ಮೂಡಬಿದ್ರಿ: ಆಳ್ವಾಸ್ ಮೆಡಿಕಲ್ ಫೌಂಡೇಶನ್‍ನಲ್ಲಿ “Rational (Ethical) pediatric Praticise’ ಈ ವಿಷಯದ ಬಗ್ಗೆ ಮೂಡಬಿದ್ರಿ ಆಳ್ವಾಸ್ ಸೆಮಿನರ್ ಹಾಲ್‍ನಲ್ಲಿ ಡಿ. 2ರಂದು ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ (ಪುಣೆ) ಅವರು ವಿಶೇಷ ಉಪನ್ಯಾಸಗೈದರು. ಇದರಲ್ಲಿ 200 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಆಳ್ವಾಸ್ ಆಯುರ್ವೇದ ಮತ್ತು ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಪಾಲ್ಗೊಂಡರು. ಮಕ್ಕಳ ಅಭ್ಯಾಸದಲ್ಲಿ ನೈತಿಕ ಮಾರ್ಗ ಕುರಿತಾದ ಉಪನ್ಯಾಸ ಇದಾಗಿತ್ತು.



ಪ್ರತೀ ಎರಡು ತಿಂಗಳಿಗೊಮ್ಮೆ ಪುಣೆಯಿಂದ ಮೂಡಬಿದ್ರೆಗೆ ಬಂದು ಆಳ್ವಾಸ್ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸ ನೀಡುತ್ತಾ ಬಂದಿರುವ ಡಾ. ಸುಧಾಕರ ಶೆಟ್ಟಿಯವರು ಮೂಡಬಿದ್ರೆಯಲ್ಲಿ ಗ್ರಾಮೀಣ ಪರಿಸರದಲ್ಲಿ ಸಂಚಾರಿ ಮಕ್ಕಳ ಮೊಬೈಲ್ ಕ್ಲಿನಿಕ್ ಅನ್ನು ಕೂಡ ನಡೆಸುತ್ತಾ ಬಂದಿದ್ದಾರೆ. ಆಳ್ವಾಸ ವಿದ್ಯಾರ್ಥಿಗಳಿಗೆ ಸಮುದಾಯ ಮತ್ತು ಗ್ರಾಮೀಣ ಮಕ್ಕಳ ವೈದ್ಯಕೀಯದ ಬಗ್ಗೆ ಡಾ. ಸುಧಾಕರ ಶೆಟ್ಟಿಯವರು ವಿಶೇಷ ಉಪನ್ಯಾಸ ನೀಡುತ್ತಾ ಬಂದಿದ್ದಾರೆ. ಡಾ. ಸುಧಾಕರ ಶೆಟ್ಟಿಯವರ ಉಪನ್ಯಾಸಕ್ಕೆ ಡಾ. ಮೋಹನ ಆಳ್ವರವರು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.
ಡಾ. ಸುಧಾಕರ ಶೆಟ್ಟಿಯವರಿಗೆ ಈ ಹಿಂದೆ ಹೊರನಾಡ ಕನ್ನಡ ರತ್ನ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ -2022, ಚಾರ್ ಸಹಿಬಜಾದೆ ಅವಾರ್ಡ್ ದೊರಕಿರುತ್ತದೆ. ಅಷ್ಟೇ ಅಲ್ಲದೆ ಅವರು ಸತತ ನಾಲ್ಕು ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಪುರಸ್ಕೃತ ವೈದ್ಯಕೀಯ ತಂಡದ ಸದಸ್ಯರಾಗಿದ್ದಾರೆ.


























































































































































































