ಕುಡ್ಲ ಕುಲಾಲೆರ್ ಚಾರಿಟೇಬಲ್ ಸೇವಾ ಟ್ರಸ್ಟ್ ನಿಂದ ವಿದ್ಯಾರ್ಥಿನಿಯರಿಗೆ ಸನ್ಮಾನ

118.6K Views 11 May 2026

ಕುಡ್ಲ ಕುಲಾಲೆರ್ ಚಾರಿಟೀಬಲ್ ಸೇವಾ ಟ್ರಸ್ಟ್ (ರಿ) ಮಂಗಳೂರು ವತಿಯಿಂದ 2025-26ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ 625 ರಲ್ಲಿ 618 ಅಂಕ ಗಳಿಸಿದ ಕುಮಾರಿ ದುವಿ ಹಾಗೂ ಕುಮಾರಿ ಕೃಷ್ಮ ಶೆಟ್ಟಿ ಅವರನ್ನು ಮೊಡ0ಕಾಪ್ ಲಕ್ಷ್ಯ ರೆಸಿಡೆನ್ಸಿ ವಠಾರದಲ್ಲಿ ಸನ್ಮಾನಿಸಲಾಯಿತು. ಇದರ ಅಧ್ಯಕ್ಷ ತೆಯನ್ನು ವಹಿಸಿದ್ದ ನ್ಯಾಯವಾದಿ, ಸಮಾಜ ಸೇವಕ ‌ರೊ. ಅಶ್ವಿನ್ ಕುಮಾರ್ ರೈ ಬಾಲಕಿಯರನ್ನು ಸನ್ಮಾನಿಸಿ ಮಾತನಾಡುತ್ತಾ, ಎಸ್ ಎಸ್ ಎಲ್ ಸಿ ಎಂಬುದು‌ ವಿದ್ಯಾರ್ಥಿ ಜೀವನದ ಭವಿಷ್ಯ ರೂಪಿಸುವ ಪ್ರಥಮ ಹಂತ. ಮುಂದೆ ಸನ್ಮಾನ ಸ್ವೀಕರಿಸಿದ‌ ವಿದ್ಯಾರ್ಥಿನಿಯರು ಚೆನ್ನಾಗಿ ಕಲಿತು ತಾವು ಅಪೇಕ್ಷಿಸಿದ ಕೋರ್ಸ್ ಅನ್ನು ಆಯ್ಕೆ ಮಾಡಿ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳಿ. ಈಗ ವಿಪುಲ ಅವಕಾಶಗಳು ಕೈ ಬೀಸಿ ಕರೆಯುತ್ತಿದೆ. ಎಂದು ಹೇಳಿ ಶುಭ ಹಾರೈಸಿದರು. ಟ್ರಸ್ಟ್ ನ ಅಧ್ಯಕ್ಷರು ಮತ್ತು ಬೂಡದ ಮಾಜಿ ಅಧ್ಯಕ್ಷರಾಗಿರುವ ಸದಾಶಿವ ಬಂಗೇರ ರವರು ಪ್ರಾಸ್ತಾವಿಕ ವಾಗಿ ಮಾತನಾಡಿ ‌ನಮಗೆ ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಹೆಮ್ಮ‌ಯಾಗುತದೆ.ನೀವು ಮುಂದೆ ಜೀವನದಲ್ಲಿ ಯಶಸ್ಸನ್ನು ಹೊಂದಿ ಕಲಿತ ಶಾಲೆಗೆ ತಂದೆ ತಾಯಿಗೆ ,ಹುಟ್ಟಿ ಬೆಳೆದ ಊರಿಗೆ ಕೀರ್ತಿಯನ್ನು ತನ್ನಿ ರಿ ಎಂದರು.ಈ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯ ಲೋಲಾಕ್ಷ ಶೆಟ್ಟಿ, ಜೇಸಿ ಅಧ್ಯಕ್ಷ ಕಿಶೋರ್ ಆಚಾರ್ಯ ,ಮಾಜಿ ಪುರಸಭಾ ಸದಸ್ಯೆ ಶ್ರೀಮತಿ ಪ್ರಭಾ ಸಾಲ್ಯಾನ್ ,ಟ್ರಸ್ಟ್ ಕಾರ್ಯದರ್ಶಿ ಶೇಷಪ್ಪ ‌ಮಾಸ್ತರ್‌ ಸ್ವಾಗತಿಸಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು ಟ್ರಸ್ಟ್ ಸದಸ್ಯ ದಯಾನಂದ ನೇರಂಬೋಳು ‌,ಜಯರಾಮ ಶೆಟ್ಟಿ ಮೊಡಂಕಾಪು,ನೊವೆಲ್ ಪಿಂಟೋ ಕಟ್ಡಡ ಮಾಲಿಕರಾದ
ಜಯಲಕ್ಷ್ಮಿ ಎಸ್ ಬಂಗೇರ ,ಭೋಜ ಸಾಲಿಯಾನ್ ಮತ್ತು ಇತರರು ಉಪಸ್ಥಿತರಿದ್ದರು
ಚಿತ್ರ – ಸತೀಶ್, ಕಾರ್ತಿಕ್ ಸ್ಟುಡಿಯೋ, ಬಿ.ಸಿ .ರೋಡ್

Read More News

Scroll to Top