ಪಾಲ್ದನೆ ಸಂತ ಮದರ್‌ ತೆರೆಸಾ ಚರ್ಚಿನಲ್ಲಿ ಅಂತರ್‌ ವಾರ್ಡ್ ಕ್ರಿಕೆಟ್‌ ಟೂರ್ನಮೆಂಟ್‌

113.3K Views 17 Nov 2024

ಮಂಗಳೂರು: ಮಂಗಳೂರಿನ ಪಾಲ್ದನೆಯ ಸಂತ ಮದರ್‌ ತೆರೆಸಾ ಚರ್ಚಿನಲ್ಲಿ ಅಂತರ್‌ ವಾರ್ಡ್ ಕ್ರಿಕೆಟ್‌ ಟೂರ್ನಮೆಂಟ್‌ ರವಿವಾರ ನಡೆಯಿತು.
ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಆಲ್ಬನ್‌ ಡಿ’ಸೋಜಾ ಅವರು ಪಂದ್ಯಾಟ ಉದ್ಘಾಟಿಸಿದರು. ಉಪಾಧ್ಯಕ್ಷ ಎಲಿಯಾಸ್‌ ಫೆರ್ನಾಂಡಿಸ್‌, ಕಾರ್ಯದರ್ಶಿ ಆಸ್ಟಿನ್‌ ಮೊತೇರೊ, ಸರ್ವ ಆಯೋಗಗಳ ಸಂಯೋಜಕ ಜೊಸ್ಲಿನ್‌ ಲೋಬೊ, ವೀಕ್ಷಕ ವಿವರಣೆಗಾರ ಮಾರಿಯೋ ರೇಗೊ, ಸಾಂಸ್ಕೃತಿಕ ಸಮಿತಿಯ ಸಂಯೋಜಕಿ ಪ್ಯಾಟ್ಸಿ ಮೊಂತೇರೊ, ಸದಸ್ಯರಾದ ಸುನಿತಾ ಫೆರ್ನಾಂಡಿಸ್‌, ಸೆಲಿನ್‌ ಡಿ’ಸೋಜಾ, ಕ್ಲಿಫರ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಹರ್ಷ ಮತ್ತು ಪುನೀತ್‌ ಕಾರ್ಯನಿರ್ವಹಿಸಿದರು.
ವಿಜೇತ ತಂಡದಲ್ಲಿ ಜೋಯೆಲ್‌ ಡಿ’ಸೋಜಾ, (ನಾಯಕ), ಸ್ಠೀಫನ್‌ ಡಿ’ಸೋಜಾ, ರೋಶನ್‌ ಫೆರ್ನಾಂಡಿಸ್‌, ವಿಲ್ಸನ್‌ ಪಿಂಟೊ, ಶೋನ್‌ ಡಿ’ಸೋಜಾ, ಆ್ಯಶ್ಲಿ ಡಿ’ಸೋಜಾ, ವಿಲ್ಸನ್‌ ಡಿ’ಸೋಜಾ, ಅನಿಲ್‌ ಮೆಲ್ವಿನ್‌ ಡಿ’ಸೋಜಾ, ಲ್ಯಾನಿಶ್ ಪಿಂಟೊ, ರಿಶಾಲ್‌ ಡಿ’ಸೋಜಾ, ಸೆಲಿನ್‌ ಡಿ’ಸೋಜಾ, ಗ್ಯಾವಿನ್‌ ಡಿ’ಸೋಜಾ, ಶರ್ಲಿನ್‌ ಡಿ’ಸೋಜಾ ಇದ್ದರು.
ಕ್ರಿಕೆಟ್‌ ಪಿಚ್‌ ತಯಾರಿಸಿ ಕೊಟ್ಟ ಸಂತ ತೆರೆಜಾ ವಾರ್ಡಿನ ಕಿರಣ್‌ ಮೊಂತೇರೊ ಮತ್ತು ಸಂತ ಸೆಬಾಸ್ಟಿಯನ್‌ ವಾರ್ಡಿನ ಸ್ಟೀಫನ್‌ ಡಿ’ಸೋಜಾ ಅವರನ್ನು ಸನ್ಮಾನಿಸಲಾಯಿತು.

Read More News

ಸರಕಾರಿ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಸಂಪಾದಕರಾಗಿ ಹೊಸ ಅಂಗಣ ಪತ್ರಿಕೆಯನ್ನು ನಿರಂತರವಾಗಿ ಹೊರ ತಂದು ದಶಮಾನೋತ್ಸವದ ಸಂಭ್ರಮ ಕಂಡ ಡಾ.ಪಿ.ಹರಿಶ್ಚಂದ್ರ ಸಾಲ್ಯಾನ್ ಅವರ ಸಾಧನೆ ಜನ ಶ್ಲಾಘನೀಯವಾದದ್ದು. ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೃಷಿ ಪ್ರಶಂಸನೀಯ ವಾದದ್ದು- ‘ಹೊಸ ಅಂಗಣ’ ದಶಮಾನೋತ್ಸವದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಶ್ಲಾಘನೆ.

ದುಬೈಯ ಹೆಸರಾಂತ ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ ಪ್ರಸ್ತುತಪಡಿಸುವ ಬಹು ನಿರೀಕ್ಷೆಯ ತುಳು ಚಲನಚಿತ್ರ “ಡಾ. ಮೋಹನ್ ಎಂಬಿಬಿಎಸ್” ಡಿಸೆಂಬರ್ ನಲ್ಲಿ ತೆರೆಗೆ. ಇದು ಕಾರ್ಪೊರೇಟ್ ವೈದ್ಯಕೀಯ ಮಾಫಿಯಾದ ವಿರುದ್ಧ ಸಿಡಿದೆದ್ದ ನಿಷ್ಠಾವಂತ ವೈದ್ಯನೊಬ್ಬನ ಕಥೆ .ಪ್ರಶಸ್ತಿ ವಿಜೇತ ನಿರ್ದೇಶಕ ವೆಂಕಟ್ ಭಾರದ್ವಾಜ್ ನಿರ್ದೇಶನದ ಡಾ.ಸುಧಾಕರ್ ಶೆಟ್ಟಿ ಪುಣೆ- ಮೂಡಬಿದ್ರಿ ಪರಿಕಲ್ಪನೆಯ ಸಿನಿಮಾ.

Scroll to Top