ಅಂಗವೈಕಲ್ಯದಿಂದ ಕೂಡಿದ ಬಡವರಿಗೆ ನೆರವು ಶ್ಲಾಘನೀಯ -ಡಾ.ಎಂ.ಬಿ.ಬೋರ ಲಿಂಗಯ್ಯ

118.9K Views 1 Jun 2024

ಮಂಗಳೂರು : ವೆನ್ಲಾಕ್ ನಲ್ಲಿ ಸುಧಾರಿತ ಎಂಡೊ ಪ್ರೊಸ್ಥೆಟಿಕ್ ಸೆಂಟರ್ ಗೆ ಚಾಲನೆ
ಮಂಗಳೂರು, ಮೇ.31;ದೇಶದಲ್ಲಿ ವಿವಿಧ ಕಾರಣದಿಂದ ಪ್ರತಿ ವರ್ಷ ಲಕ್ಷಾಂತರ ಮಂದಿ ಶಾಶ್ವತ ಅಂಗ ವಿಕಲರಾಗುತ್ತಾರೆ.ಈ ಅಂಗವಿಕಲತೆ ಆರ್ಥಿಕವಾಗಿ ಬಡವರಾಗಿರುವವರನ್ನು ಇನ್ನಷ್ಟು ಕಾಡುತ್ತದೆ ಇಂತಹ ಜನರಿಗೆ ಕೃತಕ ಅಂಗಗಳ ವಿತರಣೆಯನ್ನು ದೀರ್ಘ ಕಾಲದಿಂದ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಅರ್ಹರಿಗೆ ಉಚಿತವಾಗಿ ನೀಡುತ್ತಿರುವುದು ಮಹತ್ವದ ಶ್ಘಾಘನೀಯ ಕಾರ್ಯ ವೆಂದುಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ|ಎಂ.ಬಿ. ಬೋರ ಲಿಂಗಯ್ಯ ತಿಳಿಸಿದರು.


ಅವರು ಲಯನ್ಸ್ ಸಂಸ್ಥೆಯ ವತಿಯಿಂದ ನಗರದ ವೆನ್ಲಾಕ್ ಆಸ್ಪತ್ರೆಯ ಲಿಂಬ್ ಸೆಂಟರ್‌ನಲ್ಲಿ ಶುಕ್ರವಾರ ಕೃತಕ ಅಂಗಾಂಗ ತಯಾರಿಯ ಸುಧಾರಿತ ಎಂಡೊ ಪ್ರೊಸ್ಥೆಟಿಕ್ ಸೆಂಟರನ್ನು ಉದ್ಘಾಟಿಸಿ ಮಾತನಾ ಡುತ್ತಿದ್ದರು.
ಈ ಕೆಲಸದಲ್ಲಿ ತೊಡಗಿರುವ ಡಾ.ಶಾಂತರಾಮ ಶೆಟ್ಟಿಯವರ ನೇತೃತ್ವದ ತಂಡ ಹಾಗೂ ವೆನ್ಲಾಕ್ ನ ಲಯನ್ಸ್ ಲಿಂಬ್ ಸೆಂಟರ್ ನ ಕಾರ್ಯವನ್ನು ಅಭಿನಂದಿಸುವು ದಾಗಿ ತಿಳಿಸಿ ನೂತನ ಕೇಂದ್ರಕ್ಕೆ ಶುಭ ಹಾರೈಸಿದರು.
ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್ ಕೇಂದ್ರದ ಅಧ್ಯಕ್ಷ ಡಾ| ಎಂ. ಶಾಂತಾರಾಮ ಶೆಟ್ಟಿ ಮಾತನಾಡುತ್ತಾ, ದೇಶದಲ್ಲಿ ಮುಂಬಯಿ,ಡೆಲ್ಲಿ, ಕೊಲ್ಕತ್ತಾ, ಬಿಟ್ಟರೆ ಮಂಗಳೂರಿನಲ್ಲಿ ಕೃತಕ ಅವಯವಗಳನ್ನು ನೀಡುವ ಲಿಂಬ್ ಸೆಂಟರ್ ನ್ನು ಲಯನ್ಸ್ ಸಂಸ್ಥೆಯ ಸಹಕಾರದೊಂದಿಗೆ 49 ವರ್ಷಗಳ ಹಿಂದೆ ಆರಂಭಿಸಲಾಗಿದೆ.ಇದುವರೆಗೆ ಸುಮಾರು 80ಸಾವಿರ ಜನರಿಗೆ ಕೃತಕ ಅಂಗಾಂಗಳನ್ನು ನೀಡಲಾಗಿದೆ ಈಗ ಈ ಕೇಂದ್ರ ಮೇಲ್ದರ್ಜೆಗೆ ಏರಿಸುವ ಮೂಲಕ ಇನ್ನಷ್ಟು ಜನರಿಗೆ ನೆರವಾಗಲಿದೆ ಈ ಯೋಜನೆಗೆ ನೆರವು ನೀಡಿದ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳೆಗೆ ಕೃತಜ್ಞತೆ ಸಲ್ಲಿಸುವುದಾಗಿ ಶಾಂತರಾ ಶೆಟ್ಟಿ ತಿಳಿಸಿದರು.
ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಜೆಸಿಂತಾ ಡಿ’ಸೋಜಾ ಮಾತನಾಡುತ್ತಾ, ಡಾ.ಶಾಂತಾ ರಾಮ ಶೆಟ್ಟಿಯವರ ನೇತೃತ್ವದಲ್ಲಿನ ಈ ಲಿಂಬ್ ಸೆಂಟರ್ ಮೂಲಕ ವೆನ್ಲಾಕ್ ನ ಬಹುತೇಕ ಅಂಗಾಂಗ ಕಳೆದು ಕೊಂಡ ಬಡವರು ತಮ್ಮ ಬದುಕಿನಲ್ಲಿ ನವಚೇತನ ಪಡೆಯುವಂತಾಗಿದೆ ಎಂದರು. ಲಯನ್ಸ್ ಗವರ್ನರ್ ಮೆಲ್ವಿನ್ ಡಿ’ಸೋಜಾ, ಮಾಜಿ ಲಯನ್ಸ್ ಗವರ್ನರ್ ಗಳಾದ ವಸಂತ ಶೆಟ್ಟಿ ,ಸಂಜಿತ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದ ವೇದಿಕೆಯಲ್ಲಿ ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಶೀನ ಪೂಜಾರಿ,ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್ ನ ಸಂಚಾಲಕ ಡಾ.ಕೆ.ಆರ್. ಕಾಮತ್,ವೆನ್ಲಾಕ್ ಲಿಂಬ್ ಸೆಂಟರ್ ನ ವ್ಯವಸ್ಥಾಪಕ ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವೆನ್ಲಾಕ್ವ ಲಯನ್ಸ್ ಲಿಂಬ್ ಸೆಂಟರ್ ನ ಕಾರ್ಯದರ್ಶಿ ಮುರಳೀಧರ ಲಮಾಣಿ ವಂದಿಸಿದರು.
ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್ ವತಿಯಿಂದ ಕೃತಕ ಅಂಗಾಂಗಗಳನ್ನು ಅತಿಥಿಗಳು ವಿತರಿಸಿದರು.

