ವಿಶೇಷ ಸಂದರ್ಶನ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.
ಪುಣೆ: ಮೂವತ್ತು ವರ್ಷಗಳ ನಂತರ ಪುಣೆ ರೆಡ್ ಲೈಟ್ ಏರಿಯಾಕ್ಕೆ ಅಲ್ಲಿನ ಮಕ್ಕಳ ಅರೋಗ್ಯ ತಪಾಸಣೆಗಾಗಿ ಡಾ. ಸುಧಾಕರ್ ಶೆಟ್ಟಿಯವರ ಪುನರಾಗಮನವಾಗಿದೆ. 1995ರಲ್ಲಿ ಪುಣೆ ರೆಡ್ ಲೈಟ್ ಏರಿಯಾದ ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರ ಮಕ್ಕಳ ಆರೋಗ್ಯ ತಪಾಸಣೆ ಶಿಬಿರದಲ್ಲಿ ವೈದ್ಯಕೀಯ ಸಾಹಸಿ ಮಕ್ಕಳ ವೈದ್ಯ ಡಾ. ಸುಧಾಕರ್ ಶೆಟ್ಟಿಯವರು ಹೊಸ ದಾಖಲೆ ಬರೆದಿದ್ದರು.


ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರ ಮಕ್ಕಳು ಕೂಡಾ ಸಮುದಾಯದ ಭವಿಷ್ಯವೆಂದು ಸಾರುವುದು ಡಾ. ಸುಧಾಕರ್ ಶೆಟ್ಟಿಯವರ ಉದ್ದೇಶವಾಗಿತ್ತು. ಆ ಸಂದರ್ಭದಲ್ಲಿ ಪುಣೆ ರೆಡ್ ಲೈಟ್ ಏರಿಯಾದಲ್ಲಿ ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರ ಮಕ್ಕಳ ಅರೋಗ್ಯ ತಪಾಸಣೆಗೆ ಅಂದಿನ ಸಂಸದ ಸುನೀಲ್ ದತ್ತ್ ಮತ್ತು ಪ್ರಖ್ಯಾತ ವೈದ್ಯರಾದ ಡಾ. ಐ. ಎಸ್. ಗಿಲಾದ ಅವರು ಸಂಪೂರ್ಣ ಸಹಕಾರ ನೀಡಿದ್ದರು.


ಇದೀಗ ಡಾ.ಸುಧಾಕರ್ ಶೆಟ್ಟಿ ಅವರು ಮೂವತ್ತು ವರ್ಷಗಳ ನಂತರ ಮತ್ತೆ ಪುಣೆ ರೆಡ್ ಲೈಟ್ ಏರಿಯಾದಲ್ಲಿ ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ನಡೆಸಲು ರೀ -ಎಂಟ್ರಿ ಕೊಟ್ಟಿದ್ದಾರೆ. ದೀಪಾವಳಿಯ ಶುಭ ಸಂದರ್ಭದಲ್ಲಿ ಈ ಪುನರಾಗಮನ ವೈದ್ಯಕೀಯ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಎಲ್ಲರೂ ಡಾ. ಸುಧಾಕರ್ ಶೆಟ್ಟಿಯವರ ಸಾಹಸಮಯ ಸಾಧನೆಗೆ ಹ್ಯಾಟ್ಸ್ ಅಪ್ ಹೇಳಿದ್ದಾರೆ. ಡಾ. ಸುಧಾಕರ್ ಶೆಟ್ಟಿ ಅವರು ಪರಿಣಿತ ವೈದ್ಯಕಿಯ ತಂಡದ ಸಹಕಾರದೊಂದಿಗೆ ರೆಡ್ ಲೈಟ್ ಏರಿಯಾದ ಮಹಿಳೆಯರ ಮಕ್ಕಳ ಅಪೌಷ್ಟಿಕತೆ , ಚರ್ಮರೋಗ ಸೇರಿದಂತೆ ಆರೋಗ್ಯ ನ್ಯೂನ್ಯತೆಯ ಬಗ್ಗೆ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ ನೀಡಲಿದ್ದಾರೆ.ಇದಕ್ಕೆ ಪುಣೆ ಪೊಲೀಸರ ಸಹಕಾರ ಸಿಕ್ಕಿದೆ. ಯಾಕೆಂದರೆ, ಡಾ. ಸುಧಾಕರ್ ಶೆಟ್ಟಿಯವರು ಪುಣೆ ಪೊಲೀಸ್ ಹಾಸ್ಪಿಟಲ್ ನಲ್ಲೂ ಮಕ್ಕಳ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ಸುಧಾಕರ್ ಶೆಟ್ಟಿಯವರು ಹೊರನಾಡ ಕನ್ನಡ ರತ್ನ ಮತ್ತು ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ -2022 ಪುರಸ್ಕೃತರು.ಸತತ ಮೂರು ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಪುರಸ್ಕೃತ ಪುಣೆ ವೈದ್ಯಕೀಯ ತಂಡದ ಸಕ್ರಿಯ ಸದಸ್ಯರಾಗಿರುವ ಡಾ. ಸುಧಾಕರ್ ಶೆಟ್ಟಿಯವರು ಚಾರ್ ಸಹಿ ಬಜಾದೆ ಪ್ರಶಸ್ತಿ ಪುರಸ್ಕೃತರು.



























































































































































































