ಮೂಲ್ಕಿ ಸುಂದರರಾಮ ಶೆಟ್ಟಿ ನಗರದ ರೂವಾರಿ ಹಿರಿಯ ರಾಜಕೀಯ ನೇತಾರ ಡಾ. ಅಗರಿ ನವೀನ್ ಭಂಡಾರಿ

100.3K Views 10 Feb 2024

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅಗರಿ ನವೀನ್ ಭಂಡಾರಿಯವರು ಪ್ರತಿಷ್ಠಿತ ಬೆಳ್ಳಿಪ್ಪಾಡಿ, ಅಗರಿ ಮನೆತನದವರು. ಕೆಪಿಸಿಸಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು ಕಾಂಗ್ರೆಸ್‌ನಲ್ಲಿ ಸುದೀರ್ಘ ಅವಧಿಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಶ್ರೇಷ್ಠ ಸಂಘಟನಾ ಚತುರ, ಯಶಸ್ವಿ ನಾಯಕ, ಅದ್ವಿತೀಯ ಸಂಘಟಕ, ಸಮಾಜಸೇವಕರಾಗಿರುವ ಅವರು ತನ್ನ ಸಂಘಟನಾ ಸಾಮರ್ಥ್ಯದಿಂದಲೇ ಜನಮನ ಗೆದ್ದ ಸಮರ್ಥ ನೇತಾರರಾಗಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರ ವಲಯದ ಮಾಜಿ ನಿರ್ದೇಶಕರಾಗಿದ್ದ ಡಾ. ಅಗರಿ ನವೀನ್ ಭಂಡಾರಿಯವರು ತನಗೆ ಕಾಂಗ್ರೆಸ್ ಪಕ್ಷ ನೀಡಿದ್ದ ಹಲವಾರು ಮಹತ್ತರ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

2008ರಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿ ಮತ್ತು 20013ರಲ್ಲಿ ದಕ್ಷಿಣ ಕನ್ನಡದ ಪುತ್ತೂರು ವಿಧಾನಸಭಾ ಕ್ಷೇತ್ರಗಳಿಂದ ಇವರಿಗೆ ಅರ್ಹವಾಗಿ ಕಾಂಗ್ರೆಸ್ ಪಕ್ಷ ಎಂಎಲ್‌ಎ ಟಿಕೇಟ್ ನೀಡುವುದರಲ್ಲಿತ್ತು. ಆದರೆ, ಕೊನೆಕ್ಷಣದಲ್ಲಿ ಕಾರಣಾಂತರದಿಂದ ಟಿಕೇಟ್ ಕೈ ತಪ್ಪಿತ್ತು.

ಪ್ರಸ್ತುತ,ಬೆಂಗಳೂರಿನಲ್ಲಿ ನೆಲೆಸಿರುವ ಡಾ. ಅಗರಿ ನವೀನ್ ಭಂಡಾರಿ, ಮತ್ತವರ ಕುಟುಂಬ ತೋರಿಸಿರುವ ಪಕ್ಷ ನಿಷ್ಠೆ ಹಾಗೂ ಡಾ.ಅಗರಿ ನವೀನ್ ಭಂಡಾರಿಯವರ ಸಾಮರ್ಥ್ಯ, ರಾಜಕೀಯ ತಂತ್ರಗಾರಿಕೆ , ಸಂಘಟನಾ ಶಕ್ತಿ ಮೊದಲಾದ ಗುಣ ವಿಶೇಷತೆಗಳನ್ನು ಗುರುತಿಸಿಕೊಂಡಿರುವ ಪಕ್ಷದ ಹೈಕಮಾಂಡ್ ಇವರಿಗೆ ಉತ್ತಮ ಹಾಗೂ ಜವಾಬ್ದಾರಿಯುತ ಸೂಕ್ತ ಹುದ್ದೆ ನೀಡಲು ನಿರ್ಧರಿಸಿರುವ ಬಗ್ಗೆ ವರದಿಯಾಗಿದೆ.ಇದು ಜನಾಶಯವೂ ಆಗಿದೆ.

