`ಅನ್ಯರನ್ನು ನೋಯಿಸದೆ, ಪ್ರೀತಿಸುವುದೇ ಧರ್ಮ’

112.8K Views 24 Sep 2024

ಸಾರ್ವಜನಿಕ ಶ್ರೀಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಧಾನ ಪಾತ್ರ ಪಡೆದಿದೆ. ಧರ್ಮವು ಜಾತಿಯಲ್ಲ, ಧರ್ಮವು ಮತವಲ್ಲ, ಧರ್ಮವು ಪಂಥವೂ ಅಲ್ಲ, ಸಂಪ್ರದಾಯವೂ ಅಲ್ಲ.” ಹಾಗಾದರೆಧರ್ಮ” ಎಂದರೆ ಕಾಯದಿಂದ, ಮಾತಿನಿಂದ, ಮನಸ್ಸಿನಿಂದ ಅನ್ಯ ಜನರಿಗೆ ನೋಯಿಸದೇ ಸಕಲರನ್ನೂ ಪ್ರೀತಿಸುವುದೇ ಧರ್ಮವಯ್ಯಾ…… ಎಂದು ಧಾರ್ಮಿಕ ಮುಂದಾಳು ಪುಂಡಲೀಕ ಹೊಸಬೆಟ್ಟು ಶ್ರೀಗಣೇಶ ಭಜನಾ ಮಂದಿರ, ಜನತಾ ಕಾಲನಿಯಲ್ಲಿ ಜರುಗಿದ 37ನೇ ವರ್ಷದ ಶ್ರೀಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಕ್ತರನ್ನುದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಾಧಕರನ್ನೂ ಅಭಿನಂದಿಸಲಾಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸುರತ್ಕಲ್ ಕ್ಷೇತ್ರದ ಶಾಸಕ ಡಾ. ಭರತ್ ವೈ ಶೆಟ್ಟಿ ಶುಭ ಹಾರೈಸಿದರು. ಕಾರ್ಪೊರೇಟರ್ ಶ್ರೀಮತಿ ಸರಿತಾ ಶಶಿಧರ್, ಜ್ಯೋತಿಷಿ ಸುದರ್ಶನ್ ಬನ್ನಿಂತಾಯ, ಪುಷ್ಪರಾಜ್ ಮುಕ್ಕ, ಭರತ್‌ರಾಜ್ ಕೃಷ್ಣಾಪುರ,ನಾಗೇಶ್ ಬಂಗೇರ, ಶ್ರೀ ಗಣೇಶ ಭಜನಾ ಮಂದಿರದ ಅಧ್ಯಕ್ಷ ಸುಜಿತ್ ಹೆಗ್ಡೆ, ಗೌರವಾಧ್ಯಕ್ಷ ಭೋಜ ಹೆಗ್ಡೆ, ಕಾರ್ಯದರ್ಶಿ ಮಿಲನ್, ಕೋಶಾಧಿಕಾರಿ ಗಣೇಶ್ ಆಚಾರ್ಯ, ಮಹಿಳಾ ಸಮಾಜದ ಅಧ್ಯಕ್ಷೆ ರಾಧಾ ಶೆಟ್ಟಿ, ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಬಿ. ಸುಧಾಮ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಪೂಜಾ ರಾವ್ ಕಾರ್ಯಕ್ರಮ ನಿರೂಪಿಸಿದರು.

Read More News

Scroll to Top