ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಗೆ ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆ ಇತ್ತೀಚೆಗೆ ನಡೆಯಿತು. ಇದರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ, ದಕ್ಷಿಣ ಕನ್ನಡ, ಮಂಗಳೂರು ಇದರ ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನಗಳಿಗೆ ನ.16ರಂದು11 ಇಲಾಖೆಯ 14 ಕ್ಷೇತ್ರಗಳ ಚುನಾವಣೆಯಲ್ಲಿ ನಿರ್ದೇಶಕರುಗಳು ಚುನಾಯಿತರಾಗಿದ್ದಾರೆ.


ನಿರ್ದೇಶಕರುಗಳಾಗಿ ನವೀನ್ ಕುಮಾರ್ ಎಂ.ಎಸ್., ಸುರೇಶ್, ಪದ್ಮನಾಭ ಜೋಗಿ, ಜಗದೀಶ್ ಪಿ, ಕಾರ್ತಿಕ, ಮಹಾಲಕ್ಷ್ಮಿ ಮತ್ತು ಸಿದ್ದಪ್ಪ, ಪ್ರಸನ್ನ ಕುಮಾರ್ ಪಕ್ಕಳ, ಡಾ. ಆನಂದ್ ಬಂಜನ್, ಉಮೇಶ್ ನಾಯಕ್, ಉಮೇಶ್ ಕೆ.. ಜಯಲಕ್ಷ್ಮಿ, ಡಾ.ಅಜಿತ್, ಸುರೇಶ್ ಮೋರಸ್, ಒಟ್ಟು 66 ಸ್ಥಾನಗಳ ಪೈಕಿ 52 ಅಭ್ಯರ್ಥಿಗಳು ಈಗಾಗಲೇ ವಿವಿಧ ಇಲಾಖೆಯಿಂದ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ. ಜಗಜೀವನ್ ದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























































































































































































