ಮಂಗಳೂರು – ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕ, ಸೂಪರ್ ಹಿಟ್ ಕನ್ನಡ ಚಲನಚಿತ್ರ ಸು ಫ್ರಮ್ ಸೋ ದ ಸಹ ನಿರ್ಮಾಪಕ, ಬರೋಡ ತುಳು ಸಂಘದ ಅಧ್ಯಕ್ಷರಾಗಿದ್ದ ಶಶಿಧರ್ ಶೆಟ್ಟಿ ಬರೋಡ ಅವರಿಗೆ Mp mla’s news ಸಂಪಾದಕ ಡಾ, ಅಶೋಕ್ ಶೆಟ್ಟಿ ಬಿ. ಎನ್ ಅವರು ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದ್ದಾರೆ.


ವೇದಿಕೆಯಲ್ಲಿ ಭಾಷಣ ಮಾಡಲು ನಿಂತರೆ ನೇರನುಡಿಗಳಿಂದ , ಅದ್ಭುತವಾಗಿ, ಹೃದಯಸ್ಪರ್ಶಿಯಾಗಿ ಜನರ ಮನಸ್ಸು ಮುಟ್ಟುವಂತೆ ಮಾತಾಡಬಲ್ಲ ಶಶಿಧರ್ ಶೆಟ್ಟಿ ಬರೋಡ ಅವರು ಆಡಂಬರ ಮತ್ತು ಪ್ರಚಾರ ಬಯಸಿ ಸಮಾಜ ಸೇವೆ ಮಾಡಿದವರಲ್ಲ. ಸಮಾಜ ಸೇವೆ ಎಂಬುದು ಅವರಿಗೆ ರಕ್ತಗತವಾಗಿ ಬಂದಿದೆ. ಅವರ ನಿರಾಡಂಬರ ವ್ಯಕ್ತಿತ್ವ ಯುವ ಜನರಿಗೆ ಸ್ಪೂರ್ತಿಯಾಗಿದೆ. ಶಶಿಧರ್ ಶೆಟ್ಟಿ ಬರೋಡ ಅವರು ಶಶಿಯಣ್ಣಎಂದೇ ಜನಜನಿತರಾಗಿದ್ದಾರೆ.



ಅರ್ಹರನ್ನು ಗುರುತಿಸಿ ಸಮಾಜ ಸೇವೆ ಮಾಡುವ ಅವರು ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗುರುವಾಯನಕೆರೆಯವರು. 1992ರಲ್ಲಿ ಗುಜರಾತ್ ನ ಬರೋಡದಲ್ಲಿ ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಉದ್ಯಮ ಸಂಸ್ಥೆ ಆರಂಭಿಸಿ ಸಾವಿರಾರು ಉದ್ಯೋಗಿಗಳಿಗೆ ಅನ್ನದಾತರಾಗಿ ಉದ್ಯಮರಂಗದಲ್ಲಿ ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರಿ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಮಹಾನ್ ಸಾಧಕ, ಸಮಾಜಪರ ಚಿಂತನೆಯ ಜನಸೇವಕ,ಬಡವರ ಬಂಧು, ಸಮಾಜ ರತ್ನ,ಕರುಣಾಮಯಿ ಶಶಿಧರ್ ಶೆಟ್ಟಿ ಬರೋಡ ಅವರು ಯಾವುದೇ ಪ್ರಶಸ್ತಿ, ಬಿರುದು, ಸನ್ಮಾನ ಬಯಸದ ಉದ್ಯಮರಂಗದ ಸೂಪರ್ ಸ್ಟಾರ್. ಸಮಾಜ ಕಂಡ ಅಪ್ಪಟ ಅಪರಂಜಿ ಮತ್ತು ಜನ ಮೆಚ್ಚಿದ ಸಮಾಜ ಸೇವಕ. ತುಳುನಾಡಿನ ಹೆಮ್ಮೆಯ ಸುಪುತ್ರ.ಅವರಿಗೆ ಅಪಾರ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದ್ದಾರೆ. Mp MLA’s news ಕೂಡಾ ಶುಭಾಶಯ ಸಲ್ಲಿಸುತ್ತಿದೆ . ಶಶಿಯಣ್ಣ ಇರೆಗ್ ಎಂಕ್ಲೆನ ಉಡಲ್ ದಿಂಜಿನಾ ಪುಟ್ಟು ಪರ್ಬದ ಶುಭಾಶಯಲು ❤️🙏








































































































































































































