ಮಂಗಳೂರು: ಇಂದು ನವಭಾರತ್ ಸರ್ಕಲ್ ಓಷನ್ ಪರ್ಲ್ ಸಮೀಪ ಶಾರದ ಕಾಲೇಜು ರಸ್ತೆ ಯ ಗುಲಾಬಿ ಶ್ರೀಪಾದ್ ಎನ್ ಕ್ಲೇವ್ ಕಟ್ಟಡದಲ್ಲಿ ನೂತನವಾಗಿ ಶುಭಾರಂಭಗೊಂಡ ಅಮ್ಟೂರ್ ಡಿಜಿಟಲ್ ಸ್ಟುಡಿಯೊವನ್ನು ಮಾಜಿ ಸಚಿವ, ಯಶಸ್ವಿ ಉದ್ಯಮಿ ಕೃಷ್ಣ ಜೆ. ಪಾಲೇಮಾರ್ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಕಟ್ಟಡ ಮಾಲೀತರಾದ ಮಂಜುನಾಥ ರೇವಂಕರ್, ಯುವ ಉದ್ಯಮಿ ಸೂರಜ್ ಕಲ್ಯ, ಹಿರಿಯ ಪತ್ರಕರ್ತರಾದ ಆನಂದ್ ಶೆಟ್ಟಿ ಪಿ.ಬಿ. ಹರೀಶ್ ರೈ, ವಿಜಯ ಕರ್ನಾಟಕ ಪತ್ರಿಕೆಯ ಜಾಹಿರಾತು ವಿಭಾಗದ ಎಜಿಎಂ ಡಿ. ರಾಮಕೃಷ್ಣ , ಸ್ಟುಡಿಯ ಮಾಲಕರಾದ ಭಾಸ್ಕರ್ ಅಮ್ಟೂರ್ ಉಪಸ್ಠಿತರಿದ್ದರು.



ಇದೇ ಸಂದರ್ಭದಲ್ಲಿ ಯಶ್ ಕರ್ನಾಟಕ ಪತ್ರಿಕೆಯನ್ನು ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಲೋಕಾರ್ಪಣೆ ಮಾಡಿದರು.
ಯಶ್ ಕರ್ನಾಟಕ ಪತ್ರಿಕೆಯ ಪ್ರಕಾಶಕ ಪದ್ಮನಾಭ ಗಟ್ಟಿ ಉಪಸ್ಠಿತರಿದ್ದರು.





















































































































































































