ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ಇತರ ಸಂಘ ಸಂಸ್ಥೆ ಗಳ ಸಹಯೋಗದಲ್ಲಿ ವಾಮದಪದವಿನ ಬಸ್ತಿಕೋಡಿಯಲ್ಲಿ 2076ನೇ ಮದ್ಯವರ್ಜನಾ ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ

108.5K Views 28 Jun 2026

ಬಂಟ್ವಾಳ -ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ವಾಮದಪದವು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಇದರ ಸಹಯೋಗದಲ್ಲಿ ನಡೆಯುತ್ತಿರುವ 2076ನೇ ಮದ್ಯವರ್ಜನ ಶಿಬಿರದ ಆರೋಗ್ಯ ತಪಾಸಣೆಯನ್ನು ಪದ್ಮಾವತಿ ಸಭಾಭವನ, ಬಸ್ತಿ ಕೋಡಿ ವಾಮದಪದವುನಲ್ಲಿ ನಡೆಸಲಾಯಿತು
   ಡಾ, ಉಮೇಶ್ ಅಡ್ಯಂತಾಯ,ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ವಾಮದಪದವು,ಡಾ. ರಾಮಕೃಷ್ಣ ಭಟ್,ಖ್ಯಾತ ವೈದ್ಯರು ಇರುವತ್ತೂರು ಇವರುಗಳು ಶಿಬಿರಾರ್ಥಿಗಳೆಲ್ಲರ ಆರೋಗ್ಯ ತಪಾಸಣೆ ನಡೆಸಿ ಯೋಗ ಕ್ಷೇಮವನ್ನು ವಿಚಾರಿಸಿದರು


   ಈ ಸಂದರ್ಭದಲ್ಲಿ ಶಿಬಿರದ ಯೋಜನಾಧಿಕಾರಿಗಳಾದ ಗಣೇಶ್ ಅವರು ಬಂಟ್ವಾಳ ತಾಲೂಕು ಯೋಜನಾಧಿಕಾರಿಗಳಾದ
ಜಯಾನಂದ್ ರವರು ಶಿಬಿರ ಅಧಿಕಾರಿ  ರಮೇಶ್,
ಆರೋಗ್ಯ ಸಹಾಯಕಿ ಶ್ರೀಮತಿ ಜಯಲಕ್ಷ್ಮಿ ರವರುಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Read More News

Scroll to Top