ನಗರದ ಖ್ಯಾತ ಹೃದ್ರೋಗ ತಜ್ಞ, ಕೆಎಂಸಿ ಆಸ್ಪತ್ರೆ ಜ್ಯೋತಿ ಮಂಗಳೂರು ಕಾರ್ಡಿಯೋಲಜಿ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥ, ವೆನ್ ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲೂ ಪ್ರಮುಖ ಹೃದ್ರೋಗ ವೈದ್ಯರಾಗಿ ಬಡ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಯಶಸ್ವಿ ವೈದ್ಯ, ಜನ ಮೆಚ್ಚಿದ ಬೆಸ್ಟ್ ಡಾಕ್ಟರ್ ಎಂದೇ ಜನ ಮಾನಸದಲ್ಲಿ ಗುರುತಿಸಿಕೊಂಡಿರುವ ಮತ್ತು ಸುಪ್ರಸಿದ್ದ ಅಮೃತ ಪಾಲಿ ಕ್ಲಿನಿಕ್ ಜ್ಯೋತಿ ಮಂಗಳೂರಿನಲ್ಲಿ ಪ್ರತಿ ದಿನ ಹಲವಾರು ರೋಗಿಗಳಿಗೆ ಪರೀಕ್ಷೆ ಮಾಡಿ ಗುಣಮುಖರಾಗಿಸುವ ಅದ್ಭುತ ಕೈ ಗುಣದ ಯಶಸ್ವಿ ಹೃದ್ರೋಗ ಶಾಸ್ತ್ರಜ್ಞ, ದಣಿವರಿಯದ ನಿಸ್ವಾರ್ಥ ಸೇವಾ ಮನೋಭಾವದ ವೈದ್ಯಕೀಯ ಜಗತ್ತಿನ ಸೂಪರ್ ಡಾಕ್ಟರ್ ಡಾ. ಡಿ. ನರಸಿಂಹ ಪೈ ಅವರು ಬಡರೋಗಿಗಳ ಪಾಲಿಗೆ ಪ್ರತ್ಯಕ್ಷ ದೇವರು. ಇವರ ಬಗ್ಗೆ mp mlas newstv ಗೆ ಹಲವು ಮಂದಿ ಬರೇ ಗುಡ್ ಅಲ್ಲ ದಿ ಬೆಸ್ಟ್ ಡಾಕ್ಟರ್ ಎಂದಿದ್ದು, 2020 ರಲ್ಲೇ ಇವರಿಗೆ Mp MLA’s news 10ನೇ ಸೌಹಾರ್ದ ಸಂಗಮವು ಮಂಗಳೂರು ಟೌನ್ ಹಾಲ್ ನಲ್ಲಿ ನಡೆದಾಗ ಬೆಸ್ಟ್ ಡಾಕ್ಟರ್ಸ್ ಅರ್ವಾಡ್ ನೀಡಿ ಗೌರವಿಸಲಾಗಿತ್ತು.ಉತ್ತಮ ವೈದ್ಯರು, ಸಹೃದಯಿಗಳು ಆಗಿರುವ ಡಾ. ನರಸಿಂಹ ಪೈ ಅವರು Mp MLA’s news ಮತ್ತು mpmlasnewstv 24*7 news portal ನ ಮಹಾಪೋಷಕರಾಗಿದ್ದು, ಬಡರೋಗಿಗಳಿಗೆ ಅವರು ನೀಡುತ್ತಿರುವ ಅನನ್ಯ ಸೇವೆ ಬಗ್ಗೆ ಸಾರ್ವಜನಿಕ ಶ್ಲಾಘನೆ ವ್ಯಕ್ತವಾದ ಹಿನ್ನಲೆಯಲ್ಲಿ ಅವರನ್ನು ಭೇಟಿಯಾಗಿ mp mlas news ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್.ಅವರು ಅಭಿನಂದನೆ ಸಲ್ಲಿಸಿದರು.



ವೈದ್ಯಕೀಯ ಜಗತ್ತು ಕಂಡ ಅಪ್ರತಿಮ ವೈದ್ಯ, ಅತ್ಯಂತ ಪ್ರತಿಭಾವಂತ, ಅನುಭವಿ, ಯಶಸ್ವಿ ಹೃದ್ರೋಗ ತಜ್ಞ ಮತ್ತು ಬಡ ರೋಗಿಗಳ ಪಾಲಿನ ಆಶಾಕಿರಣ ಡಾ. ನರಸಿಂಹ ಪೈ ಅವರ ವೈದ್ಯಕೀಯ ಸಮಾಜ ಸೇವೆಗೆ ಮಂಗಳೂರಿಗೆ ಮಂಗಳೂರೇ ಕೊಂಡಾಡುತ್ತಿದೆ.



























































































































































































