ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ – ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಬಹುಮತ.ಕೇರಳದಲ್ಲಿ ಕಾಂಗ್ರೆಸ್, ತಮಿಳುನಾಡಿನಲ್ಲಿ ಟಿವಿಕೆ. ELECTION RESULT LATEST NEWS.

107.4K Views 4 May 2026

ವಿಶೇಷ ವರದಿ – ಡಾ.ಅಶೋಕ್ ಶೆಟ್ಟಿ ಬಿ.ಎನ್.
ಬೆಂಗಳೂರು – ಪಂಚರಾಜ್ಯಗಳ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ತಮಿಳುನಾಡಿನಲ್ಲಿ ಮಮತಾ ಬ್ಯಾನರ್ಜಿ ಅವರ ತೃಣ ಮೂಲ ಕಾಂಗ್ರೆಸ್ ನ್ನು ಹೀನಾಯವಾಗಿ ಸೋಲಿಸಿದೆ. ಟಿಎಂಸಿ ಕೇವಲ 80ಸ್ಥಾನಕ್ಕೆ ತೃಪ್ತಿ ಪಟ್ಟರೆ ,ಬಿಜೆಪಿ 207 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.ಈ ಮಧ್ಯೆ ಸೂರ್ಯಾಸ್ತದವರೆಗೆ ಕಾದು ನೋಡೋಣ ಎಂದು ಮಮತಾ ಬ್ಯಾನರ್ಜಿ ಅವರು ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದರು. ಆದರೆ, ಮಮತಾ ಬ್ಯಾನರ್ಜಿ ಅವರ ಅತೀ ಆತ್ಮವಿಶ್ವಾಸ ಅವರ ನಿರೀಕ್ಷೆಯನ್ನು ಹುಸಿಯಾಗಿಸಿತ್ತು. ತೃಣ ಮೂಲ ಕಾಂಗ್ರೆಸ್ ಇನ್ನಿಲ್ಲದಂತೆ ಆಶ್ಚರ್ಯಕರ ರೀತಿಯಲ್ಲಿ ನೆಲ ಕಚ್ಚಿತ್ತು.ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಅಧಿಕಾರ ಯುಗ ಇಲ್ಲಿಗೆ ಮುಗಿಯುತ್ತೆಂದೇ ಹೇಳಬಹುದು.ತಮಿಳುನಾಡಿನಲ್ಲಿ ಡಿಎಂಕೆಗೆ ಸೋಲಾಗಿದೆ. ದಳಪತಿ ವಿಜಯ್ ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲ ,ನಿಜ ಜೀವನದಲ್ಲಿ ಕೂಡ ಜನನಾಯಗನ್ ಅಗಿ ಹೊರ ಹೊಮ್ಮಿದ್ದಾರೆ. ಅವರ ಟಿವಿಕೆ 107 ಸ್ಥಾನಗಳಲ್ಲಿ ಗೆದ್ದು ಪ್ರಥಮ ಸ್ಥಾನದಲ್ಲಿ ರಾರಾಜಿಸಿದೆ.ಇದು ಎನ್ ಟಿಆರ್ ಮಾದರಿ ಅದ್ಬುತ ಜಯವಾಗಿದೆ. ಇಡೀ ತಮಿಳುನಾಡಿಗೆ ದಳಪತಿ ವಿಜಯ್ ಹೊಸ ಸಾಮ್ರಾಟ್ ನಾಗಿ ದಾಖಲೆ ಬರೆದಿದ್ದಾರೆ.ಈ ದ್ರಾವಿಡ ನಾಯಕನ ಎದುರು ಸ್ಟಾಲಿನ್ ನೆಲ ಕಚ್ಚಿದ್ದಾರೆ.ಪುದುಚೇರಿ,ಅಸ್ಸಾಂನಲ್ಲಿ ಬಿಜೆಪಿ ಬಹುಮತ ಗಳಿಸಿದೆ.ದಾವಣಗೆರೆಯಲ್ಲಿ ಎಸ್ ಡಿಪಿಐ ಸ್ಪರ್ಧಿಸಿದರೂ ಕಾಂಗ್ರೆಸ್ ನ್ನು ಬಿಜೆಪಿಗೆ ಸೋಲಿಸಲಾಗಲಿಲ್ಲ.