ಬಂಟ್ವಾಳ: 13ನೇ ವರ್ಷದ ಹೊನಲು ಬೆಳಕಿನ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳವು ಬಂಟ್ವಾಳ ತಾಲೂಕು ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ಮಾರ್ಚ್ 2ನೇ ಶನಿವಾರ ಬೆಳಿಗ್ಗೆ 8.45ರಿಂದ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷರಾದ ಬೆಳ್ಳಿಪ್ಪಾಡಿ ರಮಾನಾಥ ರೈಯವರ ಗೌರವಾಧ್ಯಕ್ಷತೆಯಲ್ಲಿ ನಡೆಯಲಿದೆ.
ಅತ್ಯಂತ ಜನಪ್ರಿಯ ಮತ್ತು ಜನಮನ್ನಣೆ ಗಳಿಸಿರುವ ಮೂಡೂರು-ಪಡೂರು ಕಂಬಳವು ತುಳುನಾಡಿನ ಪುರಾತನ ಜಾನಪದ ಕ್ರೀಡಾಲೋಕದಲ್ಲಿ ಹೊಸ ಚರಿತ್ರೆಯನ್ನು ಬರೆದಿದ್ದು, ಗಣ್ಯಾತಿಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.




ಮಾರ್ಚ್ 2ರ ಶನಿವಾರ ಬೆಳಿಗ್ಗೆ 8.45ಕ್ಕೆ ಕರ್ನಾಟಕ ಆರ್ಯ-ಈಡಿಗ ಮಹಾ ಸಂಸ್ಥಾನ ಸೋಲೂರು ಇದರ ಪೀಠಾಧಿಪತಿ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮತ್ತು ಆಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಮೂಡೂರು-ಪಡೂರು ಕಂಬಳವನ್ನು ಉದ್ಘಾಟಿಸಲಿದ್ದಾರೆ.
ಕೆಪಿಸಿಸಿ ಉಪಾಧ್ಯಕ್ಷ ಮತ್ತು ಮಾಜಿ ಸಚಿವರಾಗಿರುವ ಬೆಳ್ಳಿಪ್ಪಾಡಿ ರಮಾನಾಥ ರೈಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವೆಲಂಕಣಿ ಧರ್ಮಕೇಂದ್ರ ಫರ್ಲಾದ ಧರ್ಮಗುರುಗಳಾದ ವಂ| ಜೋನ್ ಪ್ರಕಾಶ್ ಡಿ’ಸೋಜ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ನಮ್ಮ ಕುಡ್ಲ ವಾಹಿನಿ ಮುಖ್ಯಸ್ಥ ಲೀಲಾಕ್ಷ ಕರ್ಕೆರ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಉದ್ಯಮಿ ರಘುನಾಥ್ ಸೋಮಯಾಜಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉಮೇಶ್ ಶೆಟ್ಟಿ ಮಾಣಿಸಾಗು ಮತ್ತು ಲಿಯೋ ಫೆರ್ನಾಂಡಿಸ್ ಸರಪಾಡಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಾರ್ಚ್ 2 ರ ಶನಿವಾರ ಸಂಜೆ 7.00ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಿ.