ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಮಿಡ್ ಟೌನ್ ನ 2024-25 ರ ಸಾಲಿನ ಪದಾಧಿಕಾರಿಗಳ ಮತ್ತು ನೂತನ ಸದಸ್ಯರ ಪದಗ್ರಹಣ ಸಮಾರಂಭ.

90.7K Views 9 Aug 2024

ಮಂಗಳೂರು: ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಮಿಡ್ ಟೌನ್ ನ 2024-25 ರ ಸಾಲಿನ ಪದಾಧಿಕಾರಿಗಳ ಮತ್ತು ನೂತನ ಸದಸ್ಯರ ಪದಗ್ರಹಣ ಸಮಾರಂಭವು ಕದ್ರಿ ಪಾರ್ಕ್ ಹತ್ತಿರದ ಲಯನ್ಸ್ ಅಶೋಕ್ ಭವನದಲ್ಲಿ ಇತ್ತೀಚೆಗೆ ಜರಗಿತು. ಪದಗ್ರಹಣ ಸಮಾರಂಭದ ಅಧಿಕಾರಿಯಾಗಿ ಲಯನ್ಸ್ ಕ್ಲಬ್ ಅಂತರರಾಷ್ಟ್ರೀಯ 317ಡಿ ಯ ನಿಕಟಪೂರ್ವ ಜಿಲ್ಲಾ ರಾಜಪಾಲರಾದ ಲಯನ್ ಡಾ. ಮೇಲ್ವಿನ್ ಡಿಸೋಜಾ ಅವರು 2024-25 ರ ಸಾಲಿನ ನೂತನ ಪದಾಧಿಕಾರಿಗಳಿಗೆ ಮತ್ತು ನೂತನ ಸದಸ್ಯರಿಗೆ ಪ್ರಮಾಣ ವಚನ ತತ್ವ ಸಿದ್ಧಾಂತದ ಬಗ್ಗೆ ಬೋಧಿಸಿದರು. ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿಯ ನೂತನ ಅಧ್ಯಕ್ಷ ಶಾಲಿನಿ ಪ್ರಶಾಂತ್ ಸುವರ್ಣ, ಕಾರ್ಯದರ್ಶಿ ವಿಮಲಾ ತುಳಸಿ ರಾಜ್,, ಕೋಶಾಧಿಕಾರಿ ದಿವ್ಯ ಎಚ್ ಪಿ ರೈ , ಲಿಯೋ ಕ್ಲಬ್ಬಿನ ಅಧ್ಯಕ್ಷ ಲಯನ್ಸ್ ಕ್ಲಬ್ ಮಂಗಳೂರು ಮಂಗಳೂರು ಮಿಡ್ ಟೌನ್ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಗಣೇಶ್ ಶೇಟ್, ಶಿವರಾಜ್ ಸಾಮಾನಿ , ನೂತನ ಪದಾಧಿಕಾರಿಗಳಾಗಿ ಚಂದ್ರಹಾಸ ಎನ್, ರಂಜಿತ್ ಶೆಟ್ಟಿ, ಉಷಾ ಶೆಟ್ಟಿ, ಅಂಜನ , ರಾಜೇಶ್, ಕಿಶೋರ್ ಆಚಾರ್ಯ, ರವಿಂದ್ರ, ಎಂ ,ಶೀಲಾ ಪಡೀಲ್, ಪ್ರಶಾಂತ ಸುವರ್ಣ, ಮುಂತಾದವರು ಪ್ರಮಾಣವಚನ ಸ್ವೀಕರಿಸಿದರು. ಪದಗ್ರಹಣ ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ ಅಧ್ಯಕ್ಷರಾದ ಜಿ ಕೆ ಹರಿಪ್ರಸಾದ ರೈ ಕಾರಮೊಗರುರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಗೀತಾ ರಾವ್, ಪ್ರಾಂತೀಯ ಅಧ್ಯಕ್ಷ ವೇಣಿ ಮರೋಳಿ. ಗುರುಪೀತ ಆಳ್ವ ವಲಯ ಅಧ್ಯಕ್ಷ ಚಂದ್ರಕಲ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮದ ಸ್ವಾಗತವನ್ನು ವಿಜಯಕುಮಾರ್ ಶೆಟ್ಟಿ ಸ್ವಾಗತಿಸಿ ವಿಮಲಾ ತುಳಸಿ ರಾಜ್ ಧನ್ಯವಾದಗೈದರು.
ಸನ್ಮಾನ: ಈ ಸಂದರ್ಭದಲ್ಲಿ ತುಳುನಾಡು ಪ್ರತಿಷ್ಠಾಪನದ ಅಧ್ಯಕ್ಷ, ಪತ್ರಕರ್ತ ರಾಜೇಶ್ ಅಮೀನ್ ಮುಲ್ಕಿ ಅವರನ್ನು ಸನ್ಮಾನಿಸಲಾಯಿತು.

Read More News

Scroll to Top