ಬಾಗಲಕೋಟೆಯಲ್ಲಿ ಕಾಂಗ್ರೆಸ್ ನ ಉಮೇಶ್ ಮೇಟಿಯವರು ಬಿಜೆಪಿ ಅಭ್ಯರ್ಥಿ ಎದುರು ಭರ್ಜರಿ ಜಯ ಸಾಧಿಸಿದ್ದಾರೆ. ಮಹಿಳಾ ಮೀಸಲಾತಿ ವಿರೋಧಿ ನಿಲುವು ಕಾಂಗೆಸ್ಸನ್ನು ಉಳಿದ ರಾಜ್ಯಗಳಲ್ಲಿ ಎಡ್ರೆಸ್ ಇಲ್ಲದಂತೆ ಮಾಡಿದೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.ಆದರೆ, ಕರ್ನಾಟಕದಲ್ಲಿ ಬಿಜೆಪಿ ನಾಯಕರಿಗೆ ಸೋಲಾಗಿದ್ದು ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ರಿಯಲ್ ಹೀರೋ ಆಗಿ ,ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ. ಸಿದ್ದರಾಮಯ್ಯ ಅಲೆ ಮುಂದೆ ಕಮಲದ ಕಮಾಲ್ ಕರ್ನಾಟಕದಲ್ಲಿ ನಡೆಯಲಿಲ್ಲ. ಒಂದು ರೀತಿಯಲ್ಲಿ ಬಾಗಲಕೋಟೆ,ದಾವಣಗೆರೆಯಲ್ಲಿ ಗೆದ್ದದ್ದು ಕುಟುಂಬ ರಾಜಕಾರಣವೇ ಎನ್ನಬೇಕು.ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ತಂದೆಯವರ ಅಧಿಕಾರ ಪಡೆದರೆ,ದಾವಣಗೆರೆಯಲ್ಲಿ ಸಮರ್ಥ್ ಅವರು ಗೆಲ್ಲುವುದರ ಮೂಲಕ ಅಜ್ಜನವರ ಸಿಂಹಾಸನ ಗಟ್ಟಿ ಮಾಡಿಕೊಂಡರು.ಕೇರಳದಲ್ಲಿ ಎಲ್ ಡಿಎಫ್ ಗೆ ಹಿನ್ನಡೆಯಾಗಿ ಪಿಣರಾಯಿ ವಿಜಯ್ ಅಧಿಕಾರ ಕಳೆದುಕೊಂಡಿದ್ದಾರೆ. ಇಲ್ಲಿ ಯುಡಿಎಫ್ ಗೆ ಅಂದರೆ ಕಾಂಗ್ರೆಸ್ ಬಹುಮತ ಗಳಿಸಿದೆ.ತಮಿಳುನಾಡಿನಲ್ಲಿ ಟಿವಿಕೆಗೆ ಬೆಂಬಲ ನೀಡಲು ಕಾಂಗ್ರೆಸ್ ಮುಂದಾಗಿದೆ. ತಮಿಳುನಾಡಿನಲ್ಲಿ ಚುನಾವಣೆಗೆ ಮೊದಲೇ ಟಿವಿಕೆಗೆ ಕಾಂಗ್ರೆಸ್ ಬೆಂಬಲ ಕೊಡುವುದರಲ್ಲಿತ್ತು.ಆಗ ತಡೆದದ್ದು ಡಿಎಂಕೆಯ ಸ್ಟಾಲಿನ್.ಈಗ ಕಾಂಗ್ರೆಸ್ ಗೆ ತಪ್ಪಿನ ಅರಿವಾಗಿದೆ. ಟಿವಿಕೆ ಕಾಂಗ್ರೆಸ್ ಬೆಂಬಲವನ್ನು ಒಪ್ಪುತ್ತದಾ.ಬಿಡುತ್ತದಾ ಎಂಬುದು ಮುಂದಿನ ಕುತೂಹಲವಾಗಿದೆ.ಒಟ್ಟಿನಲ್ಲಿ ಪಂಚರಾಜ್ಯಗಳ ಚುನಾವಣೆಯಲ್ಲಿ ಮೋದಿ- ಅಮಿತ್ ಶಾ ಮಾಸ್ಟರ್ ಪ್ಲಾನ್ ಗೆದ್ದು ಮಮತಾ ಬ್ಯಾನರ್ಜಿ ಅವರ ತೃಣ ಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಳ್ಳುವುದರೊಂದಿಗೆ ಅಲ್ಲಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.ಈ ಮೂಲಕ ಪಶ್ಚಿಮ ಬಂಗಾಳ,ಪುದುಚೇರಿ, ಅಸ್ಸಾಂ
ನಲ್ಲಿ ನಮೋ ಅಲೆ ಎದ್ದಿದೆ. ಇದು ಮುಂದೆ ನಡೆಯಲಿರುವ ಉಳಿದ ರಾಜ್ಯಗಳ ಚುನಾವಣೆಗೆ ಗಟ್ಟಿ ಅಡಿಪಾಯ ಹಾಕಿ ಕೊಟ್ಟಿದೆ

Read More News

Scroll to Top