ಸುಳ್ಯ :ನಗುಮಖದ ಕ್ರಿಯಾಶೀಲ ನಾಯಕನನ್ನು ಕಳೆದುಕೊಂಡು ಸಮಾಜಕ್ಕೆ ತುಂಬಲರಾದ ನಷ್ಟ, ವಿವಿಧ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಂಘಟನೆ
ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾವಿರಾರು ಬಡ ಕುಟುಂಬಗಳಿಗೆ ಬದುಕು ಕಟ್ಟಿ ಕೊಡಲು ಸಹಕಾರಿಯಾದ ಮಂಗಳೂರಿನ ಖ್ಯಾತ ಉದ್ಯಮಿ ಸಾಮಾಜಿಕ ಸೇವಾ ಮುಖಂಡ ಮಮ್ತಾಜ್ ಅಲಿಯವರ ಹಠಾತ್ ಅಗಲುವಿಕೆ ನಮ್ಮೆಲ್ಲರನ್ನು ದಿಗ್ಭ್ರಮೆ ಗೊಳಿಸಿದೆ, ಓರ್ವ ಆತ್ಮೀಯ ಮಿತ್ರನನ್ನು ಕಳೆದುಕೊಂಡ ನನಗೆ ಇದರಿಂದ ತೀವ್ರ ಅಘಾತವಾಗಿದೆ ಎಂದು ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಕೆ ಎಂ. ಮುಸ್ತಫ ಶೋಕ ಸಂದೇಶದಲ್ಲಿ ತಿಳಿಸಿರುತ್ತಾರೆ.
ಅವರ ಕುಟುಂಬ ಬಂಧು ಮಿತ್ರಾದಿಗಳಿಗೆ ಅವರ ಆಗಲುವಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿರುತ್ತಾರೆ.


























































































































































































