ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ : ಆಳ್ವಾಸ್‌ಗೆ 19ನೇ ಬಾರಿಗೆ ಅವಳಿ ಪ್ರಶಸ್ತಿ

92K Views 14 Nov 2024

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮಂಗಳೂರು ಹಾಗೂ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ ಇವರ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಸುಳ್ಯ ತಾಲೂಕನ್ನು ಪ್ರತಿನಿಧಿಸಿದ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ತಂಡವನ್ನು 35-20, 35-5 ಅಂಕಗಳಿAದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಸುಳ್ಯ ತಾಲೂಕನ್ನು ಪ್ರತಿನಿಧಿಸಿದ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ ತಂಡವನ್ನು 35-12, 35-10 ಅಂಕಗಳಿAದ ಸೋಲಿಸಿ 19ನೇ ಬಾರಿಗೆ ಅವಳಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಆಳ್ವಾಸ್ ಬಾಲಕರ ವಿಭಾಗದಲ್ಲಿ ಆಕಾಶ್ ಉತ್ತಮ ರಕ್ಷಣಾಕಾರ, ಲಿಖಿತ್ ಉತ್ತಮ ಆಕ್ರಮಣಕಾರ ಹಾಗೂ ಬಾಲಕಿಯರ ವಿಭಾಗದಲ್ಲಿ ಲಾಂಛನ ಉತ್ತಮ ರಕ್ಷಣಾಕರ‍್ತಿ, ಶಾಲಿನಿ ಉತ್ತಮ ಆಕ್ರಮಣಕಾರ್ತಿ ಪ್ರಶಸ್ತಿ ಪಡೆದರು.


ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.

Read More News

ಸರಕಾರಿ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಸಂಪಾದಕರಾಗಿ ಹೊಸ ಅಂಗಣ ಪತ್ರಿಕೆಯನ್ನು ನಿರಂತರವಾಗಿ ಹೊರ ತಂದು ದಶಮಾನೋತ್ಸವದ ಸಂಭ್ರಮ ಕಂಡ ಡಾ.ಪಿ.ಹರಿಶ್ಚಂದ್ರ ಸಾಲ್ಯಾನ್ ಅವರ ಸಾಧನೆ ಜನ ಶ್ಲಾಘನೀಯವಾದದ್ದು. ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೃಷಿ ಪ್ರಶಂಸನೀಯ ವಾದದ್ದು- ‘ಹೊಸ ಅಂಗಣ’ ದಶಮಾನೋತ್ಸವದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಶ್ಲಾಘನೆ.

ದುಬೈಯ ಹೆಸರಾಂತ ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ ಪ್ರಸ್ತುತಪಡಿಸುವ ಬಹು ನಿರೀಕ್ಷೆಯ ತುಳು ಚಲನಚಿತ್ರ “ಡಾ. ಮೋಹನ್ ಎಂಬಿಬಿಎಸ್” ಡಿಸೆಂಬರ್ ನಲ್ಲಿ ತೆರೆಗೆ. ಇದು ಕಾರ್ಪೊರೇಟ್ ವೈದ್ಯಕೀಯ ಮಾಫಿಯಾದ ವಿರುದ್ಧ ಸಿಡಿದೆದ್ದ ನಿಷ್ಠಾವಂತ ವೈದ್ಯನೊಬ್ಬನ ಕಥೆ .ಪ್ರಶಸ್ತಿ ವಿಜೇತ ನಿರ್ದೇಶಕ ವೆಂಕಟ್ ಭಾರದ್ವಾಜ್ ನಿರ್ದೇಶನದ ಡಾ.ಸುಧಾಕರ್ ಶೆಟ್ಟಿ ಪುಣೆ- ಮೂಡಬಿದ್ರಿ ಪರಿಕಲ್ಪನೆಯ ಸಿನಿಮಾ.

Scroll to Top