ರಾಜ್ಯ ಪ್ರಶಸ್ತಿ ವಿಜೇತ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಚಿತ್ರಕಥೆ, ನಿರ್ದೇಶನದ ಕನ್ನಡ ಸಿನೆಮಾ ‘ಪುರುಷೋತ್ತಮನ ಪ್ರಸಂಗ’ ಮಾರ್ಚ್ 1 ರಂದು ರಾಜ್ಯಾದ್ಯಂತ ತೆರೆಗೆ

110.5K Views 26 Feb 2024

ಮಂಗಳೂರು : ರಾಷ್ಟ್ರಕೂಟ ಪಿಚರ್ಸ್ ಲಾಂಛನದಲ್ಲಿ ವಿ.ರವಿ ಕುಮಾರ್ ನಿರ್ಮಾಣದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ತಯಾರಾದ ಪುರುಷೋತ್ತಮನ ಪ್ರಸಂಗ ಸಿನಿಮಾ ಮಾರ್ಚ್ 1 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ಒಂದೇ ಹಂತದಲ್ಲಿ ಸತತ 29 ದಿನಗಳ ಕಾಲ ಪುರುಷೋತ್ತಮನ ಪ್ರಸಂಗ ಸಿನಿಮಾಕ್ಕೆ ಚಿತ್ರೀಕರಣ ನಡೆದಿತ್ತು. ಮಂಗಳೂರು ಸುತ್ತಮುತ್ತ ಬಜಪೆ, ಮುರನಗರ, ಕೆಂಜಾರ್ ಮೊದಲಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದ್ದು, ದುಬಾಯಿಯಲ್ಲಿ 7 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು, ಉತ್ತಮ ಹಾಸ್ಯ ಕಥಾಹಂದರವನ್ನು ಒಳಗೊಂಡಿರುವ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವೂ ಇಲ್ಲಿ ಕತೆಗೆ ಪೂರಕವಾಗಿ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಈ ಸಿನಿಮಾದ ಮೂಲಕ ಅಜಯ್ ಎಂಬ ನವ ನಟನನ್ನು ಹಾಗ ರಿಷಿಕಾ ನಾಯ್ಕ ಮತ್ತು ದೀಪಿಕಾ ಎಂಬವರನ್ನು ದೇವದಾಸ್ ಕಾಪಿಕಾಡ್ ಕನ್ನಡಕ್ಕೆ ಪರಿಚಯಿಸಿದ್ದಾರೆ. ಹಾಸ್ಯ ದಿಗ್ಗಜರನ್ನೊಳಗೊಂಡ ತಾರಾಗಣದಲ್ಲಿ ಬಹಳಷ್ಟು ಮಂದಿ ಹೊಸಬರಿಗೂ ಅವಕಾಶ ನೀಡಲಾಗಿದೆ.