ಡಾ. ಅಗರಿ ನವೀನ್ ಭಂಡಾರಿಯವರ ಅಜ್ಜ ಕೂಡಾ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸಿದವರು. ಬೆಳ್ಳಿಪ್ಪಾಡಿ ಯಜಮಾನ ದಿ. ಸಂಕಪ್ಪ ರೈ ಮತ್ತು ದಿ. ತಾರಿಪಡ್ಪು ಮಂಜಕ್ಕೆ ಹೆಂಗ್ಸು ದಂಪತಿಗಳ ಮೊಮ್ಮಗ, ಅಗರಿ ಲಕ್ಕಪ್ಪ ಭಂಡಾರಿ ಮತ್ತು ಲೀಲಾವತಿ ಭಂಡಾರಿ ಅವರ ಸುಪುತ್ರರಾಗಿ 1952, ಜ. 17ರಂದು ಜನಿಸಿದ ಡಾ.ಅಗರಿ ನವೀನ್ ಭಂಡಾರಿಯವರು ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ಚಿಕ್ಕ ಮುಡ್ನೂರು ಹಾಗೂ ಪುತ್ತೂರಿನಲ್ಲಿ ಮುಗಿಸಿರುವ ಇವರು ಕಾನೂನು ಪದವೀಧರರು.

ಎಂ.ಎ, ಎಲ್‌ಎಲ್‌ಬಿ, ಪಿಜಿಡಿಐಆರ್‌ಪಿಎಂ ಪದವಿ ಹೊಂದಿರುವ ಇವರು ರಾಜ್ಯಶಾಸ್ತ್ರವನ್ನು ಮುಖ್ಯ ವಿಷಯವಾಗಿಸಿಕೊಂಡು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ.ಸ್ನಾತಕೋತ್ತರ ಪದವಿಯನ್ನು ಪಡೆದವರು.

ಭಾರತೀಯ ವಿದ್ಯಾಭವನದಲ್ಲಿ ಕೈಗಾರಿಕಾ ಸಂಬಂಧಗಳು ಮತ್ತು ಸಿಬ್ಬಂದಿ ನಿರ್ವಹಣೆಯಲ್ಲಿ ಉನ್ನತ ವ್ಯಾಸಂಗವನ್ನು ಓದಿದ್ದಾರೆ. 1982ರಲ್ಲಿ ಆಪ್ಟೆಕ್ ಕಂಪ್ಯೂಟರ್ಸ್ ನಲ್ಲಿ ಕಂಪ್ಯೂಟರ್ ಸಾಫ್ಟ್ವೇರ್ ಸೈಯನ್ಸ್ ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಹಿಂದಿ ಪ್ರಬೋಧ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ನ್ಯಾಯವಾದಿಯಾಗಿಯೂ ಸೇವೆ ಸಲ್ಲಿಸಿರುವ ಇವರು ಬೆಂಗಳೂರಿನ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್‌ನ ಸಕ್ರಿಯ ಸದಸ್ಯರಾಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಸಹಕಾರಿ ರಂಗದಲ್ಲಿ ಸಕ್ರಿಯರಾಗಿದ್ದಾರೆ.

ಕರ್ನಲ್ ಎ. ಜಗಜೀವನ್ ಭಂಡಾರಿ, ಎ. ಮೋಹನ್‌ದಾಸ್ ಭಂಡಾರಿ (ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ), ದಿ. ಜೀವನ್ ಭಂಡಾರಿ (ಕಾಂಗ್ರೆಸ್ ನಾಯಕ), ಭಗವನ್‌ದಾಸ್ ಭಂಡಾರಿ (ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ), ಶೋಭಾ ಸಿ. ಶೆಟ್ಟಿ ಮತ್ತು ಚಂದ್ರಹಾಸ ಶೆಟ್ಟಿ (ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ) ಅವರು ಡಾ. ಅಗರಿ ನವೀನ್ ಭಂಡಾರಿಯವರ ಒಡಹುಟ್ಟಿದವರು.

ಕೃಷಿ ಹಿನ್ನಲೆಯ ಕುಟುಂಬದವರಾಗಿದ್ದು, ರಾಜಕೀಯವಾಗಿಯೂ ಹೆಸರು, ಜನಪ್ರಿಯತೆ, ಉನ್ನತ ಹುದ್ದೆ ಅಲಂಕರಿಸಿದ ಹೆಗ್ಗಳಿಕೆ ಇವರದು. ಮಾನವತಾವಾದಿಯಾಗಿ, ಸೌಮ್ಯ ಸ್ವಭಾವದವರಾಗಿದ್ದು ಎಲ್ಲರೊಂದಿಗೂ ಸ್ನೇಹ ಪರತೆಯಿಂದಿದ್ದವರು. ಆದ್ದರಿಂದಲೇ ಇವರೆಂದರೆ ಎಲ್ಲರಿಗೂ ತುಂಬಾ ಪ್ರೀತಿ, ಅಚ್ಚುಮೆಚ್ಚು.

