ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿ ಅವರಿಗೆ ಪ್ರತಿಷ್ಠಿತ ಎಕ್ಸೆಲೆನ್ಸ್ ಅವಾರ್ಡ್.

109.8K Views 4 Jul 2024

ಪುಣೆ : ಸುಪ್ರಸಿದ್ದ ಮಕ್ಕಳ ತಜ್ಞ ಡಾ.ಸುಧಾಕಾರ್ ಶೆಟ್ಟಿಯವರು ಪುಣೆಯಲ್ಲಿ ಕಳೆದ 30 ವರ್ಷಗಳಿಂದ ಬೇಬಿ ಫ್ರೆಂಡ್ ವೆಂಬ ಸುಸಜ್ಜಿತವಾದ ಮಕ್ಕಳ ವೈದ್ಯಕೀಯ ಕ್ಲಿನಿಕ್ ಮೂಲಕ ಸಾವಿರಾರು ಮಕ್ಕಳ ಚಿಕಿತ್ಸೆ ಮಾಡಿದ್ದಲ್ಲದೆ, ಸಹಸ್ರ ಸಹಸ್ರ ವೈದ್ಯಕೀಯ ಕ್ಯಾಂಪ್ ಗಳ ಮೂಲಕ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಿ ವೈದ್ಯಕೀಯ ಸಮಾಜ ಸೇವೆಯಲ್ಲಿ ಮೇರು ಸ್ಥಾನದಲ್ಲಿದ್ದಾರೆ. ಇದರ ಜೊತೆಗೆ, ಪುಣೆ ಪೊಲೀಸ್ ಹಾಸ್ಪಿಟಲ್, ಸ್ಟೇಟ್ ರಿಸರ್ವ್ ಪೊಲೀಸ್ ಫೋರ್ಸ್ ಹಾಸ್ಪಿಟಲ್, ರೆಡ್ ಕ್ರಾಸ್ ಸೊಸೈಟಿ ಮತ್ತು ಭಾರತೀಯ ವಿದ್ಯಾ ಪೀಠ ವಿಶ್ವ ವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಹೆಸರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ನಿಸ್ವಾರ್ಥ ಸೇವಾ ಮನೋಭಾವದ ಕಠಿಣ ಪರಿಶ್ರಮಿ ಸರಳ ಸಜ್ಜನ ವೈದ್ಯರಾಗಿರುವ ಇವರು ಮೂಡಬಿದ್ರೆಯಲ್ಲಿಯೂ ಸಂಚಾರಿ ಮಕ್ಕಳ ಕ್ಲಿನಿಕ್ ನ್ನು ಆರಂಭಿಸಿದ್ದು, ಇವರ ವೈದ್ಯಕೀಯ ಸಮಾಜ ಸೇವೆಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ದೊರಕಿವೆ.

ಡಾ. ಸುಧಾಕರ್ ಶೆಟ್ಟಿ ಮತ್ತವರ ವೈದ್ಯಕೀಯ ತಂಡಕ್ಕೆ ಸತತ 4 ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಸಿಕ್ಕಿದೆ. ಪುಣೆ ಕಂಟೋನೂಮೆಂಟ್ ಬೋರ್ಡ್ ನಿಂದ ಶ್ರೇಷ್ಠತೆಯ ಪ್ರಮಾಣ ಪತ್ರ, 2022 ರಲ್ಲಿ ಕರ್ನಾಟಕ ಸರಕಾರದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಪ್ರತಿಷ್ಠಿತ ಚಾರ್ ಸಹಿಬಜಾದೆ ಅವಾರ್ಡ್, ಹೊರನಾಡ ಕನ್ನಡ ರತ್ನ ಪ್ರಶಸ್ತಿ, ಇದೀಗ ರೋಟರಿ ಕ್ಲಬ್ ಪುಣೆಯಿಂದ ಪ್ರತಿಷ್ಠಿತ ಎಕ್ಸೆಲೆನ್ಸ್ ಅವಾರ್ಡ್ ದೊರಕಿದೆ.

Mp mla’s news ಪತ್ರಿಕೆ ಮತ್ತು Mpmlasnewstv 24×7 ನ್ಯೂಸ್ ಪೋರ್ಟಲ್ ಇವರಿಗೆ ಅಕ್ಟೋಬರ್ 13 ರಂದು ಸಂಜೆ 4 ಗಂಟೆಗೆ ಮಂಗಳೂರು ಟೌನ್ ಹಾಲ್ ನಲ್ಲಿ ನಡೆಯುವ 13 ನೇ ಸೌಹಾರ್ದ ಸಂಗಮದಲ್ಲಿ ಸಮಾಜರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲು ನಿರ್ಧರಿಸಿದೆ.

Read More News

Scroll to Top