ಶ್ರೀಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ವೈ. ಯನ್. ಸಾಲಿಯಾನ್ ಆಯ್ಕೆ.

99.3K Views 8 Nov 2024

ಮಂಗಳೂರು: ಮಂಗಳೂರು ನಗರದ ಬೋಳೂರಿನಲ್ಲಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಪ್ರಾಣ ಪ್ರತಿಷ್ಠೆಗೈದಿರುವ ವಿಶಿಷ್ಠ ದೇವಾಲಯ ಶ್ರೀ ಬ್ರಹ್ಮಸ್ಥಾನಂ
ಕ್ಷೇತ್ರ. 2008ರಲ್ಲಿ ಸ್ಥಾಪಿಸಲ್ಪಟ್ಟ ಈ ದೇವಸ್ಥಾನದ ಅಭಿವೃದ್ಧಿ ಹಾಗೂ ಸಮರ್ಪಕ ನಿರ್ವಹಣೆಗಾಗಿ ನೂತನ ಕ್ಷೇತ್ರಾಭಿವೃದ್ಧಿ ಸಮಿತಿಯನ್ನು ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ರವರು ರಚಿಸಿರುತ್ತಾರೆ.
ಡಾ.ಜೀವರಾಜ್ ಸೊರಕೆ ಗೌರವ ಸಲಹೆಗಾರರಾಗಿರುತ್ತಾರೆ.ಗೌರವಾಧ್ಯಕ್ಷರಾಗಿ ಶ್ರೀಮತಿ ಶ್ರುತಿ ಸನತ್ ಹೆಗ್ಡೆ, ಸಲಹೆಗಾರರಾಗಿ ಡಾ.ವಸಂತ ಕುಮಾರ್ ಪೆರ್ಲ ಮತ್ತು ಸೇವಾಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್ ಸೇವೆ ಸಲ್ಲಿಸಲಿದ್ದಾರೆ.


ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ವೈ.ಎನ್.ಸಾಲಿಯಾನ್,ಉಪಾಧ್ಯಕ್ಷರುಗಳಾಗಿ ನವೀನ್ ಪಿ ವಿ ಟಿ. ಮತ್ತು ಸುಧಾಕರ್ ಭಟ್.ಕಾರ್ಯದರ್ಶಿ ಡಾ.ದೇವದಾಸ್ ಪುತ್ರನ್ ಮತ್ತು ಕೋಶಾಧಿಕಾರಿಯಾಗಿ ಶಿಲ್ಪಾ ರೈ ಆಯ್ಕೆಯಾಗಿದ್ದಾರೆ. ಪ್ರವೀಣಚಂದ್ರ ಶರ್ಮ,ಟಿ.ಎ.ಅಶೋಕನ್, ರವಿ ಅಲೆವೂರಾಯ ಮತ್ತು ಮಹಾಬಲ ಚೌಟರವರು ಕಾರ್ಯಕಾರಿ ಸದಸ್ಯರರಾಗಿರುತ್ತಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

Read More News

ಇಂದು ಸಂಜೆ (ಸೆ.13 )ಬಿ.ಸಿ. ರೋಡ್ ನಲ್ಲಿ ನಡೆದ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹುಟ್ಟುಹಬ್ಬದ 75ರ ಸಂಭ್ರಮ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮ.ಜೊತೆಗೆ, ಪ್ರಜ್ಞಾಶ್ರಮದ ವಿದ್ಯಾರ್ಥಿಗಳಿಗೆ ರೋಶನ್ ರೈ ನೇತೃತ್ವದಲ್ಲಿ ಭೋಜನ ವ್ಯವಸ್ಥೆ. ಮಾನವೀಯ ಮೌಲ್ಯಗಳಿಗೆ ಜೀವ ತುಂಬಿದ ಬೇಬಿಯಣ್ಣನ ಬರ್ತ್ ಡೇ.

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top