38ನೇ ಅಂತರ್ ವಿವಿ ಆಗ್ನೇಯ ವಲಯದ ಸಾಂಸ್ಕೃತಿಕ ಯುವಜನೋತ್ಸವ: ರನ್ನರ್ ಅಪ್. ಗೆಲುವಿನಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಿಂಹಪಾಲು

97.5K Views 24 Dec 2024

ಮೂಡುಬಿದಿರೆ: ಬೆಂಗಳೂರಿನ ಕ್ರೆöÊಸ್ಟ್ ವಿವಿಯಲ್ಲಿ ನಡೆದ 38ನೇ ಅಂತರ್ ವಿವಿ ಆಗ್ನೇಯ ವಲಯದ ಸಾಂಸ್ಕೃತಿಕ ಯುವಜನೋತ್ಸವ – ‘ಕ್ರೆಸೆಂಡೋ’ದಲ್ಲಿ ಮಂಗಳೂರು ವಿವಿ ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಸಂಗೀತ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗಳಿಸಿ, ಸಮಗ್ರ ವಿಭಾಗದಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ಜಾನಪದ ವಾದ್ಯ ಮೇಳ ಪ್ರಥಮ, ಭಾರತೀಯ ಶಾಸ್ತಿçÃಯ ಸ್ವರ ವಾದ್ಯ(ಬಾನ್ಸೂರಿ)ದಲ್ಲಿ ಪ್ರಥಮ, ಸಮೂಹ ಗೀತೆಯಲ್ಲಿ ದ್ವಿತೀಯ, ಜಾನಪದ ನೃತ್ಯ (ಗುಂಪು) ದ್ವಿತೀಯ, ಶಾಸ್ತಿçÃಯ ಗಾಯನ ವೈಯಕ್ತಿಕದಲ್ಲಿ ದ್ವಿತೀಯ, ಶಾಸ್ತಿçÃಯ ನೃತ್ಯದಲ್ಲಿ ತೃತೀಯ, ಭಾರತೀಯ ಲಘು ಶಾಸ್ತಿçÃಯ ಸಂಗೀತದಲ್ಲಿ ತೃತೀಯ, ಪಾಶ್ಚಾತ್ಯ ವಾದ್ಯ ವೈಯಕ್ತಿಕ- ಐದನೇ ಸ್ಥಾನ, ಪಾಶ್ಚಾತ್ಯ ಗಾಯನ ವೈಯಕ್ತಿಕ ಐದನೇ ಸ್ಥಾನ, ಪಾಶ್ಚಾತ್ಯ ಗಾಯನ ಸಮೂಹ ಐದನೇ ಸ್ಥಾನ, ಏಕಾಂಕ ನಾಟಕದಲ್ಲಿ ಐದನೇ ಸ್ಥಾನ ಪಡೆದು ರನ್ರ‍್ಸ್ ಅಪ್ ಪಟ್ಟ ತನ್ನದಾಗಿಸಿಕೊಂಡಿತು.
ರಾಷ್ಟç ಮಟ್ಟಕ್ಕೆ ಆಯ್ಕೆಯಾದ ಆಳ್ವಾಸ್ ವಿದ್ಯಾರ್ಥಿಗಳು
ಭಾರತೀಯ ಶಾಸ್ತಿçÃಯ ಸ್ವರ ವಾದ್ಯ(ಬಾನ್ಸೂರಿ)ದಲ್ಲಿ ಸ್ವಯಂ ಪ್ರಕಾಶ ಪ್ರಭು ಪ್ರಥಮ, ಶಾಸ್ತಿçÃಯ ಗಾಯನ ವೈಯಕ್ತಿಕದಲ್ಲಿ ಅಶ್ವಿಜ ಉಡುಪ ದ್ವಿತೀಯ, ಭಾರತೀಯ ಲಘು ಶಾಸ್ತಿçÃಯ ಸಂಗೀತದಲ್ಲಿ ವಿಭಾ ನಾಯಕ್ ತೃತೀಯ, ಶಾಸ್ತಿçÃಯ ನೃತ್ಯದಲ್ಲಿ ಶ್ರೇಯಾ ಜಿ. ತೃತೀಯ ಸ್ಥಾನ, ಭಾರತೀಯ ಸಮೂಹ ಗೀತೆ ಎರಡನೇ ಸ್ಥಾನ, ಜಾನಪದ ವಾದ್ಯ ಮೇಳ ಪ್ರಥಮ, ಜಾನಪದ ನೃತ್ಯ(ಗುಂಪು)ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಮಾರ್ಚ 03 ರಿಂದ 07 ವರೆಗೆ ನೋಯ್ಡಾದ ಆ್ಯಮಿಟಿ ವಿವಿಯಲ್ಲಿ ನಡೆಯುವ ರಾಷ್ಟçಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರು ಮಂಗಳೂರು ವಿವಿಯನ್ನು ಪ್ರತಿನಿಧಿಸಲಿದ್ದಾರೆ.
ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.

Read More News

ಆರೋಗ್ಯ ಸಚಿವರ ತವರೂರು ಮಂಗಳೂರಿನ ವೆನ್ ಲಾಕ್ ಬಳಿಯ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್. ರೇಬಿಸ್ ತಡೆಗಟ್ಟುವ ಈ ಇಂಜೆಕ್ಷನ್ ಚುಚ್ಚಿದರೆ ಅಂಥ ಮಕ್ಕಳು 24 ಗಂಟೆ ಐಸಿಯುನಲ್ಲಿ ಇರಬೇಕು. ತುಂಬಾ ರಿಸ್ಕ್. ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಆರೋಗ್ಯ ಸಚಿವರೇ ಉತ್ತರ ನೀಡಬೇಕು. ಖಾದರ್ ಸಾಹೇಬ್ರೆ, ಬಡ ಮಕ್ಕಳು ಏನು ತಪ್ಪು ಮಾಡಿದ್ದಾರೆ. ಅವರಿಗೇಕೆ ಇಂಥ ಕಳಪೆ ಇಂಜೆಕ್ಷನ್?

Scroll to Top