ಪಿಲಿನಲಿಕೆಯಲ್ಲಿ ಭಾಗವಹಿಸಿ ಮಿಥುನ್ ರೈ ಸಂಘಟನಾ ಸಾಧನೆ ಶ್ಲಾಘಿಸಿ ಶುಭ ಹಾರೈಸಿದ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಬೆಳ್ಳಿಪ್ಪಾಡಿ ರಮಾನಾಥ ರೈ. ವಿಶೇಷ ವರದಿ:ಡಾ. ಅಶೋಕ್ ಶೆಟ್ಟಿ ಬಿ. ಎನ್, ಬ್ರಹ್ಮರಕೂಟ್ಲು.

10.4K Views 1h ago

ಮಂಗಳೂರು :ಮಂಗಳ ಕ್ರೀಡಾಂಗಣದಲ್ಲಿ ನಡೆದ ಪಿಲಿನಲಿಕೆಯಲ್ಲಿ ಭಾಗವಹಿಸಿದ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಬೆಳ್ಳಿಪ್ಪಾಡಿ ರಮಾನಾಥ ರೈಯವರು ಪಿಲಿನಲಿಕೆ ಸಂಘಟಿಸುವುದರ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿರುವ ಯಶಸ್ವಿ ಸಂಘಟಕ ಮಿಥುನ್ ರೈ ಅವರ ಸಾಧನೆಯನ್ನು ಶ್ಲಾಘಿಸಿದರು.

ಕಲಾಪ್ರೇಮಿ, ಕಲಾಪೋಷಕರಾಗಿರುವ ನಮ್ಮೆಲ್ಲರ ಪ್ರೀತಿಯ, ಅಭಿಮಾನದ ಬೇಬಿಯಣ್ಣ (ಬಿ.ರಮಾನಾಥ ರೈ )ಕಾಲೇಜ್ ದಿನಗಳಲ್ಲಿಯೇ ನಾಟಕಗಳಲ್ಲಿ ಹವ್ಯಾಸಿ ಕಲಾವಿದರಾಗಿ ಅಭಿನಯಿಸುತ್ತಿದ್ದರು. ಹಿರಿಯ ನಾಟಕಕಾರ ಎ. ಗಂಗಾಧರ ಶೆಟ್ಟಿ ಅವರು ಹೇಳುವಂತೆ, ಬೇಬಿಯಣ್ಣ ನನ್ನ ರಚನೆ, ನಿರ್ದೇಶನದ ಪೂ ಮಾಲೆಯಲ್ಲಿ ಖಳನಾಯಕನಾಗಿ ನಟಿಸಿದ್ದರು. ಆ ಕಾಲದಲ್ಲಿ ಬೇಬಿಯಣ್ಣ ಅಭಿನಯಿಸಿದ ಆ ಪಾತ್ರ ಭಾರೀ ಪ್ರಚಾರ ಪಡೆದಿತ್ತು. ಬೇಬಿಯಣ್ಣ ಅತ್ಯುತ್ತಮ ನಾಟಕ ಕಲಾವಿದರಾಗಿದ್ದರು. ಅವರ ಡೈಲಾಗ್ ಡೆಲಿವರಿ, ಅಭಿನಯ ಪರಿಪಕ್ವವಾಗಿತ್ತು. 1997ರಲ್ಲಿ ಬಿ.ಸಿ.ರೋಡ್ ನ ಸಾರ್ವಜನಿಕ ರಂಗಮಂದಿರದಲ್ಲಿ ನಡೆದ ಸುವರ್ಣ ಸ್ವಾತಂತ್ರ್ಯ ಜಯಂತಿ ಸಂದರ್ಭದಲ್ಲಿ ಪ್ರದರ್ಶನಗೊಂಡ ಯಕ್ಷಗಾನದಲ್ಲಿ ಬಿ. ರಮಾನಾಥ ರೈ ಅವರ ಭೀಮನ ಪಾತ್ರ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಯಾವುದೇ ಕಾರ್ಯಕ್ರಮಕ್ಕೆ ಬಿ. ರಮಾನಾಥ ರೈ ಅವರು ಆಗಮಿಸಿ ಅದರಲ್ಲಿ ಭಾಗವಹಿಸಿ ಭಾಷಣ ಮಾಡಿದರೆಂದರೆ ಅಲ್ಲೊಂದು ಅಧ್ಭುತ ಶಕ್ತಿಯೇ ಬಂದು ನಮ್ಮನ್ನು ಆಶೀರ್ವಾದಿಸಿದಂತಾಗುತ್ತದೆ ಎಂಬುದು ನಮ್ಮ ಜಿಲ್ಲೆಯ ಬಹುತೇಕರ ಜನಾಭಿಪ್ರಾಯವಾಗಿದೆ. ಜಾತಿ,ಮತ ಪಕ್ಷ ಭೇದವಿಲ್ಲದೆ ನಿಷ್ಕಲ್ಮಶ ಮನಸ್ಸಿನಿಂದ ನಿಸ್ವಾರ್ಥವಾಗಿ ಜನಸೇವೆಯನ್ನೇ ಉಸಿರಾಗಿಸಿಕೊಂಡು ಜನಸೇವೆಗೆ ಅಧಿಕಾರವೇ ಮುಖ್ಯವಲ್ಲ ಎಂಬುವುದನ್ನು ಸಮಾಜಕ್ಕೆ, ರಾಜಕೀಯ ರಂಗಕ್ಕೆ, ಸಾರ್ವಜನಿಕ ಜಗತ್ತಿಗೆ ಸ್ವತ : ಕಾರ್ಯ ಪ್ರವೃತ್ತರಾಗಿ ತೋರಿಸಿಕೊಟ್ಟ ದಣಿವರಿಯದ ನಿರಾಡಂಬರ ನಾಯಕ, ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರು ಕರ್ನಾಟಕ ಕಂಡ ಬೆರಳೆಣಿಕೆಯ ಸ್ವಚ್ಛ ಹಸ್ತದ ಆದರ್ಶ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ ಎಂಬುದು ಜನ ಹೇಳುತ್ತಿರುವ ಸತ್ಯ.
ಚಿತ್ರಗಳು: ತಿಲಕ್ ಮಂಚಿ

Read More News

Scroll to Top