ಚಿತ್ರಗಳು: ಸತೀಶ್ ಕಾಪಿಕಾಡ್

ಕನ್ನಡದಲ್ಲಿ ನಟನಾಗಿ ಗುರುತಿಸಿ ಹೆಸರು ಗಳಿಸಿರುವ ದೇವದಾಸ್ ಕಾಪಿಕಾಡ್ ಮೊದಲನೇ ಬಾರಿಗೆ ಕನ್ನಡದಲ್ಲಿ ಕತೆ ಚಿತ್ರಕತೆ ಸಾಹಿತ್ಯ ಸಂಭಾಷಣೆ ಬರೆದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅಲ್ಲದೆ ಒಂದು ಪ್ರಮುಖ ಪಾತ್ರದಲ್ಲೂ ಅವರು ಕಾಣಿಸಿ ಕೊಂಡಿದ್ದಾರೆ. ಇವರಿಗೆ ನಿರ್ದೇಶನದಲ್ಲಿ ಅರ್ಜುನ್ ಕಾಪಿಕಾಡ್ ಸಹ ನಿರ್ದೇಶಕರಾಗಿ ಸಾಥ್ ನೀಡಿದ್ದಾರೆ.ನಿರ್ಮಾಪಕರು: ವಿ. ರವಿ ಕುಮಾರ್.
ತಾರಾಗಣದಲ್ಲಿ ಅಜಯ್ ನಾಯಕ ನಟ,ರಿಷಿಕಾ ನಾಯ್ಕ್ (ನಾಯಕಿ) ದೀಪಿಕಾ (ನಾಯಕಿ) ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸಾಯಿಕೃಷ್ಣ ಕುಡ್ಲ, ಶೋಭರಾಜ್ ಪಾವೂರು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ಜ್ಯೋತಿಷ್ ಶೆಟ್ಟಿ, ಶಿವ ಪ್ರಕಾಶ್ ಪೂಂಜ ಹರೇಕಳ, ರೂಪಾ ವರ್ಕಾಡಿ ಹಾಗೂ ಇತರರು ಇದ್ದಾರೆ.
ತಾಂತ್ರಿಕ ವರ್ಗ, ಸಹ ನಿರ್ದೇಶನ: ಅರ್ಜುನ್ ಕಾಪಿಕಾಡ್ ,ಸಹಾಯಕ ನಿರ್ದೇಶನ: ಅರ್ಜುನ್ ಕಜೆ, ಪ್ರಶಾಂತ್ ಕಲ್ಲಡ್ಕ, ವಿಕ್ರಮ್ ದೇವಾಡಿಗ,ಅನೂಪ್ ಸಾಗರ್, ಕ್ಯಾಮರಾ -ವಿಷ್ಣು, ಸಹಾಯ: ಪುಟ್ಟ, ಸಂಗೀತ -ನಕುಲ್ ಅಭಯಂಕರ್, ವಸ್ತ್ರವಿನ್ಯಾಸ – ಶರತ್ ಪೂಜಾರಿ,ಸಹ ನಿರ್ಮಾಪಕರು- ಅಬೂಬಕರ್ ಪುತ್ತಕ, ಲೈನ್ ಪ್ರೊಡ್ಯುಸರ್ – ಸಂದೀಪ್ ಶೆಟ್ಟಿ, ಪ್ರೊಡಕ್ಷನ್ ಟೀಮ್ – ಸಂತೋಷ್,ರಮಾನಂದ, ಮುನ್ನ, ರಾಜೇಶ್.
ಮಾರ್ಚ್ 1 ರಂದು “ಪುರುಷೋತ್ತಮನ ಪ್ರಸಂಗ” ಹಾಸ್ಯ ಪ್ರಧಾನ ಸಿನಿಮಾ ತೆರೆಗೆ ಬರಲಿದೆ. ದೇವದಾಸ್ ಕಾಪಿಕಾಡ್ ಅವರು ಪತ್ರಿಕಾಗೋಷ್ಟಿಯಲ್ಲಿ ಪುರುಷೋತ್ತಮನ ಪ್ರಸಂಗ ಕನ್ನಡ ಚಿತ್ರದ ಬಗ್ಗೆ ವಿವರ ನೀಡಿದರು. ಚಿತ್ರದ ನಿರ್ಮಾಪಕ ವಿ. ರವಿ ಕುಮಾರ್,ಸಂಶುದ್ದೀನ್, ಸಹ ನಿರ್ದೇಶಕ ಅರ್ಜುನ್ ಕಾಪಿಕಾಡ್, ನಾಯಕ ನಟ ಅಜಯ್, ನಾಯಕಿ ನಟಿ ದೀಪಿಕಾ ದಿನೇಶ್ ಮೊದಲಾದವರು ಉಪಸ್ಥಿತರಿದ್ದು ಸಿನೆಮಾದ ಬಗ್ಗೆ ಮಾತಾಡಿದರು. ಈ ಸಿನೆಮಾವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಥಿಯೇಟರ್ ಗೆ ಬಂದು ನೋಡುವುದರ ಮೂಲಕ ಕನ್ನಡ ಚಿತ್ರವನ್ನು ಪ್ರೋತ್ಸಾಹಿಸಬೇಕೆಂದು ದೇವದಾಸ್ ಕಾಪಿಕಾಡ್ ಮತ್ತು ಚಿತ್ರ ತಂಡ ವಿನಂತಿಸಿದೆ.

Read More News

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ನಮ್ಮ ಟಿವಿ ಚಾನೆಲ್ ನ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ ಮತ್ತು ಅವರ ಸಹೋದರರಾದ ದೇವಿಚರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ ಯವರ ಮಾತೃಶ್ರೀ,ಶಿಕ್ಷಣ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕಿ ಹಾಗೂ ಡಾ. ಎ. ಸದಾನಂದ ಶೆಟ್ಟಿಯವರ ಸಹೋದರಿ ಎಂ. ರತ್ನಕಾಂತಿ ಶೆಟ್ಟಿ ಅವರಿಗೆ ಗಣ್ಯರಿಂದ ಶ್ರದ್ದಾಂಜಲಿ

ಕಸ್ತೂರಿ ರಂಗನ್ ವರದಿ ಆಧಾರಿತ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳ 7 ನೇ ಕರಡು ಅಧಿಸೂಚನೆ ಬಗ್ಗೆ ಸದನದ ಗಮನ ಸೆಳೆದ ಶಾಸಕ ಗಂಟಿಹೊಳೆ. ಗ್ರಾಮೀಣ ಜನರ ಆತಂಕ ನಿವಾರಣೆ ಹಾಗೂ ಜೀವನೋಪಾಯಗಳಿಗೆ ಆಗಬಹುದಾದ ಸಂಭವನಿಯ ಅಪಾಯಗಳ ಬಗ್ಗೆ ಪ್ರಸ್ತಾಪಿಸಿದ ಬೈಂದೂರು ಶಾಸಕರು. ಜನರಿಗೆ ಸ್ಪಷ್ಟ ಮಾಹಿತಿ ಹಾಗೂ ಅಧಿಸೂಚನೆ ವಿರುದ್ಧ ಸ್ಪಷ್ಟ ವಾದ ಮಂಡನೆ ಸಲುವಾಗಿ ಒಂದು ಬಾರಿ ಅಧಿಸೂಚಿತ ಗ್ರಾಮಗಳನ್ನು ಭೌತಿಕ ಸರ್ವೇಗೆ ಒಳಪಡಿಸಲು ಆಗ್ರಹ. 7 ನೇ ಕರಡು ಅಧಿಸೂಚನೆ ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರು.

Scroll to Top