ಮೂಡುಬಿದಿರೆ ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿ ನಿರ್ಮಿಸಲಾದ ಸಂಪಿಗೆ ರೆಸಾರ್ಟ್ ಬುಧವಾರ ಶುಭಾರಂಭಗೊಂಡಿತು. ಡಾ.ಎಂ.ಮೋಹನ ಆಳ್ವ, ಉಮಾನಾಥ ಕೋಟ್ಯಾನ್, ಪ್ರವೀಣ್ ಶೆಟ್ಟಿ, ಕೃಷ್ಣ ಜೆ.ಪಾಲೆಮಾರ್, ಕೆ.ಅಭಯಚಂದ್ರ ಜೈನ್, ಮಿಥುನ್ ರೈ,ತಿಮ್ಮಯ್ಯ ಶೆಟ್ಟಿ, ಕೆ.ಶ್ರೀಪತಿ ಭಟ್, ಶ್ರೀಧರ ಆಚಾರ್ಯ, ನಾರಾಯಣ ಪಿ.ಎಂ., ಜಯಶ್ರೀ ಅಮರನಾಥ ಶೆಟ್ಟಿ, ರಾಮಚಂದ್ರ ಆಳ್ವ, ಡಾ.ಸುಧಾಕರ ಶೆಟ್ಟಿ ಮತ್ತಿತರರು ಇದ್ದರು.
ಹೋಟೆಲ್ ಉದ್ಯಮದಲ್ಲಿ ಅಪಾರ ಅನುಭವ ಹೊಂದಿದ ಪ್ರವೀಣ್ ಶೆಟ್ಟಿ ತಮ್ಮ ಅನುಭವವನ್ನು ಧಾರೆಯೆರೆದು ವಿಶ್ವದರ್ಜೆಯ ರೆಸಾರ್ಟ್ ನಿರ್ಮಿಸಿದ್ದಾರೆ. ಇದು ಹುಟ್ಟೂರಿಗೆ ಅವರು ನೀಡಿದ ಬಹುದೊಡ್ಡ ಕೊಡುಗೆ. ಅಚ್ಚುಕಟ್ಟುತನದಿಂದ ನಿರ್ಮಿಸಿದ ಈ ರೆಸಾರ್ಟ್‌ಗೆ ಉತ್ತಮ ಭವಿಷ್ಯವಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.
ಪುಣೆಯ ಅತಿಥಿ ಗ್ರೂಫ್ ಆಫ್ ರೆಸ್ಟೋರೆಂಟ್ಸ್‌ನ ಸಹಸಂಸ್ಥೆಯಾಗಿ ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿ ನಿರ್ಮಿಸಲಾದ ಸಂಪಿಗೆ ರೆಸಾರ್ಟ್ ಅನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮೂಡುಬಿದಿರೆಗೆ ಭೇಟಿ ನೀಡುವವರಿಗೆ ಸ್ಟಾರ್ ಹೋಟೆಲ್ ಸೌಲಭ್ಯ ಸಿಗಲಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಇದು ನಿರ್ಮಾಣಗೊಂಡಿದ್ದು, ಇಲ್ಲಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಸಂಪಿಗೆ ರೆಸಾರ್ಟ್ ಆಡಳಿತ ನಿರ್ದೇಶಕ ಪ್ರವೀಣ್ ಶೆಟ್ಟಿ ಮಾತನಾಡಿ, ಹುಟ್ಟೂರಿನಲ್ಲಿ ಸುಸಜ್ಜಿತ ರೆಸಾರ್ಟ್ ನಿರ್ಮಿಸಬೇಕೆಂಬ ಬಹುಕಾಲದ ಕನಸು ನನಸಾಗಿದೆ ಎಂದರು.
ಮಾಜಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್, ಕೆ.ಅಭಯಚಂದ್ರ ಜೈನ್, ಕೆಪಿಸಿಸಿ ಸದಸ್ಯ ಮಿಥುನ್ ರೈ, ಉದ್ಯಮಿಗಳಾದ ತಿಮ್ಮಯ್ಯ ಶೆಟ್ಟಿ, ಕೆ.ಶ್ರೀಪತಿ ಭಟ್, ಶ್ರೀಧರ ಆಚಾರ್ಯ, ನಾರಾಯಣ ಪಿ.ಎಂ., ಜಯಶ್ರೀ ಅಮರನಾಥ ಶೆಟ್ಟಿ, ರಾಮಚಂದ್ರ ಆಳ್ವ, ಡಾ.ಸುಧಾಕರ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ರವೀಂದ್ರ ಎಸ್.ಶೆಟ್ಟಿ, ಗಜಾನನ ಎಸ್.ಪೂಂಜ, ಪುರುಷೋತ್ತಮ ಶೆಟ್ಟಿ ಉಡುಪಿ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆ ಆಡಳಿತ ನಿರ್ದೇಶಕ ಪ್ರವೀಣ್ ಶೆಟ್ಟಿ ಸ್ವಾಗತಿಸಿದರು.









































































































































































































