ಆರೋಗ್ಯ ಸಚಿವರ ತವರೂರು ಮಂಗಳೂರಿನ ವೆನ್ ಲಾಕ್ ಬಳಿಯ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್. ರೇಬಿಸ್ ತಡೆಗಟ್ಟುವ ಈ ಇಂಜೆಕ್ಷನ್ ಚುಚ್ಚಿದರೆ ಅಂಥ ಮಕ್ಕಳು 24 ಗಂಟೆ ಐಸಿಯುನಲ್ಲಿ ಇರಬೇಕು. ತುಂಬಾ ರಿಸ್ಕ್. ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಆರೋಗ್ಯ ಸಚಿವರೇ ಉತ್ತರ ನೀಡಬೇಕು. ಖಾದರ್ ಸಾಹೇಬ್ರೆ, ಬಡ ಮಕ್ಕಳು ಏನು ತಪ್ಪು ಮಾಡಿದ್ದಾರೆ. ಅವರಿಗೇಕೆ ಇಂಥ ಕಳಪೆ ಇಂಜೆಕ್ಷನ್?

99.3K Views 2w ago

ಪ್ರತ್ಯಕ್ಷ ವರದಿ:ಡಾ. ಅಶೋಕ್ ಶೆಟ್ಟಿ ಬಿ. ಎನ್.
ಮಂಗಳೂರು: ಮಂಗಳೂರಿನ ವೆನ್ಲಾಕ್ ಬಳಿಯ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ, ಸಿಬ್ಬಂದಿಗಳ ಕಾರ್ಯವೈಖರಿ, ಶುಚಿತ್ವ ಉತ್ತಮವಾಗಿದ್ದರೂ ಇಲ್ಲಿರುವ ರೇಬಿಸ್ ಚುಚ್ಚುಮದ್ದುವೊಂದರ ಬಗ್ಗೆ mpmlasnewstvಗೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.


ಇಲ್ಲಿ ಮಕ್ಕಳಿಗೆ ರೇಬಿಸ್ ತಡೆಗಟ್ಟುವ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್ ಕೊಟ್ಟರೆ 24 ಗಂಟೆ ಐಸಿಯುನಲ್ಲಿ ತೀವ್ರ ನಿಗಾದಲ್ಲಿ ಇರಬೇಕಾಗುತ್ತದೆ. ಯಾಕೆಂದರೆ, ಇದು ಕಳಪೆ ಗುಣ ಮಟ್ಟದ್ದಾಗಿದ್ದು ಇಂಜೆಕ್ಷನ್ ಕೊಟ್ಟ ಮೇಲೆ ಮಕ್ಕಳನ್ನು ಐಸಿಯುನಲ್ಲಿ ತೀವ್ರ ನಿಗಾದಲ್ಲಿ ಇರಿಸಲಾಗುತ್ತದೆ. ಆದರೆ, ಖಾಸಗಿ ಆಸ್ಪತ್ರೆಯಲ್ಲಿ ಇದೇ 2 ಇಂಜೆಕ್ಷನ್ ಗೆ 4,200 ರೂಪಾಯಿ ತನಕ ರೇಟ್ ಇರುತ್ತದೆ. ಆದರೆ,ಇದು ಉತ್ತಮ ಗುಣಮಟ್ಟದ್ದು ಆಗಿದ್ದು ಯಾವುದೇ ಅಪಾಯವಿಲ್ಲ. ಇಂಜೆಕ್ಷನ್ ಕೊಟ್ಟು ಅರ್ಧ ಗಂಟೆ ನಂತರ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಬಹುದಾಗಿದೆ. ಉಚಿತವೆಂದು ಸರಕಾರಿ ಆಸ್ಪತ್ರೆಗೆ ಹೋದರೆ ಮಕ್ಕಳ ಆರೋಗ್ಯದಲ್ಲಿ ಚೆಲ್ಲಾಟವಾಡುತ್ತಾರೆ. ನಮ್ಮ ಆರೋಗ್ಯ ಸಚಿವರಿಗೆ ಈ ಸಣ್ಣ ವಿಷಯ ಗೊತ್ತಿಲ್ಲವೇ. ಅವರೇಕೆ ಸುಮ್ಮನಿದ್ದಾರೆ. 2ನೇ ಬಾರಿಗೆ ಆರೋಗ್ಯ ಸಚಿವರಾಗಿರುವ ಡಾ. ಯು.ಟಿ. ಖಾದರ್ ಅವರ ತವರೂರು ಮಂಗಳೂರಿನ ವೆನ್ಲಾಕ್ ಬಳಿಯ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಈ ರೀತಿಯ ಅವ್ಯವಸ್ಥೆಗಳಿದ್ದು ಖಾದರ್ ಸಾಹೇಬ್ರರ ಹೆಸರಲ್ಲಿ ಕೆಲವು ಉಳ್ಳಾಲದ ಅಬ್ಬೇಪಾರಿಗಳು ವೆನ್ ಲಾಕ್ ಸೇರಿದಂತೆ ಸರಕಾರಿ ಆಸ್ಪತ್ರೆಗಳ ಸಿಬ್ಬಂದಿಗಳಿಗೆ ಬೆದರಿಸುವುದು.ನಾವು ಈಗ ಖಾದರ್ ಗೆ ಫೋನ್ ಮಾಡುತ್ತೇವೆ ಎಂದು ಶೋ ಮಾಡುವುದನ್ನು mpmlasnewstv ಪ್ರತ್ಯಕ್ಷವಾಗಿ ಕಂಡಿದೆ ಸರಕಾರ ಯಾಕೆ ಇಂತಹ ಕಳಪೆ ಇಂಜೆಕ್ಷನ್ ನ್ನು ಬಡ ಮಕ್ಕಳಿಗೆ ನೀಡಲು ಶಿಫಾರಸ್ಸು ಮಾಡಿದೆ. ಗ್ಯಾರಂಟಿಗೆ ಹಣವಿಲ್ಲವೆಂದು ಉಳಿತಾಯವೇ. ಖಾದರ್ ಸಾಹೇಬ್ರೇ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಬಡ ಮಕ್ಕಳನ್ನು ಅರೋಗ್ಯದ ವಿಷಯದಲ್ಲಿ ತಾರತಮ್ಯ ಮಾಡುವುದನ್ನು, ನಿಮ್ಮ ಹೆಸರಲ್ಲಿ ಕೆಲ ಚೇಲಾಗಳು ಸಿಬ್ಬಂದಿಗಳಿಗೆ ಬೆದರಿಸಿ ದರ್ಬಾರ್ ಮಾಡುವುದನ್ನು ನಿಲ್ಲಿಸಲು ಎಚ್ಚರಿಕೆ ನೀಡಿ.

Read More News

ಪತ್ರಕರ್ತರಿಗೆ ನಿವೃತ್ತಿ ನಂತರ ಪಿಂಚಣಿ ಸೇರಿದಂತೆ ಸರಕಾರದ ಸಮರ್ಪಕ ಸೌಲಭ್ಯಗಳು ಸಕಾಲದಲ್ಲಿ ದೊರೆಯದಿರುವುದು ವಿಷಾದನೀಯ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಬದಲಾವಣೆ ತರಲು ಸಂಘಟಿತ ಪ್ರಯತ್ನದ ಅಗತ್ಯತೆ ಇದೆ -ಬಂಟ್ವಾಳ ತಾಲೂಕು ಪತ್ರಿಕಾ ದಿನಾಚರಣೆಯಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ. ಎನ್. ಆಶಯ.

Scroll to Top