ರಮಾನಾಥ ರೈಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್, ಸಾರಿಗೆ ಮತ್ತು ಮುಜುರಾಯಿ ಸಚಿವ ರಾಮಲಿಂಗ ರೆಡ್ಡಿ, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವರ ದಿನೇಶ್ ಗುಂಡೂರಾವ್ ಸಹಿತ ಕರ್ನಾಟಕ ಸರಕಾರದ ಬಹುತೇಕ ಮಂತ್ರಿಗಳು, ರಾಮನಗರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಸೇರಿದಂತೆ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬಹುಮಾನಗಳ ವಿವರ: ಕನ ಹಲಗೆ 7 1/2 ಕೋಲು ನಿಶಾನಿಗೆ ನೀರು ಹಾಯಿಸಿದ ಕೋಣಗಳಿಗೆ 2 ಪವನ್ ಚಿನ್ನ, ಕನ ಹಲಗೆ 6 1/2 ಕೋಲು ನಿಶಾನಿಗೆ ನೀರು ಹಾಯಿಸಿದ ಕೋಣಗಳಿಗೆ 1 ಪವನ್ ಚಿನ್ನ, ಹಗ್ಗ ಹಿರಿಯ ಪ್ರಥಮ 2 ಪವನ್ ಚಿನ್ನ, ದ್ವಿತೀಯ 1 ಪವನ್ ಚಿನ್ನ, ಹಗ್ಗ ಕಿರಿಯ ಪ್ರಥಮ 1 ಪವನ್, ದ್ವಿತೀಯ 1/2 ಪವನ್. ನೇಗಿಲು ಹಿರಿಯ ಪ್ರಥಮ 2 ಪವನ್, ದ್ವಿತಿಯ 1 ಪವನ್, ನೇಗಿಲು ಕಿರಿಯ ಪ್ರಥಮ 1 ಪವನ್, ದ್ವಿತೀಯ 1/2 ಪವನ್, ಅಡ್ಡಹಲಗೆ ಪ್ರಥಮ 1 ಪವನ್, ದ್ವಿತೀಯ 1/2 ಪವನ್ ಹಾಗೂ ವಿಜೇತರಿಗೆ ಮೂಡೂರು-ಪಡೂರು ಟ್ರೋಫಿ ನೀಡಿ ಗೌರವಿಸಲಾಗುವುದು. ಕಂಬಳದಲ್ಲಿ ಪ್ರಧಾನ ತೀರ್ಪುಗಾರರಾಗಿ ಕೆ. ಗುಣಪಾಲ ಕಡಂಬ, ಅಭ್ಯುದಯ ಶಿರ್ಲಾಲು, ಮುಖ್ಯ ತೀರ್ಪುಗಾರರಾಗಿ ಎಂ. ರಾಜೀವ ಶೆಟ್ಟಿ ಎಡ್ತೂರು, ತೀರ್ಪುಗಾರರ ಸಂಚಾಲಕರಾಗಿ ವಿಜಯ ಕುಮಾರ್ ಕಂಗಿನಮನೆ, ತೀರ್ಪುಗಾರರಾಗಿ ಸುಧಾಕರ ಶೆಟ್ಟಿ ಮೊಗೆರೋಡಿ, ನಿರಂಜನ ರೈ ಮಠಂತಬೆಟ್ಟು ಸತೀಶ್ ಹೊಸ್ಮಾರು, ರವೀಂದ್ರ ಕುಮಾರ್ ಕುಕ್ಕುಂದೂರು, ವಿದ್ಯಾಧರ್ ಜೈನ್ ರೆಂಜಾಳ, ಗಂತಿನ ವೀಕ್ಷಕ ವಿವರಣೆಗಾರರಾಗಿ ಮಹಾವೀರ ಜೈನ್ ಕಜೆ, ಸುದೀಪ್ ಹೆಗ್ಡೆ ಶಿರ್ಲಾಲು, ಪ್ರಕಾಶ್ ಕಜೆಕಾರು, ರಾಜಶೇಖರ್ ಆಜ್ರಿ ನಾವೂರ, ಉಮೇಶ್ ಕರ್ಕೇರ, ಯಶವಂತ ಕಟಪಾಡಿ, ಸುದರ್ಶನ ನಾಯ್ಕ್ ಕಂಪ, ರಾಜೀವ ಕಕ್ಕಪದವು, ವೀಡಿಯೋ ತೀರ್ಪುಗಾರರಾಗಿ ಜಾನ್ ಡಿ’ಸೋಜ ಸರಪಾಡಿ, ಕೋಣಗಳನ್ನು ಬಿಡಿಸುವವರು ಅಪ್ಪು ಯಾನೆ ವಲೇರಿಯನ್ ಡೇಸಾ ಅಲ್ಲಿಪಾದೆ, ಸುಧೀರ್ ಕುಮಾರ್ ಆರಿಗ ಬಂಗಾಡಿ, ಜನಾರ್ಧನ ನಾಯ್ಕ್ ಕರ್ಪೆ, ಅಜಿತ್ ಕುಮಾರ್ ನಾಯ್ಕ್ ಈದು, ವಿಶ್ವನಾಥ ಪ್ರಭು ಶಿರ್ವ, ಬರವಣಿಗೆ ಹಾಗೂ ದಾಖಲಾತಿಗಾರರಾಗಿ ಸಂಕಪ್ಪ ಶೆಟ್ಟಿ ನಗ್ರಿ, ದಿನೇಶ್ ಕಕ್ಕಪದವು, ಲೇಸರ್ ತೀರ್ಪುಗಾರರಾಗಿ ಸ್ಕೈವ್ಯೂ ಕಾರ್ಕಳ, ಗಂತಿನಲ್ಲಿ ಸಹಕಾರರಾಗಿ ವಿನ್ಸೆಂಟ್ ಪಿಂಟೋ ಅಲ್ಲಿಪಾದೆ, ಅಖಿಲೇಶ್ ಶೆಟ್ಟಿ ಕೂರ್ಯಾಳ, ರೋಹಿತ್‌ನಾಥ್ ಕೋರಿಂಜ, ಉಮೇಶ್ ಜಕ್ರಿಬೆಟ್ಟು, ಮುತ್ತಪ್ಪ ನೆಕ್ಕಿಲಾರು, ಅರುಣ್‌ಕುಮಾರ್ ಕೋರಿಂಜ, ವಾಲ್ಟಾರ್ ರೋಡ್ರಿಗಸ್ ಪೊನ್ನಂಗಿಲ ಮೊದಲಾದವರು ಭಾಗವಹಿಸಲಿದ್ದಾರೆ.




