬೇಕಾದ ದಿನ, ಇಂತಹ ಮಹತ್ವ ಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸುವ ನಾವೆಲ್ಲರೂ ಧನ್ಯರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯೂತ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಪುತ್ರನ್ ಕೋಡಿಕಲ್ ಮತ್ತು ಪ್ರಧಾನ ಕಾರ್ಯದರ್ಶಿ ಶಶಿಧರ್ ಅಮೀನ್ ಕೋಡಿಕಲ್ ಉಪಸ್ಥಿತರಿದ್ದರು.

Scroll to Top