ಮಂಗಳೂರು: ವಿಶ್ವ ದೇವಾಡಿಗರ ಮಹಾಮಂಡಳದ ಆಶ್ರಯದಲ್ಲಿ ದಿನಾಂಕ 20-12-2026 ರಂದು ಉಡುಪಿಯ ಚಿತ್ಪಾಡಿ ಬಯಲು ರಂಗವೇದಿಕೆಯಲ್ಲಿ ನಡೆಯಲಿರುವ ಮಹಾಅಧಿವೇಶನದ ಪೂರ್ವಬಾವಿ ಸಭೆಯು ಮಂಗಳೂರು, ಕಾಟಿಪಳ್ಳ, ಸುರತ್ಕಲ್, ಬಂಟ್ವಾಳ ಕಣ್ವತೀರ್ಥ ಕನ್ನಡ ಮೊಯಿಲಿ ಸಂಘ,ವಿಟ್ಲ, ಕಾರಿಂಜೆ ಚಿತ್ರಾಪುರ ವ್ಯಾಪಿಯ ದೇವಾಡಿಗ ಸಂಘಗಳ ಸಭೆ ,ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಂಗಳೂರುನ ಸಭಾ ವೇದಿಕೆಯಲ್ಲಿ ವಿಶ್ವ ಮಹಾ ಮಂಡಳದ ಅಧ್ಯಕ್ಷರಾದ ಧರ್ಮಪಾಲ್ ಯು ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅವರು ಮಾತನಾಡುತ್ತಾ, ನಮ್ಮ ಬೇಡಿಕೆಗಳು ಸರಕಾರದ ಮಟ್ಟಕ್ಕೆ ಮುಟ್ಟಲು ಈ ಮಹಾ ಅಧಿವೇಶನ ಅಗತ್ಯವೆಂದು
ವಿವರಿಸಿದರು ತನ್ನನ್ನು ಅಭಿನಂದಿಸಿದ ಬಗ್ಗೆ ಉತ್ತರವಾಗಿ ಈ ಸನ್ಮಾನವು ನನ್ನ ಜೊತೆ ಹಗಲಿರುಳು ಶ್ರಮಿಸುವ ನನ್ನ ತಂಡಕ್ಕೆ ಸಲ್ಲಿಸುವುದಾಗಿ ತಿಳಿಸಿದರು.ಕಾರ್ಯದರ್ಶಿ ಯಾದವ ದೇವಾಡಿಗರು ಪ್ರಸ್ತಾವನೆ ಮಂಡಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್,ಮುಂಬೈ ಸಂಘದ ಅಧ್ಯಕ್ಷ ರವಿ ಎಸ್ ದೇವಾಡಿಗ, ವಿಶ್ವ ಮಹಾ ಮಂಡಳದ ಉಪಾಧ್ಯಕ್ಷ ಡಾ. ದೇವರಾಜ್ ಕೆ.,ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಉಪಾಧ್ಯಕ್ಷರು ಯಂ. ಎಚ್. ಕರುಣಾಕರ ದೇವಾಡಿಗ,ಮಹಾ ಮಂಡಳದ ಪ್ರದಾನ ಕಾರ್ಯದರ್ಶಿ ಗಣೇಶ್ ಅಂಬಲಪಾಡಿ, ಸಂಘಟನಾ ಕಾರ್ಯದರ್ಶಿ ಜನಾರ್ದನ ಪಡುಪಣಂಬೂರು, ಉಡುಪಿ ನಗರಪಾಲಿಕೆ ಮಾಜಿ ಸದಸ್ಯ ವಿಜಯ್ ಕೊಡವೂರು,ಸಮಯೋಚಿತವಾಗಿ ಮಾತನಾಡಿದರು.ಆಗಮಿಸಿರುವ ಎಲ್ಲಾ ಸಂಘದ ಅಧ್ಯಕ್ಷರು ಸಹಕರಿಸುವುದಾಗಿ ಆಶ್ವಾಸನೆ ನೀಡಿದರು.ವೇದಿಕೆಯಲ್ಲಿ ಸಂಘಟನಾ ಕಾರ್ಯದರ್ಶಿ ಚೆನ್ನಪ್ಪ ಮೊಯಿಲಿ, ಕೋಶಾಧಿಕಾರಿ ಸುರೇಶ ಕೊಡವೂರು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಶ್ರೀಮತಿ ವೀಣಾ ಸ್ವಾಗತಿಸಿದರು. ರೋಹಿತಾಕ್ಷ ದೇವಾಡಿಗ ವಂದಿಸಿದರು , ಶ್ರೀಮತಿ ಯಶ್ವಿತಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.


























































































































































