ಡಾ. ಅಗರಿ ನವೀನ್ ಭಂಡಾರಿಯವರ ತಂದೆ ಅಗರಿ ಲಕ್ಕಪ್ಪ ಭಂಡಾರಿಯವರು ಸರ್ವತಂತ್ರ ಸ್ವತಂತ್ರವಾಗಿ ಹೋರಾಡಿದ ಕಾಂಗ್ರೆಸ್ ಕಾರ್ಯಕರ್ತರೆಂದರೆ ಹೆಚ್ಚು ಸಮಂಜಸ. 2002ರಲ್ಲಿ ದಿವಂಗತರಾದ ಹಿರಿಯ ಸಹೋದರ ಎ. ಜೀವನ್ ಭಂಡಾರಿಯವರು 1995ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದು, ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದರು. ಅಲ್ಲದೆ, ಪುತ್ತೂರಿನ ಬಂಟರ ಸಂಘ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿಯೂ ಜನ ಶ್ಲಾಘನೆಗೆ ಪಾತ್ರರಾಗಿದ್ದರು.

1976ರಲ್ಲಿ ವಿಜಯಾ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದ್ದ ಡಾ. ಅಗರಿ ನವೀನ್ ಭಂಡಾರಿಯವರು 2000ದಲ್ಲಿ ಸ್ವಯಂ ನಿವೃತ್ತಿ ಪಡೆದು ಉದ್ಯಮ ಮತ್ತು ರಾಜಕೀಯವಾಗಿಯೂ ಮುಂದುವರಿದರು. ಮಾನವ ಹಕ್ಕುಗಳು ಮತ್ತು ಕಾನೂನು ಘಟಕದ ಉಪಾಧ್ಯಕ್ಷರು ಆಗಿದ್ದ ಇವರು ಡಾ. ಪರಮೇಶ್ವರ್, ದಿನೇಶ್ ಗೂಂಡೂರಾವ್ ಮತ್ತು ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು ಹಾಗೂ ಆ ಸಂದರ್ಭದಲ್ಲಿ ಪಕ್ಷದ ಹುಬ್ಬಳ್ಳಿ-ಧಾರವಾಡದ ಉಸ್ತುವಾರಿಯನ್ನು ವಹಿಸಿದ್ದರು.  

ಸಮರ್ಥ ನೇತಾರ:

ಡಾ. ಅಗರಿ ನವೀನ್ ಭಂಡಾರಿಯವರು ಬೆಂಗಳೂರಿನ ಬೊಮ್ಮನಹಳ್ಳಿಯ ನಗರ ಸಭೆ ವ್ಯಾಪ್ತಿಯಲ್ಲಿ ಮೂಲ್ಕಿ ಸುಂದರಾಮ ಶೆಟ್ಟಿ ಹೆಸರಲ್ಲಿ ಸುಂದರ ಬಡಾವಣೆಯನ್ನು ಸ್ಥಳೀಯರ ಸಹಕಾರದೊಂದಿಗೆ ಸೊಸೈಟಿಯ ಮೂಲಕ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲೊಂದು ಸುಂದರ ಅಯ್ಯಪ್ಪ ದೇವಸ್ಥಾನವನ್ನು ನಿರ್ಮಿಸಲು ಮುತುವರ್ಜಿ ವಹಿಸಿ ಯಶಸ್ಸು ಕಂಡಿದ್ದಾರೆ. ಈ ಬಡಾವಣೆಯಲ್ಲಿ ಆಧುನಿಕ ಜೀವನ ಶೈಲಿಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಟ್ಟು ಅದಕ್ಕೆ ಅತ್ಯಾಧುನಿಕತೆಯ ರೂಪ ನೀಡುವಲ್ಲಿ ವಿಶೇಷವಾಗಿ ಶ್ರಮಿಸಿದ್ದಾರೆ. ಒಂದು ರೀತಿಯಲ್ಲಿ ಹೇಳುವುದಾದರೆ,ಡಾ. ಅಗರಿ ನವೀನ್ ಭಂಡಾರಿಯವರು ಮೂಲ್ಕಿ ಸುಂದರಾಮ ಶೆಟ್ಟಿ ನಗರದ ರೂವಾರಿಯಾಗಿದ್ದಾರೆ.

