ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ, ಧಾರ್ಮಿಕ ಮುಂದಾಳು, ಜನಪರ ವೈದ್ಯಕೀಯ ಸಮಾಜಸೇವಕ ಸುಳ್ಯದ ಡಾ. ಬಿ. ರಘು ಅವರನ್ನು ನೇಮಕ ಮಾಡಬೇಕೆಂದು ಜನಾಭಿಪ್ರಾಯಗಳು ಕೇಳಿಬರುತ್ತಿವೆ.

ಈ ಬಗ್ಗೆ mpmla’s ನ್ಯೂಸ್ ಟಿವಿ ಡಾ. ಬಿ. ರಘು ಅವರನ್ನು ಸಂಪರ್ಕಿಸಿದಾಗ-“ನಾನು ಉಪ್ಪಿನಂಗಡಿ ಶಾಂತಿನಗರದ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ‍್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಮೊದಲಿನಿಂದಲೂ ದೇವರು,ಧರ್ಮದ ಬಗ್ಗೆ ಅಚಲ ನಂಬಿಕೆ, ಶ್ರದ್ದೆವಿರಿಸಿಕೊಂಡು ಬಂದಿದ್ದೇನೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷನಾಗಲು ಅರ್ಹತೆ ಹೊಂದಿದ್ದೇನೆ. ಇಷ್ಟರತನಕ,ಪರಿಶಿಷ್ಟರಿಗೆ ಇಲ್ಲಿ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ. ನಾನು ಪರಿಶಿಷ್ಟನಾಗಿದ್ದು ಅರ್ಹನಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ದಶಕಗಳ ಕಾಲ ಸಲ್ಲಿಸಿದ ಪ್ರಾಮಾಣಿಕ ಸೇವೆಗೆ ನನ್ನನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷನಾಗಿ ಆಯ್ಕೆ ಮಾಡಿದರೆ ದೇವಸ್ಥಾನದ ಸರ್ವತ್ತೋಮುಖ ಅಭಿವೃದ್ಧಿಗೆ ಶಕ್ತಿಮೀರಿ ದುಡಿಯುತ್ತೇನೆ” ಎಂದು ಹೇಳಿದ್ದಾರೆ.
ಡಾ. ಬಿ. ರಘು ಅವರು ಈ ಹಿಂದೆ ಸರಕಾರಿ ಗಜೆಟೆಡ್ ಅಧಿಕಾರಿಯಾಗಿದ್ದು, ಸರಕಾರಿ ವೈದ್ಯರಾಗಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದಾರೆ.
ಉಪ್ಪಿನಂಗಡಿಯಲ್ಲಿ ಖಾಸಗಿ ಕ್ಲಿನಿಕ್ ಹೊಂದಿರುವ ಅವರು ಕ್ಯಾನ್ಸರ್ ತಜ್ಞರಾಗಿ ಸಾವಿರಾರು ಬಡರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ಮಾಡಿದ್ದಾರೆ.
ನೇರ,ನಡೆ ನುಡಿಯ ನಿಷ್ಕಳಂಕ ವ್ಯಕ್ತಿತ್ವದ ಡಾ. ಬಿ. ರಘು ಅವರು ದೈವ,ದೇವರುಗಳ ಬಗ್ಗೆ ವಿಶೇಷ ನಂಬಿಕೆ, ಭಕ್ತಿಯಿರಿಸಿದ್ದು ಸರ್ವರೀತಿಯಲ್ಲೂ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷರಾಗಲು ಸಮರ್ಥ ಮತ್ತು ಅರ್ಹ ಅಭ್ಯರ್ಥಿಯೆಂದು ಜನಾಭಿಪ್ರಾಯ ತಿಳಿಸಿದೆ.

ಡಾ. ಬಿ.ರಘು ಅವರು ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಸತತ 4 ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕನಿಷ್ಠ ಅಂತರದಿಂದ ಸೋತಿದ್ದರು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿರುವ ಅವರಿಗೆ ಎಂಎಲ್‌ಸಿ ಸ್ಥಾನವಾದರೂ ಸಿಗಬೇಕಿತ್ತು. ನಿಗಮ, ಮಂಡಳಿಗೆ ಅಧ್ಯಕ್ಷರಾಗಿಯಾದರೂ ನೇಮಕವಾಗಬೇಕಿತ್ತು. ಕಾರಣಾಂತರದಿಂದ ಇದು ಸಾಧ್ಯ ಆಗಲಿಲ್ಲ. ಈ ಬಾರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿಯಾದರೂ ಆಯ್ಕೆಯಾಗಲಿ ಎಂದು ಜನರ ಒತ್ತಾಯಗಳು ಕೇಳಿಬರುತ್ತಿವೆ . ಈ ಬಗ್ಗೆ ಪಕ್ಷದ ಹೈಕಮಾಂಡ್ ಡಾ. ಬಿ. ರಘು ಅವರನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷರಾಗಿ ಆಯ್ಕೆ ಮಾಡಲಿ ಎಂದು ಜನರು ಒತ್ತಾಯಿಸಿದ್ದಾರೆ. ಇದು ಜನಾಭಿಪ್ರಾಯ ವರದಿಯಾಗಿದೆ.








































































































































































