ಸ್ಪರ್ಧಾ ಕೋಣಗಳು ಕರೆಗೆ ಇಳಿಯುವ ಸಮಯ ನೇಗಿಲು ಕಿರಿಯ 9 ಗಂಟೆಗೆ, ನೇಗಿಲು ಹಿರಿಯ 11 ಗಂಟೆಗೆ, ಹಗ್ಗ ಹಿರಿಯ ಮತ್ತು ಕಿರಿಯ ಮಧ್ಯಾಹ್ನ 3.30ಕ್ಕೆ, ಕನ ಹಲಗೆ ಮತ್ತು ಅಡ್ಡ ಹಲಗೆ ಸಂಜೆ 5 ಗಂಟೆ ಆಗಿರುತ್ತದೆ. ಜಿಲ್ಲಾ ಕಂಬಳ ಸಮಿತಿಯ ಸೂಚನೆಯಂತೆ 24 ಗಂಟೆಯೊಳಗೆ ಸ್ಪರ್ಧೆ ಮುಗಿಯಬೇಕಾಗಿರುವುದ್ದರಿಂದ ಕೋಣಗಳ ಯಜಮಾನರು ಸಹಕರಿಸಬೇಕಾಗಿ ವಿನಂತಿ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಕೋಣಗಳ ಯಜಮಾನರು ಕೋಣಗಳ ಜೊತೆಗೆ ಆಗಮಿಸಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಬಿ. ರಮಾನಾಥ ರೈ, ಅಧ್ಯಕ್ಷರಾದ ಪಿಯೂಸ್ ಎಲ್. ರೊಡ್ರಿಗಸ್, ಸಂಚಾಲಕರಾದ ಬಿ. ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮತ್ತು ಕಂಬಳ ಸಮಿತಿಯ ಸರ್ವ ಪದಾಧಿಕಾರಿಗಳು, ಸರ್ವ ಸದಸ್ಯರು ವಿನಂತಿಸಿದ್ದಾರೆ. ಕಂಬಳ ಸಮಿತಿಯಲ್ಲಿ ರಾಜೀವ ಶೆಟ್ಟಿ ಎಡ್ತೂರು (ಪ್ರಧಾನ ಕಾರ್ಯದರ್ಶಿ), ಪಿಲಿಫ್ ಫ್ರೆಂಕ್ (ಕೋಶಾಧಿಕಾರಿ), ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಎಂ.ಎಸ್. ಮೊಹಮ್ಮದ್, ಅನಿಲ್ ಮೆನೇಜಸ್ ಮೊದಲಾದವರು ಉಪಾಧ್ಯಕ್ಷರುಗಳಾಗಿರುತ್ತಾರೆ. ಮೂಡೂರು – ಪಡೂರು ಕಂಬಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಂಬಳವನ್ನು ಚಂದಗಾಣಿಸಿಕೊಡಬೇಕೆಂದು ಕಂಬಳ ಸಮಿತಿ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.





















































































































































