ಬೆಂಗಳೂರು ಎಂಎಸ್‌ಆರ್‌ಎಸ್ ನಗರ ಸೌಹಾರ್ದ ಸಹಕಾರಿ ಲಿ.ನ ಅಧ್ಯಕ್ಷರಾಗಿದ್ದ ಡಾ. ಅಗರಿ ನವೀನ್ ಭಂಡಾರಿಯವರು ಎಂಎಸ್‌ಆರ್‌ಎಸ್ ನಗರ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಟ್ರಸ್ಟಿ ಮತ್ತು ಮಾಜಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ವಿಜಯಾ ಬ್ಯಾಂಕ್ ಎಂಪ್ಲಾಯೀಸ್ ಹೌಸಿಂಗ್ ಕೋ-ಅಪರೇಟಿವ್ ಸೊಸೈಟಿ ಲಿ.ನ ಮಾಜಿ ಅಧ್ಯಕ್ಷರಾಗಿ, ಎಂಎಸ್‌ಆರ್‌ಎಸ್ ನಗರ ವೆಲ್ತ್ ಅಸೋಸಿಯೇಶನ್‌ನ ಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಸಹಕಾರಿ ಸಂಘಗಳಲ್ಲಿ ಇವರು ತೋರಿದ್ದ ಉತ್ತಮ ಸೇವೆ, ಕಾರ್ಯವೈಖರಿ ಮತ್ತು ಕರ್ತವ್ಯ ನಿಷ್ಠೆಯನ್ನು ಗಮನಿಸಿ ಭಾರತ ಸರಕಾರವು ಅವರನ್ನು (2011-2016ರಲ್ಲಿ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉತ್ತರ ವಲಯದ ಆರ್‌ಬಿಐ ನಿರ್ದೇಶಕರಾಗಿ ನೇಮಿಸಿತ್ತು. 

ಸಾಧನೆಗೆ ಅರ್ಹವಾಗಿ ದೊರೆತ ಪ್ರಶಸ್ತಿಗಳು :ಡಾ. ಅಗರಿ ನವೀನ್ ಭಂಡಾರಿ ಅವರ ನಿಸ್ವಾರ್ಥ ಸಮಾಜ ಸೇವೆಗಾಗಿ ಹಲವಾರು ಪ್ರಶಸ್ತಿಗಳು ಅವರಿಗೆ ದೊರಕಿವೆ.

2002ರಲ್ಲಿ ಇಂದಿರಾ ಗಾಂಧಿ ಸದ್ಬಾವನಾ ಅವಾರ್ಡ್, ವಿಜಯಾ ಬ್ಯಾಂಕ್ ಎಂಪ್ಲಾಯೀಸ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಯ ಶ್ರೇಷ್ಠ ಅಧ್ಯಕ್ಷ ಮತ್ತು ಶ್ರೇಷ್ಠ ನಿರ್ದೇಶಕ, 2006ರಲ್ಲಿ ಇಂಟರ್ ನ್ಯಾಷನಲ್ ಅವಾರ್ಡ್ ಫಾರ್ ಮೆರಿಟೋರಿಯಸ್ ಸರ್ವೀಸ್ ಫಾರ್ ಇಂಟರ್‌ನ್ಯಾಷನಲ್ ಕೋ-ಅಪರೇಟಿವ್ ಹೌಸಿಂಗ್, ಭಾರತೀಯ ಲಲಿತಾ ಕಲಾ ಸಂಸ್ಥೆಯಿಂದ ಕರ್ನಾಟಕ ಪದ್ಮಶ್ರೀ, 2006ರಲ್ಲಿ ಕರ್ನಾಟಕ ಪ್ರತಿಭಾವರ್ಧಕ ಅಕಾಡೆಮಿಯಿಂದ ಎಕ್ಸೆಲೆನ್ಸಿ ಅವಾರ್ಡ್, 2009ರಲ್ಲಿ ಸಮಾಜಸೇವಾ ರತ್ನ ಅವಾರ್ಡ್, 2011ರಲ್ಲಿ ಡಾ. ಟಿಪ್ಪು ಸುಲ್ತಾನ್ ಸ್ಟೇಟ್ ಅವಾರ್ಡ್, 2002ರಲ್ಲಿ ಡಾ. ರಾಜಕುಮಾರ್ ಅವಾರ್ಡ್, 2016ರಲ್ಲಿ ಡಾ.ಡಿ.ಜಿ. ಶೆಟ್ಟಿ ಎಜ್ಯುಕೇಶನಲ್ ಸೊಸೈಟಿಯಿಂದ ಗೌರವ ಪ್ರಶಸ್ತಿ,  ಸಮಾಜ ಸೇವೆಗಾಗಿ 2018 ರಲ್ಲಿ ಗೌರವ ಡಾಕ್ಟರೇಟ್, 2018ರಲ್ಲಿ ಕೆಂಪೇಗೌಡ ಪ್ರಶಸ್ತಿ ಇವರ ಸಾಧನೆಗೆ, ಶ್ಲಾಘನೀಯ ಸಮಾಜ ಸೇವೆಗಾಗಿ ಅರ್ಹವಾಗಿ ದೊರೆತ ಪ್ರಶಸ್ತಿಗಳು.

