ಮೇ 4 ರಂದು ಉಡುಪಿಯಲ್ಲಿ ಪ್ರವೀಣ್ ಶೆಟ್ಟಿ ಪುಣೆಯವರಿಗೆ ಭ್ರಮರ ಕೃಷ್ಣ ಪ್ರಶಸ್ತಿ ಪ್ರಧಾನ ಮತ್ತು ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇದರ ಬಾಲ ಪ್ರತಿಭೆಗಳಿಂದ ಯಕ್ಷಗಾನ ಪ್ರದರ್ಶನ.

111K Views 4 May 2026

ಉಡುಪಿ- ಅಷ್ಟ ಮಠದ ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ಶ್ರೀಪಾದರ ಆಶೀರ್ವಾದದೊಂದಿಗೆ ಮೇ. 4ರ ಸೋಮವಾರದಂದು ಅಂದರೆ ಇಂದು ರಾತ್ರಿ ಗಂಟೆ 7ರಿಂದ ಶ್ರೀ ಕೃಷ್ಣ ಮಠ ಉಡುಪಿ ರಾಜಾಂಗಣದಲ್ಲಿ ಭ್ರಾಮರಿ ಯಕ್ಷ ನೃತ್ಯ ಕಲಾನಿಲಯ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇದರ ಬಾಲ ಪ್ರತಿಭೆಗಳಿಂದ ಭಾರತ ನಿರ್ಣಯ ಪೌರಾಣಿಕ ಯಕ್ಷಗಾನ ಪ್ರಸಂಗ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು
ಜರಗಲಿದೆ.
ಇದೇ ಸಂದರ್ಭದಲ್ಲಿ ಭ್ರಮರ ಕೃಷ್ಣ ಪ್ರಶಸ್ತಿಯನ್ನು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಅವರಿಗೆ ಪ್ರದಾನಿಸಲಾಗುವುದು ಹಾಗೂ ಭ್ರಮರ ಚೇತನ ಪುರಸ್ಕಾರವನ್ನು ವಿನಯಾ ಆನಂತಕೃಷ್ಣ, ನಿತ್ಯಾಶ್ರೀ ಬಿ. ಶೆಟ್ಟಿ, ಆರಾಧ್ಯ ಎಮ್ ಶೆಟ್ಟಿ, ತ್ರಿಷಾ ಜಿ. ಭಟ್ ಅವರಿಗೆ ನೀಡಿ ಗೌರವಿಸಲಾಗುವುದು.
ಕಾರ್ಯಕ್ರಮದ ಮಧ್ಯಂತರದಲ್ಲಿ ಸಭಾ ಕಾರ್ಯಕ್ರಮ ಜರಗಲಿದ್ದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾ ಪ್ರಕಾಶ್ ಎಲ್ ಶೆಟ್ಟಿ ಕಡಂದಲೆ ಪರಾರಿ ಭ್ರಾಮರಿ ಯಕ್ಷನೃತ್ಯ ಕಲಾ ನಿಲಯದ ಗೌ. ಅಧ್ಯಕ್ಷ ವಹಿಸಲಿದ್ದು, ಅಶೀರ್ವಚನವನ್ನು ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದ ನೀಡಲಿದ್ದಾರೆ.
ಮುಖ್ಯ ಅತಿಥಿಯಾಗಿ ಪುಣೆ ಬಂಟ್ಸ್ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆ, ಜಯಕರ ಶೆಟ್ಟಿ ಇಂದ್ರಾಳಿ ,ಅಧ್ಯಕ್ಷರು ಯಕ್ಷಧ್ರುವ ಪಟ್ಲ ಫೌಂಡೇಶನ್ ಉಡುಪಿ ಘಟಕ, ಶ್ಯಾಮ್ ಎನ್. ಶೆಟ್ಟಿ ,ಮಾಜಿ ಅಧ್ಯಕ್ಷ ಮುಂಬಯಿ ಬಂಟ್ಸ್ ಅಸೋಸಿಯೇಷನ್, ಶಮ್ಮಿ ಎ. ಹೆಗ್ಡೆ ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಬಂಟ್ಸ್ ಸಂಘ ಪುಣೆ, ಜನಾರ್ದನ ಎಸ್.
ದೇವಾಡಿಗ ವಿಶ್ವಸ್ಥ ಶ್ರೀ ಏಕಾನಾಥೇಶ್ವರಿ ದೇವಸ್ಥಾನ ಬಾರ್ಕೂರು, ಜಯಂತಿ ಸಿ. ಶೆಟ್ಟಿ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರ, ಗೀತಾ ಎಸ್. ಶೆಟ್ಟಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಬಂಟರ ಸಂಘ ಮುಂಬಯಿ ನವಿಮುಂಬಯಿ ಪ್ರಾದೇಶಿಕ ಸಮಿತಿ, ಶಾಂತಾ ಎಮ್. ಆಚಾರ್ಯ ಸ್ಥಾಪಕ ಸದಸ್ಯೆ ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಉಪಸ್ಥಿತರಿರುವರು.
ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ನಿರಂಜನ್ ಬೆಳ್ಳೂರು, ಮದ್ದಳೆಯಲ್ಲಿ ಹರೀಶ್ ಎನ್. ಸಾಲ್ಯಾನ್, ಚಂಡೆಯಲ್ಲಿ ಸುಬ್ರಹ್ಮಣ್ಯ ಭಟ್, ನಿಶಿತ್ ಸುವರ್ಣ, ಚಕ್ರತಾಳ ಹರೀಶ್ ಪೂಜಾರಿ ಶಹಾಡ್, ವೇಷಭೂಷಣ ಕಲಾ ವಿಶ್ವ ಯಕ್ಷ ಬಳಗ ಮಾರ್ಪಳ್ಳಿ ನೀಡಲಿದ್ದಾರೆ.
ಭ್ರಾಮರಿಯ ಬಾಲ ಕಲಾವಿದರಿಂದ ನಡೆಯಲಿರುವ ಯಕ್ಷಗಾನ ಪ್ರದರ್ಶನದಲ್ಲಿ ಕಲಾ ಪ್ರೇಮಿಗಳೆಲ್ಲರೂ ಉಪಸ್ಥಿತಿಯಲ್ಲಿದ್ದು ಪ್ರೋತ್ಸಾಹಿಸಬೇಕೆಂದು ಭ್ರಾಮರಿ ಯಕ್ಷನೃತ್ಯ ಕಲಾ ನಿಲಯ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರು, ಟ್ರಸ್ಟಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಭಾಗ ಪ್ರಮುಖೆ ವಿನಂತಿಸಿದ್ದಾರೆ.

Read More News

Scroll to Top