ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ. ಬಿ. ಎನ್.
ಮಂಗಳೂರು :ಪಾಲಿಕೆಯ 59 ನೇ ಜೆಪ್ಪು ವಾರ್ಡಿನ ಜೆಪ್ಪು ಕುಡುಪಾಡಿಯಲ್ಲಿ ಕಳೆದ ಒಂದು ತಿಂಗಳಿಂದ ಡ್ರೈನೇಜ್ ಕೆಲಸ ನಡೆಯುತ್ತಿದ್ದೂ, ಇಲ್ಲಿನ ಪರಿಸ್ಥಿತಿ ಶೋಚನೀಯವಾಗಿದೆ. ಈ ಬಗ್ಗೆ mp mlas ನ್ಯೂಸ್ ಶಾಸಕ ವೇದವ್ಯಾಸ ಕಾಮತ್ ರಲ್ಲಿ, ಜೆಪ್ಪು ಕುಡಪಾಡಿ ರಸ್ತೆ ಯಾವಾಗ ರಿಪೇರಿಯಾಗಬಹುದೆಂದು ಕೇಳಿದಾಗ, ಕಾಂಗ್ರೆಸ್ ಸರಕಾರದ ದಿವ್ಯ ನಿರ್ಲಕ್ಷ್ಯದಿಂದ ಈ ರೀತಿಯಾಗಿದೆ. ಕೇವಲ ಜೆಪ್ಪು ಕುಡುಪಾಡಿ ಮಾತ್ರವಲ್ಲ, ಮಂಗಳೂರು ದಕ್ಷಿಣದ 38 ವಾರ್ಡ್ ಗಳ ರಸ್ತೆ ದುರಸ್ತಿ, ಡ್ರೈನೇಜ್ ಕಾಮಗಾರಿಗಳಿಗೆ ಕುಡ್ಸೆoಪ್ ನಲ್ಲಿ ಮೀಸಲಿರಿಸಿದ 78 ಕೋಟಿ ರೂಪಾಯಿ ಹಣವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬೇರೆಡೆಗೆ ಡೈವರ್ಟ್ (ವರ್ಗಾಯಿಸಿದೆ)ಮಾಡಿದೆ. ಇದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಬಗ್ಗೆ ಸದನದಲ್ಲಿ ಪ್ರಶ್ನಿಸಿ, ಸಮಸ್ಯೆ ಪರಿಹಾರಕ್ಕೆ ಯತ್ನಿಸಿ ಕಾಂಗ್ರೆಸ್ ಸರಕಾರ ಇಲ್ಲಿನ ಜನರಿಗೆ ಮಾಡಿದ ಅನ್ಯಾಯದ ವಿರುದ್ಧ ಪ್ರತಿಭಟಿಸಿ,ನ್ಯಾಯ ದೊರಕಿಸಿ ಕೊಡುವೆಂದಿದ್ದಾರೆ.



ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಈ ಬಗ್ಗೆ ಗಮನ ಹರಿಸಬೇಕಾಗಿದೆ. ತನ್ನ ಸರಕಾರ ಮಾಡಿದ ಎಡವಟ್ಟಿಗೆ ಸಮಸ್ಯೆ ತಕ್ಷಣ ಸರಿಪಡಿಸಿ ಮಂಗಳೂರು ದಕ್ಷಿಣಕ್ಕೆ ಸಲ್ಲಬೇಕಾದ 78 ಕೋಟಿ ರೂಪಾಯಿ ಹಣವನ್ನು ವಾಪಾಸ್ ಮಾಡುವಲ್ಲಿ ಸೂಕ್ತ ಕ್ರಮ ಜರುಗಿಸಬೇಕಾದದ್ದು ಅವರ ಆದ್ಯ ಕರ್ತವ್ಯವಾಗಿದೆ. ಇಲ್ಲದಿದ್ದಲ್ಲಿ ಅವರು ಉಸ್ತುವಾರಿ ಸಚಿವರಾಗಿದ್ದು ಏನು ಪ್ರಯೋಜನ? ಜನ ಕಾಂಗ್ರೆಸ್ ಗೆ ಹಿಡಿಶಾಪ ಹಾಕುತ್ತಿದ್ದಾರೆ. ಜನರಿಗೆ 5 ಗ್ಯಾರಂಟಿ ಕೊಟ್ಟು ಅದನ್ನು ಅರ್ಧದಲ್ಲೇ ನಿಲ್ಲಿಸುವ ಹಂತ ತಲುಪಿದ ಕಾಂಗ್ರೆಸ್ ಸರಕಾರ ಅಂಗವಿಕಲರ ಮಾಸಾಶನವನ್ನು ಕಸಿದು ಕೊಂಡಿದೆ. ಇದೀಗ ಮಂಗಳೂರು ದಕ್ಷಿಣಕ್ಕೆ ಮೀಸಲಿರಿಸಿದ 78 ಕೋಟಿ ಹಣವನ್ನು ಬೇರೆ ಕಡೆಗೆ ಡೈವರ್ಟ್ ಮಾಡಿ ಬಹುದೊಡ್ಡ ಅನ್ಯಾಯವೆಸಗಿದೆ. ಇಲ್ಲಿನ ಜನ ಕಾಂಗ್ರೆಸ್ ಗೆ ಹಿಗ್ಗಾ ಮುಗ್ಗಾ ಬೈಯ್ಯುತ್ತಿದ್ದಾರೆ.










































































































































































