ಕುಟುಂಬ ಸದಸ್ಯರ ಬಗ್ಗೆ:

ನವೀನ್ ಭಂಡಾರಿಯವರ ಪತ್ನಿ ಸರೋಜ ಎನ್. ಭಂಡಾರಿ ಅವರು ಕಾರ್ಕಳದ ಇನ್ನಾದವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಸ್ವಯಂ ನಿವೃತ್ತಿ ಪಡೆದ ಇವರು ಅಕ್ಟೋಬರ್ 1, 2022 ರಂದು ಸ್ವರ್ಗಸ್ಥರಾಗಿದ್ದಾರೆ.

ಬಿ.ಇ. ಮತ್ತು ಎಂಬಿಎ ಮಾಡಿರುವ ಮಗಳು ಅನುಷ್ಕಾ ಭಂಡಾರಿ ನ್ಯೂರೋ ಸರ್ಜನ್‌ರಾಗಿರುವ ಅಳಿಯ ಡಾ. ವೀಕ್ಷಿತ್ ಶೆಟ್ಟಿಯವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ನ್ಯೂರೋ ಅಂಕಾಲೋಜಿಯಲ್ಲಿ ಸೈಂಟ್ ಜಾರ್ಜ್ ಆಸ್ಪತ್ರೆ ಲಂಡನ್‌ನಿಂದ ಫೆಲೋಶಿಪ್ ಪಡೆದಿರುವ ಡಾ. ವೀಕ್ಷಿತ್ ಶೆಟ್ಟಿ    ಎಡಿನ್ ಬರ್ಗ್ ನಲ್ಲಿ ಎಫ್‌ಆರ್‌ಸಿಎಸ್, ಯುನೈಟೆಡ್ ಕಿಂಗ್ ಡಮ್‌ನಲ್ಲಿ ಡಿಎನ್‌ಬಿ ಪದವಿಯನ್ನು ಪಡೆದಿದ್ದಾರೆ. ಇವರು ಪ್ರಸ್ತುತ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಮಣಿಪಾಲ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್ ನ್ಯೂರೋ ಸರ್ಜನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಿಸ್ವಾರ್ಥ ಜನನಾಯಕ:

ಡಾ.ಅಗರಿ ನವೀನ್ ಭಂಡಾರಿಯವರು ನಿಸ್ವಾರ್ಥ ಜನಸೇವಕ, ಜನನಾಯಕರಾಗಿದ್ದು, ಪೂರ್ಣಕಾಲಿಕ ರಾಜಕಾರಣಿಯಾಗಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ, ಬೆಳವಣಿಗೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸಾಧನೆಗಳು ಮತ್ತು ಶ್ಲಾಘನೀಯ ಸೇವಾರ್ಹತೆಯನ್ನು ಮಾನದಂಡವಾಗಿ ಇಟ್ಟುಕೊಂಡು ಅವರಿಗೆ ಕಾಂಗ್ರೆಸ್ ಪಕ್ಷವು ಉನ್ನತ ಅಧಿಕಾರ ಪದವಿ ನೀಡಿ ವಿಸ್ತಾರ ಜನಸೇವೆಗೆ ಅವಕಾಶ ನೀಡಲಿ ಎಂದು Mp mla’sನ್ಯೂಸ್ ಶುಭ ಹಾರೈಸುತ್ತದೆ.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top