ಮಂಗಳೂರು ಧರ್ಮಪ್ರಾಂತ್ಯದ ಸಿಟಿ ವಲಯದ ವ್ಯಾಪ್ತಿಯಲ್ಲಿ ಬರುವ ಚರ್ಚ್ ಗಳ 21 ಆಯೋಗದ ಸದಸ್ಯರಿಗೆ ಕಾರ್ಯಗಾರ.

94.1K Views 24 Oct 2024

ಮಂಗಳೂರು ಧರ್ಮಪ್ರಾಂತ್ಯದ ಸಿಟಿ ವಲಯದ ವ್ಯಾಪ್ತಿಯಲ್ಲಿ ಬರುವ ಕುಲಶೇಖರ, ಬೊಂದೇಲ್, ನೀರುಮಾರ್ಗ, ಪಾಲ್ದನೆ, ಬಜಾಲ್, ಕೆಲರೈ, ದೇರೆಬೈಲ್, ಪೆರ್ಮಯ್, ವಾಮಂಜೂರು, ಅಂಜೆಲೊರ್, ಶಕ್ತಿನಗರ ಇದರ 21 ಆಯೋಗದ ಸದಸ್ಯರಿಗೆ ಕಾರ್ಯಗಾರವನ್ನು ಕುಲಶೇಖರದ ಹೋಲಿ ಕ್ರಾಸ್ ಚರ್ಚಿನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಚರ್ಚಿನ 21ಆಯೋಗದ ಸದಸ್ಯರಿಗೆ ಮಾಹಿತಿ, ವಿಚಾರ ವಿನಿಮಯ, ಸಂದೇಹಗಳಿಗೆ ಉತ್ತರ ನೀಡುವ ಮೂಲಕ ಸಹಕಾರಿಯಾಯಿತು. ಕಾರ್ಯಗಾರದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವುಲ್ ಸಲ್ಡಾನ ಅವರು ಕಾರ್ಯಗಾರದ ಉದ್ಘಾಟಣೆ ಮಾಡಿ ಮಾಹಿತಿ ನೀಡಿದರು. ಮುಂದೆ ಸುಮಾರು 2 ಗಂಟೆಗಳ ಕಾಲ ವಂದನೀಯ ಪಾ| ಪಾವೊಸ್ತಿನ್ ಲೋಬೊ ಅವರು ಆಯೋಗದ ಬಗ್ಗೆ ಸವಿಸ್ತಾರವಾದ ವಿವರ ನೀಡಿದರು.
ವೇದಿಕೆಯಲ್ಲಿ ಸಿಟಿ ವಲಯದ ವಿಕಾರ್ ವಾರ್ ವಂ| ಪಾ| ಜೇಮ್ಸ್ ಡಿ’ಸೋಜ ಅವರು ಕಾರ್ಯಗಾರದ ಮಹತ್ವ ವಿವರಿಸಿ ಸ್ವಾಗತಿಸಿದರು. ವಂ| ಪಾ| ವಿಜಯ್ ಮೊಂತೆರೋ ಅವರು ಪ್ರಾರ್ಥನಾ ವಿದಿ ನೆರವೇರಿಸಿದರು.
ವ| ಪಾ| ಕ್ಲಾನೀ ಡಿ’ಸೋಜಾ, ವಂ| ಪಾ| ಆಲ್ವಿನ್ ಡಿ’ಸೋಜ, ಕೊರ್ಡೆಲ್ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಪಾ| ಕ್ಲಿಫರ್ಡ್ ಫೆರ್ನಾಂಡಿಸ್, ಧರ್ಮಪ್ರಾಂತ್ಯದ ಸಾರ್ವಜನಿಕ ಅಧಿಕಾರಿ ರೋಯ್ ಕ್ಯಾಸ್ಟಲೀನೊ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ಎಲ್ಲಾ ಚರ್ಚುಗಳ ಧರ್ಮಗುರುಗಳು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಆಯೋಗದ ಸಂಚಾಲಕರು, ಧರ್ಮ ಭಗಿನಿಯರು ಭಾಗವಹಿಸಿದ್ದರು.
ಆಂಜೆಲೋರ್ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಪಾ| ಫೆಡ್ರಿಕ್ ಮೊಂತೇರೊ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಂತೋಷ್ ಡಿ’ಕೋಸ್ತಾ ವಂದಿಸಿದರು.

Read More News

ಸರಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ತಡೆಗಟ್ಟಲು ನೀಡುವ ERIG ಇಂಜೆಕ್ಷನ್ ಕಳಪೆ ಗುಣಮಟ್ಟದ ಔಷಧವಲ್ಲ -ಡಿಎಂಒ ಡಾ. ಶಿವಪ್ರಕಾಶ್ ಸ್ಪಷ್ಟನೆ. ಅದು ಓಕೆ, ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಬೆಲೆ ಬಾಳುವ ರಿಸ್ಕ್ ರಹಿತ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್ ಗಳ ಬಳಕೆಗೆ mpmlasnewstv ಒತ್ತಾಯ

Scroll to Top