ಮಹಾನಗರ: ಬಿ. ಸಂಜೀವ ಕೆ.ಬಿ. ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ‘ಶ್ರೀ ಗುರುಚರಣಾಮೃತ’ ಹಾಗೂ ‘ತೀಯಾ ಕುಲತಿಲಕ ಕುಲರತ್ನ ಮಹಾದಾನಿ ರೋಹಿದಾಸ ಬಂಗೇರ’ ಪುಸ್ತಕ ಬಿಡುಗಡೆ ಸಮಾರಂಭ ನಗರದ ಪತ್ರಿಕಾಭವನದಲ್ಲಿ ಇತ್ತೀಚೆಗೆ ನಡೆಯಿತು.
‘ಶ್ರೀ ಗುರುಚರಣಾಮೃತ’ ಪುಸ್ತಕದಲ್ಲಿ ಕೊಂಡೆವೂರು ಕ್ಷೇತ್ರ ಪರಿಚಯ ಹಾಗೂ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಪೂರ್ವಾಶ್ರಮ, ಅವರು ಆಧ್ಯಾತ್ಮಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ವಿಷಯಗಳಿವೆ. ‘ತೀಯಾ ಕುಲತಿಲಕ ಕುಲರತ್ನ ಮಹಾದಾನಿ ರೋಹಿದಾಸ ಬಂಗೇರ’ ಪುಸ್ತಕ ರೋಹಿದಾಸ ಬಂಗೇರ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳ ವಿವರ ಒಳಗೊಂಡಿದೆ.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ| ಹರಿಕೃಷ್ಣ ಪುನರೂರು, ಸಾಹಿತ್ಯ ಕೃತಿಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಶುಭ ಹಾರೈಸಿದರು.
ಅತಿಥಿಯಾಗಿದ್ದ ಮುಂಬಯಿಯ ಸಮಾಜ ಸೇವಕ ಶಂಕರ ಸುವರ್ಣ, ತೀಯಾ ವೆಲ್ಫೇರ್ ಸ್ಥಾಪಕ ಅಧ್ಯಕ್ಷ ಗೋವಿಂದ ಮಂಜೇಶ್ವರ ಮಾತನಾಡಿದರು.
ಎರಡೂ ಪುಸ್ತಕಗಳ ಸಂಪಾದಕ ಬಿ. ಸಂಜೀವ ಕೆ.ವಿ., ಪತ್ರಕರ್ತೆ ಮಾಲತಿ ಶೆಟ್ಟಿ ಮಾಣೂರು ಉಪಸ್ಥಿತರಿದ್ದರು.
ಜಯಂತಿ ಸುವರ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


























































































































































