Read More News

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ನಮ್ಮ ಟಿವಿ ಚಾನೆಲ್ ನ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ ಮತ್ತು ಅವರ ಸಹೋದರರಾದ ದೇವಿಚರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ ಯವರ ಮಾತೃಶ್ರೀ,ಶಿಕ್ಷಣ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕಿ ಹಾಗೂ ಡಾ. ಎ. ಸದಾನಂದ ಶೆಟ್ಟಿಯವರ ಸಹೋದರಿ ಎಂ. ರತ್ನಕಾಂತಿ ಶೆಟ್ಟಿ ಅವರಿಗೆ ಗಣ್ಯರಿಂದ ಶ್ರದ್ದಾಂಜಲಿ

ಕಸ್ತೂರಿ ರಂಗನ್ ವರದಿ ಆಧಾರಿತ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳ 7 ನೇ ಕರಡು ಅಧಿಸೂಚನೆ ಬಗ್ಗೆ ಸದನದ ಗಮನ ಸೆಳೆದ ಶಾಸಕ ಗಂಟಿಹೊಳೆ. ಗ್ರಾಮೀಣ ಜನರ ಆತಂಕ ನಿವಾರಣೆ ಹಾಗೂ ಜೀವನೋಪಾಯಗಳಿಗೆ ಆಗಬಹುದಾದ ಸಂಭವನಿಯ ಅಪಾಯಗಳ ಬಗ್ಗೆ ಪ್ರಸ್ತಾಪಿಸಿದ ಬೈಂದೂರು ಶಾಸಕರು. ಜನರಿಗೆ ಸ್ಪಷ್ಟ ಮಾಹಿತಿ ಹಾಗೂ ಅಧಿಸೂಚನೆ ವಿರುದ್ಧ ಸ್ಪಷ್ಟ ವಾದ ಮಂಡನೆ ಸಲುವಾಗಿ ಒಂದು ಬಾರಿ ಅಧಿಸೂಚಿತ ಗ್ರಾಮಗಳನ್ನು ಭೌತಿಕ ಸರ್ವೇಗೆ ಒಳಪಡಿಸಲು ಆಗ್ರಹ. 7 ನೇ ಕರಡು ಅಧಿಸೂಚನೆ ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರು.

Scroll to Top