ಮಾಜಿ ಸಚಿವ ಬಿ. ರಮಾನಾಥ ರೈಯವರ ನೇತೃತ್ವದಲ್ಲಿ ಪಾಣೆ ಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿ ಜನ್ಮ ದಿನಾಚರಣೆ.

119.6K Views 21 Nov 2024

ಪಾಣೆಮಂಗಳೂರು: ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ರವರ ನೇತೃತ್ವದಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿರವರ ಜನ್ಮದಿನಾಚರಣೆಯು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.


ಜನ್ಮದಿನಾಚರಣೆಯ ಅಂಗವಾಗಿ ಮಾಜಿ ಸಚಿವ ಬಿ.ರಮಾನಾಥ ರೈ ರವರು ಭಾರತ್ ಸೇವಾಶ್ರಮ ಕನ್ಯಾನ ಇಲ್ಲಿಗೆ ದಿನಬಳಕೆ ಸಾಮಗ್ರಿಯನ್ನು ಹಾಗೂ ಆರ್ಥಿಕ ಸಹಾಯವನ್ನು ಹಸ್ತಾಂತರಿಸಿದರು.


ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ಪೂಜಾರಿರವರು ಅಗಮಿಸಿದ ನಾಯಕರನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತನ್ನಾಡಿದರು.
ಕಾರ್ಯಕ್ರಮದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಚಂದ್ರಶೇಖರ್ ಭಂಡಾರಿ,ಸಂಜೀವ ಪೂಜಾರಿ ಬಿರ್ವ,ಅಬ್ಬಾಸ್ ಆಲಿ ,ಬೇಬಿ ಕುಂದರ್,ಚಿತ್ತರಂಜನ್ ಶೆಟ್ಟಿ, ವಾಸು ಪೂಜಾರಿ,ಐಡಾ ಸುರೇಶ್,ಮಲ್ಲಿಕಾ ಶೆಟ್ಟಿ, ಜೋಸ್ಪನ್ ಡಿ.ಸೋಜಾ ,ಪೌಝಿಯಾ,ಮಂಜುಳಾ ಕುಶಾಲ ಪೆರಾಜೆ,ರೇಷ್ಮಾ ಟೆಲ್ಲಿಸ್, ಶೈಲಜಾ ರಾಜೇಶ್,ಆಯಿಚಾ,ಆಶಿಫಾ,ವಸಂತಿ ನೆಟ್ಲ,ಉಪಸ್ಥರಿದ್ದರು.

Read More News

Scroll to Top